ಮಲತಂದೆ ಜವಾಬ್ದಾರಿ : ಸಲಹೆಗಳು

By Poornima heggade

ಮಗುವಿಗೆ ಜನನ ನೀಡಿದ ತಾಯಿ ಎಷ್ಟು ಸಂತೋಷಪಡುತ್ತಾಳೋ ಅಷ್ಟೇ ತಂದೆಯಾಗಿಗುವುದೂ ಕೂಡ ಜೀವನದ ಅಷ್ಟೇ ಪ್ರಮುಖ ಹೆಜ್ಜೆ. ಮಗು ಹುಟ್ಟಿ ತಂದೆ ಎನ್ನಿಸಿಕೊಂಡ ನಿಮ್ಮ ಜೀವನದ ರೀತಿ ನೀತಿಗಳು ಹಿಂದಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ನೀವು ತಂದೆಯಾಗಿ ಅಧಿಕಾರವನ್ನು ತೆಗೆದುಕೊಂಡು ಹಲವಾರು ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಂದೆಯಾದ ನಂತರ ಸಬಂಧದಲ್ಲಿ ಸ್ವಾಭಾವಿಕವಾಗಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೆಕಾಗುತ್ತದೆ. ಒಂದು ಮಗುವಿನ ತಂದೆಯಾಗಿ ಮುಂದಿನ ಹೆಜ್ಜೆಯಿಟ್ಟ ನಂತರ ನಿಮ್ಮ ಮಗುವಿನ ಕುರಿತು ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುವುದು ಹಾಗೂ ಜವಾಬ್ದಾರಿಯನ್ನು ನಿಭಾಯಿಸುವುದು ಅತ್ಯಂತ ಮುಖ್ಯ.

ಅದೇ ರೀತಿ ನಿಮ್ಮ ಸ್ವಂತ ಮಗುವಾಗದಿದ್ದರೂ ಮಲತಂದೆಯಾಗಿ ಒಂದು ಮಗುವಿನ ಜೀವನದಲ್ಲಿ ಪ್ರವೇಶಿಸಬೇಕಾದರೆ ತುಸು ಹೆಚ್ಚು ಎನ್ನುವಂತೆ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ! ಅವರು ನಿಮ್ಮನ್ನು ತಂದೆ ಎಮ್ದು ಒಪ್ಪುವವರೆಗೂ ನಿಮ್ಮ ಅವರ ನಡುವಿನ ಸಂಬಂಧ ಗಟ್ಟಿಯಾಗಿರುವುದು ಅಸಾಧ್ಯ. ಆದ್ದರಿಂದ ಇದಕ್ಕೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಗಿಸಬೇಕಾಗುತ್ತದೆ!

ನೀವು ಅತ್ಯಂತ ಎಚ್ಚರಿಕೆಯಿಂದ ಮಕ್ಕಳ ಜೊತೆ ಇದ್ದು ಒಬ್ಬ ಸ್ವಾಭಾವಿಕ ತಂದೆಯಾಗಿ ನಿಮ್ಮೊಂದಿಗೆ ಅವರ ಬಾಂಧವ್ಯವನ್ನು ಗೌರವಿಸಬೇಕು. ಅವರು ನಿಮ್ಮನ್ನು ತಂದೆಯಾಗಿ ಸ್ವೀಕರಿಸುವವರೆಗೂ ಕಾಯುವ ತಾಳ್ಮೆಯನ್ನು ನೀವು ಹೊಂದಿರಬೇಕು. ಇದು ನೀವು ನಿಮ್ಮ ಮಗುವಿನೊಂದಿಗೆ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಅವಲಂಬಿಸಿದೆ. ಆದಾಗ್ಯೂ, ಕೆಲವೊಮ್ಮೆ ನಿಮ್ಮ ಮಲಮಗು ನಿಮ್ಮ ತಂದೆಯ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ಅಥವಾ ಅವರು ನಿಮ್ಮನ್ನು ಒಪ್ಪಿಕೊಳ್ಳಲು ಪರಿವರ್ತನೆಗೆ ಸಮಯ ತೆಗೆದುಕೊಳ್ಳುತ್ತದೆ ಏಕೆಂದರೆ ಅವರ ಮನಸ್ಸಿನ ಆಂತರಿಕ ವೃತ್ತದಲ್ಲಿ ಒಂದು ಅಪರಿಚಿತರರನ್ನು ತಮ್ಮವರು ಎಂದು ಒಪ್ಪಿಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ.

ನೀವು ಈಗ ತಂದೆಯಾಗುವುದಕ್ಕೂ ಮಗುವೊಂದು ಹುಟ್ಟುತ್ತಲೇ ತಂದೆಯ ಸಂಬಂಧವನ್ನು ಹೊಂದಿರುವುದಕ್ಕೂ ಪ್ರತ್ಯೇಕತೆ ಇದೆ. ಆದ್ದರಿಂದ ನಿಮ್ಮ ಮಗುವನ್ನು ಪ್ರೀತಿಸಿ. ಅವರೂ ನಿಮ್ಮನ್ನು ಇಷ್ಟಪಡಲು ಅವಕಾಶಗಳನ್ನು ಒದಗಿಸಿ. ಆದರೆ ಅವರ ಸ್ವಾತಂತ್ರವನ್ನು ಕಸಿದುಕೊಳ್ಳುವಂತಹ ಅತಿಯಾದ ತಂದೆ ಎನ್ನುವ ಅಧಿಕಾರ ಚಲಾವಣೆ ಮಾಡುವುದು ಸರಿಯಲ್ಲ. ನಿಮ್ಮದೇ ಆದ ಸಕಾರಾತ್ಮಕ ಮಾರ್ಗದಲ್ಲಿ ಅವರ ಹಾಗೂ ನಿಮ್ಮ ನಡುವಿನ ಬಾಂಧವ್ಯವನ್ನು ಬೆಸೆಯಲು ಪ್ರಯತ್ನಿಸಿ.

1. ತಾಳ್ಮೆಯಿಂದಿರಿ

1. ತಾಳ್ಮೆಯಿಂದಿರಿ

ಸಾಮಾನ್ಯವಾಗಿ, ಮಗು ತಂದೆ ತಾಯಿಗಳ ಬಾಂದವ್ಯದಲ್ಲಿ ಆಳವಾಗಿ ಭಾಗಿಯಾಗಿರುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಹೊಸ ಸಂಬಂಧವನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಬೆದರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಸಮಸ್ಯೆಗಳಿಗೆಲ್ಲ ಪರಿಹಾರ ನೀಡಬಲ್ಲದು ಕಾಲ! ಆದ್ದರಿಂದ ನೀವು ತಾಳ್ಮೆಯಿಂದ ನಿಮ್ಮ ಮಗು ನಿಮ್ಮ ಸುತ್ತಲಿನಲ್ಲಿರುವಾಗ ಧನಾತ್ಮಕ ಬದಲಾವಣೆಗೆ ಬೆಂಬಲ ನೀಡಬೇಕು.

2. ಸಮಯ ಕಳೆಯುವುದು

2. ಸಮಯ ಕಳೆಯುವುದು

ಶಾಲಾ ಕೆಲಸಗಳು, ಓದುವುದು ಪ್ರಾಜೆಕ್ಟ್ ಗಳಲ್ಲಿ ಸಹಾಯ, ಮತ್ತು ಅವರು ಕ್ರೀಡಾಕೂಟ, ಸ್ಕೌಟಿಂಗ್ ಮ್ದಲಾದವುಗಳಲ್ಲಿ ಅವರಿಗೆ ಸಹಾತ ಮಾಡಿ ಮವರ ಜೊತೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕು. ಈ ರೀತಿ ನೀವು ಅವರೊಂದಿಗೆ ಎಲ್ಲಾ ವಿಷಯಗಳಲ್ಲೂ ಭಾಗಿಗಳಾದರೆ ನಿಮ್ಮ ಮಗು ಬಹಳ ಬೇಗ ನಿಮ್ಮ ತಂದೆಯ ಪಾತ್ರವನ್ನು ನಿರ್ವಹಿಸಿದ್ದನ್ನು ನೋಡಿ ನಿಮ್ಮನ್ನು ಸ್ವೀಕರಿಸಲು ಆರಂಭಿಸುತ್ತದೆ. ಜೊತೆಗೆ ನೀವು ಅವರ ಜೀವನದ ಭಾಗವಾಗಿರುವುದಕ್ಕೆ ಕೃತಜ್ಞತೆಯನ್ನೂ ಸೂಚಿಸುತ್ತಾರೆ.

3. ಮಕ್ಕಳ ಸಮಯ

3. ಮಕ್ಕಳ ಸಮಯ

ನಿಮ್ಮ ಮಲಮಗು ನಿಮ್ಮದೇ ಆದ ಮಗು ಎಂದಾದಮೇಲೆ ಆ ಮಕ್ಕಳೊಂದಿಗೆ ಕೆಲವು ಉತ್ತಮ ಸಮಯವನ್ನು ಕಳೆದು ಅವರೂ ನಿಮ್ಮಲ್ಲೊಬ್ಬರಾಗುವಂತೆ ಮಾಡಬೇಕಾಗುತ್ತದೆ. ಅದಕ್ಕಾಗಿ ನಿಮ್ಮ ಸಮಯವನ್ನೂ ಮೀಸಲಿಡಬೇಕು. ಇದು ನಿಮ್ಮ ಹಾಗೂ ನಿಮ್ಮ ಮಗುವಿನ ನಡುವೆ ಬಾಂಧವ್ಯ ಗಟ್ಟಿಯಾಗಿ ಬೆಸೆದುಕೊಳ್ಳಲು ಸಹಾಯಕವಾಗುತ್ತದೆ. ಇದರ ಜೊತೆಗೆ ನೀವು ಅವರನ್ನು ಎಷ್ಟು ಕಾಳಜಿ ಮಾಡುತ್ತೀರಿ ಮತ್ತು ಅವರಿಗೆ ನೀವು ಎಷ್ಟು ಪ್ರಾಮುಖ್ಯತೆ ನೀಡುತ್ತೀರಿ ಎಂಬುದು ಸ್ಪಷ್ಟವಾಗುತ್ತದೆ.

4. ಸಂವಹನ

4. ಸಂವಹನ

ನಿಮ್ಮ ಮಲಮಗುವಿಗೆ ನಿಮ್ಮ ಜೊತೆ ಮಾತನಾಡಲು ಅಗತ್ಯವಿದ್ದಾಗ ನೀವು ಅವರೊಂದಿಗೆ ಮಾತನಾಡಬೇಕು. ಅವರ ಮಾತುಹಳನ್ನು ಆಲಿಸುವ ಒಳ್ಳೆಯ ಕೇಳುಗನಾಗಿರಬೇಕು. ನೀವು ಆ ಮಗುವಿನ ಜೀವನದಲ್ಲಿ ಬರುವ ಮೊದಲು ಆ ಮಗು ಹೇಗಿತ್ತು ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆದ್ದರಿಂದ ಸಂವಹನ ನಿಮ್ಮ ಮಲ ಮಕ್ಕಳನ್ನು ನಿಕಟವಾಗಿ ನಿಮ್ಮೊಂದಿಗೆ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ.

5. ಅವರಿಗೆ ಪ್ರೈವೆಸಿ ನೀಡಿ (ಖಾಸಗೀ ಜೀವನ)

5. ಅವರಿಗೆ ಪ್ರೈವೆಸಿ ನೀಡಿ (ಖಾಸಗೀ ಜೀವನ)

ನೀವು ನಿಮ್ಮ ಮಲಮಗುವಿನೊಂದಿಗೆ ಯಾವುದೇ ರೀತಿಯ ಬಂಧವನ್ನು ಬೆಸೆಯುವಲ್ಲಿ ಎಷ್ಟೇ ಉತ್ಸಾಹಿಗಳಾಗಿದ್ದರೂ ಇನ್ನೂ ಅವರ ಖಾಸಗಿತ್ವ ಮತ್ತು ಅವರ ಸ್ವಂತಿಕೆಯನ್ನು ಗೌರವಿಸಿ. ನೀವು ಅವರನ್ನು ಯಾವುದೇ ವಿಷಯಗಳಲ್ಲಿ ಭಾಗಿಗಳನ್ನಾಗಿ ಮಾಡಲು ಸಭ್ಯತೆಯಿಂದ ಅವರ ಮನಸ್ಸನ್ನು ಗೆಲ್ಲಬೇಕು! ನೀವು ಅವರ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರವಹಿಸುತ್ತೀರಿ ಎನ್ನುವುದು ಮುಖ್ಯವಲ್ಲ. ಅವರ ಹಿಂದಿನ ತಂದೆಯನ್ನು ಮರೆಉವವರೆಗೂ ಅವರ ಸ್ವಂತ ಅಭಿಪ್ರಾಯ ಇಷ್ಟಗಳಿಗೆ ನೀವು ಸ್ವಂದಿಸಲೇಬೇಕು.

6. ಪ್ರೋತ್ಸಾಹ ನೀಡಿ

6. ಪ್ರೋತ್ಸಾಹ ನೀಡಿ

ಮಲ ತಂದೆಯಾಗಬೇಕಾದರೆ ಇದು ಗಮನಿಸಲೇಬೇಕಾದ ಪ್ರಮುಖ ಅಂಶ! ನೀವು ಪ್ರತಿಯೊಂದು ಹಂತದಲ್ಲೂ ಅವರ ಜೀವನ ಮತ್ತು ಅವರು ಮಾಡುವ ಆಯ್ಕೆಗಳನ್ನು ಬೆಂಬಲಿಸಬೇಕು. ಎಲ್ಲದಕ್ಕೂ ಮೊದಲು ಇದು ಅವರ ಜೀವನ ಮತ್ತು ತಮ್ಮ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಹಕ್ಕಿದೆ ಎಂಬುದನ್ನು ಅರಿತುಕೊಳ್ಳಬೇಕು. ಆದ್ದರಿಂದ ಒಬ್ಬ ಮಗುವಿಗೆ ತಂದೆಯಾಗಿ, ಅವರು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಲ್ಲೂ ಅವರ ಬೆನ್ನೆಲುಬಾಗಿ ಸದಾ ಅವರನ್ನು ಬೆಂಬಲಿಸಬೇಕು. ಇದು ತಂದೆಯಾದವನ ಕರ್ತವ್ಯ ಕೂಡ!

Story first published: Thursday, December 19, 2013, 4:00 [IST]
X
Desktop Bottom Promotion