Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಮಗುವಿನ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಸರಳ ವಿಧಾನಗಳು
ಮಗುವಿನ ಕೈಗಳು ಯಾವಾಗಲೂ ಹೇಗಾದರೂ ಸರಿ, ಸ್ವಚ್ಛವಾಗಿರಬೇಕು. ಮಗುವಿನ ಪೋಷಕರು ಈ ಸಲಹೆಯನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕಾದ್ದು ಬಹಳ ಮುಖ್ಯ ಸಲಹೆ. ಮಗುವು ಅಂಬೆಗಾಲಿಡಲು ಪ್ರಾರಂಭವಾಗುತ್ತಿದ್ದಯೇ ಅದರ ಪುಟ್ಟ ಅಂಗೈ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಮಗುವು ಸಾಮಾನ್ಯವಾಗಿ ತನ್ನ ಬೆರಳುಗಳನ್ನು ಬಾಯಿಯಲ್ಲಿ ನಿರಂತರವಾಗಿ ಇಟ್ಟುಕೊಳ್ಳುತ್ತದೆ. ತಾಯಂದಿರು ಮಕ್ಕಳ ಅಂಗೈಯನ್ನು ಒಂದು ಶುಭ್ರ ಬಟ್ಟೆ ಅಥವ ವೈಪ್ (Wipe) ಉಪಯೋಗಿಸಿ ಸದಾ ಚೊಕ್ಕಟಮಾಡುತ್ತಿರಬೇಕು.
ಅವುಗಳ ಕೈಗಳನ್ನು ಅಗಾಗ್ಗೆ ತೊಳೆಯುತ್ತಿದರೂ ಸಹ ಒಳ್ಳೆಯ ಫಲಿತಾಂಶ ಕೊಡುತ್ತದೆ. ನೀವು ಮಕ್ಕಳ ಕೈಗಳನ್ನು ತೊಳೆದಾಗ ಅವುಗಳನ್ನು ಸಂಪೂರ್ಣವಾಗಿ ಒಣಗುವ ಹಾಗೆ ಒರಸುವುದನ್ನು ಮರೆಯಬಾರದು. ಕೈಗಳಲ್ಲಿ ಒದ್ದೆಯಿದ್ದರೆ ಹೆಚ್ಚಿನ ಸಮಯ ಕೈಗಳ ಬಿಗಿಮುಷ್ಟಿ ಇಟ್ಟುಕೊಳ್ಳುವುದರಿಂದ ಚರ್ಮದ ಉರಿ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಕ್ಕಳ ಬೆರಳಿನ ಉಗುರನ್ನು ವಾರಕ್ಕೊಮ್ಮೆ ಓರಣಮಾಡುವುದು ಬಹಳ ಅತ್ಯಗತ್ಯ. ನಿಮ್ಮ ಮಗುವಿನ ಕೈಗಳನ್ನು ಶುಭ್ರವಾಗಿರಿಸಿಕೊಳ್ಳಲು ಸರಳವಾದ ಮಾರ್ಗಗಳಿವೆ. ಮಗುವಿನ ಕೈಗಳನ್ನು ಹೇಗೆ ಶುಭ್ರವಾಗಿ ಮತ್ತು ಹೊಳೆಯುವ ಹಾಗೆ ಇರಿಸಿಕೊಳ್ಳಬಹುದೆಂಬುದನ್ನು ಮುಂದೆ ನೋಡೋಣ ಬನ್ನಿ: ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಬೆಚ್ಚಗಿರುವ ನೀರು
ಮಗುವಿನ ಕೈಗಳನ್ನು ಶುಭ್ರವಾಗಿರಿಸಿಕೊಳ್ಳಲು ಬೆಚ್ಚಗಿರುವ ನೀರು ಸುರಕ್ಷಿತವಾಗಿದೆ. ನಿಮ್ಮ ಮಗುವು ಅಂಬೆಗಾಲಿಟ್ಟುಕೊಂಡು ನಿಮ್ಮ ಬಳಿ ಬಂದಾಗ ಅದರ ಕೈಗಳನ್ನು ಒಂದು ಚೊಂಬಿನಲ್ಲಿ ಬೆಚ್ಚಗಿರುವ ನೀರಿನಲ್ಲಿ ಅದ್ದಿ ಚೆನ್ನಾಗಿ ಒರಸಿ.
ಹತ್ತಿಯ ಉಂಡೆಗಳು
ಒಂದು ಹತ್ತಿಯ ಉಂಡೆಯನ್ನು ಬಳಸಿ ಮಗುವಿನ ಕೈಗಳನ್ನು ಶುಭ್ರವಾಗಿರಿಸಿಕೊಳ್ಳಲು ಒಂದು ಅತ್ಯುತ್ತಮ ಮಾರ್ಗ. ಒಂದು ಹತ್ತಿಯ ಉಂಡೆಯನ್ನು ನೀರಿನ ಜಾಡಿಯಲ್ಲಿ ನೆನಸಿಟ್ಟುಕೊಂಡಿರಿ. ಪ್ರರ್ತಿ ಬಾರಿ ನಿಮ್ಮ ಮಗುವು ನೆಲದ ಮೇಲೆ ಅಂಬೆಗಾಲಿಟ್ಟು ಆಟಮುಗಿಸಿದಾಗ ಅದರ ಬೆರಳುಗಳು ಮತ್ತು ಅಂಗೈಯನ್ನು ಒದ್ದೆ ಹತ್ತಿ ಉಂಡೆಯಿಂದ ಒರಸಿ. ನಂತರ ಕೈಗಳನ್ನು ಒಂದು ಒಣಗಿದ ಬಟ್ಟೆಯಿಂದ ಒರಸಲು ಮರೆಯಬೇಡಿ.
ನಂಜು ನಿರೋಧಕ ಲೋಷನ್
ಮಗುವು ಅಂಬೆಗಾಲಿಟ್ಟು ಬಂದ ಮೇಲೆ ಅದರ ಅಂಗೈಯ್ಯಿನ ಮೇಲೆ ಒಂದು ನಂಜು ನಿರೋಧಕ ಲೋಷನ್ ಹಚ್ಚುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಅಂಗೈಯಲ್ಲಿ ಇರಬಹುದಾದ ಕ್ರಿಮಿಗಳು ತಕ್ಷಣವೇ ನಾಶವಾಗುತ್ತದೆ. ನಂತರ ಕೈಗಳನ್ನು ನೀರಿನಿಂದ ತೊಳೆದು ಒಣಗಿದ ಬಟ್ಟೆಯಿಂದ ಒರಸಿ. ಹೆತ್ತವರು ಕಟ್ಟುನಿಟ್ಟಾದ ಸ್ವಭಾವವನ್ನು ಯಾಕೆ ಹೊ೦ದಿರಬಾರದು?
ಸಣ್ಣ ಗುಳ್ಳೆಗಳು
ನೀರಿನ ಜೊತೆ ಗುಳ್ಳೆಗಳು ತುಂಬಿರುವ ಒಂದು ಚೊಂಬು ಅಥವ ಗಾಜಿನ ಜಾಡಿಯಲ್ಲಿ ಮಗುವಿನ ಕೈಗಳನ್ನು ಅದ್ದಿ ತೊಳೆಯುವುದು ಒಂದು ಉತ್ತಮ ಮಾರ್ಗ. ಮಗುವಿಗೆ ತನ್ನ ಕೈಯನ್ನು ಗುಳ್ಳೆಗಳ ಮಧ್ಯೆ ಅದ್ದುವುದು ಒಂದು ಆಕರ್ಷಣೆಯಾಗುವುದರಿಂದ ಇದು ಒಂದು ಒಳ್ಳೆಯ ಉಪಾಯವೂ ಕೂಡ.



Click it and Unblock the Notifications




