Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೊಟ್ಟೆ ಇನ್‌ಫೆಕ್ಷನ್ ಆಗಿರುವಾಗ ಹಸುವಿನ ಹಾಲು ನೀಡಬೇಡಿ
ಮಕ್ಕಳಲ್ಲಿ ಹೊಟ್ಟೆಯ ಇನ್‌ಫೆಕ್ಷನ್ (ಹೊಟ್ಟೆಯಲ್ಲಿ ಕಾಡುವ ಸೋಂಕಿಗೆ) ಆತ್ಯಂತ ಸಹಜವಾದ ಸಮಸ್ಯೆಯಾಗಿರುತ್ತದೆ. ಮಗುವಿನ ದೇಹವು ಎಷ್ಟು ಕೋಮಲವಾಗಿರುತ್ತದೆಯೋ, ಅಷ್ಟೇ ಸೂಕ್ಷ್ಮ ಮಗುವಿನ ದೇಹದ ಅಂಗಗಳು. ಹಾಗಾಗಿ ಮಗುವಿಗೆ ಹಲವಾರು ಅಲರ್ಜಿ, ಇತ್ಯಾದಿ ಸಮಸ್ಯೆಗಳು ಆಗಾಗ ಕಂಡು ಬರುತ್ತಲೆ ಇರುತ್ತವೆ. ಒಂದು ವೇಳೆ ನಿಮ್ಮ ಮಗುವಿಗೆ ಹೊಟ್ಟೆಯ ಫ್ಲೂ ಬಂದರೆ ಅದು ಸಾಮಾನ್ಯ ಎಂದು ಭಾವಿಸಿ.
ಒಂದು ವೇಳೆ ನಿಮ್ಮ ಮಗುವಿಗೆ ಈ ಫ್ಲೂ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬಂದರು ಸಹ ಅದರಲ್ಲಿ ಆಶ್ಚರ್ಯಪಡುವಂತಹುದು ಏನೂ ಇರುವುದಿಲ್ಲ. ಏಕೆಂದರೆ ಒಂದು ಅಥವಾ ಎರಡು ವರ್ಷದ ಮಗುವಿಗೆ ಇದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ತಜ್ಞರ ಪ್ರಕಾರ ಮಗುವಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಹೊಟ್ಟೆಯ ಫ್ಲೂ ಬರುವುದು ಸಾಮಾನ್ಯವಂತೆ.

ಅರೆ ಮಗುವಿಗೆ ಫ್ಲೂ ಬರುವುದು ಸಾಮಾನ್ಯ ಎಂದು ಎಷ್ಟು ಸಹಜವಾಗಿ ಹೇಳುತ್ತೀರಿ ಎಂದು ಭಾವಿಸಬೇಡಿ. ಇದಕ್ಕೆ ಕಾರಣವು ಸಹ ಇದೆ. ಈ ವಯಸ್ಸಿನಲ್ಲಿ ಮಗು ತನ್ನ ಬಾಯಿಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಇರಿಸಿಕೊಳ್ಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತದೆ. ಬಾಯಿಯಲ್ಲಿ ಇರಿಸಿಕೊಂಡ ವಸ್ತುವಿನಲ್ಲಿರುವ ವೈರಸ್ ಮತ್ತು ಇನ್‌ಫೆಕ್ಷನ್‌ಗಳು ಮಗುವಿನ ಬಾಯಿಯ ಮೂಲಕ ಅದರ ಹೊಟ್ಟೆಯನ್ನು ಸೇರುತ್ತವೆ.
ಅದಕ್ಕಾಗಿ ನಿಮ್ಮ ಮಗುವಿನ ಸ್ವಚ್ಛತೆಯ ಕುರಿತಾಗಿ ನೀವು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದುದು ಅತ್ಯಗತ್ಯ. ಜೊತೆಗೆ ಮಗುವಿನ ಕೈಗೆ ಇನ್‌ಫೆಕ್ಷನ್‌ಕಾರಕ ವಸ್ತುಗಳು ಸಿಗದಂತೆ ಕಾಪಾಡಿ. ಇನ್ನೂ ಮುಖ್ಯವಾಗಿ ಮಗುವು ಹೊಟ್ಟೆಯ ಇನ್‌ಫೆಕ್ಷನ್‌ಗೆ ಒಳಗಾದಾಗ ಅದಕ್ಕೆ ಯಾವುದೆ ಕಾರಣಕ್ಕು ಹಸುವಿನ ಹಾಲನ್ನು ನೀಡಬೇಡಿ.
ಹೊಟ್ಟೆಯ ಇನ್‌ಫೆಕ್ಷನ್ ಮಕ್ಕಳಲ್ಲಿ ಉರಿಯೂತ ಮತ್ತು ಲ್ಯಾಕ್ಟೋಸ್ ಕುರಿತಾಗಿ ತಾತ್ಕಾಲಿಕ ಅಲರ್ಜಿಯನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಅವರು ಹಾಲನ್ನು ಸೇವಿಸುವುದಿಲ್ಲ. ಹೊಟ್ಟೆಯ ಇನ್‌ಫೆಕ್ಷನ್‌ನಿಂದಾಗಿ ಹೊಟ್ಟೆಯೂತ, ಕೆಳ ಹೊಟ್ಟೆ ನೋವು, ಹೊಟ್ಟೆನೋವು, ವಾಂತಿ ಮತ್ತು ಡಯೋರಿಯಾ ಬರುವ ಸಾಧ್ಯತೆಯುಂಟು.
ಯಾವಾಗ ನಿಮ್ಮ ಮಗುವಿಗೆ ಲ್ಯಾಕ್ಟೋಸ್ ಅಲರ್ಜಿ ಉಂಟಾಗುತ್ತದೆಯೋ, ಆಗ ಮಗುವು ಹಾಲು ಮತ್ತಿತರ ಹೈನು ಉತ್ಪನ್ನಗಳಾದ ಚೀಸ್, ಪನ್ನೀರ್ ಇತ್ಯಾದಿಗಳನ್ನು ತಿನ್ನಲು ಮನಸ್ಸು ಮಾಡುವುದಿಲ್ಲ. ಒಂದು ವೇಳೆ ನೀವು ಬಲವಂತವಾಗಿ ತಿನ್ನಿಸಿದರು ಮಗುವಿಗೆ ಅಜೀರ್ಣ ಉಂಟಾಗುತ್ತದೆ. ಇದಕ್ಕಾಗಿ ನಿಮ್ಮ ಮಗುವಿನ ಹೊಟ್ಟೆಗೆ ಸ್ವಲ್ಪ ವಿಶ್ರಾಂತಿ ನೀಡುವುದು ಒಳ್ಳೆಯದು. ಹಾಲು ಇನ್ನಿತರ ಹೈನು ಉತ್ಪನ್ನಗಳನ್ನು ಮಗುವಿಗೆ ನೀಡುವ ಮೊದಲು ಮಗುವಿಗೆ ಇನ್‌ಫೆಕ್ಷನ್ ನಿವಾರಣೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಕೆಲವೊಂದು ಮಕ್ಕಳಿಗೆ ಇನ್‌ಫೆಕ್ಷನ್ ಎರಡು ಮೂರು ದಿನಗಳಲ್ಲಿ ಹೋಗಿ ಬಿಡುತ್ತದೆ. ಇನ್ನೂ ಕೆಲವರಲ್ಲಿ, ಇನ್‌ಫೆಕ್ಷನ್ ಸುಮಾರು ಏಳು ದಿನಗಳ ಕಾಲ ಇರುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಹೊಟ್ಟೆಯ ಇನ್‌ಫೆಕ್ಷನ್ ಬಂದಲ್ಲಿ, ಅದರ ಹೊಟ್ಟೆಯು ಸರಿ ಹೋಗುವುವವರೆಗೆ ಅಂದರೆ ಹದಿನೈದು ದಿನಗಳ ಕಾಲ ಹಾಲಿನ ಉತ್ಪನ್ನಗಳನ್ನು ತಿನ್ನಲು ನೀಡಬೇಡಿ. ಆದರೆ ತಾಯಿಯ ಎದೆಹಾಲನ್ನು ನೀಡುವುದನ್ನು ಮುಂದುವರಿಸಬಹುದು ಎಂಬುದನ್ನು ಮರೆಯಬೇಡಿ. ಏಕೆಂದರೆ ಎದೆ ಹಾಲಿನಲ್ಲಿ ಆಂಟಿ ಬಾಡಿಗಳು ಇರುತ್ತವೆ, ಇವು ಮಗುವಿಗೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ಹೊಟ್ಟೆಯ ಇನ್‌ಫೆಕ್ಷನ್ ಬೇಗ ಗುಣಮುಖವಾಗುವಂತೆ ಮಾಡುತ್ತದೆ.



Click it and Unblock the Notifications

