Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಪ್ಪ ಅಮ್ಮನ ಜಗಳ, ಮಕ್ಕಳ ಸಂಕಟ ಕೇಳುವವರು ಯಾರು?
ಮಕ್ಕಳ ಮುಂದೆ ಜಗಳವಾಡುವುದು ಪೋಷಕರು ಮಾಡುವ ಅತ್ಯಂತ ದೊಡ್ಡ ತಪ್ಪುಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಗಳ ಕುರಿತು ಕೆಲವು ಅಂಶಗಳನ್ನು ತಿಳಿದುಕೊಂಡಿರಬೇಕಾದುದು ಅತ್ಯಗತ್ಯ. ಮಕ್ಕಳ ಮುಂದೆ ಕೆಲವೊಂದು ಸಮಸ್ಯೆಗಳಿಗಾಗಿ ಕಚ್ಚಾಡುವುದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು.
ಒಂದು ವೇಳೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತಹ ಸಮಸ್ಯೆಗಳು ಇದ್ದಲ್ಲಿ, ಮಕ್ಕಳು ಅಕ್ಕ-ಪಕ್ಕ ಇಲ್ಲದಿರುವಾಗ ಇತ್ಯರ್ಥ ಮಾಡಿಕೊಳ್ಳುವುದು ಜಾಣತನ. ನಿಮ್ಮ ಪ್ರತಿಯೊಂದು ನಡವಳಿಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನೀವು ಎಂದಿಗು ಮರೆಯಬಾರದು.
ಯಾವಾಗ ನಿಮ್ಮ ನಡವಳಿಕೆಯು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವು ನಿಮ್ಮ ಗಮನಕ್ಕೆ ಬರುತ್ತದೆಯೋ, ಆಗ ನೀವು ಮತ್ತಷ್ಟು ಮುತುವರ್ಜಿಯಿಂದ ನಡೆದುಕೊಳ್ಳುತ್ತೀರಿ. ಆದ್ದರಿಂದ ಮಕ್ಕಳ ಮುಂದೆ ಜಗಳವಾಡುವ ಕೆಲಸವನ್ನು ಮಾಡಬೇಡಿ. ಇದರ ಹಿಂದೆ ಇರುವ ಕಾರಣಗಳು ಯಾವುವು ಎಂದು ಮುಂದೆ ವಿವರಿಸಿದ್ದೇವೆ ತಿಳಿದುಕೊಳ್ಳಿ.

ಭಯ
ಮಕ್ಕಳ ಮುಂದೆ ಜಗಳವಾಡುವುದರಿಂದ ನಿಮ್ಮ ಮಗುವಿನ ಮನಸ್ಸಿನಲ್ಲಿ ಭಯದ ಮನೋಭಾವ ಬೆಳೆಯುತ್ತದೆ. ನಿಮ್ಮ ಜಗಳದ ಹಿಂದೆ ಇರುವ ಕಾರಣವನ್ನು ಬಹುಶಃ ನಿಮ್ಮ ಮಗು ಗ್ರಹಿಸದೆ ಹೋಗಬಹುದು. ಆದರೆ ನಿಮ್ಮ ನಡುವೆ ಏನೋ ಹೆಚ್ಚು ಕಡಿಮೆ ಆಗಿದೆ ಎಂದು ಮಾತ್ರ ಗ್ರಹಿಸಬಲ್ಲದು. ಅದರ ಜೊತೆಗೆ ಈಗ ನಡೆಯುತ್ತಿರುವುದು ಸಹ ಮನಸ್ಸಿಗೆ ಬೇಸರವಾಗುವ ಘಟನೆ ಎಂದು ಸಹ ನಿಮ್ಮ ಮಗುವಿಗೆ ಗೊತ್ತಾಗುತ್ತದೆ. ಇದರಿಂದ ಮಕ್ಕಳ ಮೇಲೆ ಕೆಲವೊಂದು ಕಾಂಪ್ಲೆಕ್ಸ್ ಅಥವಾ ಭೀತಿಯ ಪರಿಣಾಮ ಉಂಟಾಗುತ್ತದೆ. ಮಕ್ಕಳ ಮುಗ್ಧ ಮನಸ್ಸನ್ನು ನಿರಾಸೆಯ ಕೂಪಕ್ಕೆ ತಳ್ಳಬೇಡಿ!
ಕೆಟ್ಟ ಉದಾಹರಣೆ
ನೀವು ಜಗಳವಾಡಿ ನಿಮ್ಮ ಮಕ್ಕಳಿಗೆ ಒಂದು ಕೆಟ್ಟ ಉದಾಹರಣೆಯನ್ನು ನೀಡುತ್ತಿದ್ದೀರಿ. ಇದರಿಂದಾಗಿ ಅವರು ನಿಮ್ಮ ಜಗಳದಲ್ಲಿ ನೀವು ತೋರುವ ಕೆಟ್ಟ ಪ್ರವೃತ್ತಿಗಳನ್ನು ತಾವು ಸಹ ಅಳವಡಿಸಿಕೊಳ್ಳಬಹುದು. ಅವರು ಬೆಳೆದ ಮೇಲೆ ಸಹ ಅವರು ನಿಮ್ಮ ವರ್ತನೆಗಳನ್ನು ಅನುಕರಣೆ ಮಾಡಬಹುದು.
ಇಷ್ಟಾನಿಷ್ಟಗಳು
ತಮ್ಮ ಮುಂದೆ ಜಗಳವಾಡುವ ಪೋಷಕರು ಮಕ್ಕಳಿಗೆ ಶತ್ರುಗಳ ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಮಕ್ಕಳು ಸಹ ಪೋಷಕರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಮಟ್ಟಕ್ಕೆ ಹೋಗಬಹುದು. ಅವರು ಪೋಷಕರಲ್ಲಿ ಒಬ್ಬರ ಪರ ವಕಾಲತ್ತು ವಹಿಸಲು ಆರಂಭಿಸಬಹುದು. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಅವರು ಇಬ್ಬರನ್ನು ಇಷ್ಟಪಡುತ್ತ ಬೆಳೆಯಬೇಕು. ನಿಜಕ್ಕೂ ಕಾರ್ಟೂನ್ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆಯೇ?
ಅಹಿತಕರ ಬಾಲ್ಯದ ನೆನಪುಗಳು
ಮಕ್ಕಳ ಮುಂದೆ ಪೋಷಕರು ಜಗಳವಾಡುತ್ತ ಇದ್ದಲ್ಲಿ, ಅವರ ಬಾಲ್ಯದಲ್ಲಿ ಕೇವಲ ಅಹಿತಕರ ನೆನಪುಗಳೇ ಇರುತ್ತವೆ. ಅವರಿಗಾಗಿ ಸುಂದರ ನೆನಪುಗಳನ್ನು ನೀಡುವುದು ನಿಮ್ಮ ಜವಾಬ್ದಾರಿ. ಅವರು ತಮ್ಮ ಬಾಲ್ಯವನ್ನು ಹಿಂತಿರುಗಿ ನೋಡಿಕೊಂಡರೆ, ಅದರಲ್ಲಿ ಕೇವಲ ನಿಮ್ಮ ಜಗಳಗಳೇ ಇರದಂತೆ ನೋಡಿಕೊಳ್ಳಿ. ಇದರಿಂದ ಅವರ ಬಾಲ್ಯ ಎಂದಿಗು ಸುಂದರವಾಗಿ ಕಾಣುತ್ತದೆ.



Click it and Unblock the Notifications

