Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಹದಿಹರೆಯದ ಮಕ್ಕಳೊಂದಿಗೆ ಸ್ನೇಹಗಳಿಸಿ, ಬಾಂಧವ್ಯ ಬೆಳೆಸಿ
ಹದಿಹರೆಯದ ಮಕ್ಕಳನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ತುಂಬಾ ಕಷ್ಟಕರ ಕೆಲಸವೆಂದೇ ಹೆತ್ತವರು ಭಾವಿಸಿಕೊಂಡಿರುತ್ತಾರೆ. ಅವರ ಹಠಮಾರಿತನ, ಮುಂಗೋಪ, ಕಿರುಚಾಟ, ಅತಿಯಾದ ಸ್ವಾತಂತ್ರ್ಯ ಹೀಗೆ ಹದಿಹರೆಯದವರು ಲಂಗು ಲಗಾಮು ಇಲ್ಲದವರು ಎಂದೇ ಪರಿಗಣಿಸುತ್ತಾರೆ. ಮಕ್ಕಳಲ್ಲಿ ಹದಿಹರೆಯಕ್ಕೆ ಕಾಲಿಟ್ಟಾಗ ಉಂಟಾಗುವ ಮಾನಸಿಕ ಮತ್ತು ದೈಹಿಕ ಬದಲಾವಣೆಯೊಂದಿಗೆ ಹೊಂದಿಕೊಳ್ಳಲು ಹೆತ್ತವರು ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ದೊಡ್ಡವರು ಎಂಬ ಭಾವನೆಯೊಂದಿಗೆ ಅವರೊಂದಿಗೆ ವ್ಯವಹರಿಸುವುದರ ಬದಲಿಗೆ ಮಕ್ಕಳಲ್ಲಿ ಮಕ್ಕಳಾಗಿ ಸ್ನೇಹಿತರಾಗಿ ಅವರನ್ನು ಕಂಡಲ್ಲಿ ಮನಸ್ತಾಪಕ್ಕೆ ಆಸ್ಪದವಿರುವುದಿಲ್ಲ. ಮಕ್ಕಳು ವ್ಯಗ್ರಗೊಳ್ಳುವುದಕ್ಕೆ ಕಾರಣಗಳೇನು?
ಹುಚ್ಚಿಕೋಡಿ ಮನಸು ಅದು ಹದಿನಾರರ ವಯಸು ಎಂಬಂತೆ ಅವರಲ್ಲಿ ಉಂಟಾಗುವ ಹಾರ್ಮೋನು ಬದಲಾವಣೆಗಳು ಅವರನ್ನು ಕೋಪೋದ್ರೇಕ್ತರನ್ನಾಗಿ, ಅತಿಯಾದ ಹಠಮಾರಿಗಳನ್ನಾಗಿ ಪರಿವರ್ತಿಸುತ್ತದೆ. ಈ ಸಮಯದಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರೋಪಯಗಳನ್ನು ನೀಡಬೇಕು. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...
ಹದಿಹರೆಯದ ಮಕ್ಕಳ ಪೋಷಕರು ನೀವಾಗಿದ್ದೀರಿ ಎಂದಾದಲ್ಲಿ ಕೆಲವೊಂದು ಅಂಶಗಳನ್ನು ನೀವು ಮನಗಾಣಬೇಕು. ಹಾಗಿದ್ದರೆ ನಿಮ್ಮ ಮಕ್ಕಳೊಂದಿಗೆ ನೀವು ಹೇಗೆ ವರ್ತಿಸಿಕೊಳ್ಳಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಈ ಸಲಹೆಗಳನ್ನು ಪಾಲಿಸಿಕೊಂಡಲ್ಲಿ ನಿಮ್ಮ ಮಕ್ಕಳೊಂದಿಗೆ ನೀವು ಸ್ನೇಹಿತರಾಗಿ ಇರಬಹುದಾಗಿದೆ.

ಸಲಹೆ#1
ನಿಮ್ಮ ಮಕ್ಕಳನ್ನು ಅತಿಯಾಗಿ ನಿಯಂತ್ರಿಸಲು ಹೋಗದಿರಿ ಅವರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವನ್ನು ನೀಡಿ.ಅವರ ಮೇಲೆ ಹೆಚ್ಚಿನ ನಿಯಂತ್ರಣವನ್ನು ಮಾಡುವುದರಿಂದ ಅವರು ಇನ್ನಷ್ಟು ಕೋಪೋದ್ರಿಕ್ತರಾಗುತ್ತಾರೆ ಮತ್ತು ತಪ್ಪು ಆಯ್ಕೆಗಳನ್ನು ಮಾಡುವ ಸಂಭವವಿರುತ್ತದೆ.

ಸಲಹೆ#2
ಕೆಲವೊಂದು ವಿಷಯಗಳಲ್ಲಿ ಅವರೊಂದಿಗೆ ಮುಕ್ತವಾಗಿದ್ದು, ಉತ್ತಮ ನಿರ್ಧಾರಗಳನ್ನು ನೀಡಿ. ಧೂಮಪಾನ, ಮದ್ಯಪಾನ ಮತ್ತು ಡ್ರಗ್ಸ್ಗಳಿಂದ ಉಂಟಾಗುವ ಅಪಾಯಗಳನ್ನು ತಿಳಿಸಿ ಹೇಳಿ. ಅವರುಗಳನ್ನು ಇವುಗಳ ಅಪಾಯಗಳ ಬಗ್ಗೆ ತಿಳಿಯುವಂತೆ ಮಾಡಿ. ಲೈಂಗಿಕ ಅಂಶಗಳ ಬಗ್ಗೆ ತಿಳಿಹೇಳಿ ಮತ್ತು ಸಂರಕ್ಷಣಾ ವಿಧಾನಗಳನ್ನು ಅನುಸರಿಸುವಂತೆ ತಿಳಿಸಿ.

ಸಲಹೆ#3
ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದರಿಂದ ಅವರನ್ನು ನೀವು ತಡೆಯುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಕ್ಕಳು ಕೆಟ್ಟು ಹೋಗುತ್ತಾರೆ ಎಂಬ ಭಯ ಬೇಡ. ಬದಲಿಗೆ ಮಕ್ಕಳ ಸ್ನೇಹಿತರನ್ನು ಮನೆಗೆ ಕರೆಸಿಕೊಂಡು ಅವರನ್ನು ಚೆನ್ನಾಗಿ ಉಪಚರಿಸಿಕೊಳ್ಳಿ. ನಿಮ್ಮ ಮಕ್ಕಳು ಯಾರೊಂದಿಗೆ ಸುತ್ತಾಡುತ್ತಾರೆ ಮತ್ತು ಸ್ನೇಹಿತರ ಗುಣಸ್ವಭಾವ ಹೇಗಿದೆ ಎಂಬುದನ್ನು ಕಂಡುಕೊಳ್ಳಿ.

ಸಲಹೆ#4
ಸಣ್ಣ ಸಣ್ಣ ವಿವರಗಳಿಗೂ ಅವರನ್ನು ಸಂದೇಹಿಸಬೇಡಿ. ಅವರ ಚಲನವಲನಗಳ ಬಗ್ಗೆ ಕಣ್ಣಿಡುತ್ತಾ ಅವರನ್ನು ಸಂದೇಹ ಪ್ರವೃತ್ತಿಯಿಂದ ಅತಿಯಾಗಿ ವಿಚಾರಿಸಬೇಡಿ. ನೇರವಾಗಿ ಪ್ರೀತಿಯಿಂದ ಅವರೊಂದಿಗೆ ನಡೆದುಕೊಂಡು ವಿವರಗಳನ್ನು ತಿಳಿದುಕೊಳ್ಳಿ.

ಸಲಹೆ#5
ತಾವು ಸುಂದರವಾಗಿ ಕಾಣಬೇಕು ಇಲ್ಲವೇ ಸ್ನೇಹಿತರೊಂದಿಗೆ ಎದ್ದುಗಾಣುವಂತಿರಬೇಕು ಎಂದು ಬಯಸುತ್ತಿರುತ್ತಾರೆ. ತಾವು ಅಂದವಾಗಿರದಿದ್ದರೆ ತಮ್ಮಲ್ಲೇ ಕೀಳರಿಮೆಯನ್ನು ಬೆಳೆಸಿಕೊಂಡಿರುತ್ತಾರೆ. ಈ ಸಮಯದಲ್ಲಿ ಅವರನ್ನು ಸಾಂತ್ವಾನಗೊಳಿಸಿ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲಿ.

ಸಲಹೆ#6
ಓದು ಮತ್ತು ಇತರ ಚಟುವಟಿಕೆಗಳಲ್ಲಿ ಅವರನ್ನು ಹೆಚ್ಚು ಒತ್ತಾಯಿಸಬೇಡಿ. ಅವರ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ. ಇದರಿಂದ ಅವರು ಖಿನ್ನತೆಯನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಅವರಿಗೆ ಕಾಳಜಿಯನ್ನು ತೋರಿ.

ಸಲಹೆ#7
ಕುಟುಂಬ ಪ್ರಯಾಣವನ್ನು ಮಾಡಿ, ಜೊತೆಯಾಗಿ ಸಿನಿಮಾಗಳನ್ನು ನೋಡುವುದು ಆಗಾಗ್ಗೆ ಭೋಜನ ಕೂಟಕ್ಕೆ ಹೋಗುತ್ತಿರಿ. ಇದರಿಂದ ನಿಮ್ಮ ಮತ್ತು ಅವರ ನಡುವಿನ ಬಾಂಧವ್ಯ ಚೆನ್ನಾಗಿರುತ್ತದೆ. ಅವರಿಗೂ ಕುಟುಂಬದೊಂದಿಗೆ ಸಂತಸಮಯ ಕ್ಷಣಗಳನ್ನು ಕಳೆದಿರುತ್ತದೆ.



Click it and Unblock the Notifications











