Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಹಣದ ಮೌಲ್ಯ, ಉಳಿತಾಯವನ್ನು ಮಕ್ಕಳಿಗೆ ಕಲಿಸುವುದು ಹೇಗೆ?
ಹಣವನ್ನು ಉಳಿಸುವುದನ್ನು ಮಕ್ಕಳಿಗೆ ಕಲಿಸುವುದು ಹೇಗೆ? ಎಂದು ನೀವು ಅಚ್ಚರಿ ಪಡುತ್ತಿದ್ದೀರಾ? ಹೌದು, ನೀವು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಹಣವನ್ನು ಉಳಿತಾಯ ಮಾಡುವುದನ್ನು ಕಲಿಸಲಿಲ್ಲವಾದರೆ,ಮುಂದೆ ಅವರು ಪೋಷಕರು ಕಷ್ಟಪಟ್ಟು ದುಡಿದ ಹಣದಲ್ಲಿ ಖರ್ಚು ಮಾಡಿ ಮಜಾ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು ಬಿಡುತ್ತಾರೆ.
ನಿಮ್ಮ ಮಕ್ಕಳನ್ನು ಮನೆಯ ದೈನಂದಿನ ವಸ್ತುಗಳ ಖರೀದಿಯಲ್ಲಿ ತೊಡಗಿಸುವುದರಿಂದ ಅವರಿಗೆ ಹಣದ ಮಹತ್ವವನ್ನು ತಿಳಿಸಿಕೊಡಬಹುದು. ಇದರ ಜೊತೆಗೆ ಕೇವಲ ಶ್ರಮದಿಂದ ಮಾತ್ರ ಹಣವನ್ನು ಸಂಪಾದಿಸಲು ಸಾಧ್ಯ ಎಂಬುದನ್ನು ಅವರಿಗೆ ತಿಳಿಸಿಕೊಡಿ ಮತ್ತು ಆದ್ದರಿಂದಲೇ ಹಣವನ್ನು ನೋಡಿಕೊಂಡು ಖರ್ಚು ಮಾಡಿ ಎಂದು ತಿಳಿಸುವುದು ತೀರಾ ಅಗತ್ಯ.

ಒಂದು ವೇಳೆ ಮಕ್ಕಳಿಗೆ ನಿಮ್ಮ ಪರಿಕಲ್ಪನೆಯು ಅರ್ಥವಾಗದಿದ್ದರೆ, ಈ ವಿಷಯವನ್ನು ಅವರು ಹಗುರವಾಗಿ ತೆಗೆದುಕೊಂಡರೆ, ಆಗ ನಾವು ಈ ಕೆಳಗೆ ನೀಡಿರುವ ಅಂಶಗಳನ್ನು ಪಾಲಿಸಿ. ಮಕ್ಕಳಿಗೆ ಹಣವನ್ನು ಉಳಿತಾಯ ಮಾಡುವ ಬಗೆಯನ್ನು ತಿಳಿಸಿ. ಒಂದುವೇಳೆ ನಿಮ್ಮ ಬಳಿ ಅತ್ಯುತ್ತಮವಾದ ಉಪಾಯಗಳಿದ್ದಲ್ಲಿ, ಅದನ್ನು ಅನುಷ್ಟಾನಕ್ಕೆ ತನ್ನಿ. ನೀವೆಲ್ಲ ಮಾಡುವುದು ಹಣವನ್ನು ಉಳಿತಾಯ ಮಾಡಲು ತಾನೇ ಸ್ವಲ್ಪ ಶ್ರಮಪಡಿ. ಹಣವನ್ನು ಉಳಿಸುವುದನ್ನು ಮಕ್ಕಳಿಗೆ ಕಲಿಸುವುದು ಹೇಗೆ, ಬನ್ನಿ ನೋಡೋಣ... ಮಗುವಿನ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಪ್ರವೃತ್ತಿ
ಪಾಕೆಟ್ ಮನಿ ನೀಡಿ
ಮಕ್ಕಳಿಗೆ ಹಣವನ್ನು ಉಳಿತಾಯ ಮಾಡುವ ಕಲೆಯನ್ನು ಕಲಿಸಬೇಕೆಂದರೆ, ಅವರಿಗೆ ಮೊದಲು ಖರ್ಚಿಗೆ ಹಣವನ್ನು ನೀಡಿ. ಸುಖಾ ಸುಮ್ಮನೆ ಮಕ್ಕಳಿಗೆ ಹಣವನ್ನು ನೀಡುವ ಬದಲಿಗೆ, ಅವರಿಗೆ ಮನೆಯಲ್ಲಿ ಸ್ವಲ್ಪ ಕೆಲಸ ಮಾಡಿ ಹಣವನ್ನು ಪಡೆಯಲು ಹೇಳಿ. ಗಿಡಗಳಿಗೆ ನೀರು ಹಾಕುವುದು, ಅಡುಗೆ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದು, ಪಾತ್ರೆ ತೊಳೆಯುವುದು, ಸಾಕು ಪ್ರಾಣಿಗಳಿಗೆ ಊಟ ಕೊಡುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ತಿಳಿಸಿ. ಇದಕ್ಕೆ ಸಂಭಾವನೆಯಾಗಿ ಮಕ್ಕಳಿಗೆ ಸ್ವಲ್ಪ ಹಣ ನೀಡಿ, ಇದರಿಂದ ಅವರಿಗೆ ಹಣವು ದೊರೆಯುತ್ತದೆ, ಖುಷಿ ಸಿಗುತ್ತದೆ ಜೊತೆಗೆ ಹಣದ ಬೆಲೆ ಅವರಿಗೆ ಗೊತ್ತಾಗುತ್ತದೆ.
ಪ್ರಚೋದನೆಗಳನ್ನು ನಿಭಾಯಿಸುವುದು
ನಿಮ್ಮ ಮಗು ಕೈಗೆ ಹಣ ಬಂದ ಕೂಡಲೆ ಅದು ಕ್ಯಾಂಡಿಗಳನ್ನು ಖರೀದಿಸಲು ಅಂಗಡಿಗೆ ತೆರಳುತ್ತದೆ. ಆಗ ನಿಮ್ಮ ಮಗುವಿಗೆ ಹಣದ ಮಹತ್ವವನ್ನು ಹೇಳಲು ಸರಿಯಾದ ಸಮಯವಾಗಿರುತ್ತದೆ. ನಿಮ್ಮ ಮಗುವನ್ನು ಆಗ ಕುಳ್ಳಿರಿಸಿಕೊಂಡು ಹಣದ ಬಗ್ಗೆ ಅರಿವು ಮೂಡಿಸಿ. ಯಾವಾಗಲು ಅರ್ಧ ಹಣವನ್ನು ಉಳಿಸಿ ಇಟ್ಟು, ಇನ್ನರ್ಧ ಹಣವನ್ನು ಮಾತ್ರ ಖರ್ಚು ಮಾಡಲು ತಿಳಿಸಿ. ಒಟ್ಟಾರೆಯಲ್ಲಿ ಉಳಿತಾಯದ ಕಲೆಯನ್ನು ಕರಗತ ಮಾಡಿಸಿ.
ಗುರಿಗಳನ್ನು ನೀಡಿ
ಮಕ್ಕಳಿಗೆ ಹಣ ಉಳಿಸುವುದನ್ನು ಕಲಿಸುವುದು ಹೇಗೆ? ಕೆಲವೊಂದು ಪ್ರಕ್ರಿಯೆಗಳನ್ನು ಮಕ್ಕಳಿಗೆ ತಿಳಿಸಿ, ಅದನ್ನು ಪ್ರತಿ ವಾರ, ರಜಾದಿನಗಳಲ್ಲಿ ಪುನರಾವರ್ತನೆ ಮಾಡಲು ತಿಳಿಸಿ. ಇದರಿಂದ ಅವರು ಸಣ್ಣ ಸಣ್ಣ ಕೆಲಸ ಮಾಡುವುದನ್ನು ಕಲಿಯುತ್ತಾರೆ. ಜೊತೆಗೆ ಹಣ ಸಂಪಾದಿಸುವುದನ್ನು ಕಲಿಯುತ್ತಾರೆ. ಗುರಿಗಳನ್ನು ನೀಡುವುದು ಹೇಗೆ? ನಿಮ್ಮ ಮಗುವಿಗೆ ಹಣ ಉಳಿಸುವ ಬಗೆಯನ್ನು ತಿಳಿಸಿ ಕೊಡಿ. ಒಂದು ಸಣ್ಣ ಉಡುಗೊರೆಗಳನ್ನು ನೀಡಿ. ಈ ಮೂಲಕ ನಿಮ್ಮ ಮಗುವಿಗೆ ಉಡುಗೊರೆಯ ನೆಪದಲ್ಲಿ ಉಳಿತಾಯದ ಕಲೆ ಕರಗತವಾಗುತ್ತದೆ. ಆಗ ಅವರು ಕ್ಯಾಂಡಿಯ ಮೊರೆ ಹೋಗುವುದನ್ನು ನಿಲ್ಲಿಸುತ್ತಾರೆ.



Click it and Unblock the Notifications