Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬೇಸಿಗೆಯ ಸುಡು ಬಿಸಿಲಿಗೆ ಪುಟ್ಟ ಕಂದಮ್ಮನ ಆರೈಕೆ ಹೇಗಿರಬೇಕು?
ಹೊಸ ಮಗುವಿನ ನಿರೀಕ್ಷೆಯಲ್ಲಿ ನೀವು ಇದ್ದಲ್ಲಿ, ನಿಜಕ್ಕೂ ಆ ನಿರೀಕ್ಷೆಯ ಭಾರ ನಿಮಗೆ ಗೊತ್ತಿರುತ್ತದೆ. ಈ ಬೇಸಿಗೆಯಲ್ಲಿ ಮಕ್ಕಳು ಜನಿಸಿದರೆ ಒಂದು ರೀತಿ ಒಳ್ಳೆಯದೇ, ಈ ಮಕ್ಕಳಿಗೆ ನೆಗಡಿ ಮತ್ತು ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಆದರೆ ಈ ಸುಡುವ ಬಿಸಿಲು ಮತ್ತು ಇದರ ಉಷ್ಣಾಂಶವು ಬಾಣಂತಿಯರಿಗೆ ತಲೆನೋವಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಈ ಬೇಸಿಗೆ ಸಲಹೆಗಳನ್ನು ಪಾಲಿಸಿ ಮತ್ತು ವ್ಯತ್ಯಾಸವನ್ನು ಕಾಣಿ.
ಹೊರಾಂಗಣವಾಗಿರಲಿ ಅಥವಾ ಒಳಾಂಗಣವಾಗಿರಲಿ, ಬಿಸಿಲು ಮತ್ತು ಉಷ್ಣಾಂಶವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತರುತ್ತದೆ. ಈ ಸಮಯದಲ್ಲಿ ದಡಾರ ಮತ್ತು ಸಿಡುಬು ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಬಾಣಂತಿಯರು ಈ ಸಂದರ್ಭದಲ್ಲಿ ಸುರಕ್ಷಿತವಾಗಿರಲು ಅಗತ್ಯವಾದ ಸಲಹೆಗಳನ್ನು ನಿರೀಕ್ಷಿಸುತ್ತಾರೆ.

ಬೇಸಿಗೆಯಲ್ಲಿ ಹಲವರಿಗೆ ಬಿಸಿಲಿನ ಝಳದಿಂದ ಸನ್ ಬರ್ನ್ ಮತ್ತು ಹೀಟ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ತೊಡುವ ಬಟ್ಟೆ ಮತ್ತು ನೀರಿನಂಶದ ಕೊರತೆ ಕಾರಣವಾಗಿರುತ್ತದೆ. ಹೊಟ್ಟೆಯ ಮೇಲೆ ಹೆಚ್ಚಾಗಿ ಮಲಗುವುದರಿಂದ ಗರ್ಭಿಣಿಯರಲ್ಲಿ ಇನ್‌ಫ್ಯಾಂಟ್ ಡೆಥ್ ಸಿಂಡ್ರೋಮ್ ಕಂಡುಬರುತ್ತದೆ, ಬೆನ್ನಿಗೆ ಒರಗಿಕೊಂಡು ಮಲಗಿದರೆ, ಬೆನ್ನಿನಲ್ಲಿ ಗುಳ್ಳೆಗಳು ಕಂಡು ಬರುತ್ತವೆ. ಈ ಸಮಸ್ಯೆಯಿಂದ ಪಾರಾಗಲು ಯಾವ ದಾರಿಯನ್ನು ಅನುಸರಿಸಬೇಕು ಎಂದು ಬಾಣಂತಿಯರು ತಲೆ ಕೆಡಿಸಿಕೊಳ್ಳುತ್ತಾರೆ. ಅಂತಹವರಿಗಾಗಿ ನಾವು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಓದಿಕೊಳ್ಳಿ.
ತಂಪಾದ ಬಟ್ಟೆಗಳು
ಈ ಕಾಲದಲ್ಲಿ ಬಿಗಿಯಾದ ಬಟ್ಟೆಗಳು ಹೀಟ್ ಸ್ಟ್ರೋಕ್‍ಗೆ ಕಾರಣವಾಗುತ್ತವೆ. ಇದರಿಂದ ಮಕ್ಕಳಿಗೆ ಸೆಖೆ ಹೆಚ್ಚಾಗುತ್ತದೆ. ಆದ್ದರಿಂದ ಮಕ್ಕಳಿಗೆ ಸ್ವಚ್ಛವಾದ ಹತ್ತಿಯ ಬಟ್ಟೆಗಳನ್ನು ಹಾಕಿ, ಇದರಿಂದ ಅವರ ತ್ವಚೆಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಈ ಸಲಹೆಯನ್ನು ಬೇಸಿಗೆಯಲ್ಲಿ ತಪ್ಪದೆ ಪಾಲಿಸಿ.
ಮೆದುವಾದ ಮತ್ತು ಸರಿಯಾಗಿ ಬೇಯಿಸಿದ ಆಹಾರ
ಆಹಾರಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿ ಕೆಟ್ಟು ಹೋಗುತ್ತವೆ. ನಿಮ್ಮ ಮಗುವಿಗೆ ಆಹಾರ ಬೇಕಾದಾಗ ತಾಜಾ ಆಗಿ ತಯಾರಿಸಿಕೊಳ್ಳಿ. ತಾಜಾ ಆಹಾರವಿಲ್ಲದೆ ಈ ಸಲಹೆಗಳು ಪೂರ್ಣಗೊಳ್ಳುವುದಿಲ್ಲ. ಪ್ರತಿ ಬಾರಿ ಆಹಾರವನ್ನು ಸೇವಿಸುವಾಗ ಅದನ್ನು ರುಚಿ ನೋಡಿ, ನಂತರ ತಿನ್ನಲು ನೀಡಿ.
ನೀರಿನಂಶ
ಡೀಹೈಡ್ರೇಷನ್ ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಅಗತ್ಯ ಪ್ರಮಾಣದಷ್ಟು ನೀರನ್ನು ನಿಮ್ಮ ಮಗುವಿಗೆ ನೀಡಲು ಮರೆಯಬೇಡಿ.
ಶುಚಿತ್ವವನ್ನು ಕಾಪಾಡುವುದು
ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ, ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ಬೆವರು, ನಿಮ್ಮ ಮಗುವಿನ ತ್ವಚೆಯ ಮೇಲೆ ಗುಳ್ಳೆಗಳು, ಇತ್ಯಾದಿ ತ್ವಚೆಯ ಸಮಸ್ಯೆಗಳನ್ನುಂಟು ಮಾಡಬಹುದು. ಶುಚಿಯಾಗಿಲ್ಲದ ಸ್ಥಳಗಳು ನಿಮ್ಮ ಮಗುವಿಗೆ ಬರುವ ಅನೇಕ ಕಾಯಿಲೆಗಳ ತವರು ಮನೆಯಾಗಿರುತ್ತದೆ.
ಸಂಜೆ ವಾಕ್ ಮಾಡಿ
ಆದಷ್ಟು ನಿಮ್ಮ ಮಗುವನ್ನು ಬಿಸಿಲಿನಲ್ಲಿ ಕರೆದುಕೊಂಡು ಹೋಗಬೇಡಿ. ಮಗುವಿಗೆ ಬಿಸಿಲು ಎಂದರೆ ಸರಿಹೋಗುವುದಿಲ್ಲ. ಅದರ ತ್ವಚೆಯು ಇದನ್ನು ತಡೆಯುವುದಿಲ್ಲ. ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಸಮಸ್ಯೆಯು ಸಹ ಇದರಿಂದ ಮಗುವನ್ನು ಕಾಡುತ್ತದೆ.. ಆದ್ದರಿಂದ ಹೊರಾಂಗಣದಲ್ಲಿ ಮಾಡುವ ಕೆಲಸಗಳನ್ನು ಆದಷ್ಟು ಸಂಜೆಯ ಅವಧಿಯಲ್ಲಿ ಮಾಡಿ. ಇಲ್ಲವೇ ಮುಂಜಾನೆ ಮಾಡಿ.



Click it and Unblock the Notifications



