Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ತಂದೆಯ ಆದರ್ಶ ಗುಣಗಳೇ, ಮಕ್ಕಳ ಭವಿಷ್ಯಕ್ಕೆ ರಹದಾರಿ
ಮಗುವನ್ನು ಉತ್ತಮವಾಗಿ ಬೆಳೆಸುವ ಕಾರ್ಯ ತಾಯಿಯದ್ದು ಮಾತ್ರವಾಗಿರದೇ ತಂದೆಯದ್ದೂ ಆಗಿದೆ. ಮಗನ 'ಪ್ರಥಮ ಹೀರೋ', ಮಗಳ 'ಪ್ರಥಮ ಪ್ರೀತಿ' ತಂದೆಯಾಗಿದ್ದು ಮಕ್ಕಳೊಂದಿಗೆ ತಂದೆ ಹೇಗೆ ಕಳೆಯಬೇಕು ಎಂಬ ಒಳಗುಟ್ಟನ್ನು ಬಿಚ್ಚಿಡುತ್ತದೆ. ಮನೆಯನ್ನು ನೋಡಿಕೊಳ್ಳುವ ಧಾವಂತದಲ್ಲಿ ತಂದೆಗೆ ಸಾಕಷ್ಟು ಸಮಯ ದೊರೆಯುವುದಿಲ್ಲ. ಮಕ್ಕಳ ಲಾಲನೆ ಪಾಲನೆ ಮಾಡುವ ಸಮಯ ಅವರಲ್ಲಿ ಇರುವುದಿಲ್ಲ. ಅದಾಗ್ಯೂ ನಿಮ್ಮ ಮಗುವಿಗೆ ನೀವು ನೀಡುವ ಸಮಯವನ್ನು ಮೀಸಲಾಗಿರಿಸಲೇಬೇಕು. ಹಾದಿ ತಪ್ಪುತ್ತಿರುವ ಮಕ್ಕಳ ವರ್ತನೆಯ ಬಗ್ಗೆ ಎಚ್ಚರ....
ಪುಟ್ಟ ಕಂದಮ್ಮ ತಾಯಿಯಂತೆಯೇ ತಂದೆಯನ್ನು ಹಚ್ಚಿಕೊಂಡಿರುತ್ತದೆ. ಹೆಚ್ಚಿನ ಮಕ್ಕಳಿಗೆ ತಾಯಿಗಿಂತಲೂ ಹೆಚ್ಚು ತಂದೆಯಲ್ಲಿ ಅನುಬಂಧ ಕೊಂಚ ಜಾಸ್ತಿಯಾಗಿರುತ್ತದೆ. ತಮ್ಮ ಆದರ್ಶ ವ್ಯಕ್ತಿಯಂತೆ ತಂದೆಯನ್ನು ಮಕ್ಕಳು ಹಚ್ಚಿಕೊಂಡಿರುವುದರಿಂದ ನಿಮ್ಮ ಪಾತ್ರದಲ್ಲಿ ಲೋಪ ದೋಷ ಉಂಟಾಗದಂತೆ ನೀವು ಕಂಡುಕೊಳ್ಳಬೇಕಾಗುತ್ತದೆ.

ಮಕ್ಕಳು ಕೂಡ ಪ್ರತೀ ವಿಷಯದಲ್ಲೂ ತಮ್ಮ ತಂದೆಯ ಬೆಂಬಲವನ್ನು ಆಶಿಸುತ್ತಿರುತ್ತಾರೆ. ತಂದೆಯಾಗಿರುವುದು ಕಷ್ಟದ ಕೆಲಸವವಾಗಿದ್ದರೆ ಉತ್ತಮ ತಂದೆಯಾಗಿರುವುದು ಅದಕ್ಕಿಂತಲೂ ಕಷ್ಟವಾಗಿರುವ ಕಾರ್ಯವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಉತ್ತಮ ತಂದೆಯಾಗಿರಲು ಯಾವುದೆಲ್ಲಾ ಅಂಶಗಳತ್ತ ಗಮನ ಹರಿಸಬೇಕು ಎಂಬುದನ್ನು ಕಂಡುಕೊಳ್ಳೋಣ. ನಿಮ್ಮ ಮಗುವಿನ ಪ್ರೀತಿಯನ್ನು ಹೇಗೆ ಸಂಪಾದಿಸುವುದು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. ತಂದೆಯ ಕೆಟ್ಟ ಚಟಗಳೇ, ಮಗುವಿನ ಭವಿಷ್ಯಕ್ಕೆ ಮುಳ್ಳಾಗಬಹುದು!
ಅವರೊಂದಿಗೆ ಸಮಯ ಕಳೆಯಿರಿ
ನಿಮ್ಮ ಕೆಲಸದ ಒತ್ತಡದಲ್ಲಿ ನೀವು ನಿರತರಾಗಿದ್ದರೂ ಸಮಯವೇ ಇಲ್ಲ ಎಂಬ ಪರಿಸ್ಥಿತಿ ನಿಮ್ಮದಾಗಿದ್ದರೂ ನಿಮ್ಮ ಮಗುವಿನೊಂದಿಗೆ ಪ್ರತೀ ದಿನ ಸ್ವಲ್ಪ ಸಮಯವನ್ನು ಕಳೆಯುವುದು ಅತ್ಯವಶ್ಯಕವಾಗಿದೆ. ಸ್ವಲ್ಪ ಹೊತ್ತಾದರೂ ಸಾಕು. ನಿಮ್ಮ ಮಗುವಿನೊಂದಿಗೆ ನೀವು ಸ್ವಲ್ಪ ಸಮಯವನ್ನಾದರೂ ಕಳೆಯುತ್ತಿಲ್ಲ ಎಂದಾದಲ್ಲಿ ನಿಮ್ಮ ಹಾಗೂ ಮಗುವಿನ ನಡುವೆ ಅಂತರವುಂಟಾಗುತ್ತದೆ. ಇದರಿಂದ ಸಂಬಂಧ ಹದಗೆಡಬಹುದು.
ದೈಹಿಕವಾಗಿ ಮಗುವನ್ನು ದೂಷಿಸಬೇಡಿ
ಮಗುವನ್ನು ಶಿಸ್ತಿನಲ್ಲಿಡಬೇಕೆಂಬ ಭಾವನೆಯಿಂದ ದೈಹಿಕವಾಗಿ ತಂದೆ ಮಗುವನ್ನು ದೂಷಿಸುವುದು, ತೆಗಳುವುದು ಮಾಡುವುದಲ್ಲಿ ಮಗುವಿನ ಮೇಲೆ ಇದು ದುಷ್ಪರಿಣಾಮವನ್ನು ಬೀರುತ್ತದೆ. ಮಗು ಖಿನ್ನತೆಗೆ ಒಳಗಾಗಿ ತಂದೆಯೆಂದರೆ ಒಂದು ರೀತಿಯ ಭಯವನ್ನು ಹೊಂದಿರುತ್ತದೆ. ತಂದೆ ಮಗುವಿನ ಬಾಂಧವ್ಯಕ್ಕೆ ಇದು ಹಾನಿಯನ್ನು ಉಂಟುಮಾಡುವಂತಿದ್ದು ತುಂಬಲಾರದ ನಷ್ಟವನ್ನು ನೀಡಬಹುದು.
ಉತ್ತಮ ಆದರ್ಶ ವ್ಯಕ್ತಿಯಾಗಿರಿ
ಹೆಚ್ಚಿನ ಮಕ್ಕಳು ತಮ್ಮ ತಂದೆಯಿಂದ ಕಲಿಯುವುದು ಜಾಸ್ತಿ, ಆದ್ದರಿಂದ ಅವರಿಗೆ ನೀವು ಉತ್ತಮ ವ್ಯಕ್ತಿಯಾಗಿರಿ. ಅವರ ತಾಯಿಯನ್ನು ಗೌರವಿಸುವುದು, ಪ್ರೀತಿಸುವುದು ಮಾಡಿ. ಮಕ್ಕಳನ್ನು ನಿಮ್ಮ ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ ಆದಷ್ಟು ಶಾಂತಚಿತ್ತರಾಗಿ ಮಕ್ಕಳೊಂದಿಗೆ ನಡೆದುಕೊಳ್ಳಿ. ನಿಮ್ಮಿಂದ ಧನಾತ್ಮಕ ಅಂಶಗಳನ್ನು ಕಲಿತುಕೊಂಡು ಮಕ್ಕಳು ಸಮಾಜದ ಉತ್ತಮ ನಾಗರೀಕರಾಗಿ ಬೆಳೆಯುತ್ತಾರೆ. ಕೇಳಿ ಇಲ್ಲಿ, ಮಕ್ಕಳೆದುರು ಧೂಮಪಾನ ಮಾಡಬೇಡಿ



Click it and Unblock the Notifications



