Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳು ಸಾಕುಪ್ರಾಣಿಗಳಿಗೆ ಹೆದರುತ್ತಿದ್ದಾರೆಯೇ?
ಮಕ್ಕಳು ಹೆದರುತ್ತಾರೆ ಎಂಬ ಕಾರಣ ನೀಡಿ ಕೆಲವು ಮನೆಗಳಲ್ಲಿ ಸಾಕುಪ್ರಾಣಿಗಳನ್ನು ತರುವುದೇ ಇಲ್ಲ. ಆದರೆ ಸಾಕುಪ್ರಾಣಿಗಳ ಒಡನಾಟದಿಂದ ಮಕ್ಕಳು ಹೆಚ್ಚು ಬುದ್ಧಿವಂತರಾಗಲು ಮತ್ತು ಹೆಚ್ಚು ಪ್ರಜ್ಞಾವಂತರಾಗಲು ನೆರವಾಗುತ್ತದೆ ಎಂದು ಮಕ್ಕಳ ಮನಃಶಾಸ್ತ್ರಜ್ಞರು ತಿಳಿಸುತ್ತಾರೆ. ಅಲ್ಲದೇ ಇದರಿಂದ ಮಕ್ಕಳಿಗೆ ಇರುವ ಹೆದರಿಕೆಯೂ ದೂರವಾಗುತ್ತದೆ.

ಯಾವುದೇ ಮಗುವಿಗೆ ಸಾಕುಪ್ರಾಣಿಯ ಬಗ್ಗೆ ತಿಳಿಹೇಳುವುದು ಪ್ರಾರಂಭದಲ್ಲಿ ಕಷ್ಟವಾಗುತ್ತದೆ. ಆದರೆ ಕಾಲಕ್ರಮೇಣ ಮಗು ಸಾಕುಪ್ರಾಣಿಯ ಬಗ್ಗೆ ಅಸ್ಥೆ ಬೆಳೆಸಿಕೊಳ್ಳುತ್ತದೆ. ಹಿರಿಯರು ಸ್ವತಃ ಸಾಕುಪ್ರಾಣಿಗಳನ್ನು ಮುಟ್ಟಿ ಇದು ಅಪಾಯಕರವಲ್ಲ ಎಂದು ನಂಬಿಸಿದರೆ ನಿಧಾನವಾಗಿ ಮಗು ಈ ಬಗ್ಗೆ ಒಲವು ಬೆಳೆಸಿಕೊಳ್ಳುತ್ತದೆ. ಹಿರಿಯರು ಸಹಾ ಅವರು ಚಿಕ್ಕವರಿದ್ದಾಗ ಸಾಕುಪ್ರಾಣಿಗಳಿಗೆ ಹೆದರಿದ್ದವರೇ ಆಗಿದ್ದರೂ ಕ್ರಮೇಣ ಈ ಹೆದರಿಕೆಯಿಂದ ಹೊರಬಂದ ಹಾಗೇ ಮಕ್ಕಳಿಗೂ ಈ ಹೆದರಿಕೆಯಿಂದ ಹೊರಬರಲು ಕೊಂಚ ಕಾಲಾವಕಾಶ ಬೇಕು.
ಸಾಮಾನ್ಯವಾಗಿ ನಾಯಿ, ಬೆಕ್ಕುಗಳ ಉಗುರು, ಹಲ್ಲುಗಳನ್ನು ಪ್ರಥಮವಾಗಿ ನೋಡಿದ ಮಕ್ಕಳು ಇದು ಅಪಾಯಕಾರಿ ಎಂದು ತಿಳಿದು ಹತ್ತಿರ ಸುಳಿಯುವುದಿಲ್ಲ. ಅಲ್ಲದೇ ಪರಿಚಯವಿಲ್ಲದ ಮಗುವನ್ನು ನೋಡಿದ ನಾಯಿಗಳು ಗುರುಗುಟ್ಟುವ ಮೂಲಕ ಈ ಭಯ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ಕ್ರಮೇಣ ಅಭ್ಯಾಸವಾದಂತೆ ಸಾಕುಪ್ರಾಣಿಯೂ ತಮ್ಮ ಮನೆಯ ಒಂದು ಸದಸ್ಯ ಎಂಬ ಭಾವನೆ ಮೂಡಿ ಅಕ್ಕರೆ ಬೆಳೆಯುತ್ತದೆ.
ಪ್ರತಿ ಮಗುವಿಗೂ ತನ್ನ ತಂದೆತಾಯಿಗಳ ಹೊರತಾಗಿ ಜಗತ್ತಿನ ಬೇರೆಲ್ಲಾ ವಿಷಯಗಳು ಹೊಸದಾಗಿದ್ದು ತನ್ನ ತಂದೆ ತಾಯಿಯರು ಅಭಯ ನೀಡಿದರೆ ಮಾತ್ರ ಮುಂದುವರೆಯುತ್ತದೆ. ಯಾವುದೇ ಹೊಸ ವಿಷಯವೂ ಅಚ್ಚರಿಯ ವಿಷಯವಾಗಿದ್ದು ಇದನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತದೆ.
ಇದೇ ಕಾರಣಕ್ಕೆ ಮಗುವಿನ ಆಪ್ತರಾಗಿದ್ದೂ ಹೊಸಬರಾಗಿದ್ದರೆ ಅವರ ಬಳಿ ಹೋಗಲು ಮಗು ಹಿಂಜರಿಯುತ್ತದೆ. ಆದರೆ ಕಾಲ ಕಳೆದಂತೆ ಹೊಸಬರೂ ಪರಿಚಯಸ್ಥರಾಗಿ ಸಲುಗೆ ಬೆಳೆದಂತೆಯೇ ಸಾಕುಪ್ರಾಣಿಗಳ ಬಗ್ಗೆಯೂ ಅಕ್ಕರೆ, ಅಸ್ಥೆ ಬೆಳೆಸಿಕೊಳ್ಳುತ್ತದೆ. ಅನುಭವದಿಂದ ಯಾವ ಪ್ರಾಣಿ ಸಾಧು, ಯಾವ ಪ್ರಾಣಿ ಕ್ರೂರ ಎಂದು ಅರ್ಥಮಾಡಿಕೊಳ್ಳುತ್ತದೆ.



Click it and Unblock the Notifications



