Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಮಾಜಿಕ ಜಾಲತಾಣ, ಎಂಬ ಪೆಡಂಭೂತದ ಜಾಲದಲ್ಲಿ...
ಹಿಂದೆ ಸಂಜೆಯಾಗುತ್ತಿದ್ದಂತೆ ಮೈದಾನದ ತುಂಬಾ ಮಕ್ಕಳು. ಸ್ವಲ್ಪ ಖಾಲಿ ಜಾಗವಿದ್ದರೂ ಅಲ್ಲಿ ಮಕ್ಕಳು ಏನಾದರೊಂದು ಆಟವಾಡುತ್ತಿದ್ದರು. ಆದರೆ ಈಗ ಮೈದಾನಗಳೇ ಖಾಲಿ ಖಾಲಿ! ಯಾಕೆ ಹೀಗೆ ಎಂದು ಪ್ರಶ್ನಿಸಲು ಹೊರಟರೆ ಉತ್ತರ ಕೂಡ ಬೇಗನೆ ಸಿಗುವುದು. ಅದೇ ಸಾಮಾಜಿಕ ಜಾಲತಾಣಗಳು.
ಮೊದಲು ಮಕ್ಕಳು ಶಾಲೆ ಬಿಟ್ಟ ಬಳಿಕ ಮನೆಗೆ ಬಂದು ನೆರೆಮನೆಯರ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಆದರೆ ಈಗ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್. ಅದರಲ್ಲಿರುವ ಸಾಮಾಜಿಕ ಜಾಲತಾಣಗಳಲ್ಲೇ ಮಕ್ಕಳು ಮುಳುಗಿ ಹೋಗುತ್ತಾರೆ. ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲ, ಕಂಪ್ಯೂಟರ್‌ಗಳಲ್ಲೂ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿ ಹೋಗುತ್ತಾರೆ.

ಇದಕ್ಕೆ ಕಾರಣಗಳು ಇದೆ, ಹೆತ್ತವರು ತಮ್ಮ ವೃತ್ತಿ ಜೀವನದ ಜಂಜಾಟದಲ್ಲೇ ಮುಳುಗಿ ಹೋಗಿರುತ್ತಾರೆ. ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡುವಷ್ಟು ಸಮಯ, ತಾಳ್ಮೆ ಅವರಲ್ಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಸುಲಭವಾಗಿ ಕೈಗೆಟಕುವಂತಹ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುತ್ತಾರೆ. ತಮಗೆ ಗೊತ್ತಿಲ್ಲದ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುತ್ತಾರೆ.
ಮಕ್ಕಳಿಗೆ ಇದರಿಂದ ಆಗುವ ಸರಿ ತಪ್ಪಿನ ಅರಿವು ಇರುವುದಿಲ್ಲ. ಆದರೆ ಇದರಿಂದ ಮಕ್ಕಳು ತಪ್ಪು ಹಾದಿಯನ್ನು ತುಳಿಯಬಹುದು. ಇಂತಹ ಸಂದರ್ಭದಲ್ಲಿ ಹೆತ್ತವರು ಮಕ್ಕಳಿಗೆ ಬುದ್ದಿಮಾತು ಹೇಳಿ ಸಾಮಾಜಿಕ ಜಾಲತಾಣಗಳಿಂದ ಆಗುವಂತಹ ಕೆಟ್ಟ ಪರಿಣಾಮಗಳನ್ನು ವಿವರಿಸಬೇಕು. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಕೇವಲ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಕೈಬೆರಳುಗಳನ್ನು ಆಡಿಸುವುದರಿಂದ ನಿಮ್ಮ ಮಕ್ಕಳು ಉದಾಸೀನ ಕ್ಕೊಳಗಾಗಬಹುದು ಮತ್ತು ಗಂಟೆಗಟ್ಟಲೆ ಕುಳಿತೇ ಇರುವ ಕಾರಣ ಬೊಜ್ಜು ಬೆಳೆಯಬಹುದು. ಸಾಮಾಜಿಕ ಜಾಲತಾಣಗಳು ಮಕ್ಕಳನ್ನು ಹಾಳು ಮಾಡುತ್ತಿವೆಯಾ ಎನ್ನುವ ಪ್ರಶ್ನೆ ಬಂದರೆ ಅದಕ್ಕೆ ಹೌದು ಎನ್ನುವ ಉತ್ತರ ಸಹಜ, ಇದರ ಬಗ್ಗೆ ತಿಳಿಯಲು ಮುಂದಕ್ಕೆ ಓದಿಕೊಳ್ಳಿ.
ಏಕಾಂಗಿಯಾಗಿಸುವುದು
ಜಗತ್ತನ್ನು ಎದುರಿಸಬೇಕಾದರೆ ಮಕ್ಕಳು ಸಮಾಜಮುಖಿಯಾಗುವುದು ತುಂಬಾ ಮುಖ್ಯ. ಆದರೆ ನಾಚಿಕೆ ಸ್ವಭಾವದ ಮಕ್ಕಳು ಕೇವಲ ಸಾಮಾಜಿಕ ಜಾಲತಾಣಗಳಲ್ಲೇ ಸಂಪರ್ಕವಿಟ್ಟುಕೊಂಡಿರುತ್ತಾರೆ. ಇದರಿಂದ ಮಕ್ಕಳು ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಂದ ಏಕಾಂಗಿಯಾಗಬಹುದು.
ಬೊಜ್ಜು
ಸಾಮಾಜಿಕ ಜಾಲತಾಣ ಮಗುವನ್ನು ಹೇಗೆ ಹಾಳುಗೆಡವುತ್ತದೆ? ದಿನವಿಡಿ ಕಂಪ್ಯೂಟರ್ ಮುಂದೆ ಕುಳಿತೇ ಇರುವುದರಿಂದ ತೂಕ ಹೆಚ್ಚಾಗಬಹುದು. ಕಂಪ್ಯೂಟರ್ ಮುಂದೆ ಕುಳಿತು ತಿನ್ನುವುದರಿಂದ ಎಷ್ಟು ತಿನ್ನುತ್ತಿದ್ದಾರೆ ಎನ್ನುವ ಅರಿವು ಅವರಿಗೆ ಇರುವುದಿಲ್ಲ. ಇದರಿಂದ ಮಕ್ಕಳು ಅತಿಯಾದ ತೂಕ ಬೆಳೆಸಿಕೊಳ್ಳಬಹುದು.
ದೃಷ್ಟಿ ಕಡಿಮೆಯಾಗಬಹುದು
ಮಕ್ಕಳು ಅತಿಯಾಗಿ ಮೊಬೈಲ್ ಅಥವಾ ಕಂಪ್ಯೂಟರ್ ಬಳಕೆ ಮಾಡುವುದರಿಂದ ಇದು ಮಕ್ಕಳ ಕಣ್ಣಿನ ದೃಷ್ಟಿಯ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು. ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಹೆತ್ತವರು ಗಮನಹರಿಸಬೇಕು. ಹೊರಾಂಗಣ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಕೊಳ್ಳಬೇಕು ಮತ್ತು ಕಂಪ್ಯೂಟರ್ ಸ್ನೇಹಿತರಿಗಿಂತ ನಿಜವಾದ ಸ್ನೇಹಿತರೊಂದಿಗೆ ಬೆರೆಯಬೇಕು.
ಅಪರಿಚಿತರೊಂದಿಗೆ ಸ್ನೇಹ ಅಪಾಯಕಾರಿ
ಮಕ್ಕಳು ಮತ್ತು ಹದಿಯರೆಯದವರು ಮೋಸ ಮಾಡುವವರಿಗೆ ಸುಲಭವಾಗಿ ಬಲಿಯಾಗುತ್ತಾರೆ. ಹೊರಗಿನ ಪ್ರಭಾವಕ್ಕೆ ಅವರು ಬಲಿಯಾಗುತ್ತಾರೆ. ಮಕ್ಕಳು ಸುಲಭವಾಗಿ ಬಲಿಯಾಗುವ ಕಾರಣ ಮೋಸಗಾರರ ತಂತ್ರವನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಇದರಿಂದ ಮಕ್ಕಳ ಸಾಮಾಜಿಕ ಜಾಲತಾಣಗಳ ಬಗ್ಗೆ ಹೆತ್ತವರು ಗಮನಹರಿಸಬೇಕು.
ಭಾವನಾತ್ಮಕ ಸಂಬಂಧ ಕಡಿಮೆಯಿರುವುದು
ಯಾರನ್ನೇ ಆದರೂ ಖುದ್ದಾಗಿ ಭೇಟಿಯಾದಾಗ ಮತ್ತು ಮುಖಾಮುಖಿಯಾದಾಗ ಮಾತ್ರ ಭಾವನೆಗಳು ಮೂಡಲು ಸಾಧ್ಯ. ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಭಾವನೆಗಳನ್ನು ಹಂಚಿಕೊಳ್ಳಬಹುದು. ಆದರೆ ಭಾವನೆಗಳನ್ನು ಹಂಚಿಕೊಳ್ಳಲು ಇದು ಸರಿಯಾದ ವೇದಿಕೆಯಲ್ಲ.



Click it and Unblock the Notifications


