Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಮಕ್ಕಳು ಗಬಗಬನೆ ತಿನ್ನುತ್ತಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!
ಮಕ್ಕಳಲ್ಲಿ ಆರೋಗ್ಯಕರವಾದ ಊಟ ಮಾಡುವ ಅಭ್ಯಾಸವನ್ನು ನಾವು ಪೋಷಕರು ಬೆಳೆಸಬೇಕಾದುದು ಆದ್ಯ ಕರ್ತ್ಯವ್ಯವಾಗಿರುತ್ತದೆ. ವಾಸ್ತವ ಏನೆಂದರೆ, ಸರಿಯಾಗಿ ಊಟ ಮಾಡಲಿಲ್ಲವಾದಲ್ಲಿ, ಮಕ್ಕಳ ಜೀವಕ್ಕೆ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ತಿನ್ನುವ ಕ್ರಮದ ಮೇಲೆ ನಿಗಾ ಇರಿಸಲೇಬೇಕು. ಅತಿಯಾಗಿ ತಿನ್ನುವುದು ಮತ್ತು ಕಡಿಮೆ ತಿನ್ನುವುದು ಎರಡೂ ಇವರಿಗೆ ಒಳ್ಳೆಯದಲ್ಲ. ಇಂತಹ ಏರುಪೇರನ್ನು ಈಟಿಂಗ್ ಡಿಸಾರ್ಡರ್ (ತಿನ್ನುವ ಕಾಯಿಲೆ) ಎಂದು ಕರೆಯುತ್ತಾರೆ. ಇದರಲ್ಲಿ ಮೂರು ವಿಭಾಗಗಳು ಇರುತ್ತವೆ.
ಯಾವಾಗ ಮಗು ತನ್ನ ಅಗತ್ಯಕ್ಕಿಂತ ಕಡಿಮೆ ಆಹಾರವನ್ನು ಸೇವಿಸುತ್ತದೆಯೋ, ಆಗ ಅದನ್ನು ಅನೊರೆಕಿಸಿಯ ಎಂದು ಕರೆಯುತ್ತಾರೆ. ಯಾವಾಗ ನಿಮ್ಮ ಮಗು ಅಧಿಕ ಪ್ರಮಾಣದ ಊಟವನ್ನು ಸೇವಿಸುತ್ತದೋ, ಅದನ್ನು ಬುಲಿಮಿಯ ಎಂದು ಕರೆಯುತ್ತಾರೆ. ಇಂತಹ ತಿನ್ನುವ ಚಪಲವನ್ನು ಸಹ ಈ ಡಿಸಾರ್ಡರ್ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಈ ಸನ್ನಿವೇಶದಲ್ಲಿ ನಿಮ್ಮ ಮಗು ಮಿತಿಯಿಲ್ಲದೆ ಏನನ್ನಾದರು ತಿನ್ನುತ್ತಲೆ ಇರುತ್ತದೆ.
ಅಧ್ಯಯನಗಳ ಪ್ರಕಾರ ಈ ಡಿಸಾರ್ಡರ್ ಬಾಲ್ಯದಲ್ಲಿ ಕಂಡು ಬರುತ್ತದೆ. ಕೆಲವೊಮ್ಮೆ ಇದು ತಾರುಣ್ಯದಲ್ಲಿಯೂ ಸಹ ಕಂಡು ಬರುತ್ತದೆ. ಅಂಕಿ ಅಂಶಗಳ ಪ್ರಕಾರ ಈ ಚಟವು ಗಂಡಸರಿಗಿಂತ ಹೆಂಗಸರನ್ನು ಅತಿಯಾಗಿ ಕಾಡುತ್ತದೆಯಂತೆ. ಬಾಲ್ಯದಲ್ಲಿ ಈ ಈಟಿಂಗ್ ಡಿಸಾರ್ಡರ್ ಕಂಡು ಬರಲು ಇರುವ ನಿಖರವಾದ ಕಾರಣಗಳನ್ನು ಆರೋಗ್ಯ ತಜ್ಞರು ಇನ್ನೂ ಪತ್ತೆ ಹಚ್ಚಿಲ್ಲ. ಏಕೆಂದರೆ ಇದರ ಮೂಲವು ಜೈವಿಕ ಅಥವಾ ಮನೋವೈಜ್ಞಾನಿಕ ನೆಲೆಗಳಲ್ಲಿ ಅಡಗಿದೆ. ನಿಜಕ್ಕೂ ಕಾರ್ಟೂನ್ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?

ಸಾಮಾನ್ಯ ಕಾರಣಗಳು
ಅಧ್ಯಯನಗಳ ಪ್ರಕಾರ ಮಕ್ಕಳು ಅತಿಯಾಗಿ ತಿನ್ನುವ ಚಟಕ್ಕೆ ಅಂಟಿಕೊಳ್ಳಲು ಕೆಲವೊಂದು ಸಾಮಾನ್ಯ ಕಾರಣಗಳು ಇರುತ್ತವೆ. ಅವುಗಳೆಂದರೆ: ಕಡಿಮೆ ಆತ್ಮವಿಶ್ವಾಸ, ತೂಕ ಹೆಚ್ಚಿಸಿಕೊಳ್ಳಲು, ಭೇದ ಭಾವ ಮಾಡುವುದು ಇತ್ಯಾದಿ ಭಾವನೆಗಳಿಂದಾಗಿ ಅವರು ಅಧಿಕವಾಗಿ ತಿನ್ನಲು ತೊಡಗುತ್ತಾರೆ.
ತಾರುಣ್ಯದಲ್ಲಿ ಕಂಡುಬರುವ ಈಟಿಂಗ್ ಡಿಸಾರ್ಡರ್
ಈಟಿಂಗ್ ಡಿಸಾರ್ಡರ್‌ನಿಂದ ನರಳುವ ತರುಣರಲ್ಲಿ ಇದಕ್ಕೆ ಪ್ರಮುಖ ಕಾರಣ ಅವರ ದೇಹದ ಮೇಲೆ ಇರುವ ಕೀಳರಿಮೆ ಮತ್ತು ತಪ್ಪು ಕಲ್ಪನೆಗಳು ಅವರನ್ನು ಅಧಿಕವಾಗಿ ತಿನ್ನಲು ಪ್ರೇರೇಪಿಸುತ್ತದೆ. ಅವರ ಪ್ರಕಾರ ಅವರು ದಪ್ಪ ಇರುತ್ತಾರೆ ಅದಕ್ಕಾಗಿ ಕಡಿಮೆ ತಿನ್ನುತ್ತಾರೆ, ಇಲ್ಲವೇ ಸಣ್ಣ ಇರುತ್ತಾರೆ ಹೆಚ್ಚಾಗಿ ತಿನ್ನುತ್ತಾರೆ.
ಆರೋಗ್ಯದ ಪರಿಣಾಮಗಳು
ಈಟಿಂಗ್ ಡಿಸಾರ್ಡರ್‌ಗಳು ಹೃದ್ರೋಗ, ಕಡಿಮೆ ರಕ್ತದೊತ್ತಡ, ಉಸಿರಾಟದಲ್ಲಿ ಏರು-ಪೇರು, ದುರ್ಬಲ ಮೂಳೆಗಳು, ದೇಹದಲ್ಲಿ ಎಲ್ಲಾ ಕಾರ್ಯಗಳು ಸುಗಮವಾಗದಂತೆ ಮಾಡುತ್ತವೆ. ಮಕ್ಕಳಲ್ಲಿ ಈ ಡಿಸಾರ್ಡರ್ ಪ್ರಾಣಕ್ಕೆ ಸಂಚಕಾರ ತರಬಹುದು. ಆದ್ದರಿಂದ ಪೋಷಕರು ಈ ಕುರಿತು ಸ್ವಲ್ಪ ಜಾಗರೂಕತೆಯಿಂದ ಇರಬೇಕಾದುದು ಅತ್ಯಗತ್ಯ.



Click it and Unblock the Notifications
