Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಅಲರ್ಜಿ ಸಮಸ್ಯೆಗೆ, ಮೀನು ಬಹಳ ಒಳ್ಳೆಯದು...
ಮೀನು ತಿನ್ನುವ ಕುಟುಂಬದ ಮಕ್ಕಳಲ್ಲಿ ಅಲರ್ಜಿ ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಸ್ವೀಡನ್ನಿನ Chalmers University of Technology ವಿಶ್ವವಿದ್ಯಾಲಯದ ಸಂಶೋಧಕ ಕ್ಯಾರಿನ್ ಜಾನ್ಸರ್ ರವರು ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಅಥವಾ ಬಾಣಂತಿತನದ ಅವಧಿಯಲ್ಲಿ ತಾಯಿ ಮೀನಿನ ಎಣ್ಣೆ ಹೆಚ್ಚಿರುವ ಖಾದ್ಯಗಳನ್ನು ಸೇವಿಸಿದರೆ ಇದು ಮಕ್ಕಳಲ್ಲಿ ವಿವಿಧ ಅಲರ್ಜಿಗಳನ್ನು ಉಂಟುಮಾಡದಿರಲು ನೆರವಾಗುತ್ತದೆ. ವಿಶೇಷವಾಗಿ ಅಸ್ತಮಾ, ಎಕ್ಸಿಮಾ, ಜ್ವರ ಮೊದಲಾದವು ಬರದಿರಲು ಸಾಧ್ಯವಾಗುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ.

ಅಷ್ಟೇ ಅಲ್ಲ, ಮಗುವಿನ ಹನ್ನೊಂದು ತಿಂಗಳು ತುಂಬುವುದಕ್ಕೂ ಮುನ್ನ ಕೊಂಚವೇ ಮೀನು ಮತ್ತು ಮೊಟ್ಟೆಗಳನ್ನು ತಿನ್ನಿಸುವ ಮೂಲಕ ಮಕ್ಕಳ ದೇಹಕ್ಕೆ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲಗಳು ಲಭ್ಯವಾಗುತ್ತವೆ. ಇದರಿಂದ ವಿವಿಧ ಬಗೆಯ ಅಲರ್ಜಿಯುಂಟಾಗದಂತಿರಲು ಸಾಧ್ಯವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ.
"ಮೀನು ತಿನ್ನುವ ಕುಟುಂಬದ ಮಕ್ಕಳಲ್ಲಿ ಅಲರ್ಜಿ ಕಂಡುಬರುವ ಸಾಧ್ಯತೆ ಕಡಿಮೆ" ಎಂದು ಸ್ವೀಡನ್ನಿನ Chalmers University of Technology ವಿಶ್ವವಿದ್ಯಾಲಯದ ಸಂಶೋಧಕ ಕ್ಯಾರಿನ್ ಜಾನ್ಸರ್ ರವರು ತಿಳಿಸಿದ್ದಾರೆ.
ಇಡಿಯ ಗೋಧಿ ಹಿಟ್ಟಿನ ಖಾದ್ಯ ಮತ್ತು ಮೀನನ್ನು ಸೇವಿಸುವ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಅತಿ ಕಡಿಮೆ ಅಲರ್ಜಿಯಾಗುವ ಸಾಮರ್ಥ ಪಡೆಯುತ್ತಾರೆ. ಇವರ ರಕ್ತದಲ್ಲಿರುವ ಹೆಚ್ಚಿನ ಪ್ರಮಾಣದಲ್ಲಿರುವ ಒಮೆಗಾ 3 ಕೊಬ್ಬಿನ ಆಮ್ಲ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.
ಉತ್ತಮ ಆರೋಗ್ಯ ಹೊಂದಿರುವ ನಾಲ್ಕು ತಿಂಗಳ ಮಕ್ಕಳ ರಕ್ತವನ್ನು ಪರಿಶೀಲಿಸಿದಾಗ ಇತರ ಮಕ್ಕಳಿಗಿಂತಲೂ ಈ ಮಕ್ಕಳ ರಕ್ತದಲ್ಲಿ ಹೆಚ್ಚಿನ ಪ್ರಮಾಣದ eicosapentaenoic acid ಅಥವಾ EPA ಎಂಬ ಒಮೆಗಾ 3 ಕೊಬ್ಬಿನ ಆಮ್ಲವಿರುವುದು ಕಂಡುಬಂದಿದೆ.
"ಈ ಮಟ್ಟದ ಕೊಬ್ಬಿನ ಆಮ್ಲ ಮಗುವಿನ ರಕ್ತದಲ್ಲಿ ಕಂಡುಬರಲು ಗರ್ಭಾವಸ್ಥೆಯಲ್ಲಿ ತಾಯಿ ಸೇವಿಸಿರುವ ಮೀನೇ ಕಾರಣವಾಗಿದೆ. ಅಷ್ಟೇ ಅಲ್ಲ ಬಾಣಂತಿತನದಲ್ಲಿಯೂ ಮೀನು ಸೇವಿಸುವ ಮೂಲಕ ಮಗು ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನ ಆಮ್ಲವನ್ನು ತಾಯಿ ಹಾಲಿನ ಮೂಲಕ ಪಡೆಯುತ್ತದೆ" ಎಂದು ಜಾನ್ಸರ್‌ರವರು ತಿಳಿಸುತ್ತಾರೆ.
ಮಾಹಿತಿ ಕೃಪೆ: IANS



Click it and Unblock the Notifications



