Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಪ್ಪಿತಪ್ಪಿಯೂ ಮಗುವಿಗೆ ಇಂತಹ 5 ವಿಷಯಗಳನ್ನು ಹೇಳಬೇಡಿ!
ನಿಮ್ಮ ಪುಟ್ಟ ಮಗು ಬಹಳ ತುಂಟ ಎಂದು ನಿಮಗನ್ನಿಸುತ್ತದೆಯೇ? ತಜ್ಞರ ಪ್ರಕಾರ, ಪೋಷಕರು ಜೊತೆಯಾಗಿ, ಮಗು ವಿನಾಕಾರಣ ಕೋಪಗೊಂಡು ಅತ್ತರೆ ಅದಕ್ಕೆ ಪ್ರತಿಕ್ರಿಯಿಸಬಾರದು. ನೀವು ವಾದವನ್ನು ಮಾಡುವ ಸಮಯದಲ್ಲಿ ನಿಮ್ಮ ಮಕ್ಕಳಿಗೆ ಯಾವುದೇ ವಿಷಯಗಳನ್ನು ಹೇಳುವಾಗ, ಆ ವಿಷಯದ ಬಗ್ಗೆ ಯೋಚನೆ ಮಾಡದೆ ಹೇಳಿದರೆ ಬಹುಶಃ ಇದರಿಂದ ನೀವು ನಿಮ್ಮ ಮಗುವಿಗೆ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚು ಹಾನಿ ಮಾಡಿದಂತಾಗುತ್ತದೆ.
ನೀವು ಯಾವುದೇ ಕ್ಷಣದಲ್ಲಿ ನಿಮ್ಮ ಮಗುವಿಗೆ ಹೇಳಬಾರದಂತಹ ಕೆಲವು ವಿಷಯಗಳಿವೆ. ಬೊಲ್ಡ್ ಸ್ಕೈ ಇಂತಹ ಕೆಲವು ಅಮೂಲ್ಯವಾದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಹೌದು, ಪೋಷಕರಿಗೆ ಒಂದು ಅತ್ಯಂತ ಕಠಿಣದ ವಿಷಯವೆಂದರೆ ಅವರು ಹೇಗೆ ತಮ್ಮ ಪುಟ್ಟಮಕ್ಕಳೊಂದಿಗೆ ಮಾತನಾಡಬೇಕು ಎಂಬುದನ್ನು ಕಲಿಯುವುದು.

ನಿಸ್ಸಂದೇಹವಾಗಿ, ನಾವು ಮಾತನಾಡುವಲ್ಲಿ ಎಡವಿದರೆ ಇದು ಅವರಿಗೆ ತಪ್ಪು ಕಲ್ಪನೆ ಅಥವಾ ತಪ್ಪು ಸಂದೇಶವನ್ನು ನೀಡುತ್ತದೆ. ಆಶ್ವರ್ಯವೆಂದರೆ ಇದು ನಿಮ್ಮ ಗಮನಕ್ಕೆ ಬಂದಿರುವುದೇ ಇಲ್ಲ! ಇಲ್ಲಿ ನಿಮ್ಮ ಮಗುವಿನೊಂದಿಗೆ ಹೇಳಬಾರದ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು
ನನ್ನನ್ನು ಒಂಟಿಯಾಗಿ ಬಿಡಿ
ನಿಮ್ಮ ಮಗುವಿನ ಬಳಿ ಹೇಳಲೇಬಾರದ ಒಂದು ಪ್ರಮುಖ ವಿಷಯವೆಂದರೆ- 'ನನ್ನನ್ನು ಒಂಟಿಯಾಗಿ ಬಿಡು, ಮತ್ತು ಬಳಿಕ ಬಾ' ಎಂಬ ಮಾತು! ನೀವು ಮಕ್ಕಳಿಗೆ ಮತ್ತೆ ಮತ್ತೆ ನನಗೆ ತೊಂದರೆ ಕೊಡಬೇಡ ಎಂಬುದನ್ನು ಹೇಳುತ್ತಿದ್ದರೆ ಮಕ್ಕಳು ನಿಮ್ಮ ಜೀವನದಲ್ಲಿ ತಾವು ಮುಖ್ಯವಲ್ಲ ಎಂದೇ ತಿಳಿದುಕೊಳ್ಳಲು ಆರಂಭಿಸುತ್ತಾರೆ. ಪಾಲಕರು ಇದನ್ನು ಅರ್ಥಮಾಡಿಕೊಂಡು ದಿನದಲ್ಲಿ ಸ್ವಲ್ಪ ಸಮಯವನ್ನು ಮಕ್ಕಳಿಗೂ ಮೀಸಲಾಗಿಡಬೇಕು.
ನಕಾರಾತ್ಮಕ ಮಾತು
ನಕಾರಾತ್ಮಕ ಪಟ್ಟಿಯನ್ನು ಅಂಟಿಸುವಿಕೆ - ನೀನು ತುಂಬಾ ಸೋಮಾರಿ ಅಥವಾ ನೀನು ಬಹಳ ನಿಧಾನ-ಇಂತಹ ಮಾತುಗಳು ನಿಮ್ಮ ಮಗು ಉತ್ಸಾಹವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಪಾಲಕರು ತಮ್ಮ ಮಕ್ಕಳೊಂದಿಗೆ ಮಾತನಾಡುವಾಗ ಸಾಕಷ್ಟು ಜಾಗರೂಕವಾಗಿರಬೇಕು ಇಲ್ಲವಾದರೆ ಮಕ್ಕಳಲ್ಲಿ ನಕಾರಾತ್ಮಕ ಭಾವನೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗಬಹುದು.
ಅಭ್ಯಾಸ ನಿಮ್ಮನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ
ಈ ಒಂದು ಪ್ರೇರಕ ಸಂದೇಶವಾಗಿದ್ದರೂ ಕೂಡ ಇದರಲ್ಲಿ ಇತರ ಸಾಕಷ್ಟು ಅರ್ಥಗಳಿವೆ. ತಜ್ಞರು, ಈ ವಿಷಯವನ್ನು ಮಕ್ಕಳಿಗೆ ಯಾವತ್ತಿಗೂ ಹೇಳಬಾರದು ಎಂದೇ. ಕಾರಣ ಈ ಹೇಳಿಕೆಯಿಂದ ಮಕ್ಕಳು ತಪ್ಪು ಮಾಡಿದರೆ, ನೀವು ಮಗು ಪರಿಪೂರ್ಣವಾಗಿರಲು ಸಾಕಷ್ಟು ತರಬೇತಿ ನೀಡಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ಒಬ್ಬನೇ ಮಗ/ಮಗಳಿದ್ದರೆ ಅವರ ಸ್ವಭಾವ ಹೀಗಿರುವುದೇ?
ನಿಮ್ಮ ಸೋದರ/ಸೋದರಿಯರಂತೆ ವರ್ತಿಸು
ಮಾಡಲೇಬಾರದ ಒಂದು ಪ್ರಮುಖ ಸಂಗತಿಯೆಂದರೆ ನಿಮ್ಮ ಮಗುವನ್ನು ನಿಮ್ಮ ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದು. ನಿಮ್ಮ ಮಕ್ಕಳನ್ನು ಇತರೊಂದಿಗೆ ಹೋಲಿಸುವದರಿಂದ ನೀವು ಇತರರಿಗಿಂತ ಭಿನ್ನವಾಗಿದ್ದಾರೆ ಎಂಬುದನ್ನು ಹೇಳಿದಂತಾಗುತ್ತದೆಯೇ ಹೊರತು ಅವರು ಹೇಗಿದ್ದಾರೋ ಹಾಗೇ ಇರುವುದು ನಿಮಗೆ ಇಷ್ಟವಾಗುವುದಿಲ್ಲ ಎಂಬ ನಕಾರಾತ್ಮಕ ಭಾವನೆ ನಿಮ್ಮ ಮಗುವಿನಲ್ಲಿ ಬೆಳೆಯಬಹುದು.
ನಾನು ಹೇಳಿದ್ದೇನೆ, ಆದ್ದರಿಂದ ಮಾಡು!
ಪೋಷಕರಾಗಿ ನೀವು ನಿಮ್ಮ ಮಗುವಿನಿಂದ ಕೆಲವು ಕಾರ್ಯಗಳು ನಡೆಯಬೇಕೆಂದು ಬಯಸುತ್ತೀರಿ ಅದು ಸಹಜ ಕೂಡ. ಆದರೆ, ನೀವು ನಿಮ್ಮ ಮಕ್ಕಳು ಇದರಿಂದ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದಾರೆಯೇ ಎಂಬುದನ್ನು ಗಮನಿಸುವುದಿಲ್ಲ. ಆದ್ದರಿಂದ ನಾನು ಹೇಳಿದ್ದೇನೆ. ನೀನು ಈ ಕೆಲಸವನ್ನು ಮಾಡಲೇಬೇಕು ಎಂಬಿತ್ಯಾದಿ ಮಾತುಗಳನ್ನು ಮಗುವಿಗೆ ಹೇಳಲೇಬಾರದು.



Click it and Unblock the Notifications





