Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಪುಟ್ಟ ಕಂದಮ್ಮನ ತುಂಟತನ ನಿಲ್ಲಿಸಲು ಇಲ್ಲಿದೆ ಸರಳ ಟ್ರಿಕ್ಸ್
ಮಗು ಯಾವಾಗ ಅಂಬೆಗಾಲಿಕ್ಕುತ್ತಾ ಚಲಿಸಲು ಪ್ರಾರಂಭಿಸಿತೋ ಆಗ ತಾಯಿಯ ಕೆಲಸ ಇನ್ನಷ್ಟು ಹೆಚ್ಚುತ್ತದೆ. ಸತತವಾಗಿ ಮಗುವಿನ ಕಡೆಗೆ ಗಮನ ನೀಡಬೇಕಾದುದರಿಂದ ಇತರ ಕೆಲಸಗಳಲ್ಲಿ ಬಾಧತೆಯುಂಟಾಗುತ್ತದೆ. ವಿಶೇಷವಾಗಿ ಅಡುಗೆ ಕೆಲಸಗಳಲ್ಲಿ, ಒಲೆಯ ಮೇಲಿಟ್ಟ ಪದಾರ್ಥ ಸುಟ್ಟುಹೋಗುವ, ಹಾಲು ಉಕ್ಕು ಹೋಗುವ ಸಂಭವ ಎದುರಾಗುತ್ತದೆ. ಇದರಿಂದ ಆಕೆಗೆ ತನ್ನ ಹವ್ಯಾಸ ಹಾಗೂ ಇತರ ಚಟುವಟಿಕೆಗಳಿಗೆ ಸಮಯವೇ ಇಲ್ಲವಾಗುತ್ತದೆ. ತನ್ನ ಮಗುವಿಗಾಗಿ ಎಲ್ಲವನ್ನೂ ನುಂಗಿಕೊಂಡು ತ್ಯಾಗ ಮಾಡಬೇಕಾಗಿ ಬರುತ್ತದೆ.
ಮಗುವಿಗೆ ಕುತೂಹಲಕರವಾಗಿ ಕಾಣುವ ಯಾವುದನ್ನೂ ಕೈಗೆತ್ತಿಕೊಳ್ಳುವ ಮತ್ತು ಬಾಯಿಗೆ ಹಾಕುವ ಅಪಾಯವಿರುವುದರಿಂದ ಗಮನವನ್ನು ಒಂದು ನಿಮಿಷವೂ ಬಿಟ್ಟಿರಲು ಸಾಧ್ಯವಿಲ್ಲ. ಆದರೆ ಮಗುವನ್ನು ಯಾವುದಾದರೊಂದು ಚಟುವಟಿಕೆಯಲ್ಲಿ ವ್ಯಸ್ತನಾಗಿಸಿದರೆ ಕೊಂಚ ಕಾಲವಾದರೂ ತಾಯಿಗೆ ಇತರ ಕೆಲಸಗಳಲ್ಲಿ ಕಳೆಯಲು ಸಮಯ ಸಿಗುತ್ತದೆ. ಇದಕ್ಕೆ ಕೆಲವು ಸುಲಭ ಉಪಾಯಗಳಿವೆ. ಇವು ಹೇಗೆ ಎಂಬ ಕುತೂಹಲ ಮೂಡಿತೇ? ಬನ್ನಿ ಈ ಕೆಳಗೆ ನೀಡಿರುವ ಮಾಹಿತಿಗಳು ನಿಮ್ಮ ನೆರವಿಗೆ ಬರಲಿದೆ:

ಫ್ರಿಜ್‌ಗೆ ಅಂಟಿಸುವ ಆಯಸ್ಕಾಂತಗಳು
ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಆಯಸ್ಕಾಂತದ ತುಂಡನ್ನು ಅಂಟಿಸಿರುವ ಪುಟ್ಟ ಫಲಕಗಳು ದೊರಕುತ್ತವೆ. ಮುಂದಿನ ಬಾರಿ ಅಂಗಡಿಯಿಂದ ವಿವಿಧ ಗಾತ್ರ ಮತ್ತು ಆಕೃತಿಗಳ ಇಂತಹ ಫಲಕಗಳನ್ನು ಕೊಂಡುತನ್ನಿ. ವಿಶೇಷವಾಗಿ ಪ್ರಾಣಿಗಳು, ಹೂವು, ಇಂಗ್ಲಿಷ್ ಮತ್ತು ಕನ್ನಡ ಅಕ್ಷರಗಳು, ಅಂಕೆಗಳು, ಮನೆ, ವಾಹನಗಳು ಇಂತಹ ವೈವಿಧ್ಯತೆ ಇರಲಿ. ಒಂದು ಫಲಕವನ್ನು ಫ್ರಿಜ್ ಗೆ ಅಂಟಿಸುವುದು ಹೇಗೆ ಎಂದು ತೋರಿಸಿ ಕೊಡಿ.
ಇದರಿಂದ ಕುತೂಹಲಗೊಂಡ ಮಗು ಆ ಎಲ್ಲಾ ಫಲಕಗಳನ್ನು ಫ್ರಿಜ್ಜಿಗೆ ಅಂಟಿಸುವ, ಮೇಲೆ ಕೆಳಗಾಗಿಸುವ, ನಿವಾರಿಸುವ ಮೂಲಕ ವ್ಯಸ್ತವಾಗಿಬಿಡುತ್ತದೆ.
ಅಷ್ಟರ ಮಟ್ಟಿಗೆ ತಾಯಿ ತನ್ನ ಕೆಲಸವನ್ನು ನಿರಾತಂಕವಾಗಿ ಪೂರೈಸಬಹುದು. ಆದರೆ ನಿತ್ಯವೂ ಇವೇ ಫಲಕಗಳನ್ನು ಉಪಯೋಗಿಸಲಾಗದು. ಮಗು ಎರಡನೆಯ ದಿನಕ್ಕೇ ಬೇಸರಪಟ್ಟು ಇದನ್ನು ಬಿಟ್ಟು ಬೇರೆಡೆ ಹೊರಳುತ್ತದೆ. ಆದ್ದರಿಂದ ಈ ವಿಧಾನದಲ್ಲಿ ವೈವಿಧ್ಯತೆ, ವಿವಿಧ ಬಣ್ಣಗಳು ಮೊದಲಾದ ಆಯ್ಕೆಗಳನ್ನು ತೋರಿಸಿ ಕೊಟ್ಟು ಹೆಚ್ಚು ಕುತೂಹಲವಾಗುವಂತೆ ನೋಡಿಕೊಳ್ಳಿ.
ವೃತ್ತಪತ್ರಿಕೆಯನ್ನು ಮುಚ್ಚಿಟ್ಟು ಹುಡುಕುವ ಆಟ
ಮಗುವಿರುವ ಮನೆಯಲ್ಲಿ ವೃತ್ತಪತ್ರಿಕೆಗೇನು ಕೆಲಸ? ಹೇಗೂ ಮಗುವನ್ನು ನೋಡಿಕೊಳ್ಳುವಾಗ ವೃತ್ತ ಪತ್ರಿಕೆ ಓದಲು ಸಮಯ ಸಿಗುವುದಿಲ್ಲ. ಆದರೆ ಇದನ್ನೇ ಮಗುವನ್ನು ವ್ಯಸ್ತರಿರಿಸಲು ಉಪಯೋಗಿಸಬಹುದು. ವಾಸ್ತವವಾಗಿ ನಿತ್ಯವೂ ಬರುವ ವೃತ್ತಪತ್ರಿಕೆಗಾಗಿ ತಾಯಿಗಿಂತಲೂ ಮಗುವೇ ಹೆಚ್ಚಿನ ಉತ್ಸುಕತೆ ತೋರುವುದು ಕಂಡುಬಂದಿದೆ. ವೃತ್ತಪತ್ರಿಕೆ ಬಂದ ಬಳಿಕ ಒಂದು ಅಕ್ಷರವನ್ನು ಇನ್ನೊಂದು ಹಾಳೆಯಲ್ಲಿ ಬರೆದು ಈ ಅಕ್ಷರ ವೃತ್ತ ಪತ್ರಿಕೆಯಲ್ಲಿ ಎಲ್ಲಿದೆ ಎಂದು ಹುಡುಕಲು ಮಗುವಿಗೆ ಹೇಳುವುದು.
ಅಕ್ಷರದ ಜ್ಞಾನ ಇಲ್ಲದಿದ್ದರೂ ಈ ಆಕಾರವನ್ನು ಹುಡುಕಲು ಮಗು ವ್ಯಸ್ತವಾಗಿಬಿಡುತ್ತದೆ. ಒಮ್ಮೆ ಈ ಅಕ್ಷರವನ್ನು ಕಂಡುಹಿಡಿದ ಬಳಿಕ ಅದನ್ನು ಕೊಂಚ ಬಣ್ಣದಲ್ಲಿ ಪ್ರಖರಗೊಳಿಸಿ ಮಗುವಿನ ಕೋಣೆಯ ಗೋಡೆಗೆ ಅಂಟಿಸುವುದು. ಹೀಗೇ ಇಪ್ಪತ್ತಾರು ಅಕ್ಷರಗಳನ್ನು ಪ್ರತಿದಿನ ಹುಡುಕಿದ ಅಳಿಕ ಚಿಕ್ಕ ಅಕ್ಷರಗಳನ್ನು, ಬಳಿಕ ಅಂಕೆಗಳನ್ನು, ಬಳಿಕ ಚಿತ್ರಗಳನ್ನು, ಬಳಿಕ ಕೆಲವು ಸುಲಭಪದಗಳನ್ನು ಹುಡುಕುತ್ತಾ ಮುಂದುವರೆಯಬಹುದು.
ತರಕಾರಿಗಳನ್ನು ತೊಳೆಯುವುದು
ತಾಯಿಯ ಕೆಲಸಗಳನ್ನು ಅನುಸರಿಸುವುದು ಮಕ್ಕಳಿಗೆ ಇಷ್ಟವಾದ ಕಾರ್ಯ. ಅದರಲ್ಲೂ ಅಡುಗೆಮನೆಯಲ್ಲಿನ ಕೆಲಸಗಳು, ಉದಾಹರಣೆಗೆ ಚಪಾತಿ ಲಟ್ಟಿಸುವುದು, ತರಕಾರಿ ತೊಳೆಯುವುದು ಮೊದಲಾದವು ಹೆಣ್ಣು ಮಕ್ಕಳಿಗೆ ಇಷ್ಟವಾದ ಕಾರ್ಯ. ನಿಮ್ಮ ಮಗು ನಿಮ್ಮ ಯಾವ ಕೆಲಸದಲ್ಲಿ ಹೆಚ್ಚು ಉತ್ಸುಕತೆ ತೋರುತ್ತದೆ ಎಂದು ಗಮನಿಸಿ. ಈ ಕೆಲಸದ ಒಂದು ಭಾಗವನ್ನು ಮಗುವಿಗೆ ವರ್ಗಾಯಿಸುವಂತೆ ನಟಿಸಿ. ಒಂದು ವೇಳೆ ತರಕಾರಿ ತೊಳೆಯುವುದು ಇಷ್ಟವಾದರೆ ನೆಲದ ಮೇಲೆ ಒಂದು ಹಳೆಯ ವೃತ್ತಪತ್ರಿಕೆ ಹರಡಿ ಅದರ ಮೇಲೆ ಒಂದು ಬೋಗುಣಿಯಲ್ಲಿ ನೀರು ಹಾಕಿ ಕೊಂಚ ತರಕಾರಿಗಳನ್ನು ನೀಡಿ. ಉದಾಹರಣೆಗೆ ಆಲುಗಡ್ಡೆ, ಟೊಮೇಟೋ ಇತ್ಯಾದಿ. ಮಗುವಿಗೆ ಈ ತರಕಾರಿಗಳನ್ನು ಸ್ವಚ್ಛಗೊಳಿಸಲು ಕಲಿಸಿ. ತಾನೂ ಏನೋ ಘನಂದಾರಿ ಕೆಲಸ ಮಾಡುವಂತೆ ನಂಬುವ ಮಗು ಕೆಲವು ಆಲುಗಡ್ಡೆಗಳನ್ನು ತೊಳೆಯುತ್ತಾ ಮಗ್ನವಾಗಿಬಿಡುತ್ತದೆ. ಅಡುಗೆ ಮನೆಯಲ್ಲಿಯೇ ಇರುವ ಕಾರಣ ಆತಂಕ ಪಡಬೇಕಾದ ಅವಶ್ಯಕತೆಯೂ ಇಲ್ಲ.
ನೀರಿನ ಆಟ
ಮಕ್ಕಳಿಗೆ ನೀರಿನಲ್ಲಿ ಆಡುವುದು ಎಂದರೆ ಪಂಚಪ್ರಾಣ. ದೊಡ್ಡ ಗಾತ್ರದ ಟ್ರೇ ಒಳಗೆ ಕೆಲವು ಲೋಟಗಳನ್ನು ಅಥವಾ ಚಿಕ್ಕ ಬೋಗುಣಿ ಕೂಡಾ ಆಗಬಹುದು. ಇದರಲ್ಲಿ ಮೊದಲ ಬೋಗುಣಿಯಲ್ಲಿ ನೀರು ತುಂಬಿಸಿ. ಈಗ ಈ ಬೋಗುಣಿಯಿಂದ ಎರಡನೆಯ ಬೋಗುಣಿಗೆ ನೀರು ಚೆಲ್ಲದಂತೆ ವರ್ಗಾಯಿಸಲು ಕಲಿಸಿ. ಬಳಿಕ ಎರಡನೆಯ ಬೋಗುಣಿಯಿಂದ ಮೂರನೆಯದಕ್ಕೆ ಹೀಗೇ ಮುಂದುವರೆಯಬೇಕು. ಕಡೆಯ ಬೋಗುಣಿಯಲ್ಲಿ ಎಷ್ಟು ನೀರು ತುಂಬಿದೆ ಗಮನಿಸಿ. ಹೆಚ್ಚು ತುಂಬಿದಷ್ಟೂ ಮಗು ಗೆದ್ದಂತೆ ಎಂದು ಮನವೊಲಿಸಿ. ಪ್ರತಿಬಾರಿಯೂ ಕೊಂಚವಾದರೂ ನೀರು ಚೆಲ್ಲಿಯೇ ಚೆಲ್ಲುತ್ತದೆ. ಆದರೆ ಇದನ್ನೊಂದು ಪಂಥವಾಗಿ ಸ್ವೀಕರಿಸುವ ಮಗುವಿನ ಮಗ್ನತೆ ಹೆಚ್ಚುತ್ತಾ ನಿಮಗೆ ಸಮಯಾವಕಾಶ ನೀಡುತ್ತದೆ.



Click it and Unblock the Notifications













