Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯೊಂದು ಮಗುವೊಂದು ಪದ್ಧತಿಯಿಂದ ಒಳಿತೇ ಕೆಡುಕೇ?
ಆರತಿಗೊಂದು ಕೀರುತಿಗೊಂದು ಎಂಬ ಸಿದ್ಧಾಂತ ಈಗ ಮರೆಯಾಗಿ ಮನೆಗೊಂದು ಮಗು ಎಂಬ ವ್ಯವಸ್ಥೆ ಜಾರಿಯಲ್ಲಿದೆ. ಮಗುವಿಗೆ ನೀಡಬೇಕಾಗಿರುವ ಕಾಳಜಿ, ಅವರುಗಳ ಪಾಲನೆ ಪೋಷಣೆ ಅಂತೆಯೇ ಜನಸಂಖ್ಯೆ ನಿಯಂತ್ರಣದಂತಹ ವ್ಯವಸ್ಥೆಗೆ ಬೆಂಬಲವಾಗಿ ದಂಪತಿಗಳು ಒಂದೇ ಮಗು ಸಾಕು ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. ಮಗು ಒಂದೇ ಇದ್ದಲ್ಲಿ ಅದಕ್ಕೆ ಹೆಚ್ಚಿನ ಗಮನ ನೀಡಬಹುದು ಎಂಬುದು ಇವರು ಅನಿಸಿಕೆಯಾಗಿದ್ದು ಮಗುವನ್ನು ಇನ್ನಷ್ಟು ಪ್ರೀತಿಯಿಂದ ಸಾಕಬಹುದು ಎಂಬುದು ಹೆತ್ತವರ ವಾದವಾಗಿದೆ.

ಆದರೆ ಏಕೈಕ ಮಗ ಇಲ್ಲವೇ ಮಗಳಾಗಿ ಹುಟ್ಟುವ ಮಗು ಒಬ್ಬಂಟಿ ಎಂಬ ಭಾವನೆಯನ್ನು ಹೆಚ್ಚು ಅನುಭವಿಸುತ್ತಿರುತ್ತದೆ. ಸಹೋದರ ಸಹೋದರಿಯರು ಇಲ್ಲದೇ ಇರುವುದರಿಂದ ತನ್ನೊಂದಿಗೆ ಸಂತಸ, ದುಃಖ, ಆಟ ಪಾಠಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎಂದೇ ಅದು ಭಾವಿಸುತ್ತಿರುತ್ತದೆ ಮತ್ತು ಖಿನ್ನತೆ ಮಗುವನ್ನು ಕಾಡುತ್ತದೆ.
ಒಂದೇ ಮಗುವಿದ್ದಲ್ಲಿ ಅದಕ್ಕೆ ಹೆಚ್ಚಿನ ಮುದ್ದು ಆರೈಕೆಗಳು ದೊರೆಯುತ್ತದಾದರೂ ಮಗುವು ಅನುಭವಿಸುವ ಖಿನ್ನತೆ ಮಾತ್ರ ಅದಕ್ಕೆ ಗೊತ್ತಿರುತ್ತದೆ. ಮಗುವಿಗೆ ಒಡಹುಟ್ಟಿದವರು ಇದ್ದಲ್ಲಿ ಅದರ ಬೆಳವಣಿಗೆ ಮತ್ತು ಆರೈಕೆ ಇನ್ನಷ್ಟು ಉತ್ತಮವಾಗಿರುತ್ತದೆ. ಇನ್ನು ಹೆತ್ತವರ ಸಂಕಷ್ಟಗಳನ್ನು ನೋಡಿದಾಗ ಅವರ ಅಭಿಪ್ರಾಯದಲ್ಲಿ ಒಂದೇ ಮಗು ಸಾಕಾಗಿರುತ್ತದೆ.
ಇಬ್ಬರೂ ಉದ್ಯೋಗಕ್ಕೆ ಹೋಗುವಾಗ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಅವರನ್ನು ನೋಡಿಕೊಳ್ಳುವುದು ಕಷ್ಟ ಅಂತೆಯೇ ಒಂದೇ ಮಗುವಿದ್ದಲ್ಲಿ ಅದನ್ನು ಚೆನ್ನಾಗಿ ಆರೈಕೆ ಕೂಡ ಮಾಡಬಹುದು ಮತ್ತು ಅದರ ಭವಿಷ್ಯವನ್ನು ಉತ್ತಮಗೊಳಿಸಬಹುದು ಎಂಬುದು ಇವರ ಅಭಿಪ್ರಾಯವಾಗಿರುತ್ತದೆ. ಅದಾಗ್ಯೂ ನಿಮ್ಮ ಮಗು ಒಬ್ಬಂಟಿಯಾಗಿದ್ದು ಬೇಸರದಿಂದಿದೆ ಎಂದಾದಲ್ಲಿ ಅದನ್ನು ಅವಗಣನೆ ಮಾಡದಿರಿ.
ಏಕಾಂಗಿಯಾದರೂ ಮಗುವಿಗೆ ಜೊತೆಗಾರರಂತೆ ಪೋಷಕರು ಇದ್ದಾಗ ಅದು ಒಬ್ಬಂಟಿತನವನ್ನು ಅನುಭವಿಸುವುದಿಲ್ಲ. ಅಕ್ಕಪಕ್ಕದ ಮನೆಯ ಮಕ್ಕಳೊಂದಿಗೂ ಬೆರೆಯಲು ಪೋಷಕರು ಬಿಡಬೇಕು. ಇದರಿಂದ ಮಗುವಿಗೆ ಒಂಟಿತನ ಕಾಡುವುದಿಲ್ಲ ಮತ್ತು ಸಹೋದರ/ಸಹೋದರಿಯರ ಕೊರತೆಯನ್ನು ಅದು ಅನುಭವಿಸುವುದಿಲ್ಲ.



Click it and Unblock the Notifications



