Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಪೋಷಕರೇ, ಮಕ್ಕಳನ್ನು ಸಿಹಿ ತಿನಿಸಿನಿಂದ ದೂರವಿರಿಸಿ
ಸಾಮಾನ್ಯವಾಗಿ ಮಕ್ಕಳಿರುವ ಮನೆಗೆ ಹೋಗುವಾಗ ಎಲ್ಲರೂ ಚಾಕಲೇಟು ಅಥವಾ ಸಿಹಿತಿನಿಸುಗಳನ್ನು ಉಡುಗೊರೆಯ ರೂಪದಲ್ಲಿ ಕೊಂಡೊಯ್ಯುತ್ತಾರೆ. ಏಕೆಂದರೆ ಸಿಹಿ ಮಕ್ಕಳಿಗೆ ತುಂಬಾ ಇಷ್ಟ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿಗೆ ಸರಿಯಾಗಿ ಮಿತಿಮೀರಿದ ಸಿಹಿಯ ಸೇವನೆ ಮಕ್ಕಳಿಗೂ ಹಿತವಲ್ಲ. ಆದರೆ ಸಿಹಿಯ ರುಚಿ ಒಮ್ಮೆ ನಾಲಿಗೆ ಹತ್ತಿದರೆ ಮಕ್ಕಳು ಸಿಹಿ ಬೇಕೇ ಬೇಕು ಎಂದು ಹಠ ಹಿಡಿಯುತ್ತವೆ. ಇದನ್ನೇ ಸಿಹಿತಿನಿಸಿನ ವ್ಯಸನ ಎಂದೂ ಕರೆಯಬಹುದು.
ಅಷ್ಟಕ್ಕೂ ಸಿಹಿ ತಿಂದರೆ ಏನಾಗುತ್ತದೆ? ಮಕ್ಕಳು ತಿನ್ನದೇ ಇನ್ನಾರು ತಿನ್ನಬೇಕು? ಎಂದು ಹಿರಿಯರೇ ಮಕ್ಕಳ ಪರವಹಿಸಿ ಮಾತನಾಡುವುದು ಮಕ್ಕಳಿಗೆ ಇನ್ನಷ್ಟು ಸಿಹಿ ತಿನ್ನಲು ಇಂಬುಕೊಟ್ಟಂತಾಗುತ್ತದೆ. ಅತಿ ಹೆಚ್ಚು ಎಂದರೆ ಹಲ್ಲು ಹುಳುಕಾಗಿ ಕಾಣತೊಡದಾಗ ಮಾತ್ರ ಹೆಚ್ಚಿನವರು ಈ ಮಗುವಿಗೆ ಹೆಚ್ಚು ಸಿಹಿ ಕೊಡುವುದು ಬೇಡ, ಈಗಾಗಲೇ ಹಲ್ಲುಗಳೆಲ್ಲಾ ಹುಳುಕಾಗಿವೆ ಎಂದು ಅನುಕಂಪ ತೋರಿಯಾರು.
ಮಕ್ಕಳು ಸಿಹಿತಿನಿಸುಗಳಿಗೆ ವ್ಯಸನಿಗಳಾಗಲು ಹಿರಿಯರ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಏಕೆಂದರೆ ಸಿಹಿಯನ್ನು ಹೆಚ್ಚು ತಿನ್ನುವುದರಿಂದ ದೇಹದ ಒಳಗಾಗುವ ತೊಂದರೆಗಳು ಕಣ್ಣಿಗೆ ಕಾಣದೇ ಇರುವುದರಿಂದ ಮತ್ತು ಮಕ್ಕಳಿಗೆ ಇಷ್ಟ ಎಂಬ ಕಾರಣದಿಂದ ಹಿರಿಯರೇ ಪರೋಕ್ಷವಾಗಿ ಈ ವ್ಯಸನಕ್ಕೆ ಕಾರಣರಾಗುತ್ತಾರೆ.
ಆದರೆ ವಾಸ್ತವವಾಗಿ ಸಿಹಿತಿಂಡಿ ಹಾಗೂ ಮುಖ್ಯವಾಗಿ ಸಕ್ಕರೆ ಮಕ್ಕಳಿಗೂ ಹಿರಿಯರಿಗೂ ಒಂದು ಮಿತಿ ಮೀರಿದರೆ ಅಪಾಯಕಾರಿಯೇ. ಆದ್ದರಿಂದ ಆದಷ್ಟೂ ಕಡಿಮೆ ಸಿಹಿ ತಿನ್ನುವುದು ಉತ್ತಮ. ಮಕ್ಕಳು ಈಗಾಗಲೇ ವ್ಯಸನಿಗಳಾಗಿದ್ದರೆ ಅವರನ್ನು ಸರಿದಾರಿಗೆ ತರಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವಾಗಲಿದೆ: ಸಿಹಿ ತಿನ್ನುವ ಅದಮ್ಯ ಬಯಕೆ-ಕೊಂಚ ಮಿತವಾಗಿರಲಿ!

ನಿಗದಿತ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಿಹಿ ನೀಡಿ
ನಿಮ್ಮ ಮಕ್ಕಳನ್ನು ಬಲವಂತವಾಗಿ ಸಕ್ಕರೆಯಿಂದ ಬಿಡಿಸಲು ಯತ್ನಿಸಿದಷ್ಟೂ ಮಕ್ಕಳು ಬೇರೆ ಮೂಲಗಳಿಂದ ಇನ್ನಷ್ಟು ಹೆಚ್ಚು ಸಕ್ಕರೆಯನ್ನು ತಿನ್ನತೊಡಗುತ್ತಾರೆ. ಆದ್ದರಿಂದ ಮಕ್ಕಳಿಗೆ ನಯವಾಗಿ ತಿಳಿಸಿ ನಿಯಮಿತ ಸಮಯದಲ್ಲಿಯೇ ನಿಗದಿತ ಪ್ರಮಾಣ (ಚಿಕ್ಕ ಪ್ರಮಾಣ)ದಲ್ಲಿ ಮಾತ್ರ ಸಿಹಿಯನ್ನು ನೀಡಿ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತೆ ಮನವೊಲಿಸಿ.

ಕತ್ತರಿಸುವ ಗಾತ್ರ ಚಿಕ್ಕದಾಗಿರಲಿ
ಮನೆಗೆ ಕೇಕ್ ಅಥವಾ ಇತರ ಸಿಹಿತಿಂಡಿಗಳನ್ನು ತಂದರೆ ಅದನ್ನು ಸಾಧ್ಯವಾದಷ್ಟು ಚಿಕ್ಕದಾಗಿ ಕತ್ತರಿಸಿ ಮಕ್ಕಳಿಗೆ ಒಂದು ಪಾಲು ಮಾತ್ರ ನೀಡಿ. ಇದು ತೀರಾ ಚಿಕ್ಕದಾಗಿಯೂ ಇರಬಾರದು! ಆಗ ಮಕ್ಕಳು ಎರಡು ತುಂಡು ಬೇಕು ಎಂದು ಹಠ ಹಿಡಿಯುತ್ತವೆ. ಮಕ್ಕಳಿಗೆ ಇಷ್ಟೇ, ಇನ್ನುಳಿದವು ಹಿರಿಯರಿಗೆ ಎಂದು ನಯವಾಗಿ ತಿಳಿಸಿ.

ಸಂಭ್ರಮಿಸುವ ನೆವಕ್ಕೆ ಸಿಹಿ ಬೇಡ
ಸಾಮಾನ್ಯವಾಗಿ ಯಾವುದೇ ಶುಭಸುದ್ದಿ ಅಥವಾ ಸಂಭ್ರಮವನ್ನು ಸಿಹಿತಿನ್ನುವ ಮೂಲಕ ಆಚರಿಸುತ್ತೇವೆ. ಅಂತೆಯೇ ಮಕ್ಕಳೂ ಯಾವುದೇ ಶುಭಸುದ್ದಿ ತಿಳಿದರೂ ಸಿಹಿಯನ್ನೇ ನಿರೀಕ್ಷಿಸುತ್ತಾರೆ. ಬದಲಿಗೆ ಆರೋಗ್ಯಕರವಾದ ಬೇರಾವುದಾದರೂ ತಿಂಡಿಯನ್ನು ತಯಾರಿಸಿ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳನ್ನು ಸುಮ್ಮನಾಗಿಸಲು ಸಹಾ ಸಿಹಿಯ ಲಂಚವನ್ನು ನೀಡುತ್ತೇವೆ. ಇದು ಅತ್ಯಂತ ದೊಡ್ಡ ತಪ್ಪು. ಇದರ ರುಚಿ ಹತ್ತಿದ ಮಕ್ಕಳು ಸಿಹಿ ಪಡೆಯಲೆಂದೇ ಸುಳ್ಳು ನೆಪ ತೆಗೆದು ವರಾತ ತೆಗೆಯುತ್ತವೆ. ಇದರ ಬದಲಿಗೆ ಹೊರಗೆ ಕರೆದುಕೊಂಡು ಹೋಗುವುದು, ಮುಂದಿನ ವಾರ ಪಾರ್ಕಿಗೆ ಹೋಗುವುದು, ಜೋಕಾಲಿ ಆಟದಲ್ಲಿ ನಾಲ್ಕು ಸುತ್ತು ಹೆಚ್ಚು ಜೀಕುವುದು ಮೊದಲಾದ ಪ್ರಲೋಭನೆಗಳನ್ನು ಒಡ್ಡಿ.

ನೀವೂ ಸಿಹಿಯಿಂದ ದೂರವಿರಿ
ನೆನಪಿಡಿ, ನಿಮ್ಮ ಮಕ್ಕಳು ನಿಮ್ಮ ಅಭ್ಯಾಸಗಳನ್ನೇ ಅನುಸರಿಸುತ್ತಾರೆ. ಒಂದು ವೇಳೆ ಅರಿವಿಲ್ಲದೇ ನೀವೂ ಸಿಹಿತಿನಿಸಿನ ವ್ಯಸನಿಯಾಗಿದ್ದರೆ ಸ್ವಾಭಾವಿಕವಾಗಿ ನಿಮ್ಮ ಮಗುವೂ ಸಿಹಿಗೆ ವ್ಯಸನಿಯಾಗಿಯೇ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಬುದ್ದಿ ಹೇಳುವ ಮುನ್ನ ನಿಮ್ಮ ವ್ಯಸನವನ್ನು ಬಲವಂತವಾಗಿಯಾದರೂ ಹತ್ತಿಕ್ಕಿಕೊಳ್ಳಿ. ಇದು ನಿಮ್ಮ ಆರೋಗ್ಯಕ್ಕೇ ಒಳ್ಳೆಯದು.

ಸಕ್ಕರೆಯ ಪ್ರಭಾವದ ಬಗ್ಗೆ ತಿಳಿಸಿ ಹೇಳಿ
ಅತಿ ಹೆಚ್ಚು ಸಕ್ಕರೆ ತಿನ್ನುವುದರಿಂದ ಏನು ತೊಂದರೆಯಾಗುತ್ತದೆ ಎಂಬ ಬಗ್ಗೆ ನಿಮ್ಮ ಮಕ್ಕಳಿಗೆ ನಯವಾಗಿ ತಿಳಿಸಿಹೇಳಿ. ಮಕ್ಕಳಿಗೆ ಇದರ ಪರಿಣಾಮ ಒಮ್ಮೆಲೇ ಆಗದೇ ಇದ್ದರೂ ಪಾಠವನ್ನು ಹಲವಾರು ಬಾರಿ ಮನನ ಮಾಡುವುದರಿಂದ ನಿಧಾನವಾಗಿಯಾದರೂ ಮಕ್ಕಳು ಈ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಾರೆ. ನೀತಿ ಪಾಠಗಳು ಇದಕ್ಕೆ ಅತ್ಯುತ್ತಮವಾಗಿವೆ. ಈಸೋಪನ ಕಥೆಗಳಲ್ಲಿ ಬರುವ ನೀತಿಗಳಲ್ಲಿ ಅತಿಯಾಸೆಯಿರುವ ಕಥೆಗಳನ್ನು ಆರಿಸಿ ಕಥೆಯಲ್ಲಿ ಬರುವ ಆಸೆಯನ್ನು ಸಕ್ಕರೆಗೆ ಬದಲಿಸಿ ಹೆಣೆಯುವ ಕಥೆ ನಿಜವಾಗಿಯೂ ಮಕ್ಕಳಿಗೆ ನಾಟುತ್ತದೆ.

The American Heart Association ಪ್ರಕಾರ
ಪ್ರತಿದಿನ ಸೇವಿಸಲು The American Heart Association (AHA) ಸಲಹೆ ಮಾಡಿರುವ ಸಕ್ಕರೆಯ ಪ್ರಮಾಣ ಈ ಕೆಳಗಿನಂತಿದೆ
ಮೂರರಿಂದ ನಾಲ್ಕು ವಯಸ್ಸಿನ ಮಕ್ಕಳು: 1,200 ರಿಂದ 1,400 ಕ್ಯಾಲೋರಿ. ಸಕ್ಕರೆಯ ಪ್ರಮಾಣ ಗರಿಷ್ಟ 16 ಗ್ರಾಂ ಪ್ರತಿದಿನಕ್ಕೆ(ಸುಮಾರು ನಾಲ್ಕು ಚಿಕ್ಕ ಚಮಚದಷ್ಟು)
ನಾಲ್ಕರಿಂದ ಎಂಟು ವಯಸ್ಸಿನ ಮಕ್ಕಳು: 1,600 ಕ್ಯಾಲೋರಿ ಬೇಕು. ಆದರೆ ಸಕ್ಕರೆಯ ಪ್ರಮಾಣ ಗರಿಷ್ಟ 12 ಗ್ರಾಂ (ಸುಮಾರು ಮೂರು ಚಿಕ್ಕ ಚಮಚದಷ್ಟು)
ಹೆಚ್ಚಿನ ಕ್ಯಾಲೋರಿಗಳು ಇತರ ಆಹಾರದಿಂದ ಲಭ್ಯವಾಗುತ್ತದೆ.
ಎಂಟರಿಂದ ಸುಮಾರು ಹದಿನಾಲ್ಕು ವರ್ಷದ ಮಕ್ಕಳಿಗೆ: 1,800 ರಿಂದ 2,000 ಕ್ಯಾಲೋರಿ. ಸಕ್ಕರೆಯ ಪ್ರಮಾಣ 20 ರಿಂದ 32 ಗ್ರಾಂ (ಐದರಿಂದ ಎಂಟು ಚಿಕ್ಕ ಚಮಚದಷ್ಟು)
ಹದಿನೈದು ವರ್ಷದ ಮೇಲ್ಪಟ್ಟ ಮಕ್ಕಳ ದೈಹಿಕ ಅಳತೆಯ ಮೇಲೆ ಅಗತ್ಯವೂ ಹೆಚ್ಚುಕಡಿಮೆಯಾಗುತ್ತದೆ.
ವಯಸ್ಕ ಪುರುಷರಿಗೆ: ಪ್ರತಿದಿನ ನೂರೈವತ್ತು ಕ್ಯಾಲೋರಿ (37.5 ಗ್ರಾಂ ಅಥವಾ 9 ಚಿಕ್ಕ ಚಮಚದಷ್ಟು)
ವಯಸ್ಕ ಮಹಿಳೆಯರಿಗೆ:ಪ್ರತಿದಿನ ನೂರು ಕ್ಯಾಲೋರಿ(25 ಗ್ರಾಂ 6 ಚಿಕ್ಕ ಚಮಚದಷ್ಟು).

ಆಘಾತಕಾರಿ ಮಾಹಿತಿ
1) ಒಂದು ಸಾಮಾನ್ಯ ಬಾರ್ ಚಾಕಲೇಟಿನಲ್ಲಿ 78 ಗ್ರಾಂ ಸಕ್ಕರೆ ಇರುತ್ತದೆ.
2) ತೀರಾ ಚಪ್ಪೆ ಎನ್ನುವ ಒಂದು ಸಾಮಾನ್ಯ ಬನ್ ನಲ್ಲಿ ಎರಡೂವರೆ ಗ್ರಾಂ ಸಕ್ಕರೆ ಇರುತ್ತದೆ. ಸಿಹಿ ಬನ್ ನಲ್ಲಿ ಏಳು ಗ್ರಾಂ ಸಕ್ಕರೆ ಇರುತ್ತದೆ
3) ಒಂದು ಚಮಚ ಟೊಮೇಟೊ ಸಾಸ್, ಕೆಚಪ್ ಅಥವಾ ಬೇರೆ ಯಾವುದೇ ಸಿದ್ಧರೂಪದ ದ್ರವಗಳಲ್ಲಿ: ಹದಿನೈದು ಗ್ರಾಂ.



Click it and Unblock the Notifications