Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗುವಿನ ಆಹಾರಕ್ರಮದಲ್ಲಿ ಓಟ್ಸ್‌ಗೂ ಪ್ರಾಮುಖ್ಯತೆ ನೀಡಿ!
ಮಗು ಹಂತಹಂತವಾಗಿ ಬೆಳವಣಿಗೆಯಾಗಲು ಅದಕ್ಕೆ ನೀಡುವಂತಹ ಆಹಾರವು ತುಂಬಾ ಮುಖ್ಯ. ಹುಟ್ಟಿದ ಮೊದಲ ಆರು ತಿಂಗಳ ಕಾಲ ತಾಯಿಯ ಮೊಲೆಹಾಲನ್ನು ಉಣಿಸಲಾಗುತ್ತದೆ. ಇದರ ಬಳಿಕ ಸ್ವಲ್ಪ ಸ್ವಲ್ಪವೇ ಘನ ಆಹಾರವನ್ನು ಮಗುವಿಗೆ ನೀಡಲಾಗುತ್ತದೆ. ಆರು ತಿಂಗಳು ಕಳೆದ ಮಗುವಿನ ದೇಹಕ್ಕೆ ಬೇಕಾಗುವಂತಹ ಪೌಷ್ಠಿಕಾಂಶ ದೊರೆಯಬೇಕಾದರೆ ಘನ ಆಹಾರ ನೀಡುವುದು ಅತೀ ಮುಖ್ಯ. ಎರಡು ವರ್ಷ ಕಳೆಯುವ ತನಕ ಮಗುವಿಗೆ ಘನ ಆಹಾರದೊಂದಿಗೆ ತಾಯಿಯ ಮೊಲೆಹಾಲನ್ನು ನೀಡುತ್ತಿರಬೇಕಾಗುತ್ತದೆ.
ಈ ಸಮಯವು ಮಗುವಿನ ಬೆಳವಣಿಗೆಯ ಸಮಯವಾಗಿರುವ ಕಾರಣ ಅದಕ್ಕೆ ಆರೋಗ್ಯಕರ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಮಗುವಿನ ಬೆಳವಣಿಗೆಗೆ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿನಾಂಶ, ಮ್ಯಾಗ್ನಿಶಿಯಂ ಮತ್ತು ವಿಟಮಿನ್‌ನ ಅಗತ್ಯವಿರುತ್ತದೆ. ಮಗುವಿನ ಬೆಳವಣಿಗೆಗೆ ಬೇಕಿರುವ ಪೌಷ್ಠಿಕಾಂಶಗಳನ್ನು ಹೊಂದಿರುವ ಘನ ಆಹಾರವೇ ಓಟ್ಸ್. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

ಮಗುವಿಗೆ ಬೇಗನೆ ಘನ ಆಹಾರವನ್ನು ನೀಡಿದರೆ ಅದು ಮಗುವಿನ ಹೊಟ್ಟೆಯಲ್ಲಿ ಅಜೀರ್ಣಕ್ಕೆ ಕಾರಣವಾಗಿ ಭೇದಿ ಉಂಟಾಗಿ ಮಗು ನಿತ್ರಾಣವಾಗಬಹುದು. ಘನ ಆಹಾರವನ್ನು ನೀಡಬೇಕೆಂದು ಮಗುವೇ ನಿಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಮಗು ಯಾರ ಬೆಂಬಲವೂ ಇಲ್ಲದೆ ಕುಳಿತುಕೊಳ್ಳುವುದು ಮತ್ತು ಆಹಾರದೆಡೆಗೆ ತಾನಾಗಿಯೇ ಸಾಗಿ ಕೈಯಲ್ಲಿ ಚಮಚ ತೆಗೆದು ಬಾಯಿಗೆ ಇಟ್ಟುಕೊಳ್ಳುವುದು ಮಗುವಿಗೆ ಘನ ಆಹಾರ ನೀಡಬೇಕೆಂಬ ಸೂಚನೆ. ಬನ್ನಿ ಮಗುವಿಗೆ ಓಟ್ಸ್ ಅನ್ನು ಹೇಗೆ ನೀಡಬೇಕು ಎಂಬುದನ್ನು ನೋಡೋಣ...
ಮಗು ಓಟ್ಸ್ ಯಾವಾಗ ಸೇವಿಸಬಹುದು
ಮಗುವಿಗೆ ಐದು ತಿಂಗಳಾದ ಬಳಿಕ ಓಟ್ಸ್ ನೀಡಬಹುದು. ಆದರೆ ಇತರ ಆಹಾರಗಳನ್ನು ಆರು ತಿಂಗಳಾದ ಬಳಿಕವಷ್ಟೇ ನೀಡಬೇಕು. ಇತರ ಯಾವುದೇ ರೀತಿಯ ಆಹಾರವನ್ನು ನೀಡುವ ಮೊದಲು ಮಗುವಿಗೆ ಮೊದಲು ನೀಡಬಹುದಾದ ಉತ್ತಮ ಆಹಾರ ಓಟ್ ಮೀಲ್.
ಓಟ್ಸ್‌ನ ಲಾಭಗಳು
ಓಟ್ಸ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ನಾರಿನಾಂಶ ಮತ್ತು ಹಲವಾರು ರೀತಿಯ ವಿಟಮಿನ್‌ಗಳಿವೆ. ಓಟ್ಸ್ ನಿಮ್ಮ ಮಗುವಿಗೆ ಪೌಷ್ಠಿಕಾಂಶದೊಂದಿಗೆ ಆರೋಗ್ಯಕರ ಆಹಾರವಾಗಲಿದೆ. ಹೆಚ್ಚಿನ ಮಕ್ಕಳು ಅನ್ನಕ್ಕಿಂತ ಇದರ ರುಚಿಯನ್ನು ಇಷ್ಟಪಡುತ್ತಾರೆ. ಮಗುವಿನಲ್ಲಿ ಉಂಟಾಗುವ ಮಲಬದ್ಧತೆಯನ್ನು ಓಟ್ಸ್ ನಿಯಂತ್ರಿಸುತ್ತದೆ.
ಓಟ್ಸ್‌ನಲ್ಲಿರುವ ವಿಟಮಿನ್ ಗಳು
ಮಗುವಿನ ಆರಂಭಿಕ ಬೆಳವಣೆಗೆಗೆ ಬೇಕಾಗಿರುವಂತಹ ಹಲವಾರು ರೀತಿಯ ವಿಟಮಿನ್ ಗಳು ಓಟ್ಸ್ ನಲ್ಲಿದೆ. ಓಟ್ಸ್‌ನಲ್ಲಿ ವಿಟಮಿನ್ ಬಿ1(ಥೈಮಿನ್), ವಿಟಮಿನ್ ಬಿ2(ರಿಬೊಫ್ಲಾವಿನ್),ಫೊಲಾಟೆ, ನಿಯಾಸಿನ್ ಇತ್ಯಾದಿ ವಿಟಮಿನ್‌ಗಳಿವೆ. ಬಾಟಲ್ ಹಾಲು ಕೊಡುವ ಮೊದಲು ಕೆಲವೊಂದು ಸಲಹೆ
ಓಟ್ಸ್‌ನಲ್ಲಿರುವ ಖನಿಜಾಂಶಗಳು
ಓಟ್ಸ್‌ನಲ್ಲಿ ವಿಟಮಿನ್‌ಗಳು ಮಾತ್ರವಲ್ಲದೆ ಮಗುವಿನ ಬೆಳವಣಿಗೆಗೆ ಬೇಕಾಗಿರುವ ವಿವಿಧ ರೀತಿಯ ಖನಿಜಾಂಶಗಳು ಕೂಡ ಇದೆ. ಓಟ್ಸ್‌ನಲ್ಲಿರುವ ಖನಿಜಾಂಶಗಳೆಂದರೆ ಕಬ್ಬಿನಾಂಶ, ಪೊಟಾಶಿಯಂ, ಪೊಸ್ಪರಸ್, ಮ್ಯಾಗ್ನಿಶೀಯಂ, ಕ್ಯಾಲ್ಸಿಯಂ, ಸೋಡಿಯಂ, ಸೆಲೆನಿಯಂ, ಕಾಪರ್ ಇತ್ಯಾದಿಗಳಿವೆ.



Click it and Unblock the Notifications


