Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಚಾಕಲೇಟಿನಿಂದಾಗಿ ಮಕ್ಕಳ ಮೇಲಾಗುವ ಪರಿಣಾಮವೇನು?
ನಾವು ಚಾಕಲೇಟ್ ನ್ನು ತುಂಬಾ ಇಷ್ಟಪಡುತ್ತೇವೆ ಮತ್ತು ಮಗು ಕೂಡ ಚಾಕಲೇಟ್ ನ್ನು ಇಷ್ಟಪಡುತ್ತಿದೆ ಎಂದು ದೂರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಮಗುವಿನ ಮೇಲೆ ಚಾಕಲೇಟ್ ನ ಪರಿಣಾಮವನ್ನು ಪರಿಗಣಿಸಿದರೆ, ನಿಮ್ಮ ಮಗುವಿಗೆ ಎಷ್ಟು ಚಾಕಲೇಟ್ ಒಳ್ಳೆಯದು ಎಂದು ತಿಳಿಯುವುದು ತುಂಬಾ ಮುಖ್ಯ.
ಒಂದೇ ಸಲ ತುಂಬಾ ಚಾಕಲೇಟ್ ತಿಂದರೆ ಅದು ನಿಮ್ಮ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದು. ಒಳ್ಳೆಯ ಗುಣಮಟ್ಟದ ಡಾರ್ಕ್ ಚಾಕಲೇಟ್ ಮತ್ತು ಕೋಕಾದಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರರ್ಥ ನಿಮ್ಮ ಮಗುವಿಗೆ ಚಾಕಲೇಟ್ ಧನಾತ್ಮಕ ಅಂಶಗಳನ್ನು ನೀಡಬಹುದು.
ಆದರೆ ಸಾಮಾನ್ಯವಾಗಿ ನಾವು ಮಗುವಿಗೆ ದುಬಾರಿಯಾಗಿರುವ ಚಾಕಲೇಟ್ ನ್ನು ನೀಡುವುದಿಲ್ಲ. ನಾವು ಸಣ್ಣ ಮಕ್ಕಳಿಗೆ ಸಕ್ಕರೆ, ಹಾಲಿನಿಂದ ಮಾಡಿದಂತಹ ಚಾಕಲೇಟ್ ಗಳನ್ನು ನೀಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇತರ ಯಾವುದೇ ಆರೋಗ್ಯಕರ ಆಹಾರಕ್ಕಿಂತ ನಿಮ್ಮ ಮಗು ಚಾಕಲೇಟ್‌ನ್ನು ಹೆಚ್ಚು ಸೇವಿಸುತ್ತಿದ್ದರೆ ಅದನ್ನು ತಕ್ಷಣ ನಿಲ್ಲಿಸಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಕ್ಕಳ ಹಲ್ಲು ಹುಟ್ಟವಾಗಿನ ನೋವಿಗೆ ಪರಿಹಾರ
ಮಕ್ಕಳಿಗೆ ನೀಡುವ ಚಾಕಲೇಟ್ ನಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ನಡೆಸಿರುವ ಅಧ್ಯಯನಗಳ ಬಗ್ಗೆ ತಿಳಿದರೆ ನಿಮ್ಮ ಮಗುವಿಗೆ ಎಷ್ಟು ಪ್ರಮಾಣದ ಚಾಕಲೇಟ್ ನೀಡಬಹುದು ಎಂದು ತಿಳಿದುಕೊಳ್ಳಬಹುದು.
ನಿಮ್ಮ ಮಗುವಿನ ಆಹಾರ ಕ್ರಮವು ಇತರ ಆಹಾರ ಕ್ರಮದಿಂದ ಸಮತೋಲನ ಕಾಯ್ದುಕೊಂಡರೆ ಒಂದು ಮಿತ ಪ್ರಮಾಣದಲ್ಲಿ ಚಾಕಲೇಟ್ ನೀಡಬಹುದು ಎಂದು ಹೆಚ್ಚಿನ ಅಧ್ಯಯನಗಳು ಹೇಳಿವೆ. ಅತಿಯಾದ ಚಾಕಲೇಟ್ ಸೇವನೆಯಿಂದ ಆಗುವ ಆರೋಗ್ಯದ ಪರಿಣಾಮವು ನಿಮ್ಮ ಮಗುವನ್ನು ಜೀವನಪರ್ಯಂತ ಕಾಡಬಹುದು. ಚಾಕಲೇಟ್ ನಿಂದ ಮಗುವಿನ ಮೇಲಾಗುವ ಕೆಲವೊಂದು ಅತಿ ಮುಖ್ಯ ಆರೋಗ್ಯ ಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ.

ಬೊಜ್ಜು
ಜಗತ್ತಿನಾದ್ಯಂತ ಮಕ್ಕಳಲ್ಲಿ ಬೊಜ್ಜು ಬೆಳೆಯುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮಕ್ಕಳಿಗೆ ಚಾಕಲೇಟ್ ನೀಡುವುದರ ಕೆಟ್ಟ ಪರಿಣಾಮಗಳಲ್ಲಿ ಮೊದಲ ಸ್ಥಾನವನ್ನು ಬೊಜ್ಜು ಮತ್ತು ಅದರ ಸಮಸ್ಯೆಗಳು ಪಡೆದಿದೆ. ಇದು ಇತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.

ಟೈಪ್-2 ಡಯಾಬಿಟಿಸ್
ಇಂದಿನ ದಿನಗಳಲ್ಲಿ ಈ ರೋಗವು ಕೇವಲ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳು ಸೇವಿಸುವ ಸಂಸ್ಕರಿತ ಆಹಾರ, ಫಾಸ್ಟ್ ಫುಡ್ ಮತ್ತು ಚಾಕಲೇಟ್ ಇದಕ್ಕೆ ಕಾರಣ. ದೀರ್ಘಕಾಲದವರೆಗೆ ಅತಿಯಾದ ಚಾಕಲೇಟ್ ಸೇವನೆಯಿಂದ ಅದು ಇನ್ಸುಲಿನ್ ನ ಸಂವೇದನೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಟೈಪ್-2 ಡಯಾಬಿಟಿಸ್ ಉಂಟಾಗಬಹುದು.

ಹೆಚ್ಚಿನ ಕ್ರಿಯಾಶೀಲತೆ
ಚಾಕಲೇಟ್ ನಲ್ಲಿರುವ ರಿಫೈಂಡ್ ಸಕ್ಕರೆಯು ರಕ್ತನಾಳಗಳಿಗೆ ತಲುಪುತ್ತದೆ. ಇದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರ ಪರಿಣಾಮ ಅಡ್ರಿನಾಲಿನ ಉತ್ಪಾದನೆಯಾಗಿ ಅದು ನಿಮ್ಮ ಮಗು ಹೆಚ್ಚು ಕ್ರಿಯಾಶೀಲತೆಯಿಂದ ಇರುವಂತೆ ಮಾಡುತ್ತದೆ.

ವ್ಯಸನ
ನಿಯಮಿತವಾಗಿ ಚಾಕಲೇಟ್ ಸೇವನೆ ಮಾಡುವುದರಿಂದ ನಿಮ್ಮ ಮಗುವಿಗೆ ಇದರ ಚಟವಾಗಬಹುದು. ಇದನ್ನು ನಿಭಾಯಿಸಲು ನಿಮಗೆ ತುಂಬಾ ಕಷ್ಟವಾಗಬಹುದು. ನಿಯಮಿತವಾಗಿ ಚಾಕಲೇಟ್ ಸೇವನೆಯ ಮತ್ತೊಂದು ಅಡ್ಡಪರಿಣಾಮಗಳಲ್ಲಿ ಇದು ಒಂದು. ಮಗು ತಿನ್ನುವ ಚಾಕಲೇಟ್‌ನ ಪ್ರಮಾಣದ ಬಗ್ಗೆ ಹೆತ್ತವರು ನಿಗಾ ಇಡಬೇಕು.

ಚಾಕಲೇಟ್‌ನಲ್ಲಿರುವ ಕೆಫೀನ್ ಪ್ರಭಾವ
ಒಂದು ಔನ್ಸ್ ಹಾಲಿನ ಚಾ0ಕಲೇಟ್ ನಲ್ಲಿರುವ 5 ಮಿಲಿಗ್ರಾಂನಷ್ಟು ಕೆಫಿನ್ ಹೊಂದಿರುತ್ತದೆ. ಕೆಫಿನ್‌ನಲ್ಲಿ ಲಘುವಾದ ಮೂತ್ರವರ್ದಕ ಗುಣಗಳಿವೆ. ಇದರಿಂದಾಗಿ ನಿಮ್ಮ ಮಗು ಆಗಾಗ ಮೂತ್ರವಿಸರ್ಜನೆ ಮಾಡಬಹುದು. ಇದು ಮಕ್ಕಳಿಗೆ ಚಾಕಲೇಟ್ ನೀಡುವ ಮತ್ತೊಂದು ಅಡ್ಡ ಪರಿಣಾಮ.

ಅಲರ್ಜಿ
ಮಾರುಕಟ್ಟೆಯಲ್ಲಿ ಲಭ್ಯವಾಗುವ ಚಾಕಲೇಟ್‌ಗಳಿಗೆ ಇತರ ಕೆಲವೊಂದು ಅಂಶಗಳನ್ನು ಸೇರಿಸಿರುತ್ತಾರೆ. ನಿಮ್ಮ ಮಗುವಿಗೆ ಇಂತಹ ಯಾವುದೇ ಅಂಶದಿಂದ ಅಲರ್ಜಿ ಇದ್ದರೆ ಇದು ಸಮಸ್ಯೆಯಾಗಬಹುದು. ಚಾಕಲೇಟ್ ನಲ್ಲಿ ಹಾಲು ಅಥವಾ ಬೀಜಗಳು ಇದ್ದು, ಅದು ಮಗುವಿಗೆ ಅಲರ್ಜಿಯಾಗಿದ್ದರೆ ಆಗ ಸಮಸ್ಯೆಯಾಗಬಹುದು.

ನಿದ್ರೆಯ ಸಮಸ್ಯೆ
ಚಾಕಲೇಟ್ ನಲ್ಲಿ ಇರುವ ಕೆಫಿನ್ ಅಂಶ ತುಂಬಾ ಕಡಿಮೆಯಾದರೂ ಇದನ್ನು ಅತಿಯಾಗಿ ಸೇವಿಸಿದರೆ ಅದು ನಿಮ್ಮ ಮಗುವಿನ ನಿದ್ರೆಗೆ ಅಡ್ಡಿಯುಂಟು ಮಾಡಬಹುದು. ಈಗ ನಿಮಗೆ ಚಾಕಲೇಟ್ ನಿಂದ ಮಗುವಿನ ಆರೋಗ್ಯದ ಮೇಲಾಗುವ ಅಡ್ಡಪರಿಣಾಮಗಳ ಬಗ್ಗೆ ಮನವರಿಕೆಯಾಗಿರಬಹುದು. ನಿಮ್ಮ ಮಗು ಎಷ್ಟು ಪ್ರಮಾಣದಲ್ಲಿ ಚಾಕಲೇಟ್ ತಿನ್ನಬೇಕು ಎನ್ನುವ ಬಗ್ಗೆ ಗಮನವಿಡಿ.



Click it and Unblock the Notifications