Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಕಾಡುವ 'ಸಾಮಾಜಿಕ ಆತಂಕ' ಎಂಬ ಪೆಡಂಭೂತ...
ಸಾಮಾಜಿಕ ಆತಂಕ ಅಥವಾ ಸಾಮಾಜಿಕ ಫೋಬಿಯಾ ಎಂಬುದು ನಿಮಗೆ ಅಪರೂಪವಾಗಿರುವ ಪದವಾಗಿರಬಹುದು. ಆದರೆ ಇದರ ಪರಿಚಯ ನಿಮಗೆ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಲ್ಲಿ ಇದು ಹೆಚ್ಚಾಗಿರುತ್ತದೆ. ಇದು ಸ್ವ-ಪ್ರಜ್ಞೆಯನ್ನು ಸಂಕೋಚದಿಂದ ಮರೆಮಾಚುವ ಒಂದು ವರ್ತನೆಯಾಗಿರುತ್ತದೆ. ಸಾಮಾಜಿಕ ಆತಂಕವಿರುವ ಮಕ್ಕಳು ಇತರರಿಂದ ತಪ್ಪಾಗಿ ಗ್ರಹಿಸಲ್ಪಡುತ್ತಾರೆ. ಇವರಿಗೆ ಇರುವ ಭಯವು ಇವರ ಮೊದಲ ಶತ್ರುವಾಗಿರುತ್ತದೆ. ಈ ಡಿಸಾರ್ಡರ್ ಇವರನ್ನು ಶಾಲೆಯ ಪಠ್ಯೇತರ ಮತ್ತು ಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ತಡೆಯುತ್ತದೆ. ಇವರು ಹಲವಾರು ಸಂದರ್ಭಗಳಲ್ಲಿ ಇತರರಿಂದ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಸಭೆ, ಸಮಾರಂಭ, ಜನ ಸೇರುವ ಕಡೆ ಇವರು ಹೋಗಲು ಹಿಂಜರಿಯುತ್ತಾರೆ. ಮಗು ರಚ್ಚೆ ಹಿಡಿದು ಅಳುತ್ತಿದ್ದರೆ, ಶಿಕ್ಷಿಸಲು ಮುಂದಾಗದಿರಿ
ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗುವ ಈ ಸಮಸ್ಯೆ ಮಕ್ಕಳು ತಾರುಣ್ಯಕ್ಕೆ ಬಂದರು ಸಹ ಮುಂದುವರಿಯುತ್ತದೆ. ಒಂದು ವೇಳೆ ಇದಕ್ಕೆ ಸರಿಯಾದ ಚಿಕಿತ್ಸೆ ಸಿಗಲಿಲ್ಲವಾದಲ್ಲಿ, ಮಕ್ಕಳಲ್ಲಿ ಖಿನ್ನತೆ, ಏಕಾಂಗಿತನ, ಸ್ನೇಹದ ಕೊರತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಆತಂಕವಿರುವ ಮಕ್ಕಳನ್ನು ಮನೋವಿಜ್ಞಾನಿಗಳ ಬಳಿಗೆ ಆಪ್ತಸಲಹೆಗೆ ಕರೆದುಕೊಂಡು ಹೋಗುವುದು ಉತ್ತಮ. ಆದರೆ ಹಾಗೆ ಕರೆದು ಕೊಂಡು ಹೋಗುವ ಮುನ್ನ, ಈ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಇವೆಯೇ ಎಂದು ಪರೀಕ್ಷಿಸಿಕೊಳ್ಳಿ...

ಅಧಿಕ ಬೆವರುವಿಕೆ
ಒಂದು ವೇಳೆ ನಿಮ್ಮ ಮಗು ವಿಪರೀತವಾಗಿ ಬೆವರುತ್ತಿದ್ದಲ್ಲಿ ಅದರ ಕುರಿತು ಸ್ವಲ್ಪ ಗಮನ ನೀಡಿ. ಅದರಲ್ಲೂ ಚಳಿಗಾಲದಲ್ಲಿ ನಿಮ್ಮ ಮಗು ವಿಪರೀತವಾಗಿ ಬೆವರುತ್ತಿದ್ದಲ್ಲಿ ಜಾಗರೂಕರಾಗಿ ಮಗುವಿನ ಬಳಿ ಸಮಸ್ಯೆಯನ್ನು ಕೇಳಿ. ಯಾವುದೋ ಒಂದು ಕಾರ್ಯಕ್ರಮ ಅಥವಾ ಚಟುವಟಿಕೆಯಲ್ಲಿ ನಿಮ್ಮ ಮಗುವು ವಿಪರೀತ ಜನಗಳನ್ನು ಬೆರೆಯಲು ಹೋಗುವಾಗ ಈ ರೀತಿ ಸಂಭವಿಸಿದಲ್ಲಿ, ಎಚ್ಚರಿಕೆ ವಹಿಸಿ. ಏಕೆಂದರೆ ನಿಮ್ಮ ಮಗುವಿಗೆ ಸಾಮಾಜಿಕ ಆತಂಕ ಇರಬಹುದು. ಮದುವೆ, ಶಾಲಾ ವಾರ್ಷಿಕೋತ್ಸವ ಮುಂತಾದ ಸಂದರ್ಭಗಳಲ್ಲಿ ಇದು ಸಂಭವಿಸುತ್ತದೆ.

ನಡುಕ
ನಡುಕ, ಭಯದ ಸೂಚನೆಯಲ್ಲವೆ. ಸಾಮಾಜಿಕ ಆತಂಕವಿರುವ ಮಕ್ಕಳು ನಡುಕವನ್ನು ಹೊಂದಿರುತ್ತಾರೆ. ಇದು ಒಮ್ಮೊಮ್ಮೆ ಸಾಮಾನ್ಯವಾಗಿ ಎಲ್ಲರಿಗು ಸಂಭವಿಸುತ್ತದೆ. ಭಾಷಣ, ಪ್ರೆಸೆಂಟೇಶನ್ ನೀಡುವಾಗ ಈ ನಡುಕ ಸಾಮಾನ್ಯ. ಆದರೆ ಅಸಾಧ್ಯವಾದಷ್ಟು ನಡುಕ ಕಂಡುಬಂದಲ್ಲಿ, ಅದರಲ್ಲೂ ಜನಗಳ ಮಧ್ಯೆ ನಿಂತಾಗ ನಡುಕ ಕಂಡು ಬಂದಲ್ಲಿ, ಅದು ಸಾಮಾಜಿಕ ಆತಂಕವಾಗಿರಬಹುದು. ಮದುವೆ, ಹುಟ್ಟು ಹಬ್ಬದ ಪಾರ್ಟಿಗಳಲ್ಲಿ ಸಹ ಇದು ಸಂಭವಿಸುತ್ತದೆ.

ಸ್ವ-ಪ್ರಜ್ಞೆ
ಒಂದು ವೇಳೆ ನಿಮ್ಮ ಮಗು ಕನ್ನಡಿಯ ಮುಂದೆ ಹೆಚ್ಚು ಸಮಯ ಕಳೆದರೆ, ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರ್ಥ. ಇದು ಸಹ ಅವರು ಒಂದು ಸಮೂಹವನ್ನು ಎದುರಿಸಲು ಹೋಗುವ ಮುನ್ನ ಮಾಡುವ ತಯಾರಿ. ಇದು ಸಹ ಆತಂಕದ ಒಂದು ಲಕ್ಷಣವಾಗಿರುತ್ತದೆ.

ಕಡಿಮೆ ಆತ್ಮವಿಶ್ವಾಸ ಮತ್ತು ಪಲಾಯನವಾದ
ಮಕ್ಕಳಲ್ಲಿ ಸಾಮಾಜಿಕ ಆತಂಕ ಹೆಚ್ಚಾದಲ್ಲಿ, ಅವರು ಗುಂಪಿನಿಂದ ಪಲಾಯನ ಮಾಡುತ್ತಾರೆ. ಇತರರು ಗಮನಿಸುವಂತಹ ಕೆಲಸಗಳನ್ನು ಅವರು ಮಾಡುವುದಿಲ್ಲ. ಅವರಿಗೆ ಆತ್ಮ ವಿಶ್ವಾಸದ ಕೊರತೆ ಸಹ ಕಾಡುತ್ತದೆ.

ಕಡಿಮೆ ಆತ್ಮವಿಶ್ವಾಸ ಮತ್ತು ಪಲಾಯನವಾದ
ಅಲ್ಲದೆ, ಶಾಲೆಯಲ್ಲಿ ಸಣ್ಣ ಪುಟ್ಟ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹ ಅವರು ಹಿಂದೇಟು ಹಾಕಲಾರಂಭಿಸುತ್ತಾರೆ. ಇನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುವುದು ತೀರಾ ತೀರಾ ಅಪರೂಪ.



Click it and Unblock the Notifications
