Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ಅವಳಿ ಮಕ್ಕಳ ಕುರಿತ ರಹಸ್ಯಗಳು ನಿಮಗೆ ತಿಳಿದಿದೆಯೇ?
ಅವಳಿ ಮಕ್ಕಳು ಇತರರಿಗಿಂತ ವಿಭಿನ್ನವಾಗಿದ್ದು ಕೌತುಕಮಯರಾಗಿರುತ್ತಾರೆ. ಹೆಚ್ಚಿನವರ ಪಾಲಿಗೆ ಈ ಅವಳಿ ಮಕ್ಕಳು ಕುತೂಹಲವನ್ನುoಟು ಮಾಡುವವರು ಹಾಗೂ ನಿಗೂಢಪ್ರಾಯರಾಗಿರುತ್ತಾರೆ. ಅವಳಿ ಮಕ್ಕಳ ಕುರಿತು ಜನರಲ್ಲಿ ಹಲವಾರು ಕಾಲ್ಪನಿಕ ಅನಿಸಿಕೆ, ಅಭಿಪ್ರಾಯಗಳಿರುತ್ತವೆ. ನಾವೀಗ, ಅವಳಿ ಮಕ್ಕಳ ಕುರಿತ ಈ ರಹಸ್ಯಗಳು ಮತ್ತು ತಪ್ಪು ತಿಳುವಳಿಕೆಗಳ ಕುರಿತು ವಿಮರ್ಶಿಸೋಣ ಹಾಗೂ ಅವುಗಳನ್ನು ಉತ್ತರಿಸೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಗುವಿನ ಹುಟ್ಟುಹಬ್ಬಕ್ಕೆ ಕೆಲವೊಂದು ಐಡಿಯಾಗಳು
1.ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ತದ್ರೂಪಿ ಅವಳಿಗಳಾಗಲು ಸಾಧ್ಯವೇ ?
ಇದಕ್ಕೆ ಚುಟುಕಾದ ಮತ್ತು ಸವಿಯಾದ ಉತ್ತರವು "ಇಲ್ಲ" ಎಂಬುದೇ ಆಗಿದೆ. ವಸ್ತುಸ್ಥಿತಿ ಏನೆಂದರೆ, ಜನಸಾಮಾನ್ಯರು "ತದ್ರೂಪು ಅವಳಿ" ಎಂಬ ಪದದ ಸರಿಯಾದ ತಿಳುವಳಿಕೆಯನ್ನು ಹೊಂದಿಲ್ಲ. "ಬ್ರಾತೃತ್ವ" ಅಥವಾ "ತದ್ರೂಪು" ಎಂಬ ಪದವು, ಅವಳಿಗಳು ಹೇಗೆ ರೂಪುಗೊಂಡಿವೆ ಎಂಬುದನ್ನು ವಿವರಿಸುತ್ತದೆಯೇ ಹೊರತು ಅವಳಿಗಳು ಹೇಗೆ ಕಾಣಿಸುತ್ತವೆ ಎಂಬುದನ್ನಲ್ಲ. ತದ್ರೂಪು ಅವಳಿಗಳು (monozygotic) ಒಂದೇ ಲಿಂಗದವುಗಳಾಗಿರುತ್ತವೆ. ತದ್ರೂಪು ಅವಳಿಗಳು ಒಂದೇ ಅಂಡಾಣು ವಿನಿoದ (zygote) ರೂಪುಗೊಳ್ಳುತ್ತವೆ.

ತದ್ರೂಪು ಅವಳಿ ಮಕ್ಕಳು, ಒಂದೋ ಹೆಣ್ಣು ಮಕ್ಕಳಾಗಿರುತ್ತವೆ ಇಲ್ಲವೇ ಗಂಡು ಮಕ್ಕಳಾಗಿರುತ್ತವೆ (XX). ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲು ಸಾಧ್ಯವಿಲ್ಲ. ಈಗ ಮತ್ತೊಂದೆಡೆ, ಬ್ರಾತೃತ್ವ (ಅಥವಾ ಸಹೋದರೀಯ) ಅವಳಿಗಳು ಎರಡು ವಿಭಿನ್ನ ಅಂಡಾಣುಗಳಿoದ ರೂಪುಗೊoಡಿರುತ್ತವೆ. ಈ ಕಾರಣದಿಂದ, ಬ್ರಾತೃತ್ವ ಅವಳಿಗಳು ಒಂದೋ ಇಬ್ಬರೂ ಗಂಡು ಮಕ್ಕಳಾಗಿರಬಹುದು, ಇಲ್ಲವೇ ಇಬ್ಬರೂ ಹೆಣ್ಣು ಮಕ್ಕಳಾಗಿರಬಹುದು, ಅಥವಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಾಗಿರಲೂಬಹುದು.
2.ಅವಳಿ ಮಕ್ಕಳು ವಿಭಿನ್ನ ಜನ್ಮದಿನಗಳನ್ನು ಹೊಂದಿರುವುದು ಸಾಧ್ಯವೇ ?
ಅವಳಿ ಮಕ್ಕಳು, ಎರಡು ಪ್ರತ್ಯೇಕ ಮಕ್ಕಳಾಗಿದ್ದು ಒಟ್ಟಿಗೆ ಜನಿಸಿದವರಾಗಿರುತ್ತಾರೆ. ಅಂದಮಾತ್ರಕ್ಕೆ ಅವರು ಒಂದೇ ದಿನದಂದು ಹುಟ್ಟಿದವರಾಗಿರಬೇಕೆoದೇನೂ ಇಲ್ಲ. ಕೆಲವೇ ಕ್ಷಣಗಳ ಅಂತರದಲ್ಲಿ ಅವರು ಹುಟ್ಟಿರುವ ಸಾಧ್ಯತೆಗಳೂ ಇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಂಕೋಚ ಸ್ವಭಾವದ ಮಕ್ಕಳ ಪೋಷಣೆಗೆ ಸಲಹೆಗಳು
3.ಅವಳಿ ಮಕ್ಕಳ ಜನನಕ್ಕೆ ಅನುವಂಶೀಯ ಅಥವಾ ಕೌಟುoಭಿಕ ಕಾರಣಗಳೇನಾದರೂ ಇರಬಹುದೇ ?
ತಾಯಿಯು ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಬಿಡುಗಡೆ ಮಾಡುವ ಜೀನ್ ಅನ್ನು ಅನುವoಶೀಯವಾಗಿ ಪಡೆದವಳಾಗಿದ್ದು, ತನ್ಮೂಲಕ ಬ್ರಾತೃತ್ವ ಅವಳಿಗಳನ್ನು ಪಡೆದವಳಾಗಿದ್ದರೆ, ಅವಳಿ ಮಕ್ಕಳ ಜನನಕ್ಕೆ ಅನುವoಶೀಯತೆಯೂ ಸಹ ಕಾರಣವಾಗಿರುತ್ತದೆ. ತದ್ರೂಪು ಅವಳಿಗಳು ಯಾದೃಚ್ಚಿಕವಾಗಿದ್ದು, ಇವುಗಳ ಜನನಕ್ಕೆ ಕುಟುಂಬವು ಕಾರಣವಾಗಿರುವುದಿಲ್ಲ.
4.ಅವಳಿಗಳು ರಹಸ್ಯ ಭಾಷೆಯನ್ನು ಹೊoದಿರುತ್ತವೆಯೇ ?
ಅವಳಿಗಳು ರಹಸ್ಯ ಭಾಷೆಯನ್ನು ಹಂಚಿಕೊಳ್ಳುತ್ತವೆ ಎಂಬುದು ಕೇವಲ ಕಾಲ್ಪನಿಕ. "ರಹಸ್ಯ ಭಾಷೆ " "ಸ್ವತಂತ್ರ ಭಾಷೆ" , ಅಥವಾ "ಸಮೂಹ ಭಾಷೆ" ಇತ್ಯಾದಿ ಪದಗಳು ಅವಳಿ ಮಕ್ಕಳ ಭಾಷೆಯ ಪರಿಕಲ್ಪನೆಯನ್ನು ವಿವರಿಸುತ್ತವೆ. ಈ ಭಾಷೆಯು ಅವಳಿಗಳ ತೊದಲುವಿಕೆ, ಅಸಂಗತ ಅಥವಾ ಅನಿಯಮಿತ ಧ್ವನಿಯಾಗಿದ್ದು, ಇತರ ಎಲ್ಲಾ ಮಕ್ಕಳ ತೊದಲು ನುಡಿಯೇ ಆಗಿದ್ದು ಬೇರೇನೂ ವಿಶೇಷವಿಲ್ಲ. ಇದು ಈ ಮಕ್ಕಳ ಪರಸ್ಪರ ಸಂವಹನ ಮತ್ತು ಭಾಷಾಭಿವೃದ್ಧಿಯ ಒಂದು ಮಾರ್ಗವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 35ನೇ ವಯಸ್ಸಿನಲ್ಲಿ ತಾಯಿಯಾಗುವಿರಾ?
5.ಅವಳಿ ಮಕ್ಕಳು ಒಂದೇ ರೀತಿಯ ಬೆರಳಚ್ಚನ್ನು ಹೊoದಿರುತ್ತಾರೆಯೇ ?
ತದ್ರೂಪು ಅವಳಿಗಳ ಕುರಿತು ಹೇಳುವುದಾದರೆ ಉತ್ತರವು "ಇಲ್ಲ" ಎಂದೇ ಆಗಿದೆ. ತದ್ರೂಪು ಅವಳಿಗಳು ಒಂದೇ ತೆರನಾದ ಜೀನ್ (ವಂಶವಾಹಿ)ಗಳ ವಿನ್ಯಾಸವನ್ನು ಹೊಂದಿರುತ್ತವೆ. ಈ ಅವಳಿ ಮಕ್ಕಳ DNA ಯು ಸಿಪ್ಪೆಯೊಳಗಿನ ಏರಡು ಕಾಳುಗಳಂತೆ ಇದ್ದು, ಮೇಲ್ನೋಟಕ್ಕೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿರುವುದಿಲ್ಲ.



Click it and Unblock the Notifications











