Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಮಗುವನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದಾಗುವ ಪ್ರಯೋಜನಗಳು
ಮಕ್ಕಳು ಚಿನ್ನಿ ದಾಂಡು,ಕಬ್ಬಡಿ,ಗಾಳಿಪಟ ಹೀಗೆ ಹೊರಗೆ ಹೋಗಿ ಆಡುವ ಕಾಲವಿತ್ತು.ಆದರೆ ಇಂದು ಮಕ್ಕಳು ಶಾಲೆಯಿಂದ ಬಂದ ತಕ್ಷಣ ಕಂಪ್ಯೂಟರ್ ಮುಂದೆ ಕುಳಿತು ಗೇಮ್ಸ್ ಆಡುವುದು ಎಲ್ಲರ ಮನೆಯಲ್ಲಿ ನಡೆಯುವ ಸಂಗತಿ.
ಮಗುವಿನ ಎಲ್ಲಾ ರೀತಿಯ ಬೆಳವಣಿಗೆಗೆ ಹೊರಾಂಗಣ ಕ್ರೀಡೆಗಳು ಅತಿ ಅವಶ್ಯಕ.ಆದ್ದರಿಂದ ನಿಮ್ಮ ಮಕ್ಕಳು ಹೊರಹೋಗಿ ಆಟ ಆಡುವಂತೆ ನೋಡಿಕೊಳ್ಳಿ. ನಿಮ್ಮ ಮಕ್ಕಳು ಶಾಲೆಯಿಂದ ಬಂದ ನಂತರ ಹೊರಾಂಗಣ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆಗುವ ಲಾಭಗಳನ್ನು ಈ ಕೆಳಗೆ ನೀಡಲಾಗಿದೆ.ಓದಿ ನೋಡಿ.
ಚಾಕಲೇಟಿನಿಂದಾಗಿ ಮಕ್ಕಳ ಮೇಲಾಗುವ ಪರಿಣಾಮವೇನು?

ಅತ್ಯಮೂಲ್ಯವಾದ ಜೀವನ ಕೌಶಲ್ಯಗಳ ಕಲಿಕೆ:-
ಹೊರಹೋಗಿ ಆಗುವುದರಿಂದ ಮಕ್ಕಳು ವಿವಿಧ ರೀತಿಯ ಆಟಗಳಲ್ಲಿ ತೊಡಗಿಕೊಳ್ಳುತ್ತವೆ ಮತ್ತು ಇದರಿಂದ ಸಾಕಷ್ಟು ವಿವಿಧ ರೀತಿಯ ಕೌಶಲ್ಯಗಳನ್ನು ಕಲಿಯಬಹುದು ಇದು ಅವರ ಮುಂದಿನ ಜೀವನದಲ್ಲಿ ಸಹಾಯಕವಾಗಬಹುದು.ಈ ರೀತಿ ಸಾಕಷ್ಟು ಮಕ್ಕಳು ಸೇರಿ ಆಡುವುದರಿಂದ ತಂಡದ ಉತ್ಸಾಹ ಮತ್ತು ಕ್ರೀಡಾಮನೋಭಾವ ಬೆಳೆಸಿಕೊಳ್ಳುತ್ತವೆ.

ಸಾಮಾಜಿಕ ಅಭಿವೃದ್ಧಿ:-
ಪರಸ್ಪರ ಸಂವಹನ ಕೌಶಲ್ಯವನ್ನು ಸಾಮಾಜಿಕ ಕೌಶಲ್ಯ ಎಂದೇ ಪರಿಗಣಿಸಲಾಗುತ್ತದೆ.ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳು ಸಾಕಷ್ಟು ಹೊಸ ಸ್ನೇಹಿತರನ್ನು ಗಳಿಸುತ್ತಾರೆ ಮತ್ತು ಅವರೊಂದಿಗೆ ಬೆರೆಯುತ್ತಾರೆ.ಈ ಗುಣ ಮುಂದೆ ಟೀಂ ವರ್ಕ್ ಮಾಡಲು ಸಹಾಯಕವಾಗುತ್ತದೆ.ಸಾರ್ವಜನಿಕವಾಗಿ ಮಾತನಾಡಲು ಮತ್ತು ಭಾಗಿಯಾಗಲು ಮಕ್ಕಳು ಇದರಿಂದ ಕಲಿತುಕೊಳ್ಳುತ್ತಾರೆ.

ಸಂಕೋಚ ಕಡಿಮೆಯಾಗುತ್ತದೆ:-
ನಿಮ್ಮ ಮಗು ತರಗತಿಯಲ್ಲಿ ಎಲ್ಲರ ಎದುರು ನಿಂತು ಹಾಡಲು ಅಥವಾ ಪದ್ಯ ಹೇಳಲು ಸಂಕೋಚಪಡುತ್ತದೆಯೇ?ಹೌದು ಎಂದಾದರೆ ನಿಮ್ಮ ಮಕ್ಕಳನ್ನು ಹಾಡು,ನೃತ್ಯ ಕಲೆ ಇವುಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ.ಇದು ಅವರ ಸಂಕೋಚ,ನಾಚಿಕೆಯಿಂದ ಹೊರಬರಲು ಸಹಕರಿಸುತ್ತದೆ.

ದೈಹಿಕ ಬೆಳವಣಿಕೆ:-
ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡಲು ನಿಮ್ಮ ಮಗು ನಿರಾಸಕ್ತಿ ತೋರಿಸುತ್ತದೆಯೇ?ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ನಿಮಗೆ ಚಿಂತೆಯಿದೆಯೇ ?ಇದಕ್ಕೆ ಉತ್ತಮ ಪರಿಹಾರವೆಂದರೆ ನಿಮ್ಮ ಮಗುವನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿ.ಇದರಿಂದ ಮಗುವಿನ ದೈಹಿಕ ಆರೋಗ್ಯ ಹೆಚ್ಚುತ್ತದೆ ಮತ್ತು ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ.

ಶೈಕ್ಷಣಿಕ ಸಾಧನೆ ಸುಧಾರಿಸುತ್ತದೆ:-
ಕೆಲವು ಪೋಷಕರು ತಮ್ಮ ಮಕ್ಕಳನ್ನು ಇತರ ಚಟುವಟಿಕೆಗಳಲ್ಲಿ ತೊಡಗಿಸುವುದರಿಂದ ಓದುವುದರಲ್ಲಿ ಹಿಂದುಳಿಯುತ್ತಾರೆ ಎಂದು ತಿಳಿಯುತ್ತಾರೆ.ಆದರೆ ಶಾಲೆಯ ನಂತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಓದಿನಲ್ಲಿ ಕೂಡ ಮುಂದಿರುತ್ತಾರೆ ಎಂಬುದು ಕಂಡು ಬಂದಿದೆ.ಪಠ್ಯೇತರ ಚಟುವಟಿಕೆಗಳು ಮಕ್ಕಳನ್ನು ಓದಿನ ಕಡೆಗೆ ಕೂಡ ಹೆಚ್ಚು ಆಸಕ್ತರನ್ನಾಗಿ ಮಾಡುತ್ತದೆ.

ಸಮಯ ಪ್ರಜ್ಞೆ ಮೂಡುತ್ತದೆ:-
ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ಸಮಯ ಜ್ಞಾನವನ್ನು ಹೆಚ್ಚು ತೊಡಗಿಸಿಕೊಳ್ಳುತ್ತಾರೆ.ಶಾಲಾದಿನಗಳಲ್ಲಿ ಚಟುವಟಿಕೆಯಿಂದ ಕೂಡಿದ ಮಕ್ಕಳು ಬೆಳೆದು ದೊಡ್ಡವರಾದ ನಂತರವೂ ಸಮಯ ಪ್ರಜ್ಞೆ ಕಾಪಾಡಿಕೊಂಡು ಬರುತ್ತವೆ ಎಂಬುದು ಗಮನಕ್ಕೆ ಬಂದಿದೆ.

ಒತ್ತಡ ನಿವಾರಿಸುತ್ತದೆ:-
ಹೋಂ ವರ್ಕ್,ತರಗತಿಯ ಟೆಸ್ಟ್ ಮತ್ತು ಪರೀಕ್ಷೆಗಳು ಮಕ್ಕಳಿಗೆ ಒತ್ತಡವನ್ನು ನೀಡುತ್ತದೆ.ಇದರಿಂದಾಗಿ ಅವರು ಓದುವುದರ ಕಡೆಗೂ ಹೆಚ್ಚು ಗಮನ ನೀಡಲಾಗುವುದಿಲ್ಲ ಮತ್ತು ಇತರ ಪರೀಕ್ಷೆಗಳಲ್ಲೂ ಒತ್ತಡ ಅನುಭವಿಸುತ್ತಾರೆ. ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಕ್ಕಳಿಗೆ ನಿರಾಳವೆನಿಸುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.



Click it and Unblock the Notifications