Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ಪೋಷಕರ ಆತಂಕವನ್ನು ದೂರ ಮಾಡಲು ಸೂಕ್ತ ಸಲಹೆಗಳು
ಪೋಷಕರ ಆತಂಕ, ಇಂದಿನ ಜಗತ್ತಿನಲ್ಲಿ ಒಂದು ಸಾಮಾನ್ಯ ಸಂಗತಿಯಾಗಿದೆ. ಹೆಚ್ಚಾಗಿ ಇವತ್ತಿನ ಪಾಲಕರ ಬೇಡಿಕೆಯ ಬದಲಾವಣೆಯ ಕಾರಣದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎಂದರೆ ತಪ್ಪಾಗಲಾರದು. ನೀವೂ ಪೋಷಕರ ಆತಂಕವನ್ನು ಎದುರಿಸುತ್ತಿದ್ದರೆ, ಇದರಿಂದ ಮತ್ತಷ್ಟು ಭಯಗೊಳ್ಳುವ ಅವಶ್ಯಕತೆಯಿಲ್ಲ!
ಇದೊಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕ್ಷುಲಕ ವಿಷಯಗಳಿಗೆ ಹೆಚ್ಚು ಆತಂಕಕ್ಕೊಳಗಾಗುವುದನ್ನು ಪರಿಣಾಮಕಾರಿಯಾಗಿ ಬಗೆಹರಿಸುವ ಹಲವು ಮಾರ್ಗಗಳಿವೆ. ನಿಮ್ಮನ್ನು ನೀವು ಇಂತಹ ಆತಂಕದಿಂದ ಹೊರಬರುವಂತೆ ಮಾಡಲು ಈ ಲೇಖನದಲ್ಲಿ ಕೆಲವು ಮಾರ್ಗೋಪಾಯಗಳನ್ನು ಹೇಳಲಾಗಿದೆ.. ಓದಿ.

ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ವಿಷಯಗಳನ್ನು ತಿಳಿದುಕೊಳ್ಳಿ
ಮೊದಲನೆಯದಾಗಿ ನೀವು ಯಾವ ವಿಷಯವನ್ನು ನಿಯಂತ್ರಣ ಮಾಡಬಲ್ಲಿರಿ, ಯಾವ ವಿಷಯ ನಿಮ್ಮಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳುವುದು. ಪಾಲಕರು ಅನಾವಶ್ಯಕವಾಗಿ ಆಲೋಚನೆಗಳನ್ನು ಮಾಡಿ ಇರುವ ಸಮಸ್ಯೆಗೆ ಪರಿಹಾರವನ್ನು ಹುಡುಕಲು ಹೊರಟರೆ ಅದು ಸಮಂಜಸವಾದ ಮಾರ್ಗವಲ್ಲ. ಒಂದು ವೇಳೆ ನಿಮ್ಮ ಮಗು ಹೆಚ್ಚಿನ ಅಂಕಗಳನ್ನು ಗಳಿಸದಿದ್ದರೆ ಅವರ ಮೇಲೆ ಸಿಟ್ಟಾಗುವುದು ಸಮಸ್ಯೆಗೆ ಪರಿಹಾರವಲ್ಲ.
ನೀವು ಕೆಲವು ವಿಷಯಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಉತ್ತಮ ನಿದರ್ಶನ, ನೀವು ನಿಮ್ಮ ಮಗುವಿನ ಆರೋಗ್ಯದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಸಾಧ್ಯವೇ ಇಲ್ಲ. ನೀವು ಅವನ /ಅವಳಿಗೆ ಆರೋಗ್ಯಕರವಾದ, ಸರಿಯಾದ ಆಹಾರವನ್ನು ಸೇವಿಸಲು ಹೇಳಬಹುದು, ಆದರೆ ಯಾವಾಗಲಾದರೂ ಒಮ್ಮೆ ಬರುವ ಒಂದು ಸಣ್ಣ ಜ್ವರವನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ! ಆರೋಗ್ಯಕರವಾದ ಆಹಾರವನ್ನು ಸೇವಿಸಿದರೂ ಉಂಟಾಗುವ ಅನಾರೋಗ್ಯ ನೀವು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವುದರಿಂದ ತಪ್ಪಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನೀವು ತಿಳುವಳಿಕೆಯನ್ನು ಹೊಂದಿರುವುದು ಅತ್ಯವಶ್ಯಕ.
ನಿಮ್ಮ ಮಗು ಸುರಕ್ಷಿತವಾಗಿ ಶಾಲೆಗೆ ಹೋಗುತ್ತಿದೆಯೇ?
ವಾಸ್ತವಾಂಶಗಳಿಂದ ಭಯವನ್ನು ಪ್ರತ್ಯೇಕಗೊಳಿಸಿ
ಮುಂದಿನ ಹಂತ ಭಯ ಮತ್ತು ಸತ್ಯ/ವಾಸ್ತವಗಳ ನಡುವೆ ಆಘಾತಗಳನ್ನು ತೊಡೆದುಹಾಕುವುದು. ನಿಮಗೆ ಚಿಂತೆ, ಮನಸ್ಸಿಗೆ ಆತಂಕ ಎಲ್ಲಿಂದ ಆರಂಭವಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಪ್ರಾಯೋಗಿಕ ಅಥವಾ ವಾಸ್ತವವಾಗಿ ಆಲೋಚಿಸುವುದರ ಮೂಲಕ ನಿಮಗೆ ವಾಸ್ತವಾಂಶ ಅರಿವಾಗುತ್ತದೆ ಮತ್ತು ಇನ್ನೂ ಹಲವು ಸಂದರ್ಭಗಳಲ್ಲಿ ನೀವು ಅನಗತ್ಯವಾಗಿ ಆತಂಕಕ್ಕೆ ಒಳಗಾಗಿದ್ದು ನಿಮ್ಮ ಗಮನಕ್ಕೆ ಬರುತ್ತದೆ.
ಹೋಲಿಕೆಯನ್ನು ನಿಲ್ಲಿಸಿ
ಹೆಚ್ಚಿನ ಪೋಷಕರು ಅನಗತ್ಯ ಹೋಲಿಕೆ ಮಾಡುವ ತಪ್ಪನ್ನು ಮಾಡುತ್ತಾರೆ. ಇದು ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ಅಪಾಯವನ್ನೂ ಉಂಟುಮಾಡಬಹುದು! ಪೋಷಕರಾಗಿ ನೀವು, ನಿಮ್ಮ ಮಗುವನ್ನು ಪೋಷಿಸುವ ಮತ್ತು ಅವನ/ಅವಳ ಮೌಲ್ಯವನ್ನು ಅವರಿಗೇ ಅರ್ಥ ಮಾಡಿಸುವುದು ಅತ್ಯಗತ್ಯ. ಅದಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಜೀವಮಾನವಿಡೀ ನಿಮ್ಮ ಮಗುವನ್ನು ಇತರರಿಗೆ ಹೋಲಿಸುವುದರಲ್ಲಿಯೇ ಕಳೆದರೆ ಕ್ಷಣಿಕ ಆತಂಕದಿಂದ ದೂರವಾಗಬಹುದೇ ಹೊರತು ಶಾಶ್ವತ ನೋವಿ (ಅಳುವುದು)ನಿಂದಲ್ಲ! ಈ ಮೂರು ಅಂಶಗಳು ಪೋಷಕರ ಆತಂಕವನ್ನು ನಿವಾರಿಸುವಲ್ಲಿ ಮುಖ್ಯವಾದ ಅಂಶಗಳಾಗಿವೆ.



Click it and Unblock the Notifications











