Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗು ಕೋಪಗೊಂಡಿರುವಾಗ ಉಪದೇಶ ಮಾಡಲು ಹೋಗಬೇಡಿ!
ಮಕ್ಕಳು ದೇವರಿಗೆ ಸಮಾನವೆನ್ನುತ್ತಾರೆ. ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶವಿರುವುದಿಲ್ಲ. ಹೀಗಿದ್ದರೂ ಕೆಲವು ಪೋಷಕರು ತಮ್ಮ ಮಕ್ಕಳನ್ನು ದಂಡನೆಗೆ ಒಳಪಡಿಸಿ ಅವರ ವರ್ತನೆಯನ್ನು ತಿದ್ದಲು ಬಯಸುತ್ತಾರೆ. ಮಕ್ಕಳನ್ನು ಸರಿ ದಾರಿಗೆ ತರಲು ಇದು ಸೂಕ್ತ ವಿಧಾನವೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ.

ಮಕ್ಕಳು ಮನೆಯಲ್ಲಿ ಇರುವಾಗ ಕೆಲವೊಮ್ಮೆ ಕೋಪಗೊಂಡು ಏನಾದರೂ ಕೈಗೆ ಸಿಕ್ಕಿದರೆ ಅದನ್ನು ಎಸೆದು ಬಿಡಬಹುದು. ಇದು ನಿಮ್ಮ ಕೋಪವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಇಂತಹ ವರ್ತನೆಯನ್ನು ಕಡಿಮೆ ಮಾಡಲು ನಾವು ಮೊದಲು ಮಗುವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ.
ಮಗು ಕೋಪಗೊಂಡಿರುವಾಗ ನೀವು ಅದಕ್ಕೆ ಉಪದೇಶ ಮಾಡಲು ಹೋದರೆ ಕೋಣದ ಮುಂದೆ ಕಿನ್ನಾರಿ ಬಾರಿಸಿದಂತಾಗುತ್ತದೆ. ಯಾಕೆಂದರೆ ಮಗು ಈ ಸಮಯದಲ್ಲಿ ನಿಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇದರ ಬದಲು ನೀವು ಸಮಯ ನೋಡಿ ಮಗು ಸಾಮಾನ್ಯವಾಗಿದ್ದಾಗ ಅದರೊಂದಿಗೆ ಮಾತನಾಡಿ ಸಮಸ್ಯೆ ಏನೆಂದು ತಿಳಿದುಕೊಳ್ಳಿ. ಕೋಪವನ್ನು ಹೇಗೆ ನಿಯಂತ್ರಿಸಬೇಕು ಮತ್ತು ಕೋಪ ಬಂದಾಗ ಏನು ಮಾಡಬೇಕು ಎನ್ನುವುದನ್ನು ಹೇಳಿಕೊಡಿ.
ಮಗು ದೊಡ್ಡವನಾದಾಗ ಯಾವ ರೀತಿಯಿಂದ ವರ್ತಿಸಬೇಕು. ಜನರು ಅದರ ವರ್ತನೆಯನ್ನು ನೋಡಿ ಏನು ಹೇಳುತ್ತಾರೆ. ಕೋಪದಿಂದ ಏನೆಲ್ಲಾ ಅಪಾಯವಾಗುತ್ತದೆ ಎನ್ನುವ ಬಗ್ಗೆ ನೀವು ಮಗುವಿಗೆ ತಿಳಿಹೇಳಬೇಕು. ಇದನ್ನು ತಿಳಿದುಕೊಂಡರೆ ಮುಂದೆ ಕೋಪ ಬಂದಾಗ ಅದು ನಿಯಂತ್ರಿಸಲು ಪ್ರಯತ್ನಿಸುತ್ತದೆ.
ಮಗು ಯಾಕಾಗಿ ಇಷ್ಟು ಕೋಪಗೊಳ್ಳುತ್ತಿದೆ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಗಮನ ಸೆಳೆಯಲು ಮಗು ಈ ರೀತಿ ಮಾಡುತ್ತಿದೆಯಾ? ಕಡೆಗಣಿಸಲಾಗಿದೆ ಎನ್ನುವ ಭಾವನೆ ಮಗುವಿನಲ್ಲಿ ಮೂಡಿದೆಯಾ? ಇಷ್ಟು ಕೋಪಗೊಳ್ಳಲು ಕಾರಣವೇನು? ಆರೋಗ್ಯ ಸಮಸ್ಯೆ ಇದೆಯಾ ಅಥವಾ ಶಾಲೆಯಲ್ಲಿ ಮಗುವನ್ನು ಯಾರಾದರೂ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆಯಾ ಎಂದು ನೋಡಿಕೊಳ್ಳಬೇಕು. ಕೋಪ ನಿಯಂತ್ರಿಸುವ ಪಾಠ ಹೇಳುವ ಮೊದಲು ಕಾರಣಗಳನ್ನು ಹುಡುಕಿ. ಇದರ ಬಳಿಕ ಮಗುವಿಗೆ ತಿಳಿಹೇಳಿದರೆ ಸಮಸ್ಯೆ ಬಗೆಹರಿಯುವುದು.



Click it and Unblock the Notifications



