Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಮೊಟ್ಟೆ ಕೂಡ ಮಗುವಿಗೆ ಅಲರ್ಜಿ ಉಂಟು ಮಾಡಬಹುದು!
ಮಕ್ಕಳ ದೇಹ ತುಂಬಾ ನಾಜೂಕಾಗಿರುವ ಕಾರಣದಿಂದ ಯಾವುದೇ ಅಲರ್ಜಿಗಳಿಗೆ ಅವು ತುತ್ತಾಗುತ್ತವೆ. ತಿನ್ನುವ ಆಹಾರದಿಂದ ಹಿಡಿದು ಮನೆಯಲ್ಲಿನ ಸಾಕು ಪ್ರಾಣಿಗಳು, ಧೂಳು, ನೀರಿನಿಂದಲೂ ಕೆಲವು ಮಕ್ಕಳಿಗೆ ಅಲರ್ಜಿಯಾಗಬಹುದು. ಇನ್ನು ಕೆಲವು ಮಕ್ಕಳಿಗೆ ಮೊಟ್ಟೆ ತಿಂದ ಬಳಿಕ ಅಲರ್ಜಿ ಲಕ್ಷಣಗಳು ಕಾಣಿಸಿಕೊಳ್ಳುವುದಿದೆ.
ಕೆಲವು ಮಕ್ಕಳಿಗೆ ಮೊಟ್ಟೆಯ ಅಲರ್ಜಿ ಎಷ್ಟು ಮಟ್ಟಿಗಿದೆಯೆಂದರೆ ಅದನ್ನು ಮುಟ್ಟಿದ ಕೂಡಲೇ ಅದರ ಪರಿಣಾಮ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೊಟ್ಟೆಯ ಅಲರ್ಜಿ ಬಗ್ಗೆ ಹೆತ್ತವರು ತಿಳಿದುಕೊಂಡಿರಬೇಕು. ಶಿಶುಗಳಲ್ಲಿ ಕಾಣಿಸಿಕೊಳ್ಳುವ ಮೊಟ್ಟೆಯ ಅಲರ್ಜಿಗೆ ಕಾರಣವೆಂದರೆ ಅವರಲ್ಲಿನ ಅತೀ ಸೂಕ್ಷ್ಮ ಪ್ರತಿರಕ್ಷಣಾ ವ್ಯವಸ್ಥೆ. ಇದು ಮೊಟ್ಟೆಯಲ್ಲಿ ಪ್ರೋಟೀನ್‌ಗೆ ಬೇಗನೆ ಪ್ರತಿಕ್ರಿಯಿಸುತ್ತದೆ.
ಪ್ರತಿರಕ್ಷಣಾ ವ್ಯವಸ್ಥೆಯು ಮೊಟ್ಟೆಯ ಅಂಶವನ್ನು ಸಹಿಸದೆ ಇದ್ದರೆ ಅದು ಕೆಲವೊಂದು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮೊಟ್ಟೆಯ ಅಲರ್ಜಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಬೆಳೆಯುವ ಮಕ್ಕಳ ಆಹಾರ ಪದ್ಧತಿ ಬಗ್ಗೆ ಗಮನವಿರಲಿ

ಇಂತಹ ಲಕ್ಷಣಗಳು ತುಂಬಾ ಕಡಿಮೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಹೆತ್ತವರು ಇದರ ಬಗ್ಗೆ ಜಾಗೃತೆ ವಹಿಸಬೇಕು. ಅಲರ್ಜಿಯಿಂದಾಗಿ ಮಗುವಿನ ಪ್ರಾಣಕ್ಕೂ ಸಂಚಕಾರವುಂಟಾಗಬಹುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮೊಟ್ಟೆಯ ಅಲರ್ಜಿ ಲಕ್ಷಣಗಳು
ಉರಿಯೂತದಂತಹ ಚರ್ಮದ ಸಮಸ್ಯೆ
ಚರ್ಮದ ಕೆಲವೊಂದು ಸಮಸ್ಯೆಗಳಾದ ಇಸುಬು, ಉರಿಯೂತ, ಊತ ಮತ್ತು ನೀರು ತುಂಬಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳು ಮಕ್ಕಳಲ್ಲಿ ಮೊಟ್ಟೆ ಸೇವಿಸಿದ ತಕ್ಷಣ ಕಾಣಿಸಿಕೊಳ್ಳಬಹುದು.
ಅತಿಸಾರದಂತಹ ಅಜೀರ್ಣ ಸಮಸ್ಯೆ
ಅಜೀರ್ಣ ಸಮಸ್ಯೆಗಳಾದ ಅತಿಸಾರ, ಹೊಟ್ಟೆ ನೋವು ಮತ್ತು ವಾಂತಿ ಮಕ್ಕಳಲ್ಲಿ ಮೊಟ್ಟೆಯಿಂದ ಕಾಣಿಸಿಕೊಳ್ಳುವ ಅಲರ್ಜಿಯ ಲಕ್ಷಣಗಳು.
ಉಸಿರಾಟದ ಸಮಸ್ಯೆ
ಒಮ್ಮೆಲೇ ಮಗು ಮೇಲುಸಿರು ತೆಗೆಯುವುದು ಮತ್ತು ಉಸಿರಾಟದ ಸಮಸ್ಯೆಯು ಇಂತಹ ಅಲರ್ಜಿಯಿಂದ ಕಾಣಿಸಿಕೊಳ್ಳಬಹುದು. ಈ ಉಸಿರಾಟದ ಸಮಸ್ಯೆಯು ಮಕ್ಕಳಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. ಇದು ಜೀವಕ್ಕೂ ಹಾನಿಯುಂಟು ಮಾಡಬಹುದು.
ಹೃದಯ ಸಂಬಂಧಿ ಸಮಸ್ಯೆ
ಕೆಲವು ಮಕ್ಕಳಲ್ಲಿ ಮೊಟ್ಟೆ ಸೇವಿಸಿದ ತಕ್ಷಣ ಹೃದಯ ಬಡಿತ ಹೆಚ್ಚಾಗಿ ರಕ್ತದೊತ್ತಡ ಕಡಿಮೆಯಾಗಬಹುದು. ರಕ್ತದೊತ್ತಡ ಕಡಿಮೆಯಾದಾಗ ಮಗುವನ್ನು ಹತ್ತಿರದ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಇಂದಿನ ದಿನಗಳಲ್ಲಿ ಮೊಟ್ಟೆಯಲ್ಲಿ ಕೆಲವೊಂದು ಆಹಾರಗಳಾದ ಕೇಕ್, ಬಿಸ್ಕಟ್ ಮತ್ತು ಇತರ ಉತ್ಪನ್ನಗಳಲ್ಲಿ ಬಳಸುತ್ತಾರೆ. ಪಾಸ್ತಾದಲ್ಲಿಯು ಮೊಟ್ಟೆಯ ಅಂಶವಿದೆ. ಇದರಿಂದ ಹೆತ್ತವರು ಮಕ್ಕಳಿಗೆ ಆಹಾರವನ್ನು ಆಯ್ಕೆ ಮಾಡುವಾಗ ಮೊಟ್ಟೆಯ ಅಂಶದ ಬಗ್ಗೆ ಗಮನಹರಿಸಲೇಬೇಕು.



Click it and Unblock the Notifications












