Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಆತ್ಮಗೌರವದೊಂದಿಗೆ ಮಗಳನ್ನು ಹೀಗೆ ಬೆಳೆಸಿ
ಮಗಳು ನಿಮ್ಮ ಜೀವನದ ಅಮೂಲ್ಯ ರತ್ನವಿದ್ದಂತೆ. ಆಕೆ ತುಂಬಾ ಸುಂದರ ಮತ್ತು ಯೋಗ್ಯ, ಮೌಲ್ಯಯುತ ಜೀವನ ಸಾಗಿಸಲು ಅರ್ಹಳು. ಇದೆಲ್ಲವೂ ನಿಜವಾದರೂ ಹೆತ್ತವರು ಸಮಾಜದಲ್ಲಿ ಆಕೆಯ ಆತ್ಮಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಾರೆ. ಇದು ತುಂಬಾ ಸರಳ ಮತ್ತು ಕೆಲವೊಂದು ದೈನಂದಿನ ಚಟುವಟಿಕೆಗಳೊಂದಿಗೆ ಮಾಡಬಹುದು. ಸಮಾಜವನ್ನು ಎದುರಿಸಲು ಮಕ್ಕಳಿಗೆ ಬೇಕಾಗುವಂತಹ ಆತ್ಮವಿಶ್ವಾಸವನ್ನು ಹೆತ್ತವರು ನೀಡಬೇಕು ಹಾಗೂ ಆಕೆಗೆ ಒಳ್ಳೆಯ ದಾರಿಯಲ್ಲಿ ನಡೆಯಲು ಜೀವನದ ಒಂದು ಅರ್ಥ ನೀಡಬೇಕು. ಆಕೆಯನ್ನು ಉನ್ನತವಾಗಿ ಬೆಳೆಸುವುದು ತುಂಬಾ ಕಠಿಣ ಕೆಲಸ, ಆದರೂ ಆಹ್ಲಾದಕರ ಕೆಲಸ. ಹೆಣ್ಣು ಮಗುವಿನೊಂದಿಗೆ ವ್ಯವಹರಿಸುವಾಗ ಮತ್ತು ಆಕೆಯನ್ನು ಬೆಳೆಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು.
ಮಕ್ಕಳಲ್ಲಿ ಆತ್ಮಗೌರವಿದ್ದರೆ ಅವರಿಗೆ ಜೀವನದ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ ಮತ್ತು ಅವರನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿಸುತ್ತದೆ. ಮಗಳನ್ನು ಯಾವಾಗಲೂ ಆಕೆಯನ್ನು ಗೌರವಿಸುವವರು ಸುತ್ತುವರಿದಿರಬೇಕು ಮತ್ತು ಅವರ ಮೌಲ್ಯವನ್ನು ತಿಳಿದಿರಬೇಕು. ಆತ್ಮಗೌರವದ ಕೊರತೆಯಿರುವ ಹೆಚ್ಚಿನ ಹೆಣ್ಣು ಮಕ್ಕಳು ಕೆಟ್ಟ ಹಾದಿ ತುಳಿಯುತ್ತಾರೆ. ಮಗಳನ್ನು ಸರಿಯಾದ ಹಾದಿಗೆ ತರುವುದು ಹೆತ್ತವರ ಕೈಯಲ್ಲಿದೆ. ಮಕ್ಕಳ ಜೀವನದಲ್ಲಿ ತಾಯಿ ಪ್ರಮುಖ ಪಾತ್ರ ನಿಭಾಯಿಸುತ್ತಾಳೆ. ಆಕೆಯನ್ನು ಬೆಳೆಸುವಲ್ಲಿ ಆಕೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಆತ್ಮಗೌರವದಿಂದ ಮಕ್ಕಳನ್ನು ಬೆಳೆಸಲು ಇಲ್ಲಿ ಕೆಲವೊಂದು ವಿಧಾನಗಳಿವೆ.

1. ಆಕೆಯ ಪ್ರಶಂಸೆ ಮಾಡಿ
ಆಕೆಯ ಪ್ರಶಂಸೆ ಮಾಡಿ. ಇದಕ್ಕೆ ಆಕೆ ಖಂಡಿತವಾಗಿಯೂ ಅರ್ಹಳು. ಆಕೆ ತುಂಬಾ ಸಣ್ಣ ಕೆಲಸ ಮಾಡಿರಬಹುದು. ಆದರೆ ಆಕೆಯನ್ನು ಶ್ಲಾಘಿಸಿ. ಇದು ಆಕೆಯ ಆತ್ಮಗೌರವ ಹೆಚ್ಚಿಸುತ್ತದೆ. ಆಕೆ ಅದ್ಭುತ ಕೆಲಸ ಮಾಡಿದ್ದಾಳೆ ಎಂದು ಹೇಳಿ. ಆಕೆಗೆ ಮತ್ತಷ್ಟು ಕೆಲಸ ನೀಡಿ ಮತ್ತು ಆಕೆ ಇದನ್ನು ಮಾಡಬಲ್ಲಳು ಎಂದು ಹೇಳಿ. ಆಕೆ ತನ್ನದೇ ರೀತಿಯಲ್ಲಿ ವಿಷಯಗಳನ್ನು ನೋಡಿಕೊಳ್ಳಬಲ್ಲಳು ಎಂದು ಆಕೆಗೆ ಹೇಳಿ. ಮಗಳನ್ನು ಬೆಳೆಸುವುದು ಒಂದು ಸವಾಲು. ಆಕೆಯ ಬಗ್ಗೆ ಕಾಳಜಿ ವಹಿಸಿ.
2. ಶಿಕ್ಷಣ ನೀಡಿ
ಒಳ್ಳೆಯ ಶಿಕ್ಷಣ ಖಂಡಿತವಾಗಿಯೂ ಆಕೆಯ ಆತ್ಮಗೌರವ ಹೆಚ್ಚಿಸಬಲ್ಲದು. ಪ್ರತಿಯೊಂದು ಕ್ಷೇತ್ರದಲ್ಲೂ ಆಕೆಯನ್ನು ಸುಶಿಕ್ಷಿತೆಯನ್ನಾಗಿ ಮಾಡಿ. ಮಾಧ್ಯಮಗಳ ಬಗ್ಗೆ ಜ್ಞಾನ ಉಂಟು ಮಾಡಿ. ನಿಮ್ಮ ವ್ಯಸ್ತ ವೇಳಾಪಟ್ಟಿ ಮತ್ತು ಕೆಲಸದಿಂದ ಬಿಡುವು ಪಡೆದು ಆಕೆಯೊಂದಿಗೆ ಸಮಯ ಕಳೆಯಿರಿ. ಆಕೆ ಏನು ಕಲಿತಿದ್ದಾಳೆ ಎಂದು ಕೇಳಿ ಮತ್ತು ಆಕೆಯೊಂದಿಗೆ ಟಿವಿ ನೋಡಿ. ಟಿವಿಯಲ್ಲಿ ಏನು ನೋಡಿದ್ದೀರಿ ಎನ್ನುವ ಬಗ್ಗೆ ಆಕೆಯೊಂದಿಗೆ ಚರ್ಚೆ ಮಾಡಿ ಹಾಗೂ ಏನು ನೋಡಬೇಕು ಮತ್ತು ನೋಡಬಾರದು ಎಂಬ ಬಗ್ಗೆಯೂ ಚರ್ಚಿಸಿ. ಮಾಧ್ಯಮಗಳ ಸಂದೇಶವನ್ನು ಆಕೆಗೆ ತಿಳಿಸಿ. ಈ ರೀತಿಯಲ್ಲಿ ಮಗಳನ್ನು ಬೆಳೆಸುವುದು ತುಂಬಾ ಯೋಗ್ಯ ಮತ್ತು ಆಕೆಯ ಆತ್ಮಗೌರವ ಹೆಚ್ಚುತ್ತದೆ.
3. ಕೌಶಲ್ಯಗಳನ್ನು ನಿರ್ಮಿಸಿ
ಕೌಶಲ್ಯಗಳನ್ನು ನಿರ್ಮಿಸುವುದು ತುಂಬಾ ಮುಖ್ಯ ಮತ್ತು ಅವಳ ಆತ್ಮಗೌರವ ಬೆಳೆಸುವಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸಬಹುದು. ಮಗಳನ್ನು ಬೆಳೆಸುವಾಗ ಆಕೆ ತನ್ನ ಕೌಶಲ್ಯಗಳನ್ನು ನಿರ್ಮಿಸಲು ನೆರವಾಗಿ. ತಾಯಿಯಾಗಿ ನಿಮ್ಮ ಮಗಳ ಪ್ರತಿಭೆ ಮತ್ತು ಕೌಶಲ್ಯವನ್ನು ತಿಳಿದುಕೊಂಡು ಅದರ ಬಗ್ಗೆ ಕೆಲಸ ಮಾಡಬೇಕು. ತನ್ನ ಕನಸನ್ನು ನನಸು ಮಾಡಲು ಆಕೆಗೆ ಒಳ್ಳೆಯ ವೇದಿಕೆ ಕಲ್ಪಿಸಿ. ಮಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ, ಇದಕ್ಕೆ ಹೆಚ್ಚಿನ ಕಾಳಜಿ ಮತ್ತು ಸಮಯ ಬೇಕಾಗುತ್ತದೆ.
4. ನಿಮ್ಮ ಮನೆಯಲ್ಲಿರುವ ಮ್ಯಾಗಜಿನ್ ಕಡೆ ಗಮನಹರಿಸಿ
ಇದನ್ನು ನೀವು ಯಾವಾಗಲೂ ಮಾಡುತ್ತಿರಬೇಕು. ನೀವು ಮನೆಗೆ ಖರೀದಿಸುವ ಮ್ಯಾಗಜಿನ್ ಕಡೆ ಗಮನವಿಡಬೇಕು ಮತ್ತು ನಿಮ್ಮ ಮಗಳು ಏನು ಓದುತ್ತಿದ್ದಾಳೆ ಎನ್ನುವುದನ್ನು ಗಮನಿಸಬೇಕು. ಸರಿಯಾದ ಮ್ಯಾಗಜಿನ್ ಮತ್ತು ಪುಸ್ತಕಗಳನ್ನು ಓದಲು ಆಕೆಗೆ ಮಾರ್ಗದರ್ಶನ ನೀಡಿ. ಮಗಳನ್ನು ಬೆಳೆಸುವಲ್ಲಿ ಇದು ಒಂದು ಭಾಗ.
5. ನಿಮ್ಮ ಪ್ರೀತಿ ಆಕೆಗೆ ತಿಳಿಯಲಿ
ನಿಮ್ಮ ಪ್ರೀತಿಯನ್ನು ಮಗಳು ತಿಳಿದುಕೊಳ್ಳಲಿ. ಆಕೆಯ ಕಠಿಣ ಸಮಯದಲ್ಲೂ ನೀವು ಆಕೆಗೆ ಪ್ರೀತಿ ತೋರಿಸುತ್ತೀರಿ ಎಂದು ಆಕೆ ಅರಿತುಕೊಳ್ಳಲಿ ಮತ್ತು ಇದರಿಂದ ಆಕೆ ನಿರಾಶೆಗೊಳಗಾಗುವುದು ತಪ್ಪುತ್ತದೆ. ನಿಮ್ಮ ಪ್ರೀತಿ ಆಕೆಗೆ ತೋರಿಸಿ ಮತ್ತು ಆಕೆ ನಿಮ್ಮ ಪ್ರೀತಿಯನ್ನು ಭಾವಿಸಲಿ. ಇದರಿಂದ ಮಕ್ಕಳಲ್ಲಿ ಆತ್ಮಗೌರವ ಹೆಚ್ಚುತ್ತದೆ. ಆತ್ಮಗೌರವಿರುವ ಕೆಲವು ಮಕ್ಕಳು ಕುಗ್ಗಿಹೋಗಬಹುದು. ಆದರೆ ಹೆತ್ತವರು ಸರಿಯಾದ ಕ್ರಮ ತೆಗೆದುಕೊಂಡು ಅವರ ಆತ್ಮಗೌರವ ಹೆಚ್ಚಿಸಬೇಕು ಮತ್ತು ಜಗತ್ತಿನ ಸವಾಲುಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸಬೇಕು. ದೊಡ್ಡ ಸವಾಲಿಗೆ ಅವರನ್ನು ಸಜ್ಜುಗೊಳಿಸಿದರೆ ಅವರು ಯೋಗ್ಯ ಜೀವನ ಜೀವಿಸುವಂತೆ ಮಾಡಿದಂತಾಗುತ್ತದೆ.



Click it and Unblock the Notifications











