Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾರ್ಟಿಸೋಲ್ ಹಾರ್ಮೋನ್, ಹಿಂದಿರುವ ಕರಾಳ ಸತ್ಯ
ಕಾರ್ಟಿಸೋಲ್ (cortisol) ಮನಸ್ಸಿಗೆ ಮುದನೀಡುವ ಅಥವಾ ನಿರಾಳತೆಯನ್ನು ನೀಡುವ ಒಂದು ಹಾರ್ಮೋನು ಆಗಿದೆ. ಆದರೆ ಹತ್ತು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಹಾರ್ಮೋನು ನಿರಾಳತೆಯ ಬದಲು ಆಕ್ರಮಣ ಮನೋಭಾವವನ್ನು ಮೂಡಿಸುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಅದರಲ್ಲೂ ಗಂಡು ಮಕ್ಕಳಲ್ಲಿ ಈ ಪ್ರಭಾವ ಹೆಚ್ಚಾಗಿ ಕಂಡುಬಂದಿದೆ.

ಈ ಸಂಶೋಧನೆಯಲ್ಲಿ ಕಾರ್ಟಿಸೋಲ್ ಮಟ್ಟ ಮತ್ತು ಆಕ್ರಮಣ ಮನೋಭಾವವನ್ನು ವಿವಿಧ ವಯೋಮಿತಿಯ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಸೂಕ್ಷ್ಮವಾಗಿ ಅವಲೋಕಿಸಲಾಯ್ತು. ಒಟ್ಟು ತೊಂಭತ್ತಕ್ಕೂ ಹೆಚ್ಚಿನ ಗಂಡು ಮತ್ತು ಹೆಣ್ಣು ಮಕ್ಕಳ ಮನೋಭಾವವನ್ನು ಗಮನಿಸಲಾಯಿತು. ಇದರಲ್ಲಿ ಎಂಟರಿಂದ ಹತ್ತು ವರ್ಷದ ಗಂಡು ಮಕ್ಕಳಲ್ಲಿ ಈ ಮನೋಭಾವ ಅತಿ ಹೆಚ್ಚಾಗಿದ್ದುದು ಕಂಡುಬಂದಿತು.
ಇವರ ಈ ಮನೋಭಾವಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನಿನ ಪ್ರಮಾಣ ಹೆಚ್ಚಾಗುವುದು ಮತ್ತು ಇದೇ ವೇಳೆಯಲ್ಲಿ ಎಸ್ಟ್ರಾಡಿಯೋಲ್ (estradiol) ಎಂಬ ಹಾರ್ಮೋನಿನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಆದರೆ ಈ ಪ್ರವೃತ್ತಿಗೆ ಮಾನಸಿಕ ಒತ್ತಡ ಪ್ರಮುಖ ಕಾರಣ ಎಂದು ಕಂಡುಕೊಳ್ಳಲಾಗಿದೆ. ಆದ್ದರಿಂದ ಈ ವಯಸ್ಸಿನ ಗಂಡು ಮಕ್ಕಳಿರುವ ಪಾಲಕರು ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.
ಇವರು ಮಾನಸಿಕ ಮತ್ತು ದೈಹಿಕರಾಗಿ ಸಕ್ಷಮರಾಗಿರಲು ಇವರ ದೈನಂದಿನ ಚಟುವಟಿಕೆಯನ್ನು ಒತ್ತಡರಹಿತರಾಗಿಸುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಮಾನಸಿಕ ಒತ್ತಡ ಇಲ್ಲದಿದ್ದಾಗ ಮೊದಲು ಮಾನಸಿಕವಾಗಿ ಶರೀರ ಶಾಂತತೆ ಅನುಭವಿಸುತ್ತದೆ, ತನ್ಮೂಲಕ ದೈಹಿಕ ಬೆಳವಣಿಗೆಯೂ ಉತ್ತಮ ರೀತಿಯಲ್ಲಾಗುತ್ತದೆ.



Click it and Unblock the Notifications


