Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ಮಕ್ಕಳು ಬಿಕ್ಕುತ್ತಾ ಮಾತನಾಡುವ ಸಮಸ್ಯೆಗೆ ಪರಿಹಾರ
ಮಕ್ಕಳು ತೊದಲು ಮಾತನಾಡುವುದನ್ನು ಕೇಳಲು ತುಂಬಾ ಖುಷಿಯಾಗುತ್ತದೆ. ಆದರೆ ಅವರು 5 ವರ್ಷದ ಬಳಿಕವೂ ತೊದಲು ಮಾತನಬಾಡುತ್ತದ್ದರೆ ಚಿಂತೆ ಮಾಡಬೇಕಾದ ವಿಷಯ. ಮಗು ಓದುವಾಗ, ಮಾತನಾಡುವಾಗ ಬಿಕ್ಕುವುದು, ತಡವರಿಸುವುದು ಈ ರೀತಿಯ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಸ್ಪೀಚ್ ಥೆರಾಪಿಸ್ಟ್ (speech therapist) ಅವರಿಂದ ಸಲಹೆಯನ್ನು ಪಡೆದು ಗುಣ ಪಡಿಸಬಹುದು.
ನಿಮ್ಮ ಮಗು ಸರಾಗವಾಗಿ ಮಾತನಾಡಲು ಈ ಕೆಳಗಿನ ಸಲಹೆಗಳು ಕೂಡ ಪರಿಣಾಮಕಾರಿಯಾಗಿವೆ:

1. ಯೋಗಾ
ಯೋಗ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಮಗುವಿನಲ್ಲಿರುವ ಭಯವನ್ನು ಹೋಗಲಾಡಿಸಿ, ಸರಾಗವಾಗಿ ಮಾತನಾಡಲು ಯೋಗ ಸಹಾಯ ಮಾಡುತ್ತದೆ.
2. ಕನ್ನಡಿ ಮುಂದೆ ಅಭ್ಯಾಸ
ಮಗುವಿನ ಮಾತಿನಲ್ಲಿ ತೊದಲಿಕೆ ಇದ್ದರೆ ಕನ್ನಡಿ ಮುಂದೆ ನಿಲ್ಲಿಸಿ ಮಾತನಾಡಲು ಹೇಳಿ. ನೀವೂ ಹುರಿತುಂಬಿಸಿ. ಮಗುವಿನ ಜೊತೆ ಮಾತನಾಡುವಾಗ ತುಂಬಾ ಸ್ಪಷ್ಟವಾಗಿ ಉಚ್ಚಾರಣೆ ಮಾಡಿ.
3. ಜೋರಾಗಿ ಬುಕ್ ಓದಲು ಹೇಳಿ
ಪಾಠವನ್ನು ಮನಸ್ಸಿನಲ್ಲಿಯೇ ಓದುವ ಬದಲು ಓರಾಗಿ ಓದಲು ಹೇಳಿ, ಅವರು ಓದುವುದನ್ನು ನೀವು ಕೇಳಿ, ಮಗುವಿಗೆ ಪ್ರೋತ್ಸಾಹ ಕೊಡಿ. ಈ ರೀತಿ ಮಾಡಿದರೆ ಆ ಮಗುವಿಗೆ ಮಾತನಾಡುವಾಗ ಆತ್ಮವಿಶ್ವಾಸ ಬರುತ್ತದೆ.
4. ಉಸಿರಾಟದ ವ್ಯಾಯಾಮ
ಮಾತಿನಲ್ಲಿ ತೊದಲಿಕೆ, ಮಾತನಾಡುವಾಗ ತಡವರಿಸುವುದು ಈ ರೀತಿ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಉಸಿರಾಟದ ವ್ಯಾಯಾಮ ಸಹಾಯ ಮಾಡುತ್ತದೆ.
5. ಸ್ಪೀಚ್ ಥೆರಪಿ
ಸ್ಪೀಚ್ ಥೆರಪಿ ನೀಡಿದರೆ ಮಕ್ಕಳಿಗೆ ಆತ್ಮವಿಶ್ವಾಸ ಮೂಡುತ್ತದೆ. ಮಗು ನಿಧಾನಕ್ಕೆ ತಡವರಿಸದೆ ಮಾತನಾಡಲಾರಂಭಿಸುತ್ತದೆ.
ಈ ವಿಧಾನಗಳು ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಮೂಡಿಸಿ ನಿಮ್ಮ ಮಗು ತಡವರಿಸದೆ ಮಾತನಾಡುವಂತೆ ಮಾಡುತ್ತದೆ.



Click it and Unblock the Notifications
