Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಟಿ ಬ್ಯಾಕ್ಟೀರಿಯಲ್ ಸೋಪು ಮಗುವಿಗೆ ಏಕೆ ಅತ್ಯುತ್ತಮವಲ್ಲ?
ಗರ್ಭಾವಸ್ಥೆಯಲ್ಲಿ ತಾಯಿಯು ತನ್ನ ಮಗುವಿನ ಸಂರಕ್ಷಣೆಯನ್ನು ನಾಜೂಕಾಗಿ ಮಾಡಬೇಕಾಗುತ್ತದೆ. ತನ್ನ ಒಡಲಿನಲ್ಲಿ ಪುಟ್ಟ ಕಂದಮ್ಮನನ್ನು ಹೊರುವ ತಾಯಿ ತನ್ನ ಆರೋಗ್ಯದೊಂದಿಗೆ ಮಗುವಿನ ಆರೋಗ್ಯದ ಕಡೆಗೂ ಗಮನ ನೀಡಬೇಕಾಗುತ್ತದೆ. ತಾನು ತಿನ್ನುವ ಆಹಾರದಿಂದ ಹಿಡಿದು ಸೇವಿಸುವ ಔಷಧಿ, ಮಾಡುವ ಚಟುವಟಿಕೆಗಳು ಹೀಗೆ ಪ್ರತಿಯೊಂದರ ಮೇಲೂ ಆಕೆ ಗಮನ ನೀಡಬೇಕಾಗುತ್ತದೆ. ಹೆಚ್ಚಿನ ರಾಸಾಯನಿಕ ಉತ್ಪನ್ನಗಳನ್ನು ಮಾಡದೇ ಇರುವುದು ಈ ಸಂದರ್ಭದಲ್ಲಿ ಸೂಕ್ತವಾದುದಾಗಿದೆ. ಏಕೆಂದರೆ ಈ ರಾಸಾಯನಿಕಗಳ ಪರಿಣಾಮ ಗರ್ಭಿಣಿಯ ಶರೀರದ ಮೇಲೆ ಯಾವ ರೀತಿಯಲ್ಲಾದರೂ ಪರಿಣಾಮವನ್ನು ಬೀರಬಹುದಾಗಿದೆ.

ಸ್ನಾನಕ್ಕೆ ಬಳಸುವ ಸೋಪು ಕೂಡ ಟ್ರಿಕ್ಲೊಕಾರ್ಬನ್ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಮಗುವಿಗೆ ಸೋಂಕು ಉಂಟಾಗಲು ಕಾರಣವಾಗುತ್ತವೆ. ಕೆಲವೊಂದು ವಿಧಾನಗಳಲ್ಲಿ ನಮಗೆ ಸಹಾಯ ಮಾಡುವ ಕರುಳಿನ ಬ್ಯಾಕ್ಟೀರಿಯಾವನ್ನು ನಾವೆಲ್ಲರೂ ಹೊಂದಿದ್ದೇವೆ. ಆದರೆ ಈ ಬ್ಯಾಕ್ಟೀರಿಯಾಗಳ ಮಟ್ಟ ಹೆಚ್ಚಿತು ಎಂದಾದಲ್ಲಿ ಇದು ಆರೋಗ್ಯಕರವಾಗಿರುವುದಿಲ್ಲ. ಇನ್ನು ತಾಯಿಯು ಆಂಟಿಬ್ಯಾಕ್ಟೀರಿಯಲ್ ಸೋಪುಗಳನ್ನು ಬಳಸುವುದರಿಂದ ಅದೂ ಅಲ್ಲದೆ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಮಗುವಿನ ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಹಾಳುಮಾಡಬಹುದು ಎಂಬುದಾಗಿ ಅಧ್ಯಯನ ತಿಳಿಸಿದೆ.
ಕರುಳು ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾವನ್ನು ಒಳಗೊಂಡಿದೆ. ಸಾಮಾನ್ಯ ಮಟ್ಟವು ಮಿತಿಮೀರಿದಾಗ, ದೊಡ್ಡ ಕರುಳಿನ ಕ್ಯಾನ್ಸರ್, ಕೆರಳಿಸುವ ಕರುಳಿನ ಸಹಲಕ್ಷಣಗಳು, ಅಸ್ತಮಾ, ಮಧುಮೇಹ ಮತ್ತು ಬೊಜ್ಜು ಸಂಭವಿಸುವ ಸಾಧ್ಯತೆ ಇರುತ್ತದೆ. ಪ್ರಸ್ತುತ ಕೆಲವೊಂದು ಜೀವವಿರೋಧಿ ಕ್ಲೆನ್ಸರ್ಗಳನ್ನು ಗರ್ಭಾವಸ್ಥೆಯಲ್ಲಿ ಕೆಲವೊಂದು ಸೋಂಕುಗಳನ್ನು ತಡೆಗಟ್ಟಲು ನೀಡಲಾಗುತ್ತದೆ.
ಇನ್ನು ಟ್ರಿಕ್ಲೊಕಾರ್ಬನ್ ಅಂಶವಿರುವ ಲಿಖಿತ ಸೂಚನೆಯಿಲ್ಲದ ಬ್ಯಾಕ್ಟೀರಿಯಾ ವಿರೋಧಿ ಉತ್ಪನ್ನಗಳನ್ನು ಬಳಸಬಾರದು ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಸಂದರ್ಭದಲ್ಲಿ ಈ ಅಂಶಗಳು ಮಗುವಿನ ದೇಹದೊಳಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ. ಕ್ಲೆನ್ಸಿಂಗ್ ಉತ್ಪನ್ನಗಳನ್ನು ಆರೋಗ್ಯ ತಜ್ಞರ ಸಲಹೆಗಳೊಂದಿಗೆ ಕಾಳಜಿಯಿಂದ ಬಳಸಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿ ಮತ್ತು ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲಿ ಇಂತಹ ಉತ್ಪನ್ನಗಳನ್ನು ಖರೀದಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿರುತ್ತದೆ. ಆರೋಗ್ಯಕರ ಬ್ಯಾಕ್ಟೀರಿಯಾಗಳು ಆರೋಗ್ಯಕರ ವಿಧಾನದಲ್ಲಿ ನಮಗೆ ಮುಂದುವರಿಯಲು ಸಹಾಯಕವಾಗಿವೆ. ಆದರೆ ಆರೋಗ್ಯಕರ ಬ್ಯಾಕ್ಟೀರಿಯಾಗಳ ನಾಶ ಮಾನವನ ಆರೋಗ್ಯವನ್ನು ನಾನಾ ಬಗೆಯಲ್ಲಿ ಹಾಳುಗೆಡವುವ ಸಾಧ್ಯತೆ ಹೆಚ್ಚಿರುತ್ತದೆ.



Click it and Unblock the Notifications



