Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ನಿಮ್ಮ ಕಂದನ ಕೋಮಲ ತ್ವಚೆಗೆ ಸೂಕ್ತವಾದ ಎಣ್ಣೆಗಳು
ಸಾಮಾನ್ಯವಾಗಿ ಎಣ್ಣೆಸ್ನಾನ ಮತ್ತು ಮಜ್ಜನ ಮಗುವಿಗೆ ಉತ್ತಮ ಎಂದು ಯಾವುದೋ ಒಂದು ಎಣ್ಣೆಯನ್ನು ನೇರವಾಗಿ ಬಳಸಬಾರದು. ಏಕೆಂದರೆ ಮಗುವಿನ ಚರ್ಮ ಅತ್ಯಂತ ಸೂಕ್ಷ್ಮವಾಗಿದ್ದು ಮೈಗೆ ಹಿಡಿಸದ ಯಾವುದೇ ಎಣ್ಣೆಯಿಂದ ಅದರ ಮೈಗೆ ಉರಿ ತರಿಸಬಹುದು. ತನಗೆ ಉರಿಯುತ್ತಿದೆ ಎಂದು ಹೇಳಲೂ ಬಾರದ ಕಂದ ಕೇವಲ ಅಳುವುದನ್ನು ನೋಡಿ ಮರುಗಬೇಕಾಗಿಬರಬಹುದು, ಪರಿಣಾಮವಾಗಿ ಚರ್ಮದ ತೊಂದರೆಗಳೂ ಉಂಟಾಗಬಹುದು. ಆದುದರಿಂದ ಅತ್ಯಂತ ಸೂಕ್ತವಾದ ನೈಸರ್ಗಿಕ ಎಣ್ಣೆಯನ್ನೇ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ನೈಸರ್ಗಿಕ ಎಣ್ಣೆ ಸ್ನಾನದ ಪ್ರಾಮುಖ್ಯತೆ
*ನೈಸರ್ಗಿಕ ಎಣ್ಣೆಸ್ನಾನದ ಮೂಲಕ ಮಗುವಿನ ಇಡಿಯ ಶರೀರದ ಸ್ನಾಯುಗಳು ಸಡಿಲಗೊಂಡು ಆಯಾಸ ಪರಿಹಾರವಾಗುತ್ತದೆ. ಇನ್ನೂ ನಡೆದಾಡಲು ಬಲ ದೊರಕಿಲ್ಲದ ಕಾರಣ ಕಾಲುಗಳ ಸ್ನಾಯುಗಳಿಗೂ ವ್ಯಾಯಾಮ ದೊರಕಿದಂತಾಗುತ್ತದೆ.
* ಮಗುವಿನ ಕೋಮಲ ತ್ವಚೆಗೆ ಅಗತ್ಯವಾದ ಪೋಷಕಾಂಶಗಳು ದೊರಕುತ್ತವೆ.
* ನಿಮ್ಮ ಮಗುವಿನ ಮೈಗೆ ನೀವೇ ನೈಸರ್ಗಿಕ ಎಣ್ಣೆ ತಿಕ್ಕುವ ಮೂಲಕ ತಾಯಿ ಮತ್ತು ಮಗುವಿನ ನಡುವಣ ವಾತ್ಸಲ್ಯ ಇನ್ನಷ್ಟು ಹೆಚ್ಚುತ್ತದೆ.
* ಮಸಾಜ್ ನ ಬಳಿಕ ಮಗು ಸುಖನಿದ್ದೆಗೆ ಜಾರುತ್ತದೆ. ಹಾಲು ಹಲ್ಲು ಬರುವಾಗ ಮಕ್ಕಳು ತೂಕವನ್ನು ಕಳೆದುಕೊಳ್ಳುತ್ತಾರೆಯೇ?
ಅಲ್ಲದೇ ಮಗುವಿನ ಚರ್ಮದಲ್ಲಿ ಬೆವರು ಗ್ರಂಥಿ ಮತ್ತು ದುಗ್ದಗ್ರಂಥಿಗಳು ಪರಿಪೂರ್ಣವಾಗಿ ಬೆಳೆದಿರದ ಕಾರಣ ಹೆಚ್ಚಾಗಿ ಒಣಗಿಯೇ ಇರುತ್ತದೆ. ಮಗು ಬೆಳೆಯುತ್ತಿದ್ದಂತೆ ಒಣಚರ್ಮ ಮಾಯವಾಗಿ ಕಾಂತಿ ಮೂಡಬೇಕು. ಇಲ್ಲದಿದ್ದರೆ ಕೆಲವು ಚರ್ಮವ್ಯಾಧಿಗಳು (eczema) ಹಾಗೂ ಒರಟುಚರ್ಮ, ಸೀಳು ಮೊದಲಾದ ತೊಂದರೆಗಳು ಎದುರಾಗಬಹುದು. ಆದುದರಿಂದ ಮಗುವಿಗೆ ಸೂಕ್ತ ಎಣ್ಣೆಯ ಮೂಲಕ ಚರ್ಮಕ್ಕೆ ಅಗತ್ಯವಾದ
ಪೋಷಕಾಂಶಗಳು ಮತ್ತು ಬಿಸಿನೀರಿನ ಸ್ನಾನದ ಮೂಲಕ ಆರ್ದ್ರತೆಯನ್ನು ಒದಗಿಸಿ ಚರ್ಮ ಆರೋಗ್ಯದಿಂದ ಮತ್ತು ಕಾಂತಿಯುಕ್ತವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಈ ಲೇಖನದಲ್ಲಿ ಮಗುವಿನ ಕೋಮಲ ತ್ವಚೆಗೆ ಸೂಕ್ತವಾದ ಹತ್ತು ಎಣ್ಣೆಗಳ ಬಗ್ಗೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಮಗುವಿನ ಆರೋಗ್ಯಕಾರಿ ಬೆಳವಣಿಗೆಯಲ್ಲಿ ಮಸಾಜ್‍ನ ಮಹತ್ವವೇನು?

ಸೂರ್ಯಕಾಂತಿ ಎಣ್ಣೆ
ಬಹುತೇಕ ಅಡುಗೆಗಾಗಿ ಬಳಸುವ ಸೂರ್ಯಕಾಂತಿ ಎಣ್ಣೆ ಮಗುವಿನ ತ್ವಚೆಗೂ ಸೂಕ್ತವಾಗಿದೆ. ಈ ಎಣ್ಣೆಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಒಂದು ವೇಳೆ ಮಗುವಿನ ಚರ್ಮ ಅತಿ ಸಂವೇದಿಯಾಗಿದ್ದರೆ ಈ ಎಣ್ಣೆಯನ್ನು ಬಳಸಬೇಡಿ. ಉಳಿದಂತೆ ವರ್ಷದ ಎಲ್ಲಾ ದಿನಗಳಲ್ಲೂ ಈ ಎಣ್ಣೆಯನ್ನು ಬಳಸಬಹುದು.

ಕ್ಯಾಮೋಮೈಲ್ ಹೂವಿನ ಎಣ್ಣೆ
ಒಂದು ವೇಳೆ ಮಗುವಿನ ಚರ್ಮ ಅತಿಸಂವೇದಿಯಾಗಿದ್ದರೆ ಕ್ಯಾಮೋಮೈಲ್ ಹೂವಿನ ಎಣ್ಣೆಯನ್ನು ಬಳಸಬಹುದು. ಇದು ಈಗತಾನೇ ಹುಟ್ಟಿದ ಮಗುವಿನಿಂದ ಹಿಡಿದು ನಾಲ್ಕೈದು ವರ್ಷದ ಮಕ್ಕಳಿಗೂ ಸೂಕ್ತವಾಗಿದೆ. ಮಗುವಿನ ಚರ್ಮದಲ್ಲಿ ಸೂಕ್ಷ್ಮ ಗೀರುಗಳು ಮತ್ತು ಇತರ ತೊಂದರೆಗಳಿದ್ದರೂ ಈ ಎಣ್ಣೆಯ ಮಸಾಜ್ ನಿಂದ ಶೀಘ್ರವಾಗಿ ಗುಣವಾಗುತ್ತದೆ. ಮಸಾಜ್ ನ ಬಳಿಕ ಶೀಘ್ರವಾಗಿ ಮಗು ನಿದ್ದೆಗೆ ಜಾರುತ್ತದೆ. ಕೊಂಚ ದುಬಾರಿಯಾಗಿರುವ ಈ ಎಣ್ಣೆಯನ್ನು ಸ್ನಾನದ ಬಳಿಕ ಅಲ್ಪ ಪ್ರಮಾಣದಲ್ಲಿ ಮಸಾಜ್ ಮಾಡಿ. ಉದರಶೂಲೆ (colic) ಯಿಂದ ಬಳಲುತ್ತಿರುವ ಮಗುವಿಗೂ ಈ ಎಣ್ಣೆಯ ಮಜ್ಜನ ಪರಿಣಾಮಕಾರಿಯಾಗಿದೆ.

ಟೀ ಟ್ರೀ ಎಣ್ಣೆ (Tea tree Oil)
ಈ ಎಣ್ಣೆಯಲ್ಲಿ ನಂಜುನಿರೋಧಕ (antiseptic) ಗುಣಗಳಿರುವುದರಿಂದ ಮಗುವಿನ ಚರ್ಮಕ್ಕೆ ಸೂಕ್ತವಾಗಿದೆ. ಆದರೆ ಈ ಎಣ್ಣೆಯನ್ನು ವೈದ್ಯರ ಸಲಹೆಯ ಬಳಿಕವೇ ಉಪಯೋಗಿಸುವುದು ಅಗತ್ಯ. ಮಗುವಿನ ಚರ್ಮದ ಹಲವು ವ್ಯಾಧಿಗಳಿಗೆ ಈ ಎಣ್ಣೆಯ ಮಸಾಜ್ ಫಲ ನೀಡುತ್ತದೆ. ಸ್ನಾನದ ಬಳಿಕ ಈ ಎಣ್ಣೆಯ ನಯವಾದ ಮಸಾಜ್ ಮಾಡಿದರೆ ಮಗು ಶೀಘ್ರವಾಗಿ ನಿದ್ದೆಗೆ ಜಾರುತ್ತದೆ. ಈ ಎಣ್ಣೆಯನ್ನು ವರ್ಷದ ಎಲ್ಲಾ ಕಾಲದಲ್ಲಿ ಉಪಯೋಗಿಸಬಹುದು.

ಕ್ಯಾಲೆಂಡುಲಾ ಎಣ್ಣೆ (Calendula Oil)
ಈ ಎಣ್ಣೆ ಸಹಾ ಮಗುವಿನ ಕೋಮಲ ತ್ವಚೆಗೆ ಉತ್ತಮವಾಗಿದೆ. ಸ್ನಾನದ ಬಳಿಕ ಅಲ್ಪಪ್ರಮಾಣದಲ್ಲಿ ಹಚ್ಚಿ ಮಸಾಜ್ ಮಾಡಿದರೆ ಚರ್ಮ ಕಾಂತಿಯುಕ್ತವಾಗುತ್ತದೆ ಹಾಗೂ ಮಗು ಸುಖನಿದ್ದೆಗೆ ಜಾರುತ್ತದೆ. ಈ ಎಣ್ಣೆಯಲ್ಲಿ ನಸುವಾದ ಸುವಾಸನೆ ಇರುವುದರಿಂದ ಮಗುವಿನ ಮೂಗಿನ ಬಳಿ ಹಚ್ಚುವುದು ಸೂಕ್ತವಲ್ಲ. ಈ ಎಣ್ಣೆಯನ್ನು ವರ್ಷದ ಎಲ್ಲಾ ಕಾಲದಲ್ಲಿ ಉಪಯೋಗಿಸಬಹುದು.

ಹರಳೆಣ್ಣೆ (Castor Oil)
ಅತ್ಯಂತ ದಪ್ಪನೆಯ ಎಣ್ಣೆಯಾದ ಹರಳೆಣ್ಣೆ ಸಹಾ ಮಗುವಿನ ಚರ್ಮಕ್ಕೆ ಸೂಕ್ತವಾಗಿದೆ. ಹರಳೆಣ್ಣೆ ಮಗುವಿನ ಚರ್ಮ, ಉಗುರು ಮತ್ತು ಕೂದಲ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಈ ಎಣ್ಣೆಯನ್ನು ತುಟಿ, ಕಣ್ಣು ಮತ್ತು ಮೂಗಿನ ಬಳಿ ಹಚ್ಚದಿರಿ. ಪ್ರತಿದಿನದ ಸ್ನಾನದ ಬಳಿಕ ನಿಮಗೆ ಸೂಕ್ತವಾದ ಎಣ್ಣೆಯನ್ನು ಆಯ್ದುಕೊಂಡು ಮಗುವಿಗೆ ಮಸಾಜ್ ಮಾಡುವ ಮೂಲಕ ನಿಮ್ಮ ಮತ್ತು ನಿಮ್ಮ ಮಗುವಿನ ನಡುವಣ ಬಾಂಧವ್ಯ ಇನ್ನಷ್ಟು ಹೆಚ್ಚುವುದು.



Click it and Unblock the Notifications
