Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೂ ಆತ್ಮಾಭಿಮಾನವಿದೆ, ನಿರ್ಲಕ್ಷ ಮಾಡಬೇಡಿ
ಮಕ್ಕಳಿದ್ದರೆ ಮನೆತುಂಬಾ ನೊರೆಹಾಲು ಸವಿದಂತೆ- ಎಂಥಾ ಮಾತು ಅಲ್ಲವೇ? ಮಕ್ಕಳ ಪೋಷಣೆ, ಲಾಲನೆ ಪಾಲನೆ ತುಂಬಾ ಸಂತಸವನ್ನುಂಟು ಮಾಡುತ್ತದೆ. ಮಕ್ಕಳ ಮನಸ್ಸನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಕ್ಕಳಲ್ಲೂ ಸಹ ಆತ್ಮ ಗೌರವ ಚಿಹ್ನೆಗಳು ಕಾಣಿಸುತ್ತವೆ. ಈ ಲಕ್ಷಣಗಳನ್ನು ಸಕಾಲದಲ್ಲಿ ಆಗಿಂದಾಗ್ಗೆ ಸೂಕ್ತ ರೀತಿಯಲ್ಲಿ ಪೋಷಿಸಿದರೆ ಮಗುವಿನ ವ್ಯಕ್ತಿತ್ವ ಸರಿಯಾದ ರೀತಿಯಲ್ಲಿ ಬೆಳೆಯಲು ನೆರವಾಗುತ್ತದೆ. ಮಕ್ಕಳಿಗೆ 5 ವರ್ಷ ತಲುಪಿದ ಮೇಲೆ ನಿಜವಾದ ಸ್ವಯಂ ಯೋಚಿಸುವ ಶಕ್ತಿ ಬರುತ್ತದೆ ಎಂದು ಇತ್ತೀಚಿನ ಸಂಶೋಧನಾ ವರದಿಯೊಂದು ತಿಳಿಸುತ್ತದೆ.

ಈ ಸಂಶೋಧನೆಯು ಇನ್ನೂ ಚಿಕ್ಕ ಮಕ್ಕಳಲ್ಲಿಯೂ ಅಳೆಯಬಹುದಾದಂತಹ ಸ್ವಯಂ ಯೋಚಿಸುವ ಶಕ್ತಿ ಇದೆ ಎಂದು ತೋರಿಸುತ್ತದೆ. ಸಂಶೋಧಕರು ಈ ನಿಟ್ಟಿನಲ್ಲಿ ಕೈಗೊಂಡ ವಿಶಿಷ್ಟ ಪರೀಕ್ಷೆಗಳ ಫಲಿತಾಂಶದಿಂದ ಈ ಸತ್ಯ ಹೊರಬಿದ್ದಿದೆ. ಸುಮಾರು 200 ಮಕ್ಕಳನ್ನು ಈ ಪರೀಕ್ಷೆಗೆ ಬಳಸಲಾಗಿದೆ. ಇಲ್ಲಿಯವರೆಗೆ ವಿಜ್ಞಾನಿಗಳು ತಿಳಿಸಿದ್ದ ಪ್ರಕಾರ ಶಿಶುಗಳು ಸ್ವಯಂ ಯೋಚಿಸಲು ಮತ್ತು ಆತ್ಮಾಭಿಮಾನ ಬೆಳೆಸಿಕೊಳ್ಳಲು ಇನ್ನೂ ಚಿಕ್ಕವರೆಂದು ಅಭಿಪ್ರಾಯ ಪಡಲಾಗಿತ್ತು.
ಇದನ್ನು ಅಳೆಯಲು ಯಾವುದೇ ರೀತಿಯ ಸೂಕ್ಷ್ಮ ಮಾನದಂಡಗಳು ಇರದ ಕಾರಣ ಸಂಶೋಧಕರು ಮಕ್ಕಳಲ್ಲಿ ಸ್ವಯಂ ಯೋಚಿಸುವ ಗುಣ ವೃದ್ಧಿಯಾಗಿಲ್ಲವೆಂದು ತಿಳಿದಿದ್ದರು. ಆದರೆ ಇತ್ತೀಚಿನ ಹೊಸ ಆವಿಷ್ಕಾರಗಳಿಂದ ಸಂಶೋಧಕರಿಗೆ ವಿಚಾರಗಳು ಹೊಳೆದಿದ್ದು, ಮಕ್ಕಳು ತಮ್ಮ ಬಗ್ಗೆ ಸ್ವಯಂ ಯೋಚಿಸುವ ಗುಣಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ಸಂಶೋಧಕರು ಮಕ್ಕಳಿಗೆ ಸುಲಭವಾದ ಪರೀಕ್ಷೆಗಳನ್ನು ನೀಡಿದ್ದು, ಅದರ ಒಂದು ವಿಧಾನದಲ್ಲಿ ಅವರಿಗೆ ಒಂದು ವಸ್ತುವನ್ನು ತೋರಿಸಿ ಅದರ ಲಕ್ಷಣವನ್ನು ಎರಡು ವರ್ಗಗಳಲ್ಲಿ ವಿಂಗಡಿಸಲು ತಿಳಿಸಲಾಯಿತು. ಅವು ನಾನು ಮತ್ತು ನಾನಲ್ಲದ ವರ್ಗಗಳೆಂದು ವಿಂಗಡಿಸಲಾಯಿತು. ತಿಳಿಸಿದಂತೆ ಮಕ್ಕಳು ಸುಲಭವಾಗಿ ವಸ್ತುಗಳನ್ನು ಗುರುತಿಸಿ ತಮಗೆ ಹೊಂದುವಂತೆ ಪ್ರತ್ಯೇಕಿಸುತ್ತಾ ಹೋದರು. ಈ ವಿಧಾನದಿಂದ ಮಕ್ಕಳಲ್ಲಿನ ಸ್ವಯಂ ಯೋಚಿಸುವ ಗುಣವು ಇದೆಯೆಂದು ಕಂಡುಕೊಂಡಿದ್ದಾರೆ.
ಫಲಿತಾಂಶಗಳು ಹೆಣ್ಣಾಗಲಿ ಅಥವಾ ಗಂಡು ಮಕ್ಕಳಾಗಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ. ಮಕ್ಕಳಲ್ಲಿ ಕಂಡುಬಂದ ಆತ್ಮಾಭಿಮಾನದ ಗುಣವು ಅವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಾಸ್ತವವಾಗಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವರ ಪೋಷಕರು ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಾರೆ. ಯಾವುದೇ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವನ ಬಾಲ್ಯಾವಸ್ಥೆಯ ಸ್ಥಿತಿ ಹಾಗೂ ಅವನು ಬೆಳೆದ ವಾತಾವರಣ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಪೋಷಕರ ಸಕಾರಾತ್ಮಕವಾದ ಪೋಷಣೆ ಹಾಗೂ ಆರೈಕೆಯಿಂದ ಮಕ್ಕಳ ಆರೋಗ್ಯಕರವಾದ ಬೆಳವಣಿಗೆ ಸಾಧ್ಯವಾಗುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮಾಭಿಮಾನದ ಗುಣ ಹಾಗೂ ಸ್ವಯಂಯೋಚಿಸುವ ವಿಶಿಷ್ಟ ಗುಣ ಲಕ್ಷಣ ಬೆಳವಣಿಗೆಯಾಗಲು ನೆರವಾಗುತ್ತದೆ.



Click it and Unblock the Notifications



