Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಪ್ರಾಥಮಿಕ ಹಂತದಲ್ಲೇ ಮಗುವಿಗೆ ನೈತಿಕ ಮೌಲ್ಯ ಕಲಿಸಿ
ಮೌಲ್ಯಗಳು ಯಾವಾಗಲೂ ಮೌಲ್ಯ ಕಳೆದುಕೊಳ್ಳದ ಅಂಶಗಳಾಗಿರುತ್ತವೆ. ಅವುಗಳಿಗೆ ಅವುಗಳದೇ ಆದ ನೆಲೆ, ಬೆಲೆ ಮತ್ತು ಕಾಲ ಇರುತ್ತದೆ. ಕೆಲವೊಮ್ಮೆ ಅವುಗಳಿಗೆ ಜನ ಗೌರವ ನೀಡದೆ ಇದ್ದರೂ ಸಹ ಕಡೆಗೆ ಗೆಲ್ಲುವುದು ಅದೇ. ಇಂತಹ ಮೌಲ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸುವುದು ಅತ್ಯಗತ್ಯ. ಅದರಲ್ಲೂ ಅವರು ಐದು ವರ್ಷ ಪ್ರಾಯಕ್ಕೆ ಬರುವ ಮುನ್ನ ಅವರಿಗೆ ಈ ವಿಚಾರಗಳನ್ನು ತಿಳಿಸಿ. ಇದು ಒಬ್ಬ ಜವಾಬ್ದಾರಿಯುತ ಪೋಷಕರಾಗಿ ನೀವು ಮಾಡಬೇಕಾಗಿರುವ ಕರ್ತ್ಯವ್ಯಗಳಲ್ಲಿ ಒಂದಾಗಿರುತ್ತದೆ.
ಹೌದು ಮೌಲ್ಯಗಳನ್ನು ಕೇವಲ ಶಾಲೆಗಳಲ್ಲಿ ಮಾತ್ರ ಕಲಿಸಲು ಸಾಧ್ಯವಿಲ್ಲ, ಅದನ್ನು ಮನೆಯಲ್ಲೂ ಸಹ ಹೇಳಿಕೊಡಬೇಕು. ಎಷ್ಟಾದರೂ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆಯಲ್ಲವೇ? ಅವರನ್ನು ಮುಂದೆ ಜವಾಬ್ದಾರಿಯುತ ನಾಗರಿಕನಾಗಿ ಮಾಡಲು ಈ ಮೌಲ್ಯಗಳ ಪಾಠವನ್ನು ನೀವು ಅವರಿಗೆ ಹೇಳಿಕೊಡಬೇಕಾಗುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಸಹ ಇಡೀ ವಿಶ್ವದಲ್ಲಿ ಪ್ರಮುಖವಾದ ಅಂಶವಾಗಿರುತ್ತದೆ. ಏಕೆಂದರೆ ಒಬ್ಬ ವ್ಯಕ್ತಿಯ ಕೆಟ್ಟ ವ್ಯಕ್ತಿತ್ವವು ಆತನ ಸುತ್ತ ಮುತ್ತಲಿನ ಸಮಾಜ ಏಕೆ, ಇಡೀ ವಿಶ್ವಕ್ಕೆ ಮಾರಕವಾಗಬಹುದು ಎಂದು ಇತಿಹಾಸ ನಮಗೆ ಹಲವಾರು ಭಾರಿ ಸಾರಿ ಹೇಳಿದೆ. ಪೋಷಕರ ಸಣ್ಣ ತಪ್ಪುಗಳಿಂದ ಮಕ್ಕಳ ಜೀವನ ಅಭದ್ರ
ಆದ್ದರಿಂದ ಒಳ್ಳೆಯ ವ್ಯಕ್ತಿತ್ವವನ್ನು ನಿಮ್ಮ ಮಗುವಿನಲ್ಲಿ ಬೆಳೆಸಿ, ಅವನನ್ನು ವಿಶ್ವಕ್ಕೆ ಕಾಣಿಕೆಯಾಗಿ ನೀಡಿ. ಚಿಕ್ಕ ಮಕ್ಕಳಾಗಿರುವಾಗ ಯಾರು ಉತ್ತಮ ವಿಚಾರಗಳನ್ನು ಕಲಿಯುತ್ತಾರೋ, ಅವರಲ್ಲಿ ಜೀವನ ಪರ್ಯಂತ ಉತ್ತಮ ವಿಚಾರಗಳು ತುಂಬಿರುತ್ತವೆ. ಹಾಗಾದರೆ ಮಕ್ಕಳಿಗೆ ಇದನ್ನು ಹೇಗೆ ಹೇಳಿಕೊಡುವುದು? ನಿಮ್ಮ ಈ ವಿಚಾರವನ್ನು ಮಗು ಕೇಳುತ್ತದೆಯೇ? ಆಗ ಮಗುವನ್ನು ಕೇಳುವಂತೆ ಮಾಡುವುದು ಸ್ವಲ್ಪ ಕಷ್ಟವೇ, ಆದರು ಅವರನ್ನು ಒಂದು ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿ. ಅವರ ವರ್ತನೆಗಳನ್ನು ಹತೋಟಿಗೆ ತನ್ನಿ. ನಿಮ್ಮ ಮಾತು ಕೇಳಿದರೆ ಅವರಿಗೆ ಇಷ್ಟವಾದ ವಸ್ತುಗಳನ್ನು ಕೊಡಿಸಿ. ಹೀಗೆ ಅವರಲ್ಲಿ ಮೌಲ್ಯಗಳ ಕುರಿತಾಗಿ ತಿಳಿಸಬಹುದು. ಹಾಗಾದರೆ ಯಾವ ಮೌಲ್ಯಗಳನ್ನು ಅವರಿಗೆ ತಿಳಿಸಬಹುದು ಎಂದು ತಿಳಿಯಲು ಮುಂದೆ ಓದಿ.

ಪ್ರಾಮಾಣಿಕತೆ
ನಿಮ್ಮ ಮಗು ಐದು ವರ್ಷ ತುಂಬುವ ಮೊದಲು ಅದಕ್ಕೆ ಪ್ರಾಮಾಣಿಕತೆಯ ಪಾಠವನ್ನು ಮಾಡಿ. ಸತ್ಯ ಮತ್ತು ಪ್ರಾಮಾಣಿಕತೆ ಗೊತ್ತಿರುವವನಿಗೆ ಪ್ರಪಂಚದಲ್ಲಿ ಏನನ್ನೂ ಹೇಳಿಕೊಡಬೇಕಾದ ಅಗತ್ಯವಿಲ್ಲ ಎಂದು ಕನ್‌ಫ್ಯೂಶಿಯಸ್ ಹೇಳಿದ್ದಾರೆ. ನಿಮ್ಮ ಮಗುವಿಗೆ ಪ್ರಾಮಾಣಿಕತೆಯ ಮಹತ್ವ ಅರ್ಥವಾಗಲಿ. ಸುಳ್ಳು ಹೇಳುವುದು, ಮೋಸ ಮಾಡುವುದು ಮತ್ತು ಕಳ್ಳತನ ಮಾಡುವುದು ತಪ್ಪು ಎಂದು ತಿಳಿಸಿ. ತಪ್ಪು ಮಾಡಿ ಅದನ್ನು ಪ್ರಾಮಾಣಿಕವಾಗಿ ನಿಮ್ಮ ಮುಂದೆ ಹೇಳಿದರೆ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಆಗ ಅವರಲ್ಲಿ ಪ್ರಾಮಾಣಿಕತೆಯ ಮಹತ್ವ ಅರಿವಾಗುತ್ತದೆ.

ನ್ಯಾಯ
ನ್ಯಾಯ ಎಂಬ ಮೌಲ್ಯವನ್ನು ಅರಿತಿರುವ ಮಗುವು ಸಹ ಒಳ್ಳೆಯ ಮಗುವಾಗುತ್ತದೆ. ನನ್ನದು ಮತ್ತು ಪರರದು ಎಂಬ ಭಾವ ಅವರಿಗೆ ಗೊತ್ತಾಗಲಿ, ಸ್ವಾರ್ಥವನ್ನು ಬಿಟ್ಟು ನ್ಯಾಯವಾಗಿ ಬದುಕುವ ಕಲೆ ಮಕ್ಕಳಿಗೆ ಬೇಗ ಬರುತ್ತದೆ. ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಅಂಶಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಿ.

ನಿರ್ಧಾರ
ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹಲವರಲ್ಲಿ ಇರುವುದಿಲ್ಲ. ಅದಕ್ಕೆ ನಿಮ್ಮ ಮಗುವಿಗೆ ಚಿಕ್ಕ ವಯಸ್ಸಿನಲ್ಲಿಯೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ತಿಳಿಸಿ. ನಿರ್ಧಾರ ತೆಗೆದುಕೊಳ್ಳುವ ಗುಣವು ಅವರಲ್ಲಿ ಸವಾಲುಗಳನ್ನು ಸ್ವೀಕರಿಸುವ ಗುಣವನ್ನು ಬೆಳೆಸುತ್ತದೆ.

ಸಹಾನುಭೂತಿ
ಶಾಲೆಯಲ್ಲಿ ಯಾವುದಾದರು ಮಗುವು ಬಿದ್ದಾಗ, ಅಥವಾ ತೊಂದರೆಗೊಳಪಟ್ಟಾಗ ಅವರನ್ನು ನೋಡಿ ನಗುವ ಬದಲಿಗೆ ಅವರ ನೆರವಿಗೆ ಧಾವಿಸುವ ಕುರಿತು ನಿಮ್ಮ ಮಗುವಿಗೆ ತಿಳಿಸಿ. ನಿಮ್ಮ ಮಗು ಇತರರಿಗೆ ನೆರವು ನೀಡುವಂತಾಗಲಿ, ಅದು ಅವನ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ. ನೀವು ಸಹಾನುಭೂತಿಯ ಕುರಿತಾಗಿ ಮಕ್ಕಳಿಗೆ ತಿಳಿಸಿದಾಗ ಅವರು ಅದನ್ನು ಬೇಗ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಒಳ್ಳೆಯದಾಗಲಿ, ಇಂದೇ ನಿಮ್ಮ ಮಗುವಿಗೆ ಇವುಗಳನ್ನು ಹೇಳಿಕೊಡಿ.



Click it and Unblock the Notifications











