Latest Updates
-
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಹೆರುವುದಕ್ಕೂ, ಯೌವನಕ್ಕೂ ಎತ್ತಿಂದೆತ್ತ ಸಂಬಂಧ?
ಕೆಲವರು ತಮ್ಮ ಯೌವನವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಕ್ಕಳನ್ನು ಬೇಡ ಎಂದು ಹೇಳುತ್ತಿದ್ದರು. ಮಕ್ಕಳನ್ನು ಹೆರುವುದನ್ನು ಉದ್ದೇಶ ಪೂರ್ವಕವಾಗಿ ತಡೆದು ತಮ್ಮ ಯೌವನದ ಬಗ್ಗೆ ತಾವೇ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ನಿಲ್ಲಿ, ಹಾಗೆ ಯೋಚನೆ ಮಾಡುವವರಲ್ಲಿ ನೀವು ಸಹ ಒಬ್ಬರಾಗಿದ್ದಲ್ಲಿ, ಆ ಯೋಚನೆಯನ್ನು ಬಿಡಿ. ಇತ್ತೀಚಿನ ಅಧ್ಯಯನವೊಂದು ಮಕ್ಕಳನ್ನು ಹೆಚ್ಚಿಗೆ ಹೆರುವ ಮೂಲಕ ನಿಮ್ಮ ಯೌವನವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದೆ.

ಅಧಿಕ ಮಕ್ಕಳನ್ನು ಹೆರುವ ಹೆಂಗಸರಲ್ಲಿ ಅವರ ದೇಹವು ನಿಧಾನವಾಗಿ ವಯಸ್ಸಾಗುತ್ತದೆ ಎಂದು ಈ ಅಧ್ಯಯನವು ಸಾಭೀತು ಮಾಡಿದೆ. ಈ ಅಧ್ಯಯನವು ಒಂದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆತ್ತ ತಾಯಂದಿರನ್ನು ಸಮೀಕ್ಷೆ ಮಾಡಿತು, ಅವರಲ್ಲಿ "ಟೆಲೊಮಿಯರ್ಸ್" ಉದ್ದವಾಗಿರುತ್ತವೆ ಎಂದು ತೋರಿಸಿದೆ. ಟೆಲೊಮಿಯರ್ಸ್ ಎಂದರೇನು? ಇವುಗಳು ಡಿಎನ್‌ಎಯ ಎಳೆಗಳು ಎಂದು ಹೇಳಲಾಗುತ್ತದೆ. ಇವುಗಳು ಸಾಮಾನ್ಯವಾಗಿ ವಯಸ್ಸಾಗುವಿಕೆಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
ಉದ್ದವಾದ ಎಳೆಗಳು ದೀರ್ಘಾಯಸ್ಸನ್ನು ತೋರಿಸುತ್ತದೆ. 75 ಕ್ಕೂ ಅಧಿಕ ತಾಯಂದಿರನ್ನು ಮತ್ತು ಮಕ್ಕಳನ್ನು ಅಧ್ಯಯನ ಮಾಡಿದ ನಂತರ ಅಧ್ಯಯನಕಾರರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಧ್ಯಯನದ ಪ್ರಕಾರ ಅಧ್ಯಯನಕಾರರು ಈ 75 ಜನರ ಲಾಲಾರಸವನ್ನು ಪರೀಕ್ಷಿಸಿದ್ದಾರೆ. ಹಿಂದಿನ ಅಧ್ಯಯನಗಳು ಹೆಚ್ಚಿನ ಮಕ್ಕಳನ್ನು ಹೆರುವುದರಿಂದ ಬೇಗ ವಯಸ್ಸಾಗುತ್ತದೆ ಎಂದು ತಿಳಿಸಿತ್ತು. ಆದರೆ ಈ ಅಧ್ಯಯನವು ಆ ಅಭಿಪ್ರಾಯವನ್ನು ವಿರೋಧಿಸಿದೆ.
ಅಧಿಕ ಮಕ್ಕಳನ್ನು ಹೆತ್ತ ತಾಯಂದಿರಲ್ಲಿ, ಟೆಲೊಮಿಯರ್‌ಗಳು ನಿಧಾನಗತಿಯಲ್ಲಿ ಸಣ್ಣ ಆಗುತ್ತವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ. ಇದರ ಜೊತೆಗೆ ಪರಿಸರ ಮತ್ತು ಇನ್ನಿತರ ಅಂಶಗಳು ಸಹ ವಯಸ್ಸಾಗುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಮತ್ತು ಈ ಮಹಿಳೆಯರಲ್ಲಿ ಸಂತಾನೋತ್ಪತಿಯ ದರವು ಸಹ ಅಧಿಕವಾಗಿರುತ್ತದೆ ಎಂದು ತಿಳಿಸಲಾಗಿದೆ.
ಈ ಅಧ್ಯಯನವು ಅಧಿಕ ಮಕ್ಕಳನ್ನು ಹೆರುವುದರಿಂದ ವಯಸ್ಸಾಗುವಿಕೆಯನ್ನು ತಡೆಯಬಹುದು ಎಂದು ಹೇಳಿದ್ದರು, ಅದು ಪ್ರಾಯೋಗಿಕವಾಗಿ ಅಷ್ಟು ಒಳ್ಳೆಯದಲ್ಲ. ಹಲವಾರು ಪೋಷಕರಿಗೆ ಹೆಚ್ಚು ಮಕ್ಕಳನ್ನು ಸಾಕುವುದು ಕಷ್ಟ ಎಂಬುದು ಸತ್ಯ.
ಅವರಿಗೆ ಬೇಕಾದ ಸಂಪನ್ಮೂಲಗಳ ಕೊರತೆಯು ಇದಕ್ಕೆ ಕಾರಣವಾಗಿರುತ್ತದೆ. ಕೇವಲ ಸೌಂದರ್ಯಕ್ಕಾಗಿ ಮಕ್ಕಳನ್ನು ಹೆರಲು ಸಾಧ್ಯವೇ? ಅದಲ್ಲದೆ ಜಗತ್ತಿನಲ್ಲಿ ಈಗ ಜನಸಂಖ್ಯೆಯು ಅಧಿಕವಾಗುತ್ತಲೆ ಇದೆ. ಇದು ಒಂದು ಪಿಡುಗು ಸಹ ಆಗಿರುವುದರಿಂದ ಅಧಿಕ ಮಕ್ಕಳನ್ನು ಹೆರುವುದು ಸಮಂಜಸವಲ್ಲ. ಹಾಗಾಗಿ ಸೌಂದರ್ಯಕ್ಕಾಗಿ ಈ ಸಲಹೆಯನ್ನು ನಿಮಗೆ ಯಾರೂ ಶಿಫಾರಸು ಮಾಡುವುದಿಲ್ಲ.
ಒಂದಕ್ಕಿಂತ ಹೆಚ್ಚು ಮಗುವನ್ನು ಹೆರುವುದು ಈ ದಿನಗಳಲ್ಲಿ ಒಳ್ಳೆಯ ತೀರ್ಮಾನವಂತು ಅಲ್ಲವೇ ಅಲ್ಲ! ಆದರೆ ಒಂದು ಅಧ್ಯಯನದ ವಿವರವನ್ನು ತಿಳಿಸುವುದು ನಮ್ಮ ಉದ್ದೇಶವಷ್ಟೆ. ಆ ಅಧ್ಯಯನವು ಅಧಿಕ ಮಕ್ಕಳನ್ನು ಹೆರುವಿಕೆಯಿಂದ ನಿಮ್ಮ ಸೌಂದರ್ಯವು ಉಳಿಯುತ್ತದೆ ಮತ್ತು ವಯಸ್ಸಾದಂತೆ ಕಾಣುವಿಕೆ ನಿಧಾನವಾಗುತ್ತದೆ ಎಂದು ತಿಳಿಸುತ್ತಿದೆ ಅಷ್ಟೇ..



Click it and Unblock the Notifications



