Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳಿಗೆ ಕಾಡುವ ಶ್ವಾಸಕೋಶ ಸಮಸ್ಯೆಗೆ ಕಾರಣವೇನು?
ಮಕ್ಕಳಲ್ಲಿ ಬೆಳವಣಿಗೆಯ ತೊಂದರೆಗಳು ಕಂಡುಬರುವುದು ತೀರಾ ಸಾಮಾನ್ಯ, ಆದರೆ ಅವು ಬೆಳಕಿಗೆ ಬರದೆ ಹೋಗುವುದೇ ಹೆಚ್ಚು. ಹೌದು, ಮಕ್ಕಳು ಅತಿ ಸೂಕ್ಷ್ಮ ದೇಹವನ್ನು ಹೊಂದಿರುವುದರಿಂದ, ಕೆಲವೊಮ್ಮ ಸಣ್ಣ ಪುಟ್ಟ ಕಾಯಿಲೆಗಳೇ ಅವರಿಗೆ ಮಾರಕವಾಗಿ ಬಿಡುತ್ತದೆ. ಅವರ ಶ್ವಾಸಕೋಶಗಳನ್ನು ಈ ವಿಚಾರದಲ್ಲಿ ಪರಿಗಣನೆಗೆ ತೆಗೆದುಕೊಂಡರೆ, ಅವುಗಳು ಇನ್ನೂ ಸೂಕ್ಷ್ಮವಾದ ಅಂಗಗಳಾಗಿರುತ್ತವೆ. ಇವುಗಳನ್ನು ಜಾಗರೂಕತೆಯಿಂದ ಕಾಪಾಡುವಲ್ಲಿ ಪೋಷಕರ ಪಾತ್ರವು ಸಹ ಮುಖ್ಯವಾಗಿರುತ್ತದೆ.

ಏಕೆಂದರೆ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಅಂಶಗಳು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತವೆ. ಒಂದು ವೇಳೆ ಮಗು ಹೊಟ್ಟೆಯಲ್ಲಿರುವಾಗ ತಾಯಿ ಧೂಮಪಾನ ಮಾಡುತ್ತಿದ್ದಲ್ಲಿ, ಮಗುವಿಗೆ ಶ್ವಾಸಕೋಶಗಳ ಇನ್‌ಫೆಕ್ಷನ್ ಇದ್ದಲ್ಲಿ ಮತ್ತು ಜನನದ ಸಂದರ್ಭದಲ್ಲಿ ಹವಾಮಾನದ ಏರು ಪೇರುಗಳು ಇದ್ದಲ್ಲಿ, ಮಗುವಿನ ಶ್ವಾಸಕೋಶಕ್ಕೆ ಇದರಿಂದ ಹಾನಿಯುಂಟಾಗುತ್ತದೆ ಎಂದು ಒಂದು ಹೊಸ ಅಧ್ಯಯನವೊಂದು ತಿಳಿಸಿದೆ. ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು
ಈ ಅಧ್ಯಯನವು ಗರ್ಭಿಣಿಯಾಗಿರುವಾಗ ಮಗುವಿನ ತಾಯಿ ಧೂಮಪಾನ ಮಾಡುತ್ತಿದ್ದರೆ, ಅದರಿಂದ ಖಂಡಿತ ಮಗುವಿನ ಶ್ವಾಸಕೋಶದ ಮೇಲೆ ಪ್ರಭಾವವುಂಟಾಗುತ್ತದೆ ಎಂದು ತಿಳಿಸಿದೆ. ಇದಲ್ಲದೆ ಮಗುವು ಚಿಕ್ಕ ವಯಸ್ಸಿನಲ್ಲಿ ಯಾವುದಾದರು ಶ್ವಾಸಕೋಶಗಳ ಸೋಂಕಿನಿಂದ ಭಾದೆ ಪಟ್ಟಲ್ಲಿ, ಅದರಿಂದ ಸಹ ಮಗು ಬಳಲುತ್ತದೆ ಎಂದು ಸಾಬೀತು ಮಾಡಿದೆ.
ಮಗುವಿನ ಜನನದ ಸಂದರ್ಭದಲ್ಲಿ ಇರುವ ಹವಾಮಾನದ ಪರಿಣಾಮವು ಸಹ ಮಗುವಿನ ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಜನಿಸುವ ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಶ್ವಾಸಕೋಶದ ಸಮಸ್ಯೆಗಳು ಸಾಮಾನ್ಯವಾಗಿ ವಯಸ್ಸಾದಂತೆ ಕಡಿಮೆಯಾಗುತ್ತದೆ ಮತ್ತು ಈ ಮೇಲಿನ ಅಂಶಗಳು ನಿಮಗೆ ಅನ್ಯಯವಾಗದೆ ಇದ್ದಲ್ಲಿ, ವಯಸ್ಸಿನ ಪ್ರಕ್ರಿಯೆಯು ನಿಮ್ಮ ಮಗುವಿನ ಶ್ವಾಸಕೋಶದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಅಧ್ಯಯನಕಾರರು ಇಂತಹ ವ್ಯಕ್ತಿಗಳಿಗೆ ಧೂಮಪಾನ ಮಾಡದೆ ಇರುವಂತೆ ಸಲಹೆ ನೀಡುತ್ತಾರೆ. ಜೊತೆಗೆ ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯುತ್ತಾರೆ ಎಂಬುದು ಸಹ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಏಕೆಂದರೆ ಈ ವಾತಾವರಣವು ಮಗುವಿನ ದೈಹಿಕ ಕ್ರಿಯೆಯನ್ನು ಮತ್ತು ನ್ಯೂನತೆಗಳನ್ನು ಸರಿಪಡಿಸುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಈ ಅಧ್ಯಯನವು ಮಗುವಿನ ತಾಯಿಗೆ ಮತ್ತು ಗರ್ಭಿಣಿಯರಿಗೆ ಧೂಮಪಾನ ಮಾಡಬೇಡಿ ಎಂದು ತಿಳಿಸುತ್ತದೆ. ಇದರಿಂದ ಶ್ವಾಸಕೋಶದ ಸಮಸ್ಯೆಗಳು ಬೇಗ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಗರ್ಭಿಣಿಯರು, ಆರೋಗ್ಯಕರವಾದ ಅಭ್ಯಾಸಗಳನ್ನು ಇರಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.



Click it and Unblock the Notifications



