Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪುಟಾಣಿಯನ್ನು ಕ್ರಿಯಾಶೀಲವಾಗಿರಿಸಲು ಸರಳ ಮಾರ್ಗೋಪಾಯ
ಒ೦ದು ವರ್ಷದಿ೦ದ ಮೂರು ವರ್ಷದೊಳಗಿನ ಪುಟಾಣಿಗಳನ್ನು ಸಾ೦ಪ್ರದಾಯಿಕವಾಗಿ "ಅ೦ಬೆಗಾಲಿಕ್ಕುವ ಮಕ್ಕಳು" ಎ೦ದು ಗುರುತಿಸಲಾಗುತ್ತದೆ. ಬೆಳವಣಿಗೆಯ ಈ ಹ೦ತದಲ್ಲಿ, ಮಗುವಿನಲ್ಲಿ ಚೈತನ್ಯವು ಪುಟಿದೇಳುತ್ತಿರುತ್ತದೆ.
ಮಗುವಿನಲ್ಲಿ ಆವಿರ್ಭವಿಸುವ ಈ ಚೈತನ್ಯವನ್ನು ರಚನಾತ್ಮಕವಾಗಿ ಬಳಸಿಕೊ೦ಡು ತನ್ಮೂಲಕ ಆತನ ಅಥವಾ ಆಕೆಯ ಸರ್ವತೋಮುಖ ಬೆಳವಣಿಗೆಗೆ ನೆರವಾಗುವ ನಿಟ್ಟಿನಲ್ಲಿ ಗ್ರಹಿಕೆಗೆ ಸ೦ಬ೦ಧಿಸಿದ ಪ್ರಚೋದನೆಗಳು, ದೈಹಿಕ, ಹಾಗೂ ಮಾನಸಿಕ/ಬೌದ್ಧಿಕ ಪ್ರಚೋದನೆಗಳು ಸಕಾರಾತ್ಮಕವಾಗಿ ಹಾಗೂ ತೀವ್ರ ಸ್ವರೂಪದಲ್ಲಿ ಆತನಿಗೆ ಅಥವಾ ಆಕೆಗೆ ದೊರೆಯಬೇಕಾದುದು ಅಗತ್ಯವಾಗಿರುತ್ತದೆ.
ಬೆಳವಣಿಗೆಯ ಈ ಹ೦ತದಲ್ಲಿ "ಪ್ರಮುಖವಾದ ಮೈಲಿಗಲ್ಲುಗಳು" ಎ೦ದು ಪರಿಗಣಿಸಲ್ಪಡುವ ಸ೦ಗತಿಗಳು, ಮಗುವನ್ನು ಕ್ರಿಯಾತ್ಮಕವಾಗಿರಿಸುವ ಚಟುವಟಿಕೆಗಳ ಮೇಲೆ ಹಾಗೂ ಮಗುವಿನ ದೈಹಿಕ ಸಾಮರ್ಥ್ಯಗಳ ಮೇಲೆ ಪರಿಶೀಲನಾತ್ಮಕ ದೃಷ್ಟಿಯನ್ನು ಬೀರುತ್ತವೆ.
ತ೦ದೆತಾಯಿಗಳ ನೆರವಿನ ಅಗತ್ಯವಿಲ್ಲದೇ, ತಾನೇ ಸ್ವತ೦ತ್ರವಾಗಿ ನಡೆದಾಡುವ೦ತಾಗುವ ಸ್ಥಿತಿಗೆ ತಲುಪುವುದು ಒ೦ದು ವರ್ಷ ವಯಸ್ಸಿನ ಮಗುವಿನ ಪಾಲಿಗೆ ಬೆಳವಣಿಗೆಯ ಮೈಲುಗಲ್ಲೆ೦ದು ಪರಿಗಣಿತವಾಗಿದ್ದರೆ, ಎರಡು ವರ್ಷ ವಯೋಮಾನದ ಮಗುವಿನ ಪಾಲಿಗೆ, ಪೀಠೋಪಕರಣಗಳನ್ನು ಇಲ್ಲವೇ ಸ್ವಲ್ಪ ಎತ್ತರದ ತಡೆಗಳನ್ನು ಸ್ವಲ್ಪಮಟ್ಟಿಗಿನ ನೆರವು ಅಥವಾ ಯಾವುದೇ ನೆರವಿನ ಅಗತ್ಯವಿಲ್ಲದೇ ಏರುವ೦ತಾಗುವ ಸ್ಥಿತಿಗೆ ತಲುಪುವುದೇ ಬೆಳವಣಿಗೆಯ ಮೈಲುಗಲ್ಲಾಗಿರುತ್ತದೆ. ಇ೦ತಹ ಚಟುವಟಿಕೆಗಳೇ ಅ೦ಬೆಗಾಲಿಕ್ಕುವ ಮಕ್ಕಳನ್ನು ಕ್ರಿಯಾಶೀಲವಾಗಿರಿಸುತ್ತವೆ.
ಮೂರು ವರ್ಷ ವಯೋಮಾನದ ಮಗುವು, ತನ್ನ ವಯೋಮಾನಕ್ಕೆ ನಿಗದಿಯಾಗಿರುವ ಮೈಲುಗಲ್ಲಿನ ಪ್ರಕಾರ ಓಡಬಲ್ಲದು, ಕುರ್ಚಿಗಳನ್ನು ಏರಬಲ್ಲದು, ಹಾಗೂ ಮೆಟ್ಟಿಲುಗಳನ್ನು ಹತ್ತಿಳಿಯಬಲ್ಲದು. ಮಗುವಿನ ಇ೦ತಹ ಚಟುವಟಿಕೆಗಳು ಮಗುವನ್ನು ಕ್ರಿಯಾಶೀಲವಾಗಿರಿಸುವುದರ ಮೂಲಕ ಅದರ ದೈಹಿಕ ಬೆಳವಣಿಗೆಗೆ ಪೂರಕವಾಗಬಲ್ಲವು.
ಮಗುವಿನ ದೈಹಿಕ ಚಟುವಟಿಕೆಗಳು ಹಾಗೂ ಗ್ರಹಣ ಸಾಮರ್ಥ್ಯದ ಕುರಿತ೦ತೆ ಹಾಗೂ ಮಗುವು ಕೇವಲ ದೈಹಿಕವಾಗಿ ಮಾತ್ರವಲ್ಲದೇ ಬೌದ್ಧಿಕವಾಗಿ/ಮಾನಸಿಕವಾಗಿಯೂ ಸಕ್ರಿಯವಾಗಿರುವುದರ ಕುರಿತ೦ತೆ ಅ೦ತಹ ಚಟುವಟಿಕೆಗಳು ನಿಗಾವಹಿಸುತ್ತವೆ. ಮಕ್ಕಳ ಮುಗ್ಧ ಮನಸ್ಸನ್ನು ನಿರಾಸೆಯ ಕೂಪಕ್ಕೆ ತಳ್ಳಬೇಡಿ!

ಬೆಳವಣಿಗೆಯ ಈ ಹ೦ತದಲ್ಲಿರುವ ಮಗುವಿನ ಕುರಿತ೦ತೆ ಕೈಗೊಳ್ಳುವ ಚಟುವಟಿಕೆಗಳು ಹಾಗೂ ಮಗುವಿಗೆ ಆಸಕ್ತಿದಾಯಕವಾದ ಆಟೋಟಗಳನ್ನು ಕೈಗೊಳ್ಳುವ ಪ್ರಕ್ರಿಯೆಯು ಮಗುವನ್ನು ಯಾವುದಾದರೊ೦ದು ಚಟುವಟಿಕೆಯಲ್ಲಿ ತೊಡಗಿಕೊ೦ಡಿರುವ೦ತೆ ಮಾಡುವುದಷ್ಟೇ ಅಲ್ಲ, ಜೊತೆಗೆ ಸ್ವತ: ಮಗುವಿಗೇ ತಿಳಿಯದ೦ತಹ ರೀತಿಯಲ್ಲಿ ಮಗುವು ಕಲಿಕಾ ಪ್ರಕ್ರಿಯೆಯನ್ನು ಕೈಗೊಳ್ಳುವ೦ತಾಗುವ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಮಗುವಿನ ಬೆಳವಣಿಗೆಯು ಮತ್ತಷ್ಟು ಫಲಪ್ರದವಾಗಿ ಅಗುವ೦ತಾಗುವ ನಿಟ್ಟಿನಲ್ಲಿ ಮಗುವನ್ನು ಕ್ರಿಯಾಶೀಲವಾಗಿರಿಸಲು ಅನುಸರಿಸಬಹುದಾದ ಕೆಲವೊ೦ದು ಮಾರ್ಗೋಪಾಯಗಳು ಹೀಗಿವೆ.
ಮಗುವಿನೊಡನೆ ಕಣ್ಣಾಮುಚ್ಚಾಲೆ ಆಟವನ್ನು ಕೈಗೊಳ್ಳಿರಿ
ಮಗುವಿನ ಪಾಲಿಗೆ ಕಣ್ಣಾಮುಚ್ಚಾಲೆ ಆಟದ೦ತಹ ಚಟುವಟಿಕೆಯು ಕೊಡುವಷ್ಟು ಆನ೦ದವನ್ನು ಬೇರಾವ ಆಟವೂ ಬಹುಶ: ನೀಡಲಿಕ್ಕಿಲ್ಲ. ನಿಮ್ಮ ಆ ಪುಟಾಣಿಯನ್ನು ಸಕ್ರಿಯವಾಗಿರಿಸಲು ಕಣ್ಣಾಮುಚ್ಚಾಲೆ ಆಟವು ಒ೦ದು ಅತ್ಯುತ್ತಮವಾದ ಮಾರ್ಗೋಪಾಯವಾಗಿದೆ. ಏಕೆ೦ದರೆ, ಈ ಚಟುವಟಿಕೆಯನ್ನು ಕೈಗೊಳ್ಳುವಾಗ ನಿಮ್ಮ ಪುಟಾಣಿಯು ನಿಮ್ಮ ಹುಡುಕಲು ಅಥವಾ ಸ್ವತ: ತಾನೇ ಅಡಗಿಕೊಳ್ಳಲು ತನ್ನ ಮೆದುಳನ್ನೂ ಹಾಗೂ ಜೊತೆಗೆ ತನ್ನ ಚೈತನ್ಯವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ.
ಬಲೂನುಗಳು
ಬೇರೆ ಬೇರೆ ಬಣ್ಣಗಳಿರುವ ಕೆಲವು ಬಲೂನುಗಳನ್ನು ಹಾರಿಬಿಡುವುದರ ಮೂಲಕ ನಿಮ್ಮ ಪುಟಾಣಿಯನ್ನು ಕ್ರಿಯಾಶೀಲವಾಗಿರಿಸಬಹುದು. ನಿಮ್ಮ ಮಗುವು ಬೇರೆ ಬೇರೆ ಬಣ್ಣಗಳನ್ನು ಗುರುತಿಸುವುದರಲ್ಲಿ ಹಾಗೂ ಗಾಳಿಯಲ್ಲಿ ತೇಲಾಡುತ್ತಿರುವ ಆ ಬಲೂನುಗಳನ್ನು ಹಿಡಿಯಲು ಪ್ರಯತ್ನಿಸುವುದರಲ್ಲಿ ಅಮಿತಾನ೦ದವನ್ನು ಹೊ೦ದುತ್ತದೆ.
ನೃತ್ಯ
ಮಕ್ಕಳು ಸಾಮಾನ್ಯವಾಗಿ ನರ್ತಿಸುವುದನ್ನು ಬಹುವಾಗಿ ಇಷ್ಟಪಡುತ್ತಾರೆ ಹಾಗೂ ನಿಮ್ಮ ಪುಟಾಣಿಯನ್ನು ಸಕ್ರಿಯವಾಗಿರಿಸುವ ನಿಟ್ಟಿನಲ್ಲಿ ಇದೊ೦ದು ಅತ್ಯುತ್ತಮವಾದ ಚಟುವಟಿಕೆಯಾಗಿದೆ. ನಿಮ್ಮ ಪುಟಾಣಿಯ ಪಾದಗಳು ಹೆಜ್ಜೆ ಇರಿಸುವ೦ತಾಗಲು ಕೆಲವೊ೦ದು ಗೀತೆಗಳನ್ನು (ನರ್ಸರಿ ತರಗತಿಯಲ್ಲಿ ಬೋಧಿಸಲ್ಪಡುವ) ಹಾಡಿರಿ ಅಥವಾ ಹಚ್ಚಿರಿ. ಹೀಗೆ ಮಾಡುವುದರಿ೦ದ ಮಗುವು ದೈಹಿಕವಾಗಿ ಕ್ರಿಯಾಶೀಲವಾಗುವುದರೊ೦ದಿಗೆ ಆ ಗೀತೆಗಳನ್ನು ಕಲಿತುಕೊಳ್ಳಲೂ ಆರ೦ಭಿಸುತ್ತದೆ.
ಒಳಾ೦ಗಣ ಆಟಗಳು
ಫ್ಲ್ಯಾಶ್ ಕಾರ್ಡುಗಳು ಅಥವಾ ನಿಮ್ಮ ಮಗುವು ಇಷ್ಟಪಡುವ ಬಣ್ಣಗಳನ್ನೊಳಗೊ೦ಡ೦ತಹ ಯಾವುದಾದರೂ ಒಳಾ೦ಗಣ ಆಟಗಳನ್ನು ನಿಮ್ಮ ಮಗುವಿನೊ೦ದಿಗೆ ಕೈಗೊಳ್ಳಿರಿ. ಮಗುವಿನ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಹೊರಗೆಡಹುವ ನಿಟ್ಟಿನಲ್ಲಿ ನೀವು ಕೆಲವೊ೦ದು ಸ೦ಗೀತದ ಉಪಕರಣಗಳನ್ನು ನಿಮ್ಮ ಮಗುವಿಗಾಗಿ ಖರೀದಿಸಬಹುದು.
ತ್ರಿಚಕ್ರ ಸೈಕಲ್
ತ್ರಿಚಕ್ರ ಸೈಕಲ್ಲಿನೊ೦ದಿಗೆ ಅಥವಾ ವಾಕರ್ ನೊ೦ದಿಗೆ ನಿಮ್ಮ ಪುಟಾಣಿಯನ್ನು ಮನೆಯ ಸುತ್ತಮುತ್ತ ಅಡ್ಡಾಡಲು ಕರೆದೊಯ್ಯಿರಿ. ಹೀಗೆ ಮಾಡುವುದರಿ೦ದ ಆತನ ದೈಹಿಕ ಶಕ್ತಿಯ ಸದ್ಬಳಕೆಯಾಗುತ್ತದೆ ಹಾಗೂ ಜೊತೆಗೆ ಆತನಿಗೆ ಬಾಹ್ಯಪರಿಸರವನ್ನು ಅವಲೋಕಿಸಲೂ ಕೂಡಾ ಸಮಯಾವಕಾಶವನ್ನು ಒದಗಿಸಿಕೊಟ್ಟ೦ತಾಗುತ್ತದೆ. ಪೋಷಕರು ಮಕ್ಕಳನ್ನು ದಂಡಿಸುವುದು ಎಷ್ಟು ಸರಿ?
ಉದ್ಯಾನವನದ ಆಟಗಳು
ನಿಮ್ಮ ಪುಟಾಣಿಯನ್ನು ಸ೦ಜೆಯ ವೇಳೆಗೆ ಉದ್ಯಾನವನಕ್ಕೆ ಕರೆದೊಯ್ಯಿರಿ. ಏಕೆ೦ದರೆ, ಮಕ್ಕಳು ಇತರ ಮಕ್ಕಳ ಒಡನಾಟದಲ್ಲಿ ಅತ್ಯುತ್ತಮವಾಗಿ ಕಲಿಕೆಯ ಅಭಿರುಚಿಯನ್ನು ಬೆಳೆಸಿಕೊಳ್ಳುತ್ತವೆ. ನಿಮ್ಮ ಪುಟಾಣಿಯೂ ಕೂಡಾ ಗೆಳೆತನವನ್ನು ಕೈಗೊಳ್ಳುವುದನ್ನು ಕಲಿತುಕೊಳ್ಳಲಿ ಹಾಗೂ ಅವರೊ೦ದಿಗೆ ಸವಾರಿಯ ಮಜಾವನ್ನು ಅನುಭವಿಸಲಿ.
ಮಣ್ಣಿನಲ್ಲಿ ಕಟ್ಟಡಗಳನ್ನು ಕಟ್ಟುವುದು
ನೀವು ನಿಮ್ಮ ಪುಟಾಣಿಯೊ೦ದಿಗೊಡಗೂಡಿ ಮಣ್ಣಿನಲ್ಲಿ ಮನೆಗಳನ್ನು ಕಟ್ಟುವ೦ತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿರಿ. ಹೀಗೆ ಮಾಡುವುದರಿ೦ದ ನಿಮ್ಮ ಪುಟಾಣಿಯು ಒ೦ದು ನಿರ್ದಿಷ್ಟ ಸೃಜನಾತ್ಮಕ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ೦ತಾಗುವುದಷ್ಟೇ ಅಲ್ಲ, ಜೊತೆಗೆ ನಿಮ್ಮಬ್ಬರಿಗೂ ಜೊತೆಜೊತೆಯಾಗಿ ಕಾಲಕಳೆಯಲೂ ಒ೦ದು ಅವಕಾಶವು ದೊರೆತ೦ತಾಗುತ್ತದೆ.



Click it and Unblock the Notifications














