Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವನ್ನು ನರ್ಸರಿಗೆ ಸೇರಿಸುವ ಮುನ್ನ ಇತ್ತ ಗಮನಿಸಿ!
ಮಗುವನ್ನು ನರ್ಸರಿಗೆ ಸೇರಿಸುವುದು ಸಿಕ್ಕಾಪಟ್ಟೆ ಸವಾಲಿನ ಕೆಲಸವಾಗಿರುತ್ತದೆ. ನರ್ಸರಿಯು ಮಗುವಿನ ಮೊದಲ ಔಪಚಾರಿಕ ಕಲಿಕಾ ಸ್ಥಳವಾಗಿರುವುದರಿಂದ ಅದಕ್ಕೆ ಅಷ್ಟೊಂದು ಮಾನ್ಯತೆ. ಜೊತೆಗೆ ತನ್ನ ಪೋಷಕರನ್ನು ಬಿಟ್ಟು ಮಗು ಮೊದಲ ಬಾರಿಗೆ ಸ್ವತಂತ್ರವಾಗಿ ಹೋಗಿ-ಬರುವ ಸ್ಥಳವು ಇದು ಆಗಿರುವುದರಿಂದ ಇದಕ್ಕೆ ಮತ್ತಷ್ಟು ಬೆಲೆಯನ್ನು ತಂದುಕೊಟ್ಟಿದೆ. ಎಲ್ಲಾ ನರ್ಸರಿಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂತಹ ಮತ್ತು ಮನೋರಂಜನೆಯನ್ನು ನೀಡುವ ಚಟುವಟಿಕೆಗಳಿಗೆ ಅವಕಾಶವಿರುತ್ತದೆ.
ನರ್ಸರಿಯಲ್ಲಿ ಮಗುವು ಪ್ರಪಂಚವನ್ನು ತಾನೇ ಖುದ್ದು ನೋಡುವ ಮೊಟ್ಟ ಮೊದಲ ಅವಕಾಶವನ್ನು ಪಡೆಯುತ್ತದೆ. ಆದ್ದರಿಂದ ನರ್ಸರಿಗೆ ಸೇರಿಸುವ ಮೊದಲು ಪೋಷಕರು ಸರಿಯಾದ ಆಯಾಮಗಳಿಂದ ಅಲೋಚಿಸಿ ಮುಂದಡಿ ಇಡುವುದು ಒಳ್ಳೆಯದು. ಹಾಗಾದರೆ ನಿಮ್ಮ ಮಗುವನ್ನು ನರ್ಸರಿಗೆ ಸೇರಿಸಲು ಯಾವ ಯಾವ ಆಲೋಚನೆಗಳನ್ನು ಮಾಡಿದ್ದೀರಿ? ಮಕ್ಕಳನ್ನು ಸೇರಿಸುವ ಶಾಲೆ ಹೀಗಿದ್ದರೆ ಒಳ್ಳೆಯದು
ನರ್ಸರಿಗೆ ಸೇರಿಸುವ ಮುನ್ನ ನೀವು ಕೆಲವೊಂದು ಮೂಲಭೂತ ಅಂಶಗಳನ್ನು ತಿಳಿದುಕೊಂಡಿರಬೇಕು. ನರ್ಸರಿಗಳಲ್ಲಿ ಮೂರು ವಿಧಗಳಿವೆ. ಅವುಗಳನ್ನು ಫಾರ್ಮಲ್ ಚೈಲ್ಡ್ ಕೇರ್ ಸೆಂಟರ್, ಫ್ಯಾಮಿಲಿ ಡೇ ಕೇರ್ ಮತ್ತು ಇನ್-ಹೋಮ್ ಕೇರ್ ಸೆಂಟರ್ ಎಂಬ ಮೂರು ಬಗೆಗಳಿವೆ. ಇವೆಲ್ಲವನ್ನು ನಡೆಸಲು ಸರ್ಕಾರದ ಪರವಾನಗಿ ಮತ್ತು ಅನುಮತಿ ಕಡ್ಡಾಯ. ನರ್ಸರಿಗಳಿಗೆಂದೆ ಕೆಲವೊಂದು ಕಾನೂನುಗಳನ್ನು ಸರ್ಕಾರ ಮಾಡಿದೆ....
ನರ್ಸರಿಗೆ ಸೇರಿಸುವ ಮುನ್ನ ಮೊದಲು ನೀವು ಆ ನರ್ಸರಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದ ಜೊತೆಗೆ ಮಾತನಾಡಿ ಬರುವುದು ಒಳ್ಳೆಯದು. ಇದರಿಂದ ನಿಮಗೆ ಆ ನರ್ಸರಿಯು ನಿಮ್ಮ ಮಗುವಿಗೆ ಸೂಕ್ತವಾಗುತ್ತದೆಯೇ ಇಲ್ಲವೇ? ಎಂದು ಅರ್ಥವಾಗುತ್ತದೆ. ಬನ್ನಿ ನಿಮ್ಮ ಮಗುವನ್ನು ನರ್ಸರಿಗೆ ಸೇರಿಸುವ ಮೊದಲು ಆ ನರ್ಸರಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕೆಂದು ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ ಓದಿ...

ನರ್ಸರಿಗೆ ಭೇಟಿ ನೀಡಿ
ನಿಮ್ಮ ಮಗುವಿಗಾಗಿ ಒಂದು ನರ್ಸರಿಯನ್ನು ಆರಿಸಲು ಒಳ್ಳೆಯ ಮಾರ್ಗವೆಂದರೆ, ಅದು ನರ್ಸರಿಗೆ ಭೇಟಿ ನೀಡುವುದು. ಇಲ್ಲಿಗೆ ಭೇಟಿ ನೀಡುವುದರಿಂದ ನಿಮಗೆ ಈ ನರ್ಸರಿಯು ನಿಮ್ಮ ಮಗುವಿಗೆ ಸೂಕ್ತವಾಗಿ ಒಪ್ಪುತ್ತದೆಯೇ, ಇಲ್ಲವೇ ಎಂದು ಅರ್ಥವಾಗುತ್ತದೆ. ನರ್ಸರಿಯ ಇತಿಹಾಸ, ಅದರ ಸಿಬ್ಬಂದಿ, ಶುಚಿತ್ವ, ಸುರಕ್ಷತೆ ಮತ್ತು ಭದ್ರತೆ ಇತ್ಯಾದಿಗಳನ್ನು ಪರಿಶೀಲಿಸಿ. ನರ್ಸರಿಗೆ ಆಗಾಗ ಭೇಟಿ ನೀಡುವುದು ಒಳ್ಳೆಯದು. ಇದರಿಂದ ನಿಮ್ಮ ಮತ್ತು ಅಲ್ಲಿನ ಸಿಬ್ಬಂದಿಗಳ ನಡುವೆ ಒಳ್ಳೆಯ ಸಂಬಂಧ ಬೆಳೆಯುತ್ತದೆ.

ನರ್ಸರಿಯಲ್ಲಿರುವ ಮಕ್ಕಳನ್ನು ನೋಡಿ
ನರ್ಸರಿಯಲ್ಲಿರುವ ಮಕ್ಕಳನ್ನು ನೋಡಿದರೆ ಸಾಕು, ನರ್ಸರಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಗೊತ್ತಾಗುತ್ತದೆ. ಇತರೆ ಮಕ್ಕಳು ನರ್ಸರಿಯಲ್ಲಿ ಸಂತೋಷವಾಗಿದ್ದಲ್ಲಿ, ಆ ನರ್ಸರಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾವಿಸಿ. ಇಲ್ಲಿ ನಿಮ್ಮ ಮಗುವನ್ನು ಬಿಟ್ಟರೂ, ಸಂತೋಷವಾಗಿ ಇರಬಲ್ಲದು ಎಂದು ಭಾವಿಸಿ. ಇದು ನೀವು ನರ್ಸರಿ ಕುರಿತು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಸಲಹೆಯಾಗಿರುತ್ತದೆ.

ಸುರಕ್ಷತೆ ಮತ್ತು ಭದ್ರತೆ ನಿಯಂತ್ರಣಗಳು
ನರ್ಸರಿಯನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅಲ್ಲಿ ಆರೋಗ್ಯ ಮತ್ತು ಭದ್ರತೆಯ ಮಾನದಂಡಗಳನ್ನು ಹೇಗೆ ಜಾರಿಗೆ ತರಲಾಗಿದೆ ಎಂದು ಪರಿಶೀಲಿಸಿ. ನಿಮ್ಮ ಮಗುವು ನರ್ಸರಿಯ ಒಳಗಡೆ ಸುರಕ್ಷಿತವಾಗಿ ಇರುತ್ತದೆ ಮತ್ತು ಅಲ್ಲಿರುವ ವಸ್ತುಗಳಿಂದ ನಿಮ್ಮ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದೆಲ್ಲದರ ಜೊತೆಗೆ ಶುಚಿತ್ವವನ್ನು ತಪ್ಪದೆ ಪರಿಗಣಿಸಿ. ಒಂದು ಒಳ್ಳೆಯ ನರ್ಸರಿಯು ಸ್ವಚ್ಛವಾದ ನೆಲಹಾಸು, ಅಡುಗೆ ಮನೆ, ಶೌಚಾಲಯ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಚಟುವಟಿಕೆಗಳು
ನರ್ಸರಿಗಳಲ್ಲಿ ಕೆಲವೊಂದು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇವು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ನೆರವಾಗುತ್ತದೆ. ಆದ್ದರಿಂದ ನಿಮ್ಮ ಮಗುವನ್ನು ನರ್ಸರಿಗೆ ಸೇರಿಸುವ ಮುನ್ನ ಅಲ್ಲಿ ಚಟುವಟಿಕೆಗಳಿಗೆ ಪ್ರಶಸ್ತವಾದ ಸ್ಥಳ ಮತ್ತು ಉಪಕರಣಗಳು ಇವೆಯೇ? ಎಂದು ಖಚಿತಪಡಿಸಿಕೊಂಡು ನಂತರ ಸೇರಿಸಿ.



Click it and Unblock the Notifications
