Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಸುಳ್ಳು ಹೇಳುವ ಪ್ರವೃತ್ತಿಗೆ ಈಗಲೇ ಕಡಿವಾಣ ಹಾಕಿ
ಮಕ್ಕಳು ದೇವರ ರೂಪ ಎಂಬ ಮಾತಿದೆ. ಅದಕ್ಕಾಗಿಯೇ ಅವರು ಮಾಡುವ ತಪ್ಪುಗಳನ್ನು ಮಕ್ಕಳಲ್ಲವೇ ಎಂದು ನಾವು ಅಷ್ಟೊಂದು ಮುಖ್ಯವಾಗಿ ಪರಿಗಣಿಸುವುದಿಲ್ಲ. ಮಕ್ಕಳಾಟಿಕೆ ಎಂದಾಗಿಯೇ ನಾವು ಅದನ್ನು ಮನಗಾಣುತ್ತೇವೆ. ಆದರೆ ನಿಮ್ಮ ಮಗು ಸುಳ್ಳು ಹೇಳುತ್ತಿದೆ ಎಂಬಂತಹ ಸಂದರ್ಭದಲ್ಲಿ ನೀವು ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ನಿಮ್ಮ ಕಣ್ಣೋಟವನ್ನು ತಪ್ಪಿಸಿ ತನ್ನ ತಪ್ಪನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದಾದಲ್ಲಿ ನೀವು ಗಮನ ನೀಡುವ ಸಮಯ ಬಂದೊದಗಿದೆ ಎಂದೇ ಅರ್ಥ.

ಅವರಿಗೆ ನಯವಾಗಿ ತಿಳಿ ಹೇಳಿ ಅವರ ಬಾಯಿಂದಲೇ ಆ ತಪ್ಪನ್ನು ಹೊರಹಾಕಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ನಿಮ್ಮ ಮೇಲೆ ಮಗುವಿಗೆ ವಿಶ್ವಾಸ ಬರುವಂತಹ ರೀತಿಯಲ್ಲಿ ನೀವು ಅವರೊಂದಿಗೆ ನಡೆದುಕೊಳ್ಳಬೇಕು. ಆದರೆ ಮಕ್ಕಳು ಸುಳ್ಳು ಹೇಳಲು ಕಾರಣವೇನು ಎಂಬುದನ್ನು ನೀವು ಮನಗಂಡಿದ್ದೀರಾ? ಸಣ್ಣ ಸಣ್ಣ ವಿಷಯಗಳನ್ನು ಅವರು ಮುಚ್ಚಿಡಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಅಡಗುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಅವರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಇದೆಲ್ಲಾ ಸುಳ್ಳು ಹೇಳುವ ಮಗುವಿನ ಲಕ್ಷಣಗಳಾಗಿವೆ. ಹಾಗಿದ್ದರೆ ಮಕ್ಕಳು ಸುಳ್ಳು ಹೇಳಲು ಕಾರಣಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.
ಪರಿಸ್ಥಿತಿಯಿಂದ ಹೊರಬರಲು
ಮಕ್ಕಳು ತಾವಿರುವಂತಹ ಪರಿಸ್ಥಿತಿಯಿಂದ ಹೊರಬರಲು ಆ ಕ್ಷಣದಲ್ಲಿ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದು ಅವರಿಗೆ ಒಂದು ಬಗೆಯ ರಕ್ಷಣೆಯಂತೆ ತೋರುತ್ತದೆ. ಅಂತೆಯೇ ಕಷ್ಟಕರ ಸ್ಥಿತಿಯಿಂದ ಹೊರಬರಲು ಸುಳ್ಳು ಸರಳ ದಾರಿ ಎಂದೇ ಅವರು ಕಂಡುಕೊಳ್ಳುತ್ತಾರೆ.
ಒತ್ತಡಕ್ಕೆ ಒಳಗಾಗಿ
ಬೆಳೆಯುತ್ತಿರುವ ಮಕ್ಕಳಿಗೆ ಒತ್ತಡವು ತೊಡಕಾಗಿದೆ. ಮಕ್ಕಳು ಹೆಚ್ಚುವರಿ ಒತ್ತಡದಲ್ಲಿದ್ದಾಗ, ಅವರಿಗೆ ಇಷ್ಟವಾಗದೇ ಇರುವ ಅಂಶಗಳನ್ನು ಸ್ವೀಕರಿಸಬೇಕಾಗುತ್ತದೆ. ಹೆಚ್ಚಾಗಿ ಅವರು ಮಕ್ಕಳ ಗುಂಪಿನಲ್ಲಿದ್ದಾಗ. ಆ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳ ಮೇಲಿನ ನಿಗಾ ಇರಿಸಿ ಅವರನ್ನು ಸಂರಕ್ಷಿಸಬೇಕಾಗುತ್ತದೆ ಮತ್ತು ಅವರಿಗೆ ಮಾರ್ಗದರ್ಶನವನ್ನು ನೀಡಬೇಕು.
ಇತರರ ಗಮನ ಸೆಳೆಯಲು
ತಮ್ಮ ಸುತ್ತಲಿರುವ ಇತರರ ಗಮನ ಸೆಳೆಯಲು ಕೂಡ ಮಕ್ಕಳು ಸುಳ್ಳು ಹೇಳುವ ಪರಿಪಾಠವನ್ನು ಇರಿಸಿಕೊಳ್ಳುತ್ತಾರೆ. ನಿಮ್ಮ ಗಮನವನ್ನು ಸೆಳೆಯಲೋಸುಗ ಮಗು ಕೊಂಚ ಬೆದರಿದಂತೆ ನಡೆದುಕೊಳ್ಳುತ್ತಿದೆ ಎಂದಾದಲ್ಲಿ ಅದು ಯಾವುದೆ ಬಗ್ಗೆಯೋ ಕೊಂಚ ಗಾಬರಿಗೊಂಡಿದೆ ಎಂದರ್ಥವಾಗಿದೆ.
ಸುಳ್ಳು ಹೇಳುವುದು ಹವ್ಯಾಸ
ಕೆಲವು ಮಕ್ಕಳಿಗೆ ಸುಳ್ಳು ಹೇಳುವುದು ಚಟವಾಗಿ ಬಿಟ್ಟಿರುತ್ತದೆ. ತಂದೆ ತಾಯಿ ಈ ವಿಷಯದಲ್ಲಿ ಹೆಚ್ಚು ಗಮನ ಹರಿಸುತ್ತಿಲ್ಲ ಎಂದಾದರೆ ಅದು ಸುಳ್ಳು ಹೇಳುವುದು ಸಾಮಾನ್ಯ ವಿಷಯ ಎಂದೇ ತಿಳಿದುಕೊಳ್ಳುತ್ತದೆ ಮತ್ತು ಇದರಿಂದ ಯಾವುದೇ ಹಾನಿಯಿಲ್ಲ ಎಂದೇ ಭಾವಿಸುತ್ತದೆ.
ಮಕ್ಕಳ ನಡವಳಿಕೆಯನ್ನು ಪರಿಶೀಲಿಸಿರುವುದಿಲ್ಲ
ತಮ್ಮ ಮಕ್ಕಳು ಸುಳ್ಳು ಹೇಳುವುದನ್ನು ಹೆತ್ತವರು ಗಮನಿಸಿದಲ್ಲಿ, ಅದೇ ಸಮಯದಲ್ಲಿ ಮಕ್ಕಳ ಆ ಪ್ರವೃತ್ತಿಯನ್ನು ಸರಿಪಡಿಸಬೇಕು. ನೀವು ಎಲ್ಲಿಯಾದರೂ ಈ ವಿಷಯದಲ್ಲಿ ಸೋತಿರಿ ಎಂದಾದಲ್ಲಿ ನಿಮ್ಮ ಮಗು ಸುಳ್ಳು ಹೇಳುವ ವಿಷಯದಲ್ಲಿ ಪ್ರವೀಣನಾಗಿರುತ್ತದೆ ಮತ್ತು ಅದನ್ನು ತಿದ್ದಲು ಸಾಧ್ಯವಾಗುವುದಿಲ್ಲ.



Click it and Unblock the Notifications


