Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳೆಯುವ ಮಗುವಿನ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರಗಳು
ಸಣ್ಣ ಮಕ್ಕಳಿಗೆ ನೀಡುವಂತಹ ಆಹಾರವು ಪೌಷ್ಠಿಕಾಂಶಗಳಿಂದ ಕೂಡಿದ್ದು, ಬೇಗನೆ ಜೀರ್ಣವಾಗುತ್ತಿದ್ದರೆ ಅದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೆಚ್ಚು ಘನ ರೂಪದ ಆಹಾರಗಳನ್ನು ಸಣ್ಣ ಮಕ್ಕಳಿಗೆ ನೀಡಿದರೆ ಅದರಿಂದ ಅಜೀರ್ಣದ ಸಮಸ್ಯೆಯಾಗಬಹುದು. ಇದಕ್ಕಾಗಿ ಕೆಲವರು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡುತ್ತಾರೆ.
ಮಕ್ಕಳಿಗೆ ನೀಡುವಂತಹ ಆಹಾರಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶಗಳನ್ನು ಹೊಂದಿರುವ ಆಹಾರಗಳೆಂದರೆ ಜವೆಗೋಧಿ(ಬಾರ್ಲಿ) ಮತ್ತು ಕಾಡುಗೋಧಿ (Buckwheat) ಜವೆಗೋಧಿಯನ್ನು ಮಕ್ಕಳಿಗೆ ಸಿರೆಲ್, ಸೂಪ್ ಅಥವಾ ಇನ್ನಿತರ ರೂಪಗಳಲ್ಲಿ ನೀಡಬಹುದು. ಜವೆಗೋಧಿಯಲ್ಲಿ ಮಗುವಿನ ಬೆಳವಣಿಗೆಗೆ ಬೇಕಾಗಿರುವಂತಹ ಎಲ್ಲಾ ರೀತಿಯ ಪೌಷ್ಠಿಕಾಂಶಗಳಿರುವ ಕಾರಣ ಇದನ್ನು ಪ್ರಮುಖ ಆಹಾರವನ್ನಾಗಿ ಉಪಯೋಗಿಸಬಹುದು. ಪೌಷ್ಠಿಕಾಂಶಗಳನ್ನು ಲೆಕ್ಕ ಹಾಕಿದರೆ ಒಂದು ಕಪ್ ಜವೆಗೋಧಿಯಲ್ಲಿ ಸುಮಾರು 3.55 ಗ್ರಾಂನಷ್ಟು ಪ್ರೋಟೀನ್ ಇದೆ.
ಇಷ್ಟು ಮಾತ್ರವಲ್ಲದೆ ಕ್ಯಾಲ್ಸಿಯಂ, ಕಬ್ಬಿನಾಂಶ, ಪ್ರೋಟೀನ್, ಫೊಲೆಟ್, ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ2 ನಿಯಸಿನ್, ಪೊಟಾಶಿಯಂ ಮತ್ತು ಮ್ಯಾಗ್ನಿಶಿಯಂನಂತಹ ವಿಟಮಿನ್ ಹಾಗೂ ಖಿನಿಜಾಂಶಗಳಿವೆ. ಕಾಡುಗೋಧಿಯು ಅಂಟುರಹಿತ ಬೀಜ ಮತ್ತು ಇಡೀ ಧಾನ್ಯವಾಗಿದ್ದು, ಇದು ನಿಮ್ಮ ಮಗುವಿಗೆ ಅತ್ಯುತ್ತಮ ಆಹಾರವಾಗಲಿದೆ. ಔಷಧೀಯ ಗುಣಗಳ ಆಗರ ಬಾರ್ಲಿ ನೀರಿನ ಪ್ರಯೋಜನಗಳೇನು?

ಕೆಲವು ಮಕ್ಕಳಿಗೆ ಗ್ಲುಟೆನ್ ಮತ್ತು ಗೋಧಿಯ ಪ್ರೋಟೀನ್‌ನಿಂದ ಅಲರ್ಜಿ ಉಂಟಾಗುತ್ತದೆ. ಇಂತಹ ಸಂದರ್ಭದದಲ್ಲಿ ಹುರಿದ ಕಾಡುಗೋಧಿಯನ್ನು ಬಳಸಬಹುದು. ಹುರಿದ ಕಾಡುಗೋಧಿಯನ್ನು ಕಾಶ ಎಂದು ಕರೆಯಲಾಗುತ್ತದೆ. ಮಗುವಿಗೆ ಸುಮಾರು ಐದರಿಂದ ಆರು ತಿಂಗಳು ಆದಾಗ ಅದಕ್ಕೆ ಜವೆಗೋಧಿ ಅಥವಾ ಕಾಡುಗೋಧಿಯ ಆಹಾರ ನೀಡಬಹುದಾಗಿದೆ. ಜವೆಗೋಧಿಯು ಬೇಗನೆ ಜೀರ್ಣವಾಗುವ ಕಾರಣ ಯಾವುದೇ ರೀತಿಯ ಅಲರ್ಜಿ ಕೂಡ ಉಂಟಾಗುವುದಿಲ್ಲ. ಮಗುವಿನ ಆರೋಗ್ಯಕ್ಕೆ ಹೊಂದಿಕೊಳ್ಳುವ ಮತ್ತು ಅಷ್ಟೇ ರುಚಿಯಾಗಿರುವಂತಹ ಜವೆಗೋಧಿಯ ಕೆಲವೊಂದು ತಿನಿಸುಗಳನ್ನು ನಾವು ನಿಮ್ಮ ಮುಂದಿಡಲಿದ್ದೇವೆ. ಜವೆಗೋಧಿ ಬೇಗನೆ ಜೀರ್ಣವಾಗುವ ಕಾರಣ ಮೊದಲ ಘನ ಆಹಾರವಾಗಿ ಮಗುವಿಗೆ ಜವೆಗೋಧಿಯನ್ನು ನೀಡಬಹುದಾಗಿದೆ.
ಮಗುವಿಗೆ ಜವೆಗೋಧಿಯ ಸಿರೆಲ್
ಒಂದು ಕಪ್ ನೀರನ್ನು ಬಿಸಿ ಮಾಡಿ ಮತ್ತು ¼ ಕಪ್ ಜವೆಗೋಧಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಂಡು ಅದಕ್ಕೆ ಹಾಕಿ. 10 ನಿಮಿಷಗಳ ಕಾಲ ಅದನ್ನು ಕುದಿಸಿ ಮತ್ತು ಸೌಟಿನಲ್ಲಿ ತಿರುಗಿಸುತ್ತಾ ಇರಿ. ಇದಕ್ಕೆ ಸ್ವಲ್ಪ ಹಣ್ಣಿನ ಜ್ಯೂಸ್, ಹಾಲು ಅಥವಾ ಮೊಲೆ ಹಾಲನ್ನು ಹಾಕಬಹುದು. ಮಗುವಿನ ಆಹಾರಕ್ರಮದಲ್ಲಿ ಓಟ್ಸ್‌ಗೂ ಪ್ರಾಮುಖ್ಯತೆ ನೀಡಿ!
ಜವೆಗೋಧಿ ಮತ್ತು ಗೆಣಸಿನ ಉಂಡೆ
ಬೇಯಿಸಿದ ಜವೆಗೋಧಿ ಒಂದು ಕಪ್, ಬೇಯಿಸಿದ ಗೆಣಸು ಒಂದು ಕಪ್ ಮತ್ತು ಅರ್ಧ ಕಪ್ ಶುದ್ಧ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಅದರ ಉಂಡೆ ಮಾಡಿಕೊಂಡು ಮಗು ಆಹಾರಕ್ಕಾಗಿ ಕೈ ತೋರಿಸಿದಾಗ ಈ ಉಂಡೆಗಳನ್ನು ಮಗುವಿಗೆ ನೀಡಿ.
ಜವೆಗೋಧಿ ಸಲಾಡ್
ಜವೆಗೋಧಿಯ ಸಲಾಡ್ ಅನ್ನು ಆರು ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನೀಡತಕ್ಕದ್ದು. ಹದವಾಗಿ ಬೇಯಿಸಿದ ಜವೆಗೋಧಿ, ಬೇಯಿಸಿದ ಕ್ಯಾರೆಟ್, ಬೇಯಿಸಿದ ಬಟಾಣಿ ಮತ್ತು ಸಣ್ಣ ಸಣ್ಣ ತುಂಡುಗಳಾಗಿ ಬೇಯಿಸಿದ ಕೋಳಿ ಮಾಂಸವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಎಲ್ಲವನ್ನು ಸಣ್ಣ ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ನಿಮ್ಮ ಮಗುವಿಗೆ ನೀಡಿ. ಮಗುವಿಗೆ ಮಾಂಸಾಹಾರಿ ಆಹಾರ ನೀಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ತರಕಾರಿ ಊಟ ಎಂದಾಕ್ಷಣ ಮಕ್ಕಳು ಮುಖ ಸಿಂಡರಿಸುತ್ತಾರೆಯೇ?
ಕಾಡು ಗೋಧಿ(ಕಾಶ)ಯ ಸಿರೆಲ್
ಒಂದು ಪಾತ್ರೆಗೆ ಎರಡು ಕಪ್ ನೀರು ಹಾಕಿ ಕುದಿಸಿ ಮತ್ತು ಅದಕ್ಕೆ ಒಂದು ಕಪ್ ಕಾಡುಗೋಧಿಯನ್ನು ಹಾಕಿ. ಗ್ಯಾಸ್ ಅನ್ನು ಜೋರಾಗಿ ಉರಿಸಿ ಮತ್ತು ಒಂದು ನಿಮಿಷ ಕಾಲ ಸರಿಯಾಗಿ ಕುದಿಸಿ. ಸ್ವಲ್ಪ ಮೊಸರು ಹಾಕಿ ಸಿರೆಲ್ ಅನ್ನು ಕ್ರೀಮ್ ನಂತೆ ಮಾಡಿಕೊಳ್ಳಿ. ಸೋಯಾ ಹಾಲು ಹಾಕಿ ಇದನ್ನು ತಂಪು ಮತ್ತು ತೆಳುವಾಗಿಸಬಹುದು.



Click it and Unblock the Notifications



