Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಮಕ್ಕಳನ್ನು ಸೇರಿಸುವ ಶಾಲೆ ಹೀಗಿದ್ದರೆ ಒಳ್ಳೆಯದು

ಕೆಲವು ಪೋಷಕರಿಗೆ ಅಧಿಕ ಡೊನೇಷನ್ ಕೊಟ್ಟರೆ ಸ್ಕೂಲ್ ಚೆನ್ನಾಗಿರುತ್ತದೆ ಎಂಬ ಆಲೋಚನೆ ಇರುತ್ತದೆ. ಡೊನೇಷನ್ ಅಧಿಕ ಕೊಟ್ಟ ತಕ್ಷಣ ಆ ಶಾಲೆಯಲ್ಲಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾದ ಎಲ್ಲಾ ಸೌಲಭ್ಯಗಳಿವೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಮಕ್ಕಳನ್ನು ಸ್ಕೂಲ್ ಗೆ ಸೇರಿಸುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿದರೆ ಒಳ್ಳೆಯದು.
ಸ್ಕೂಲ್ ನ ಪ್ರತಿಷ್ಠೆ
ಸ್ಕೂಲ್ ನ ಪ್ರತಿಷ್ಠೆಗೆ ಅಲ್ಲಿಯ ಕಲಿಕೆಯ ವಿಧಾನಕ್ಕೆ ಒಂದಕ್ಕೊಂದು ಸಂಬಂಧವಿದೆ. ಅಲ್ಲಿ ಟೀಚರ್ಸ್ ಕೊರತೆ ಇದೆಯೇ? ಶಾಲೆ ಶಿಸ್ತಿನಿಂದ ಇದೆಯೇ? ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅವಕಾಶವಿದೆಯೇ ಎಂಬುದೆಲ್ಲಾ ಗಮನಿಸಬೇಕು. ಪೋಷಕರು ಮತ್ತು ಬೋಧಕ ವರ್ಗದವರ ಜೊತೆ ಸಂವಹನಕ್ಕೆ ಅವಕಾಶ ಇದ್ದರೆ ಮಗುವಿನ ಭವಿಷ್ಯ ರೂಪಿಸುವಲ್ಲಿ ಮತ್ತಷ್ಟು ಸಹಕಾರಿ.
ಸ್ಕೂಲ್ ನಲ್ಲಿರುವ ಸೌಲಭ್ಯಗಳು
ಸ್ಕೂಲ್ ನಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ ಎಂದು ಗಮನಿಸಬೇಕು. ಆಟದ ಗ್ರೌಂಡ್, ಕ್ಂಪ್ಯೂಟರ್ ತರಭೇತಿ, ಕಂಫರ್ಟ್ ಬೆಂಚ್, ಟೇಬಲ್ ಗಳು ಹೀಗೆ ಪ್ರತಿಯೊಂದನ್ನು ಗಮನಿಸುವುದು ಒಳ್ಳೆಯದು.
ಪ್ರತಿಯೊಂದು ಮಗುವಿನ ಬಗೆಯೂ ಕೇರ್ ತೆಗೆದುಕೊಳ್ಳುತ್ತಿದ್ದೀರಾ
ಇದು ಗಮನಿಸಬೇಕಾದ ಮುಖ್ಯವಾದ ಅಂಶ. ಕೆಲವು ಶಾಲೆಗಳಲ್ಲಿ ಪ್ರತಿಯೊಂದು ಮಗುವಿನತ್ತ ತಮ್ಮ ಗಮನ ಹರಿಸಲು ಬೋಧಕ ವರ್ಗದವರಿಗೆ ಸಾಧ್ಯವಾಗುವುದಿಲ್ಲ. ಕ್ಲಾಸ್ ನಲ್ಲಿ ತುಂಬಾ ಮಕ್ಕಳಿದ್ದರೆ ಈ ರೀತಿಯ ಸಮಸ್ಯೆ ಕಂಡು ಬರುವುದು ಹೆಚ್ಚು. ಅಂತಹ ಸ್ಕೂಲ್ ಗೆ ನಿಮ್ಮ ಮಗುವನ್ನು ಸೇರಿಸದಿರುವುದು ಒಳ್ಳೆಯದು. ಪ್ರತಿಯೊಂದು ಮಗುವಿನ ಚಟುವಟಿಕೆ ಗಮನಿಸುವ ಸ್ಕೂಲ್ ಗೆ ಬಿಟ್ಟರೆ ನಿಮ್ಮ ಮಗು ಓದುವ ವಿಷಯದಲ್ಲಿ ಹಿಂದುಳಿದರೆ ಅಥವಾ ಮಾನಸಿಕ ತೊಂದರೆ ಅನುಭವಿಸುತ್ತಾ ಇದ್ದರೆ ಸ್ಪೆಷಲ್ ಕೇರ್ ಕೊಡಲು ಸಾಧ್ಯ.
ಪಠ್ಯೇತರ ಚಟುವಟಿಕೆಗಳು
ಬರೀ ಪಠ್ಯ ವಿಷಯ ಮಾತ್ರವಲ್ಲ, ಮಕ್ಕಳ ಪಠ್ಯೇತರ ಚಟುವಟಿಕೆಗಳ ಕಡೆಗೂ ಸಮಾನ ಆದ್ಯತೆ ನೀಡುವ ಸ್ಕೂಲ್ ಗೆ ಮಕ್ಕಳನ್ನು ಸೇರಿಸುವುದು ಒಳ್ಳೆಯದು.



Click it and Unblock the Notifications
