Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಗುವಿಗೆ ಆಹಾರ ತಿನ್ನಿಸಿದ ಬಳಿಕ, ತೇಗು ಬಂದರೆ ಚಿಂತಿಸದಿರಿ!
ಈಗಷ್ಟೇ ತಾಯ ಗರ್ಭದಿಂದ ಹೊರಜಗತ್ತಿಗೆ ಕಾಲಿಟ್ಟ ಪುಟ್ಟ ಕಂದಮ್ಮನನ್ನು ಎದುರುಗೊಳ್ಳುವ ಆ ತಾಯಿಯ ಸಂತಸ ಮುಗಿಲು ಮುಟ್ಟುವಂತಹದ್ದು. ಅದಕ್ಕೆ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ. ಕಂದಮ್ಮ ಬೆಳೆಯುತ್ತಿರುವಂತೆಯೇ ನಾವು ಅವರೊಂದಿಗೆ ಮಗುವಾಗಿ ಬಿಡುತ್ತೇವೆ. ಆ ಪುಟ್ಟ ಕಣ್ಣುಗಳಲ್ಲಿ ಹೊಸದಾದ ಲೋಕವನ್ನೇ ಕಂಡುಕೊಳ್ಳುತ್ತೇವೆ. ಮಗುವಿಗೆ ಪಾಲನೆ ಪೋಷಣೆಗೆ ಯಾವೊಂದು ಲೋಪವುಂಟಾಗದಂತೆ ಅದನ್ನು ಜಾಗರೂಕತೆ ಮಾಡುತ್ತೇವೆ. ಇದರ ಜೊತೆಗೆ ಮನೆಯ ಹಿರಿಯರು ನೀಡುವ ಕೆಲವೊಂದು ಸಲಹೆಗಳನ್ನು ಮಗುವಿನ ಕಾಳಜಿಗಾಗಿ ನಾವು ಪಾಲಿಸಬೇಕಾಗುತ್ತದೆ.
ಮಗುವಿಗೆ ಆಹಾರ ತಿನ್ನಿಸಿದ ನಂತರ ತೇಗು ಬರುವುದು ತುಂಬಾ ಮುಖ್ಯವಾದ ಕ್ರಿಯೆಯಾಗಿದೆ, ಎರಡೂ ಬದಿಗಳಲ್ಲಿ ಮಗುವನ್ನು ಸಮಾನಾಂತರವಾಗಿ ಮಲಗಿಸುವುದು ಸಂಪೂರ್ಣ ಮಗುವಿನ ಬೆಳವಣಿಗೆಗೆ ಕಾರಣವಾಗಿದೆ. ಇಂದಿನ ಬೋಲ್ಡ್ ಸ್ಕೈ ಲೇಖನದಲ್ಲಿ ಮಗುವಿಗೆ ಆಹಾರ ತಿನ್ನಿಸಿದ ನಂತರ ತೇಗು ಬರುವುದು ಏಕೆ ಎಂಬುದನ್ನು ನಿಮಗೆ ತಿಳಿಸಲಿದೆ. ಸಣ್ಣ ಮಗುವಿಗೆ ತಿನ್ನಿಸಿದ ನಂತರ, ಬಾಯಿಯ ಮೂಲಕ ಗಾಳಿ ಒಳಹೋಗಿ ಈ ಗಾಳಿಯು ಜಠರಗರುಳಿನಲ್ಲಿ ಬಂಧಿಯಾಗುತ್ತದೆ. ಚಿಕ್ಕ ಮಗುವಿಗೆ ತೇಗು ಬರುವ ವ್ಯಾಯಾಮ ಅವಶ್ಯಕ
ಇದು ಬಿಡುಗಡೆಯಾಗಬೇಕು, ಈ ಗಾಳಿ ಬಿಡುಗಡೆಯಾಗಿಲ್ಲ ಎಂದಾದಲ್ಲಿ, ಮಗು ಅಹಿತಕರ ಭಾವನೆಯನ್ನು ಹೊಂದುತ್ತದೆ ಮತ್ತು ಹೊಟ್ಟೆಗೆ ಅಪಾಯವಾಗಬಹುದು. ತಜ್ಞರು ಹೇಳುವಂತೆ ಸಣ್ಣ ಗಾಳಿ ಗುಳ್ಳೆಗಳು ಮಗುವಿನ ಹೊಟ್ಟೆಯಲ್ಲಿ ಸಿಲುಕಿ ಬಿಡುತ್ತದೆ, ಇದು ಮಗುವಿಗೆ ಹೊಟ್ಟೆ ತುಂಬಿದ ಮತ್ತು ಅಹಿತಕರ ಭಾವನೆಯನ್ನು ಉಂಟುಮಾಡುತ್ತದೆ. ಇದರಿಂದ ಮಗು ಒದ್ದಾಡಲು ಮತ್ತು ಅಳಲು ಆರಂಭಿಸುತ್ತದೆ. ಆದ್ದರಿಂದ ನವಜಾತ ಶಿಶುವಿನ ಪೋಷಕರು ಮಗುವಿಗೆ ತೇಗು ಬರುವಂತೆ ನೋಡಿಕೊಳ್ಳಬೇಕು. ಮಗುವಿಗೆ ತಿನ್ನಿಸಿದ ನಂತರ ನಿಮ್ಮ ಮಗುವಿಗೆ ಹೇಗೆ ತೇಗು ಬರುತ್ತದೆ ಎಂಬುದನ್ನು ಕೆಳಗೆ ನೋಡಿ....

ಮಗುವಿಗೆ ಗ್ಯಾಸ್ ಉಂಟಾಗುವುದು ಹೇಗೆ?
ಮೂರು ವಿಧಾನದಲ್ಲಿ ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಒಂದು ಆಹಾರ್ ಜೀರ್ಣವಾಗುವುದರ ಮೂಲಕ, ಎರಡನೆಯದು ಆಹಾರವನ್ನು ಸೇವಿಸುವಾಗ ಗಾಳಿಯನ್ನು ನುಂಗುವುದು, ಮೂರನೆಯದು ಆಹಾರ ಅಸಹಿಷ್ಣುತೆ (ಮಗುವು ಪದ್ಧತಿಯನ್ನು ಒಪ್ಪದೇ ಇದ್ದಲ್ಲಿ).

ಮಗುವಿಗೆ ತೇಗು ಬರಿಸುವುದು ಹೇಗೆ?
ಮಗುವಿಗೆ ಸುಲಭವಾಗಿ ತೇಗು ಉಂಟಾಗಲು ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ. ಮಗುವನ್ನು ನಿಮ್ಮ ತೋಳುಗಳಲ್ಲಿ ಹಿಡಿದುಕೊಳ್ಳಿ. ಮಗುವಿನ ತಲೆಯನ್ನು ಮೇಲ್ಭಾಗದಲ್ಲಿ ಹಿಡಿದುಕೊಂಡು ಬೆನ್ನನ್ನು ತಟ್ಟಿರಿ. ಸ್ವಲ್ಪ ನಿಮಿಷ ಕಾಯಿರಿ ನಿಮ್ಮ ಮಗು ತೇಗುವ ಧ್ವನಿಯನ್ನು ನಿಮಗೆ ಕೇಳಬಹುದು.

ತೇಗಲು ಕುಳಿತುಕೊಳ್ಳುವ ಭಂಗಿ
ಇನ್ನೊಂದು ವಿಧಾನವೆಂದರೆ ಮಗುವನ್ನು ನಿಮ್ಮ ತೊಡೆಯಲ್ಲಿ ಕುಳ್ಳಿರಿಸಿ, ಇದಕ್ಕೆ ನಿಮ್ಮ ತೋಳುಗಳು ಮತ್ತು ಕೈಗಳ ಸಹಾಯವನ್ನು ತೆಗೆದುಕೊಂಡು ಮಗುವಿನ ದೇಹ ಮತ್ತು ತಲೆಯನ್ನು ಬೆಂಬಲಿಸಿ. ಇನ್ನೊಂದು ಕೈಯಿಂದ ಮಗುವಿನ ಹಿಂಭಾಗದಲ್ಲಿ ತಟ್ಟಿರಿ, ಇಲ್ಲಿ ತೇಗು ಬರುತ್ತದೆ.

ಮಗುವಿಗೆ ಯಾವಾಗ ತೇಗು ಬರಿಸಬೇಕು?
ಮಗುವಿಗೆ ಆಹಾರ ತಿನ್ನಿಸಿದ ನಂತರ ಮತ್ತು ತಿನ್ನಿಸುವ ಮಧ್ಯಂತರದಲ್ಲಿ ತೇಗು ಬರಿಸಬೇಕಾಗುತ್ತದೆ. ಹಾಲುಣಿಸುವ ತಾಯಂದಿರು ಹಾಲು ಕುಡಿಸಿದ ನಂತರ ಮಗುವಿಗೆ ತೇಗು ಬರುವಂತೆ ಮಾಡಬೇಕು.

ತೇಗು ಬರಿಸುವುದು ಮಾತ್ರ ಸಾಕೇ?
ತೇಗು ಬಂದ ನಂತರ ಕೂಡ ಮಗು ಇನ್ನೂ ಆರಾಮವಾಗಿಲ್ಲ ಎಂದಾದಲ್ಲಿ ಹೊಟ್ಟೆಯಲ್ಲಿ ಗ್ಯಾಸ್ ಇನ್ನೂ ಇದೆ ಎಂದರ್ಥವಾಗಿದೆ. ಗ್ಯಾಸ್ ಅನ್ನು ಹೊರತೆಗೆಯಲು, ಇತರ ತೇಗುವಿಕೆ ವಿಧಾನಗಳನ್ನು ಅನುಸರಿಸಿ; ಇದು ವಿಫಲವಾದಲ್ಲಿ, ಮಗುವನ್ನು ಅಂಗಾತ ಮಲಗಿಸಿ. ಇದು ಮಗುವಿಗೆ ಆರಾಮವನ್ನು ನೀಡುತ್ತದೆ.

ಮಗುವಿಗೆ ತೇಗು ಬರದೇ ಇದ್ದಲ್ಲಿ ಏನಾಗುತ್ತದೆ?
ಮಗುವಿಗೆ ತೇಗು ಬಂದಿಲ್ಲ ಎಂದಾದಲ್ಲಿ, ಹೊಟ್ಟೆಯಲ್ಲಿರುವ ಗ್ಯಾಸ್ ಅವರಿಗೆ ಭಾರವಾಗಿರುವಂತೆ ಮತ್ತು ಅನಾನುಕೂಲವಾಗುವಂತೆ ಮಾಡಬಹುದು. ಮಗುವಿಗೆ ತೇಗು ಬರದೇ ಇದ್ದಲ್ಲಿ ಅದಕ್ಕೆ ಉಸಿರಾಟಕ್ಕೆ ತೊಂದರೆಯಾಗಬಹುದು, ಇದರಿಂದ ಮಗು ಸೇವಿಸಿದ ಆಹಾರವನ್ನು ಹೊರಹಾಕಬಹುದು.



Click it and Unblock the Notifications
