Latest Updates
-
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ
ಚಿಣ್ಣರ ಪಾಲಿನ ಸ್ವರ್ಗವೆಂದೆನಿಸಿರುವ ಬೇಸಿಗೆ ಶಿಬಿರಗಳು
ನಿಮ್ಮ ಮಕ್ಕಳು ಈ ವರ್ಷ ಏಕೆ ಬೇಸಿಗೆ ಶಿಬಿರಗಳಿಗೆ ಹೋಗಲು ಆಯ್ಕೆ ಮಾಡಿಕೊಂಡರು ಎಂದು ನಿಮಗೆ ಅಚ್ಚರಿಯಾಗುತ್ತಿದೆಯೇ? ಇರಲಿ, ಆದರೆ ನಿಮ್ಮ ಮಕ್ಕಳು ಈ ಬೇಸಿಗೆಯನ್ನು ಉಪಯೋಗಕಾರಿಯಾಗಿ ಕಳೆಯಲು ಆಯ್ಕೆ ಮಾಡಿಕೊಂಡಾಗ, ನೀವು ಮರು ಯೋಚಿಸದೆ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವುದು ಒಳ್ಳೆಯದು.
ಬೇಸಿಗೆ ಶಿಬಿರಗಳು ಮಕ್ಕಳಿಗೆ ತರಗತಿಯಲ್ಲಿ ಅಥವಾ ಮನೆಯಲ್ಲಿ ಹೇಳಿ ಕೊಡುವ ವಿಚಾರಗಳನ್ನು ತಿಳಿಸುವುದಿಲ್ಲ. ಆದರೂ ಸಹ ಇವುಗಳು ತಮ್ಮದೇ ಆದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳು ಕೆಲವೊಂದು ನಿರ್ದಿಷ್ಟ ಕಲೆಗಳನ್ನು ಕಲಿತುಕೊಳ್ಳುತ್ತಾರೆ. ಸಾಮಾನ್ಯವಾಗಿ ಮಕ್ಕಳು ಇಡೀ ದಿನವನ್ನು ತರಗತಿಗಳಲ್ಲಿ ಕಳೆಯುತ್ತಾರೆ. ಹೊರಗೆ ಹೋಗಿ ಆಟವಾಡಲು ಅವರಿಗೆ ಸ್ವಲ್ಪ ಸಮಯ ಮಾತ್ರ ದೊರೆಯುತ್ತದೆ.
ಬೆಟ್ಟ, ಗುಡ್ಡ ಮತ್ತು ಪ್ರಾಕೃತಿಕವಾಗಿ ಸುಂದರವಾಗಿರುವ ಸ್ಥಳದಲ್ಲಿ ನಡೆಯುವ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳುಹಿಸಿದರೆ, ಅವರಿಗೆ ಕಲಿಯಲು ಹೆಚ್ಚಿನ ಅವಕಾಶ ದೊರೆಯುತ್ತದೆ. ಬೇಸಿಗೆ ಶಿಬಿರಗಳಲ್ಲಿ ಒದಗಿಸುವ ಆಹಾರದಿಂದ ಹಿಡಿದು ಚಟುವಟಿಕೆಗಳವರೆಗೆ ಮಕ್ಕಳಿಗೆ ಪ್ರತಿಯೊಂದು ವಿಚಾರದಲ್ಲಿಯೂ ಕಲಿಯಲು ಹಲವಾರು ಹೊಸ ಅಂಶಗಳು ದೊರೆಯುತ್ತವೆ.

ಹಾಗೆಂದು ಎಲ್ಲಾ ಬೇಸಿಗೆ ಶಿಬಿರಗಳು ನಿಮ್ಮ ಮಗುವಿಗೆ ಪೂರಕವಲ್ಲ. ಅದನ್ನು ನೀವು ಮತ್ತು ನಿಮ್ಮ ಮಗು ಇಬ್ಬರೂ ಸೇರಿ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ಸುರಕ್ಷಿತವಾಗಿ ತೋರುವ ಮತ್ತು ಅನುಭವವನ್ನು ಹೊಂದಿರುವ ಶಿಬಿರದ ವ್ಯವಸ್ಥಾಪಕರ ಬಳಿ ನಿಮ್ಮ ಮಗುವನ್ನು ಬಿಡುವುದು ಒಳ್ಳೆಯ ಔತಣ. ಬನ್ನಿ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಮಕ್ಕಳಿಗೆ ದೊರೆಯುವ ಪ್ರಯೋಜನಗಳು ಯಾವುವು ಎಂದು ತಿಳಿದುಕೊಂಡು ಬರೋಣ.
ಚಟುವಟಿಕೆಗಳು
ಈಜು, ಸೈಕ್ಲಿಂಗ್, ಓಟ ಅಥವಾ ಬೆಟ್ಟ ಹತ್ತುವುದು ಮುಂತಾದ ಚಟುವಟಿಕೆಗಳು ಮಕ್ಕಳಲ್ಲಿ ಫಿಟ್‌ನೆಸ್ ಬೆಳೆಯುವಂತೆ ಮಾಡುತ್ತವೆ. ಟಿವಿಗಳ ಮುಂದೆ ಬೇಸಿಗೆಯನ್ನು ಕಳೆಯುವ ಬದಲಿಗೆ ಈ ಚಟುವಟಿಗಳಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಮಕ್ಕಳಿಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.
ಆತ್ಮ ವಿಶ್ವಾಸದ ಮಟ್ಟ
ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಇತರರ ಜೊತೆಗೆ ಬೆರೆಯುವ ಮೂಲಕ ಸಂವಹನ ಕೌಶಲ್ಯವನ್ನು ಕಲಿಯುತ್ತಾರೆ. ಅವರಲ್ಲಿ ಇದರಿಂದ ಸಾಮಾಜೀಕರಣ ಬೆಳೆಯುತ್ತದೆ. ಹೀಗೆ ಶಿಬಿರವು ಅವರಲ್ಲಿ ಆತ್ಮ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ.
ಸ್ನೇಹಿತರು ದೊರೆಯುತ್ತಾರೆ
ಬೇಸಿಗೆ ಶಿಬಿರಗಳು ನಿಮ್ಮ ಮಕ್ಕಳಿಗೆ ಹೊಸ ಸ್ನೇಹಿತರನ್ನು ಒದಗಿಸುವ ಸ್ಥಳಗಳಾಗಿರುತ್ತವೆ. ಏಕೆಂದರೆ ಇಲ್ಲಿ ನಿಮ್ಮ ಮಗುವಿನಂತೆಯೇ ಸಮಾನಾಸಕ್ತಿ ಇರುವ ಮಕ್ಕಳು ಬಂದಿರುತ್ತಾರೆ. ಹೀಗೆ ಸಹಜವಾಗಿ ನಿಮ್ಮ ಮಕ್ಕಳಿಗೆ ಸ್ನೇಹಿತರಾಗುತ್ತಾರೆ.
ಸ್ವಾತಂತ್ರ್ಯ
ಇಲ್ಲಿ ನಿಮ್ಮ ಮಕ್ಕಳು ಸ್ವತಂತ್ರವಾಗಿ ಬದುಕುವುದನ್ನು ಕಲಿಯುತ್ತಾರೆ. ನಿಮ್ಮ ಮಕ್ಕಳು ಶಿಬಿರದಲ್ಲಿ ಇದ್ದಾಗ, ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಹೀಗೆ ಅವರು ದೊಡ್ಡವರಾದ ಮೇಲೆ ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳುತ್ತಾರೆ.



Click it and Unblock the Notifications











