Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಗುವಿಗೆ ತಿನ್ನಿಸುವುದೇ ಹೆಚ್ಚಿನ ಪೋಷಕರ ಸಮಸ್ಯೆ!
ಮಗುವಿಗೆ ಜನ್ಮ ನೀಡಿದರೆ ಹೆಣ್ಣಿನ ಜೀವನ ಸಾರ್ಥಕ ಎನ್ನುವ ಮಾತಿದೆ. ಜನ್ಮ ನೀಡಿದ ಮಗುವನ್ನು ಮೊದಲ ಸಲ ಕೈಯಲ್ಲಿ ಹಿಡಿದುಕೊಂಡು ಅದರ ಮುಖವನ್ನು ನೋಡಿದಾಗ ಸಿಗುವ ಸಂತೋಷ ಬೇರೆಲ್ಲೂ ಸಿಗದು. ಮಗುವಿನ ಬಗ್ಗೆ ತಾಯಿ ಹಾಗೂ ತಂದೆ ತುಂಬಾ ಕಾಳಜಿಯಿರುತ್ತದೆ.
ಮಾತೃತ್ವ ಅಥವಾ ಪಿತೃತ್ವ ಎನ್ನುವುದು ಕಲಿಯುವ ಸಮಯವಾಗಿರುತ್ತದೆ. ಈ ಸಮಯದಲ್ಲಿ ಜೀವನದ ಅತ್ಯಂತ ಗರಿಷ್ಠ ಅನುಭವ ಸಿಗುತ್ತದೆ. ಯಾಕೆಂದರೆ ಮಗುವಿನ ಪಾಲನೆಯಲ್ಲಿ ವಿಶೇಷವಾದ ಕಾಳಜಿ ಮುಖ್ಯವಾಗಿರುತ್ತದೆ. ಸಣ್ಣ ಮಗುವಿರುವಾಗ ತುಂಬಾ ಎಚ್ಚರಿಕೆಯಿಂದ ಮಗುವಿನ ಆಹಾರದ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ಈ ಸಮಯದಲ್ಲಿ ಮಗುವಿಗೆ ಊಟ ಮಾಡಿಸುವುದೇ ತಾಯಿಗೆ ದೊಡ್ಡ ಸವಾಲಾಗಿರುತ್ತದೆ. ಕೆಲವೊಮ್ಮೆ ಮಗು ಊಟ ಮಾಡುವುದಿಲ್ಲವೆಂದು ಹಠ ಹಿಡಿಯುತ್ತದೆ. ಈ ಸಂದರ್ಭದಲ್ಲಿ ಮಗುವಿಗೆ ಆರೋಗ್ಯಕರ ಆಹಾರ ನೀಡುವುದು ಹೇಗೆ ಎನ್ನುವ ಪ್ರಶ್ನೆ ಏಳುವುದು ಸಹಜ.
ಇದಕ್ಕಾಗಿ ಮಕ್ಕಳಿಗೆ ನೀಡುವ ಮೂಲ ಆರೋಗ್ಯಕರ ಆಹಾರದ ಬಗ್ಗೆ ಮಾಹಿತಿಗಳು

ಮಕ್ಕಳು ತಿನ್ನದೆ ಆಹಾರವನ್ನು ತಿನ್ನುವಂತೆ ಮಾಡಲು ಟಿಪ್ಸ್
1. ಕುಟುಂಬದ ಇನ್ನುಳಿದವರು ಆನಂದಿಸುವಂತಹ ಊಟ ಕಂಡುಹಿಡಿಯಲು ಪ್ರಯತ್ನಿಸಿ. ಚೆನ್ನಾಗಿಲ್ಲವೆಂದು ಊಟ ತಪ್ಪಿಸುದಕ್ಕಾಗಿ ಒಂದೆರಡು ಬಗೆಯ ಆಹಾರ ಸೇರಿಸಿ, ಆ ಆಹಾರ ಅಲ್ಲಿದೆಯೆಂದು ತಿಳಿಯದೆ ಮಕ್ಕಳು ಅದನ್ನು ತಿನ್ನಬಹುದು.

ಊಟವನ್ನು ಮಿತಿಯಲ್ಲಿ ಕೊಡಿ
2. ಸಣ್ಣ ಪ್ರಮಾಣದಲ್ಲಿ ಮಕ್ಕಳಿಗೆ ಆಹಾರ ಕೊಡಿ, ಇದರಿಂದ ವ್ಯರ್ಥವಾಗುವುದು ಕಡಿಮೆಯಾಗುತ್ತದೆ.

ಮಗುವಿನ ಇಚ್ಛೆಯನ್ನು ಅರಿಯುವುದು
3. ಮಗುವಿನ ಗೆಳೆಯನನ್ನು ಮನೆಗೆ ಆಹ್ವಾನಿಸಿ, ಇದು ಕೆಲವೊಮ್ಮೆ ಚೆನ್ನಾಗಿ ಕೆಲಸ ಮಾಡುತ್ತದೆ. ಯಾಕೆಂದರೆ ಮಗು ಆತ/ಅವಳ ಒಳ್ಳೆಯ ಗೆಳೆಯನೊಂದಿಗೆ ಊಟ ಮಾಡುವುದನ್ನು ಇಷ್ಟಪಡಬಹುದು.

ಆಹಾರ ತಿನ್ನುವಂತೆ ಒತ್ತಡ ಹಾಕಬೇಡಿ
4. ರಾತ್ರಿ ಊಟಕ್ಕೆ ಮಗು ಇಷ್ಟಪಡುವ ಹಿರಿಯರನ್ನು ಯಾರನ್ನಾದರೂ ಕರೆಯಿರಿ. ಅವರು ನಿಮ್ಮ ಅಂಕಲ್ ಅಥವಾ ಫ್ರೆಂಡ್ ಆಗಿರಬಹುದು. ಕೆಲವೊಮ್ಮೆ ಮಗು ಬೇರೆಯವರೊಂದಿಗೆ ಕುಳಿತು ಯಾವುದೇ ಕಿರಿಕಿರಿ ಮಾಡದೆ ಆಹಾರ ಸೇವಿಸಬಹುದು.
5. ಮಗುವಿಗೆ ಇಷ್ಟವಾಗದಿರುವುದನ್ನು ತಿನ್ನಲು ಒತ್ತಡ ಹಾಕಬೇಡಿ.

ಮಗು ಊಟ ಮಾಡುವ ವಿಧಾನವನ್ನು ಗಮನಿಸಿ
6. ನಿಮ್ಮ ಮಗು ಆಹಾರದೊಂದಿಗೆ ಆಟವಾಡುತ್ತಿದ್ದರೆ ಯಾವುದೇ ಗಡಿಬಿಡಿ ಚಟುವಟಿಕೆಗೆ ಮೊದಲು ಪ್ಲೇಟ್ ನ್ನು ತೆಗೆದುಬಿಡಿ.
7. ಊಟ ಮಾಡುವುದನ್ನು ಆನಂದಿಸುವಂತೆ ಮಾಡಿ ಮತ್ತು ಮಗು ಏನು ಮಾಡುತ್ತಿದೆ ಎನ್ನುವುದರ ಬಗ್ಗೆ ಮಾತನಾಡಿ.

ಊಟದ ವೇಳೆ ಪಾನೀಯಾವನ್ನು ಹೆಚ್ಚು ನೀಡಬೇಡಿ
8. ಊಟದ ನಡುವೆ ತಿಂಡಿ ಮತ್ತು ಪಾನೀಯ ನೀಡುವುದನ್ನು ಕಡಿಮೆ ಮಾಡಿ. ಇದರಿಂದ ಮಗು ಊಟದ ವೇಳೆಗೆ ತುಂಬಾ ಹಸಿದಿರುತ್ತದೆ.

ಊಟದ ಬಳಿಕ ಪಾನೀಯ ಕೊಡಿ
9. ಊಟದ ಬಳಿಕ ನೀರು ಅಥವಾ ಹಣ್ಣಿನ ಜ್ಯೂಸ್ ನೀಡಿ. ಇದರಿಂದ ಅವರ ಹಸಿವಿಗೆ ತೊಂದರೆಯಾಗದು.

ಹೊಸ ಬಗೆಯ ಅಡುಗೆ
10. ಮಗು ಹಸಿದಿರುವಾಗ ಮತ್ತು ಹೊಸ ರುಚಿಗೆ ಕಾತರಿಸುತ್ತಿದೆಯೆಂದು ತಿಳಿದಾಗ ಹೊಸ ಬಗೆಯ ಆಹಾರ ನೀಡಿ.

ಫ್ಯಾಮಲಿ ಜೊತೆ ಮಗುವನ್ನು ಊಟಕ್ಕೆ ಕೂರಿಸಿ
11. ಮಗು ಇಷ್ಟಪಡುವ ಒಂದು ಆಹಾರವಾದರೂ ಊಟದಲ್ಲಿರಲಿ. ಕುಟುಂಬಕ್ಕೆ ಒಂದು ಊಟದ ಸಮಯದ ನಿಯಮ ಮಾಡಿಕೊಳ್ಳಿ. ಉದಾಹರಣೆಗೆ ಮೇಜಿನ ಮೇಲಿರುವ ಪ್ರತಿಯೊಂದನ್ನು ಪ್ರತಿಯೊಬ್ಬರು ಸರ್ವ್ ಮಾಡುವಂತಿರಲಿ. ಆಗ ನೀವು ಬಡಿಸುವ ಆಹಾರ ಪ್ರಮಾಣವನ್ನು ಆತ/ಆಕೆ ನಿಯಂತ್ರಿಸುವಂತಿರಲಿ.
12. ಊಟದ ತಯಾರಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರನ್ನು ಸೇರಿಸಿಕೊಳ್ಳಿ.

ಊಟದ ಬದಲು ಹಾಲು ಕೊಡಬೇಡಿ
13. ಊಟದ ಬದಲು ಹಾಲು ಕೊಡಬೇಡಿ. ಇದು ಒಳ್ಳೆಯ ಅಭ್ಯಾಸವಲ್ಲ ಮತ್ತು ಇದನ್ನು ತಡೆಯಬೇಕು.

ಉಪ್ಪಿನಂಶ
14. ಮಕ್ಕಳಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಇಲ್ಲವೆಂದಾದಲ್ಲಿ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕಿಲ್ಲ. ಖಾರ, ಸಿದ್ಧ ಆಹಾರ ಮತ್ತು ಎಂಎಸ್ ಜಿ ಕಡಿಮೆ ಮಾಡಿ.

ಶಕ್ತಿವರ್ಧಕ ಆಹಾರಗಳು
15. ಮನೆಯಲ್ಲಿ ಆರೋಗ್ಯಕರ ತಿನಿಸುಗಳಾದ ಹಣ್ಣು, ಶಕ್ತಿ ತರುವ ಸಲಾಡ್ ಮತ್ತು ಉಪ್ಪು ಬೆರೆಸದ ಬೀಜಗಳನ್ನಿಡಿ.

ಜಂಕ್ ಫುಡ್ ಹೆಚ್ಚಾಗಿ ಕೊಡಬೇಡಿ
16. ಊಟದ ಸಮಯದ ಮಧ್ಯೆ ಮಗುವಿಗೆ ಹಸಿವಾದರೆ ಜಂಕ್ ಫುಡ್ ನೀಡುವ ಬದಲು ಹಣ್ಣುಗಳನ್ನು ನೀಡಿ.

ಕ್ಯಾಲೋರಿ ಕಡಿಮೆ ಇರುವ ಆಹಾರಗಳು
17. ಕಡಿಮೆ ಕ್ಯಾಲೋರಿಗಳಿರುವ ಆಹಾರಗಳಾದ ಬೇಯಿಸಿದ ಮುಸುಕಿನ ಜೋಳ, ತರಕಾರಿಗಳನ್ನು ಒಳಗೊಂಡ ಪನೀರ್ ಸ್ಯಾಂಡ್ವಿಚ್, ಕಡ್ಲೆ, ಚಾಟ್, ಮೊಸರು ಮತ್ತು ಮಜ್ಜಿಗೆಯನ್ನಿಡಿ.

ಲಂಚ್ ಬಾಕ್ಸ್
18. ಬೆಳಿಗ್ಗಿನ ಅವಸರ ತಪ್ಪಿಸಲು ನಿಮ್ಮ ಮಗುವಿನ ಲಂಚ್ ಬಾಕ್ಸ್ ಅನ್ನು ಮೊದಲೇ ಯೋಜನೆ ಮಾಡಿ.

ರೋಲ್ ಮಾಡೆಲ್
19. ತಿನ್ನುವುದನ್ನು ಒಂದು ಮನರಂಜನಾ ಅನುಭವವನ್ನಾಗಿ ಮಾಡಿ. ನೀವು ಪೋಷಕರಾಗಿದ್ದರೆ ಆರೋಗ್ಯಕರ ಆಹಾರವನ್ನು ತಿಂದು ಮಗುವಿಗೆ ಮಾದರಿಯಾಗಿ. ಮಕ್ಕಳು ತಮ್ಮ ರೋಲ್ ಮಾಡೆಲ್ ಗಳನ್ನು ಅನುಸರಿಸುತ್ತಾರೆಂದು ನೆನಪಿರಲಿ.

ಕಾಲ್ನಡಿಗೆಯ ಯೋಜನೆ ಮಾಡಿ
20. ಕುಟುಂಬದ ನಡಿಗೆ ಮತ್ತು ಕಾಲ್ನಡಿಗೆಯ ಯೋಜನೆ ಮಾಡಿ. ಇದರಿಂದ ದೂರದರ್ಶನ ಮತ್ತು ಆಟದ ಸಮಯವನ್ನು ಮಿತಿಗೊಳಿಸಬಹುದು. ಒಂದು ನೆನಪಿಡಿ, ಸಂಪೂರ್ಣ ಕುಟುಂಬ ಬದಲಾವಣೆ ಮಾಡಿಕೊಂಡರೆ ನಿಮ್ಮ ಮಕ್ಕಳು ಆರೋಗ್ಯಕರ ಮತ್ತು ಫಿಟ್ ಆಗಿರುತ್ತಾರೆ.



Click it and Unblock the Notifications











