ನಿಮ್ಮ ಕಂದಮ್ಮನ ಅಳುವನ್ನು ತಿಳಿದುಕೊಳ್ಳುವುದು ಹೇಗೆ?

By Poornima

ನಿಮ್ಮ ಮಗುವಿನ ಆರೈಕೆಯ ಬಗ್ಗೆ ಸಹಾಯ ಮಾಡುವ ಹಲವಾರು ಪುಸ್ತಕಗಳು ಮತ್ತು ವೆಬ್‌ಸೈಟ್‌ಗಳು ಈಗ ಲಭ್ಯವಿದೆ. ಸರಿಯಾದ ಖಚಿತವಾಗಿ ಪೋಷಕರನ್ನಾಗಿ ನಿಮ್ಮನ್ನು ರೂಪಿಸುವ ಉತ್ತಮ ಕೆಲಸವನ್ನು ಈ ವೆಬ್‌ಸೈಟ್‌ ಲೇಖನಗಳು ಮಾಡುತ್ತವೆ. ಅಲ್ಲದೆ, ತಮ್ಮ ಅತ್ಯುತ್ತಮ ಸಲಹೆಯೊಂದಿಗೆ, ಅನುಭವಿ ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ಕೂಡ ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

ಈ ರೀತಿಯ ಓದಿನಿಂದ ಹಾಗೂ ಮಕ್ಕಳ ಪಾಲನೆಯ ಬಗ್ಗೆ ಸಲಹೆಗಳನ್ನು ಸಾಕಷ್ಟು ಕೇಳಿ ನೀವು ನಿಮ್ಮ ಜಗತ್ತಿನಲ್ಲಿ ಪುಟ್ಟ ಮಗುವೊಂದು ಪ್ರವೇಶಿಸುವಂತೆ ಮಾಡಲು ಸಿದ್ಧರಾಗಬಹುದು. ಆದರೆ ನಿಮ್ಮ ನೀವು ಒಂದು ಮಗುವಿಗೆ ಜನ್ಮ ನೀಡಿದ ನಂತರ ಏನಾಗಬಹುದು? ನಿಮ್ಮ ಮನಸ್ಸು ಸಂಪೂರ್ಣವಾಗಿ ವಿಚಲಿತವಾಗಿ ನಿಮಗೆ ಮಗುವಿನ ಪಾಲನೆಯ ಬಗ್ಗೆ ಕಲಿತ ಪಾಠಗಳೆಲ್ಲವೂ ಮರೆತು ಹೋಗಬಹುದು! ಮತ್ತು ನಿಮ್ಮ ಮಗು ಕ್ಷಣವೂ ಬಿಡದೇ ಅಳುವುದನ್ನೇ ಮುಂದುವರೆಸಬಹುದು ಇಂತಹ ಪರಿಸ್ಥಿತಿ ಎದುರಾದರೆ ನೀವೇನು ಮಾಡುತ್ತೀರಿ? ಮಗು ಸದಾ ಅಳುವುದಕ್ಕೆ ಕಾರಣಗಳೇನು ಎನ್ನುವುದನ್ನು ಹುಡುಕುವುದರಲ್ಲಿಯೇ ನಿಮ್ಮ ಸಹನೆ ಮೀರುತ್ತದೆ. ಹಾಗಾದರೆ ಮಗು ಅಳಲು ಮುಖ್ಯ ಕಾರಣಗಳೇನು? ಇದಕ್ಕೆ ಇಲ್ಲಿದೆ ವಿವರಣೆ:

Does Your Baby Always Cry?

ಪ್ರತಿಯೊಬ್ಬ ಮಗುವೂ ಕಲಿಯಬೇಕಾದ 7 ಮುಖ್ಯ ಕೌಶಲ್ಯಗಳು

ಚಿಂತಿಸಬೇಡಿ ಮಕ್ಕಳು ಸದಾ ಅಳುವುದಿಲ್ಲ.. ಆದರೆ ನೀವು ನಿಮ್ಮ ಮಗುವನ್ನು ಅರ್ಥಮಾಡಿಕೊಳ್ಳಬೇಕು! ಮಕ್ಕಳ ಆರೈಕೆಯ ಪುಸ್ತಕಗಳು ಮಗುವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದಕ್ಕೆ ಸಾಕಷ್ಟು ಸಲಹೆಗಳನ್ನು ನೀಡುತ್ತವೆ. ಮಗು ಅಳುವುದಕ್ಕೆ ಎಲ್ಲಾ ಕಾರಣಗಳು ಹಾಗೂ ಅದಕ್ಕೆ ಸೂಕ್ತ ಪರಿಹಾರಗಳನ್ನೂ ಈ ಪುಸ್ತಕಗಳಲ್ಲಿ ಸೂಚಿಸಲಾಗಿರುತ್ತದೆ. ಆದರೆ ಪ್ರತಿಯೊಂದು ಮಗುವೂ ಒಂದೇ ರೀತಿ ಇರುವುದಿಲ್ಲ. ಎಲ್ಲಾ ಮಗುವಿಗೂ ವಯಕ್ತಿಕ ಚಿಕಿತ್ಸೆಯ ಅಗತ್ಯವಿರುತ್ತದೆ.

ಕೆಲವು ಮಕ್ಕಳು ಅತ್ಯಂತ ಮೌನವಾಗಿದ್ದರೆ ಇನ್ನೂ ಕೆಲವು ಮಕ್ಕಳು ಸದಾ ಅಳುತ್ತಿರುತ್ತವೆ. ಆದ್ದರಿಂದ ನೀವು ಸಹನೆಯಿಂದಿರಬೇಕು ಮಕ್ಕಳ ಬಯಕೆಯನ್ನು ಅರ್ಥಮಾಡಿಕೊಳ್ಳಬೇಕು. ಒಂದೇ ನಿಯಮಗಳು ಎಲ್ಲಾ ಮಕ್ಕಳಿಗೂ ಅನ್ವಯಿಸುವುದಿಲ್ಲ. ಯಾವುದೇ ಮಗು ಕಾರಣವಿಲ್ಲದೇ ಅಳುವುದಿಲ್ಲ. ಇಲ್ಲಿ ಮಗುವಿನ ಆರೈಕೆಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ನೀಡಲಾಗಿದೆ. ಇವು ನಿಮ್ಮ ಮಗು ಯಾಕೆ ಹೆಚ್ಚಾಗಿ ಅಳುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯಕವಾಗಬಲ್ಲದು.

ಹಸಿವು
ನೀವು ನಿಮ್ಮ ಮಗುವಿಗೆ ಯಾವಾಗ ಆಹಾರ (ಸ್ತನ್ಯಪಾನ) ನೀಡಿದ್ದೀರಿ ಎನ್ನುವುದು ನೆನಪಿದೆಯೇ? ಮಗುವಿಗೆ ಆಹಾರ ತಿನ್ನಿಸಿದ ಸಮಯವನ್ನು ನೆನಪಿಸಿಕೊಳ್ಳಿ. ನಿಮ್ಮ ಮಗು ಆರಂಭಿಕ ಹಂತಗಳಲ್ಲಿ ಬಹಳ ವೇಗವಾಗಿ ಬೆಳೆಯುತ್ತದೆ ಮತ್ತು ಅದಕ್ಕೆ ತಕ್ಕಂತೆ, ಅವನು/ಅವಳಿಗೆ ಆಹಾರವನ್ನು ನೀಡುವ ಅಗತ್ಯವಿದೆ. ನೀವು ಮಗುವಿಗೆ ಆಹಾರವನ್ನು ನೀಡಲು ವಿಳಂಬ ಮಾಡಿದರೆ ಅದು ಖಂಡಿತವಾಗಿಯೂ ಹಸಿವಿನಿಂದ ಅಳುತ್ತದೆ. ಏಕೆಂದರೆ ಮಕ್ಕಳಿಗೆ ಸಂವಹನದ ಮಾರ್ಗವೆಂದರೆ ಅದು ಅಳುವುದು ಮಾತ್ರ!

ಮಲಗುವ ಸಮಯ
ಪ್ರತಿ ಮಗುವಿಗೆ ಅಗತ್ಯವಿರುವ ಮತ್ತೊಂದು ಮುಖ್ಯ ಅಂಶವೆಂದರೆ ನಿದ್ರೆ. ಶಾಂತಿಯುತವಾಗಿ ಮಲಗಿರುವ ಮಗು ಯಾವಾಗಲು ಒಂದು ಸುಂದರ ನೋಟವನ್ನು ಒದಗಿಸುತ್ತದೆ. ಒಂದು ವೇಳೆ ನೀವು ನಿಮ್ಮ ಮಗುವಿಗೆ ನಿದ್ರೆ ಮಾಡಿಸುವುದನ್ನು ತಪ್ಪಿಸಿದರೆ ಈ ಸುಂದರ ಚಿತ್ರ ದುಃಸ್ವಪ್ನವಾಗಿ ಪರಿವರ್ತನೆಯಾಗಬಹುದು!

ಮಗುವಿಗೆ ಪರಿಪೂರ್ಣ ಬಾಡಿ ಮಸಾಜ್ ಮಾಡುವುದು ಹೇಗೆ?

ಅಹಿತಕರ ವಾತಾವರಣ
ಮಕ್ಕಳು ಯಾವಾಗಲೂ ಅಳಲು ಇನ್ನೊಂದು ಮುಖ್ಯ ಕಾರಣವೆಂದರೆ ಅಹಿತಕರ ಸನ್ನಿವೇಶ. ಅಳುವುದರ ಮೂಲಕ ಮಾತ್ರ ಒಂದು ಮಗು ನಿಮ್ಮ ಗಮನ ಸೆಳೆಯಲು ಸಾಧ್ಯ. ಆದ್ದರಿಂದ, ಒಂದು ಮಗು ಅಳುತ್ತದೆ ಎಂದರೆ ಬಹುಶಃ ಅದಕ್ಕೇನೋ ಸಮಸ್ಯೆಯುಂಟಾಗಿದೆ ಎಂದರ್ಥ. ಆದ್ದರಿಂದ ನಿಮ್ಮ ಮಗು ಮಲಗಿರುವ ಸ್ಥಳವನ್ನು ಪರಿಶೀಲಿಸಿ. ಮಗುವನ್ನು ಮಲಗಿಸಿರುವ ಮತ್ತು ಮೇಲ್ಹೊದಿಕೆ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಬಿಗಿಯಾದ ಉಡುಪುಗಳು ಮಗು ಅಳಲು ಒಂದು ಕಾರಣವಾಗಿರಬಹುದು. ಅಥವಾ ಮಗುವಿನ ಒದ್ದೆಯಾದ ಡೈಪರ್ ನಿಂದ ಮಗು ಅಳುತ್ತಿರಬಹುದು. ಆದ್ದರಿಂದ ಅದನ್ನು ತಕ್ಷಣ ಬದಲಾಯಿಸಿ.

ಅಸ್ವಸ್ಥ
ನಿಮ್ಮ ಮಗುವು ಆರೋಗ್ಯಕರವಾಗಿದೆಯೇ? ಮಗುವಿನ ದೇಹಲಕ್ಷಣ ಸರಿಯಾಗಿದ್ದೂ ಮಗು ಅಳುತ್ತಿದ್ದರೆ ಮಗುವಿನ ಟೆಂಪ್ರೇಚರ್ (ಮೈ ಬಿಸಿ) ಪರೀಕ್ಷಿಸಿ. ನಿಮ್ಮ ಮಗುವಿನ ಅಳುವಿನ ಕಾರಣವನ್ನು ಪರಿಶೀಲಿಸುವುದು ಪೋಷಕರಾದ ನಿಮ್ಮ ಜವಾಬ್ದಾರಿ. ಅಸ್ವಸ್ಥತೆ ಮಗು ಅಳುವ ಕಾರಣಗಳಲ್ಲಿ ಒಂದಾಗಿರಬಹುದು.

ಪರಿಚಯವಿಲ್ಲದ ವಾತಾವರಣ
ಕೆಲವು ಮಕ್ಕಳು ಸುತ್ತಮುತ್ತಲಿನ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ನಿಮ್ಮ ಮಗುವಿಗೆ ಈ ರೀತಿಯದ್ದಾಗಿದ್ದರೆ, ನೀವು ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಮಗುವನ್ನು ಉತ್ತಮ ವಾತಾವರಣಕ್ಕೆ ಕರೆದುಕೊಂಡುಹೋಗಿ. ಮಗುವಿಗೆ ಇಷ್ಟವಾದ ಅದು ಆಟವಾಡುವಂತಹ ವಸ್ತುವನ್ನೇ ಜೊತೆಗೆ ತೆಗೆದುಕೊಂಡು ಹೋಗಿ ಹೀಗಾದರೆ ಹೊಸ ವಾತಾವರಣ ಮಗುವಿಗೆ ಅಸಹಜವೆನಿಸುವುದಿಲ್ಲ.

X
Desktop Bottom Promotion