ವಿಚ್ಛೇದಿತ ಪಾಲಕರು ಮಾಡುವ ಮುಖ್ಯ 5 ಅಚಾತುರ್ಯಗಳು!

By Super

ದಾಂಪತ್ಯ ಎನ್ನುವುದು ಒಂದು ಮಧುರವಾದ ಸಂಬಂಧ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆಯೋ ಅಷ್ಟು ಸಮಯ ಸರಿಯಾಗಿರುತ್ತದೆ. ಗಂಡ- ಹೆಂಡತಿಯ ನಡುವೆ ಯಾವುದೇ ಕಾರಣಕ್ಕೆ ಜಗಳ ಬಂದರೂ ಅದು ವಿಚ್ಛೇದನ ಮಟ್ಟಕ್ಕೆ ತಲುಪಬಹುದು. ವಿವಾಹ ವಿಚ್ಛೇದನವಾದ ಮೇಲೆ ವಿಚ್ಛೇದಿತ ದಂಪತಿಗಳಿಗಿಂತ ಹೆಚ್ಚು ನೋವು, ತೊಂದರೆಯನ್ನು ಅನುಭವಿಸುವವರು ಅವರ ಮಕ್ಕಳು!

ವಿಚ್ಛೇದನವಾದ ಮೇಲೆ ಮಗುವನ್ನು ಗಂಡ ಅಥವಾ ಹೆಂಡತಿ ಒಬ್ಬರೇ ನೋಡಿಕೊಳ್ಳಬೇಕಾಗುತ್ತದೆ. ಆಗ ಅವರ ಮನಃಸ್ಥಿತಿ ಸರಿಯಾಗಿಲ್ಲದಿದ್ದರೆ ಮಕ್ಕಳ ಕಡೆಗೆ ಸರಿಯಾಗಿ ಗಮನ ಕೊಡದೇ ಮಕ್ಕಳ ಯಾವುದೇ ವಿಷಯದಲ್ಲಿ /ಕೆಲಸದಲ್ಲಿ ಸಹಾಯಮಾಡಲೂ ಸಾಧ್ಯವಾಗುವುದಿಲ್ಲ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ವಿಚ್ಛೇದಿತ ದಂಪತಿಗಳ ಮಕ್ಕಳು ಬೆಳೆಯುತ್ತಿದ್ದ ಹಾಗೆ ಅವರ ಜೊತೆಯಲ್ಲೇ ವಿಚ್ಛೇದನದ ಪರಿಣಾಮ ಕೂಡ ಅಧಿಕವಾಗುತ್ತಾ ಸಾಗುತ್ತದೆ. ಆದ್ದರಿಂದ ಪಾಲಕರು ಈ ಬಗ್ಗೆ ಹೆಚ್ಚು ಗಮನವಹಿಸಿ, ತಮ್ಮ ನಡವಳಿಕೆಯನ್ನು ಸರಿಮಾಡಿಕೊಳ್ಳಬೇಕಾದುದು ಬಹಳ ಮುಖ್ಯ.

ಇಲ್ಲಿ ವಿಚ್ಛೇದಿತ ದಂಪತಿಗಳು ಮಾಡುವ ಪ್ರಮುಖ 5 ತಪ್ಪುಗಳನ್ನು ಹೇಳಲಾಗಿದೆ.

Top 5 Mistake Divorced Parents Make

1. ನಿಮ್ಮ ಮಗುವನ್ನು ಸಂದೇಶಕರಂತೆ ಬಳಸಿಕೊಳ್ಳಬೇಡಿ

ಸಾಮಾನ್ಯವಾಗಿ ಬಹಳಷ್ಟು ದಂಪತಿಗಳು ವಿಚ್ಛೇದನದ ಹಂತದಲ್ಲಿದ್ದಾಗ ಅಥವಾ ವಿಚ್ಛೇದನವಾದ ನಂತರ ಯಾವುದೇ ವಿಷಯವನ್ನು ಸಂವಹನ ಮಾಡುವಾಗ ಮಕ್ಕಳನ್ನು ಸಂದೇಶಕರಂತೆ ಬಳಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇಂದಿನ ದಿನಗಳಲ್ಲಿ ನಿಮ್ಮ ವಿಚ್ಛೇದಿತ ಸಂಗಾತಿಯೊಂದಿಗೆ ಮಾತನಾಡಲು ಮೇಲ್ ಮಾಡುವುದು ಅತ್ಯಂತ ಸುಲಭ ಹಾಗೂ ಉತ್ತಮವಾದ ವಿಧಾನವಾಗಿದೆ. ಅಲ್ಲದೇ ನಿಮ್ಮ ಯಾವುದೇ ವಯಕ್ತಿಕ ಮಾತುಗಳನ್ನೂ ಆಡಬಹುದಾಗಿದ್ದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಭಯವಿರುವುದಿಲ್ಲ. ಜೊತೆಗೆ ಇಂತಹ ಸಂದೇಶಗಳನ್ನು ಕೋರ್ಟ್ ಗೆ ಸಾಕ್ಷಿಯಾಗಿಯೂ ಇಡಬಹುದು.

2. ನಿಮ್ಮ ಮಗುವನ್ನು ಚಿಕಿತ್ಸಕರನ್ನಾಗಿಸಬೇಡಿ

ಹದಿಹರಯದ ಮಕ್ಕಳಿಗೆ ಪಾಲಕರ ನಿಯಂತ್ರಣದ ಅಗತ್ಯವಿರುತ್ತದೆ. ವಿಚ್ಛೇದಿತ ಪಾಲಕರಿಂದ ಇದು ದೊರಕದೆ ಇದ್ದಾಗ ಅವರ ಆಸೆಗಳು ನುಚ್ಚುನೂರಾಗುತ್ತವೆ. ವಿಚ್ಛೇದನಕ್ಕೆ ಸಂಬಂಧಿಸಿದ ನಿಮ್ಮ ವಿಷಯಗಳನ್ನು ಅವರೊಂದಿಗೆ ಚರ್ಚಿಸಬೇಡಿ. ಹಾಗೂ ಅತಿಯಾದ ಸಿಟ್ಟು, ಅಸಮಧಾನವನ್ನು ತೋರಿಸದಿರಿ. ಅವರನ್ನು ನಿಯಂತ್ರಿಸುವಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿರಬೇಕು ಹಾಗೂ ನಿಮಗೆ ವಿಚ್ಛೇದನ ವಿಷಯದಲ್ಲಿ ಯಾವುದೇ ಸಹಾಯಬೇಕಿದ್ದರೂ ಇದರಲ್ಲಿ ಮಕ್ಕಳನ್ನು ಮಧ್ಯತರದೇ ಹೊರಗಿನವರ ಸಹಾಯ ಕೇಳಿ. ನಿಮ್ಮ ಮಕ್ಕಳನ್ನು ನಿಮ್ಮ ವಿಷಯದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಅವರ ಮನಃಸ್ಥಿತಿಯನ್ನು ಹಾಳುಮಾಡುತ್ತದೆ.

3. ನಿಮ್ಮ ಮಗುವನ್ನು ಸಂತೈಸಿ

ಮಕ್ಕಳು ಎಲ್ಲವನ್ನು ಅರ್ಥಮಾಡಿಕೊಳ್ಳಲ್ ಸಾಧ್ಯವಿಲ್ಲ. ಆದರೆ ಅವರು ಅರ್ಥಮಾಡಿಕೊಳ್ಳುವಂತೆ ನೀವು ಸಹಾಯ ಮಾಡಿ. ವಿಚ್ಛೇದನದಿಂದ ನಿಮ್ಮ ಮನಸ್ಸು ವಿಚಲಿತವಾಗಿದ್ದರೆ ಅದನ್ನು ಮಗುವಿನ ಮುಂದೆ ತೋರಿಸಬೇಡಿ. ಅವರ ಮಾತುಗಳನ್ನು ಆಲಿಸಿ. ಅವರು ಏನು ಯೋಚಿಸಬೇಕು ಎನ್ನುವುದನ್ನು ನೀವು ಹೇಳಬೇಡಿ. ಜೊತೆಗೆ ನಿಮ್ಮ ಮಾಜಿ ಸಂಗಾತಿಯನ್ನು ಮಗುವಿನ ಮುಂದೆ ದೂಷಿಸಬೇಡಿ. ಇದು ನಿಮ್ಮ ಮಗುವನ್ನು ನೀವೇ ದೂಷಿಸಿದಂತೆ. ಮಕ್ಕಳು ಏನು ಹೇಳುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ. ಅವರ ಎಲ್ಲ ಮಾತಿಗೂ ನಿಮ್ಮಲ್ಲಿ ಪರಿಹಾರವಿಲ್ಲದಿರಬಹುದು. ಆದರೆ ಅವರ ಮಾತುಗಳನ್ನು ಸಂಪೂರ್ಣವಾಗಿ ಆಲಿಸಿ.

ಪ್ರೀತಿಯ ಸಂಪರ್ಕ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಎಲ್ಲವನ್ನೂ ಗುಣಪಡಿಸಬಹುದು!

4. ಮೂರನೆ ಸ್ಥಾನವನ್ನು ತಪ್ಪಿಸಿ

ಮಗು ವಿಚ್ಛೇದನದ ನಂತರ ತಂದೆ ಯಾ ತಾಯಿಯ ಬಳಿ ಬೆಳೆಯಬೇಕಾಗುತ್ತದೆ. ಆದ್ದರಿಂದ ಆ ಮಗುವಿಗೆ ಯಾವುದೆ ಕೊರತೆಯಿಲ್ಲದಂತೆ ನೋಡಿಕೊಳ್ಳಬೇಕು.ಮಕ್ಕಳನ್ನು ಯಾವುದೇ ಮಾನಸಿಕ ಒತ್ತಡಕ್ಕೆ ಸಿಲುಕಿಸದೆ ಅವರಿಗೆ ಮೋಜಿ ಮಸ್ತಿನ ಪ್ರಶ್ನೆಗಳನ್ನು ಕೇಳುತ್ತ ಅವರೊಂದಿಗೆ ಸಂತೋಷದಿಂದ ವರ್ತಿಸಿ.

5. ನೀವು ಈ ಮೊದಲೇ ಮಾಡಿದ ತಪ್ಪುಗಳನ್ನು ಸರಿಪಡಿಸಿ

ಸಾಕಷ್ಟು ವಿಚ್ಛೇದಿತರು ಈ ಮೇಲೆ ಹೇಳಿದ ತಪ್ಪುಗಳನ್ನು ಮಾಡಿರುತ್ತಾರೆ. ಹಾಗಾಗಿ ಅವುಗಳನ್ನು ಅರಿತು ಮೊದಲು ಆ ತಪ್ಪುಗಳನ್ನು ಸರಿಪಡಿಸಿ.

ನಿಮ್ಮ ಮಕ್ಕಳಲ್ಲಿ ನೀವು ಮಾಡಿದ ತಪ್ಪಿಗೆ ಕ್ಷಮೆ ಕೇಳಿ. ಮಕ್ಕಳಲ್ಲಿ ಕ್ಷಮಿಸುವ ಗುಣ ಅಗಾಧವಾಗಿರುತ್ತದೆ. ನಿಮ್ಮಿಂದ ತಪ್ಪುಗಳಾದಾಗ ಅವರೇ ಎಚ್ಚರಿಸುವಂತೆ ಮಾಡಿ. ಉದಾಹರಣೆಗೆ ನಿಮ್ಮ ಮಾಜಿ ಸಂಗಾತಿಯ ಬಗ್ಗೆ ನೀವು ವಿಮರ್ಶೆ ಮಾಡ ತೊಡಗಿದರೆ ನಿಮ್ಮ ಮಗುವೇ ಅದನ್ನು ತಡೆಯುವಂತೆ ಮಾಡಿ. ಹೀಗಾದಾಗ ನಿಮ್ಮ ಮಗುವಿಕೆ ನಿಮ್ಮ ಮೇಲೆ ಯಾವುದೇ ತಪ್ಪು ಭಾವನೆಗಳಿಲ್ಲದೇ ನಿಮ್ಮೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.

X
Desktop Bottom Promotion