Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಎರಡು-ಮೂರು ವರ್ಷ ಕಳೆದರೂ ಮಗು ಮಾತನಾಡುತ್ತಿಲ್ಲವೇ?
ತಾಯಿ ತಂದೆಯರಿಗೆ ಮಕ್ಕಳು ನೀಡುವ ಖುಷಿಯನ್ನು ಜಗತ್ತಿನ ಬೇರ್ಯಾವುದೇ ವಸ್ತು ಅಥವಾ ಘಟನೆ ನೀಡಲಾರದು. ಮಕ್ಕಳು ಏನೇ ಮಾಡಿದರೂ ತಂದೆ ತಾಯಿಗೆ ಅದು ಖುಷಿ. ತಮ್ಮ ಮಗುವಿನೊಂದಿಗೆ ಮಗುವಾಗಿ ಅವರು ಪಡುವ ಸಂತೋಷ ಅವರಿಗಷ್ಟೇ ಗೊತ್ತು. ಎಷ್ಟೇ ಹೊತ್ತು ಮಗುವಿನೊಂದಿಗೆ ಕಳೆದರೂ ಕಡಿಮೆಯೇ. ಮಗು ಮಲಗದೇ ಅಕಾಲ ವೇಳೆಯಲ್ಲಿ ಎದ್ದು ಅತ್ತರೂ ತಾಯಿಗೆ ಸಿಟ್ಟು ಬಾರದು. ಮಗುವಿನ ಮಾತು ಕೂಡ ಇಂತಹುದೇ ಖುಷಿ.
ಮಗುವಿನ ತೊದಲು ಮಾತೇ ನಿಮ್ಮಲ್ಲಿ ಮಗುವಿನ ಮಾತು ಕೇಳಲು ಕಾತುರರಾಗಿ ಇರುವಂತೆ ಮಾಡುತ್ತದೆ. ಎಲ್ಲಾ ತಂದೆ ತಾಯಿಗಳಿಗೂ ಮಗುವಿನ ಬೆಳವಣಿಗೆಯ ಹಂತ ಅದರ ಮಾತನಾಡಲು ಆರಂಭ ಮಾಡುವ ಸಮಯದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಪುಟ್ಟ ಮಗುವಿನ ತೊದಲು ಮಾತುಗಳು ಯಾರಿಗೆ ತಾನೇ ಕೇಳಲು ಇಷ್ಟವಿಲ್ಲ ಹೇಳಿ? ಆದರೆ ಕೆಲವು ಮಕ್ಕಳು ನಿಗದಿತ ಸಮಯದಲ್ಲಿ ಮಾತನಾಡಲು ಆರಂಭಿಸದೇ ಇರಬಹುದು. ಆದರೆ ಇದು ನಿಜವಾಗಿ ಮಗುವಿನಿಂದ ಮಗುವಿಗೆ ಬೇರೆಯಾಗಿರುತ್ತದೆ.

ಸಾಮಾನ್ಯವಾಗಿ ಮಕ್ಕಳು ತಮ್ಮ ತಂದೆ ತಾಯಿಯರು ಮಾತನಾಡುವ ಪದಗಳನ್ನು ಅತಿ ಬೇಗನೇ ಕಲಿತುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಗಾದೆ ಬಂದಿದೆ. ಮಾತೃಭಾಷೆಯನ್ನು ಮಗು ಕಲಿತುಕೊಳ್ಳಬಲ್ಲಷ್ಟು ಸುಲಭವಾಗಿ ಬೇರಾವುದೇ ಭಾಷೆಯನ್ನು ಕಲಿತುಕೊಳ್ಳಲಾರದು. ಆದರೆ ಕೆಲವು ಮಕ್ಕಳಿಗೆ ಭಾಷೆಯನ್ನು ಕಲಿತುಕೊಳ್ಳಲು ಕಷ್ಟವಾಗುತ್ತದೆ.
ಕೆಲವು ಮಕ್ಕಳಿಗೆ ನಾಲ್ಕಾರು ವರ್ಷವಾದರೂ ಬೇಕು. ಇದಕ್ಕೆ ಮುಖ್ಯ ಕಾರಣ ಮಗುವಿನ ತಂದೆ ತಾಯಿಯರು ಉಪಯೋಗಿಸುವ ಕಷ್ಟಕರ ಪದಗಳು ಮತ್ತು ಪದಗಳನ್ನು ಮತ್ತೆ ಮತ್ತೆ ಪುನರಾವರ್ತಿಸದೇ ಇರುವುದು ಮೊದಲಾದ ಕಾರಣಗಳಿವೆ. ಮಗು ಮಾತನಾಡುವ ಮುನ್ನ ಹಾವಭಾವ ಹೇಗಿರುತ್ತೇ..?
ಈ ಬಗ್ಗೆ ಮಕ್ಕಳ ತಜ್ಞರು ಏನು ಹೇಳುತ್ತಾರೆಂದರೆ ಮಕ್ಕಳಿಗೆ ಪ್ರಾಸಬದ್ಧ ಪದಗಳು ಕಲಿಯಲಿಕ್ಕೆ ಸುಲಭವಾಗಿವೆ. ಅಂದರೆ ಪದ್ಯಗಳಂತಿರುವ ವಾಕ್ಯಗಳು ಮತ್ತು ಏಕಸಮಾನವಾಗಿ ಕೇಳಿಸುವ ಪದಗಳನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ಕಲಿಯುತ್ತಾರೆ. ಈ ಬಗ್ಗೆ ನಡೆದ ಸಂಶೋಧನೆಯ ಪ್ರಕಾರ ಪ್ರಾಸಬದ್ದ ಪದಗಳು ಕೆಲವಾರು ಬಾರಿ ಪುನರಾವರ್ತನೆಯಾದರೆ ಈ ಪದಗಳನ್ನು ಅವರು ಶೀಘ್ರವಾಗಿ ಕಲಿಯುತ್ತಾರೆ. ಹೊಸ ಭಾಷೆಯನ್ನು ಕಲಿಯಲು ಇದೇ ಮೂಲಮಂತ್ರವಾಗಿದೆ.
ಅಚ್ಚರಿಯ ವಿಷಯವೆಂದರೆ ಯಾವ ಪದಗಳು ಪ್ರಾಸಬದ್ಧವಾಗಿವೆಯೋ ಅಂತಹ ಪದಗಳನ್ನು ಮತ್ತು ಈ ಪದಗಳಿಗೆ ನಿಕಟವಾದ ಪದಗಳನ್ನು ಹೆಚ್ಚು ಕಷ್ಟವಿಲ್ಲದೇ ಕಲಿತುಬಿಡುತ್ತಾರೆ. ಉದಾಹರಣೆಗೆ ಮಾಮಾ, ಪಾಪಾ, ಬನಾನಾ, ಕೋಕೋ, ಕೋಲಾ, ಟುಕ್ ಟುಕ್, ಕುಕ್ಕೂ, ಬೌಬೌ ಇತ್ಯಾದಿ ಪದಗಳನ್ನು ಕಲಿಯಲು ಹೆಚ್ಚು ಕಷ್ಟಪಡುವುದಿಲ್ಲ. ಆದ್ದರಿಂದ ಈ ಪದಗಳಿಗೆ ಸಮೀಪವಾದ ಪದಗಳನ್ನು ಕಲಿಸುವ ಮೂಲಕ ಕೊಂಚ ಕಷ್ಟಕರವಾದ ಪದಗಳನ್ನು ಮಕ್ಕಳು ಸುಲಭವಾಗಿ ಕಲಿಯುತ್ತಾರೆ.
ವಾಸ್ತವವಾಗಿ ಹಿರಿಯರು ಹೆಚ್ಚು ಪದಗಳನ್ನು ಅರಿತಿದ್ದು ಮಕ್ಕಳೊಂದಿಗೆ ಮಾತನಾಡುವಾಗಲೂ ಕಠಿಣ ಪದಗಳನ್ನು ಬಳಸುತ್ತಾರೆ ಮತ್ತು ತಮ್ಮ ಪದಗಳನ್ನು ಅವರು ಪುನರಾವರ್ತಿಸುವುದಿಲ್ಲ. ಆದ್ದರಿಂದ ಮಕ್ಕಳೊಂದಿಗೆ ಮಾತನಾಡುವಾಗ ಹಿರಿಯರು ತಮ್ಮ ಪದಗಳನ್ನು ಸಾಧ್ಯವಾದಷ್ಟು ಸುಲಭವಾಗಿಸಿ ಕೆಲವು ಪದಗಳನ್ನು, ಸಾಧ್ಯವಾದರೆ ಇಡಿಯ ವಾಕ್ಯವನ್ನೇ ಪುನರಾವರ್ತಿಸಿ ಮಗುವಿನೊಂದಿಗೆ ಮಗುವಾದಷ್ಟೂ ಬೇಗನೇ ಮಕ್ಕಳು ಹಿರಿಯರಿಂದ ಹೊಸ ಪದಗಳನ್ನು, ಮತ್ತು ಹೊಸ ಭಾಷೆಯನ್ನು ಕಲಿಯುತ್ತಾರೆ.



Click it and Unblock the Notifications














