Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಅಮ್ಮನ ಕಿವಿಮಾತು, ಮಗ ಕೇಳಿಯೇ ಕೇಳುತ್ತಾನೆ....
ಹೆಚ್ಚಿನವರಿಗೆ ಒಂದು ಧಾರಣೆ ಇರುತ್ತದೆ ಏನೆಂದರೆ ಮಗನು ಅಮ್ಮನಿಗೆ ಹತ್ತಿರವಾದರೆ, ಮಗಳು ತಂದೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಈ ಭಾವನೆಯಿಂದಲೋ ಏನೋ ಅಮ್ಮ ಮತ್ತು ಮಗನ ನಡುವೆ ಅವಿನಾಭಾವ ಸಂಬಂಧವಿದೆ. ಮಗ ತಂದೆಯಲ್ಲಿ ಹೇಳಿಕೊಳ್ಳಲಾಗದೇ ಇರುವ ಸಂಗತಿಗಳನ್ನು ತಾಯಿಯೊಂದಿಗೆ ಹಂಚಿಕೊಳ್ಳುತ್ತಾನೆ. ಒಂದು ವಿಶೇಷವಾದ ಅನುಬಂಧವನ್ನು ತಾಯಿ ಹಾಗೂ ಮಗನಲ್ಲಿ ನಮಗೆ ಕಾಣಬಹುದಾಗಿದೆ. ಈ ರೀತಿಯ ಮಾತು ಪ್ರಯೋಗ ಮಕ್ಕಳ ಮೇಲೆ ಬೇಡ!
ಹೆಚ್ಚಿನ ಹುಡುಗರು ಐದರ ಹರೆಯದಿಂದಲೇ ಹೆಚ್ಚು ತುಂಟರಾಗಿರುತ್ತಾರೆ. ಈ ಸಮಯದಲ್ಲಿ ತಾಯಂದಿರುವ ಮಕ್ಕಳನ್ನು ಜವಬ್ದಾರಿಯುತವಾಗಿ ಬೆಳೆಸಬೇಕಾಗುತ್ತದೆ, ಅಂತೆಯೇ ಹೆಚ್ಚಿನ ಮುದ್ದು ಕೂಡ ಅವರನ್ನು ಹಾಳು ಮಾಡಬಹುದಾಗಿದೆ.
ಬೆಳೆಯುತ್ತಿರುವ ಹುಡುಗರಿಗೆ ನೀವು ಬಹಳಷ್ಟನ್ನು ತಿಳಿಸಿಕೊಡಬೇಕಾಗಿದ್ದು ಇದು ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡಬೇಕಾಗುತ್ತದೆ. ಬನ್ನಿ ಈ ಕೆಳಗಿನ ಸ್ಲೈಡರ್ಗಳಲ್ಲಿ ಮಗನಿಗೆ 18 ಆಗುವ ಮುನ್ನ ಅವರಿಗೆ ನೀವು ತಿಳಿಸಬೇಕಾದ ವಿಷಯಗಳೇನು ಮತ್ತು ಅವರು ಕಲಿತುಕೊಳ್ಳಬೇಕಾಗಿರುವುದೇನು ಎಂಬುದನ್ನು ಅರಿತುಕೊಳ್ಳೋಣ.....

ಅಡುಗೆ ಕೋಣೆ ಬರಿಯ ಸ್ತ್ರೀಯರಿಗೆ ಮಾತ್ರ ಸೀಮಿತವಲ್ಲ
ಪ್ರತಿಯೊಬ್ಬ ತಾಯಿಯು ಸ್ತ್ರೀ ಮತ್ತು ಪುರುಷರ ನಡುವಿನ ಸಮಾನತೆಯನ್ನು ತಿಳಿಸಿಕೊಡಬೇಕು. ಮನೆಕೆಲಸ ಬರಿಯ ಹುಡುಗಿಯರಿಗೆ ಮಾತ್ರ ಸೀಮಿತವಲ್ಲ ಎಂಬ ಅಂಶವನ್ನು ತಿಳಿಸಿಕೊಡಬೇಕು.

ಮೂಲ ಅಡುಗೆ ಕೌಶಲ್ಯಗಳು
ನಿಮ್ಮ ಮಗ 12 ಕ್ಕೆ ಕಾಲಿಟ್ಟ ಒಡನೆ ಮೂಲ ಅಡುಗೆ ಕೌಶಲ್ಯಗಳನ್ನು ಅವನಿಗೆ ನೀವು ತಿಳಿಸಿಕೊಡಿ. ಪ್ರತಿಯೊಬ್ಬ ವ್ಯಕ್ತಿಯೂ ಅರಿತುಕೊಂಡಿರಲೇಬೇಕಾದ ಕೌಶಲ್ಯ ಇದಾಗಿದೆ.

ದೈಹಿಕ ಹಿಂಸೆಯಿಂದ ದೂರ
ಯಾವುದೇ ಕ್ಷಣದಲ್ಲಿ ಕೂಡ ದೈಹಿಕ ಹಿಂಸೆಯನ್ನು ಮಾಡಬಾರದು ಎಂಬುದಾಗಿ ತಾಯಿ ಮಗನಿಗೆ ತಿಳಿಸಿಕೊಡಬೇಕು.

ಮಹಿಳೆಯನ್ನು ಗೌರವಿಸುವುದು
ಮಹಿಳೆಯರನ್ನು ಗೌರವಿಸುವುದು ಮತ್ತು ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವ ಪಾಠವನ್ನು ತಾಯಿಯು ಮಗನಿಗೆ ತಿಳಿಸಿಕೊಡಬೇಕು.

ಭಾವುಕರಾಗಿರಲಿ
ಹುಡುಗನಾಗಿ ಅಳುತ್ತೀಯ? ಎಂಬುದಾಗಿ ನುಡಿದು ಅವರ ಭಾವನೆಗಳನ್ನು ತಡೆಹಿಡಿದಲ್ಲಿ ಅವರಿಗೆ ಮಾನಸಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅವರಿಗೆ ಅಳಬೇಕು ಎಂಬಂತಹ ಸಂದರ್ಭಗಳಲ್ಲಿ ಅವರನ್ನು ಅಳಲು ಬಿಡಿ.

ಸಹೃದಯತೆಯ ಪ್ರಾಮುಖ್ಯತೆ
ಇನ್ನೊಬ್ಬರೊಂದಿಗೆ ಉತ್ತಮ ಬಾಂಧವ್ಯದಲ್ಲಿರುವುದು, ಮತ್ತು ಸಹೃದಯಿಗಳಾಗಿರುವುದು ಎಷ್ಟು ಮುಖ್ಯ ಎಂಬುದನ್ನು ತಾಯಿ ಮಗನಿಗೆ ತಿಳಿಸಿಕೊಡಬೇಕಾಗುತ್ತದೆ. ಇದರಿಂದ ಅವರು ಕೂಡ ಸದ್ಗುಣಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ.

ಜೀವನ ಕೌಶಲ್ಯಗಳು
ಅಡುಗೆ ಕೆಲಸದ ಜೊತೆಗೆ ತಾಯಿ ಮಗನಿಗೆ ಮನೆಯ ಇತರ ಕೆಲಸ ಕಾರ್ಯಗಳು, ವಸ್ತುಗಳ ಬಳಸುವಿಕೆ, ಪ್ರಥಮ ಚಿಕಿತ್ಸೆಯ ಅರಿವು ಮೊದಲಾದ ಅಂಶಗಳನ್ನು ತಿಳಿಸಿಕೊಡಬೇಕು.



Click it and Unblock the Notifications
