Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಹೈಪರ್ ಆ್ಯಕ್ಟೀವ್ ಮಗುವನ್ನು ನಿಯಂತ್ರಿಸುವುದು ಹೇಗೆ?
ನಿಮ್ಮ ಮಗು ಅತಿ ಚಟುವಟಿಕೆಯುಳ್ಳ ಮಗುವೇ ಹಾಗಾದರೆ ಶಾಲೆಯಿಂದ ನಿಮಗೆ ಸಾಲು ಸಾಲು ದೂರುಗಳನ್ನು ಕೇಳಬೇಕಾಗಬಹುದು. ನೀವು ಇದನ್ನು ಹೇಗಾದರೂ ಸರಿಪಡಿಸಿಕೊಳ್ಳಬೇಕು. ಪರಿಣಿತರ ಪ್ರಕಾರ ಒಂದು ವೇಳೆ ಪೋಷಕರಿಗೆ ಇಂತಹ ಮಕ್ಕಳನ್ನು ಹೇಗೆ ನಿಯಂತ್ರಿಸಬೇಕು ಎಂದು ತಿಳಿದಿಲ್ಲವಾದರೆ ಮುಂದೆ ಅವರು ದೊಡ್ಡವರಾದ ಮೇಲೆ ಸಮಸ್ಯೆ ಹೆಚ್ಚಾಗುತ್ತದೆ.
ಚಿಕ್ಕವಯಸ್ಸಿನಲ್ಲಿಯೇ ಮಗುವನ್ನು ನಿಯಂತ್ರಿಸುವುದು ಒಳ್ಳೆಯದು. ಅಧ್ಯಯನಗಳ ಪ್ರಕಾರ ಮಗು ನಿಯಂತ್ರಣ ಮೀರಿ ವರ್ತಿಸುವುದಕ್ಕೆ ಹಲವು ಕಾರಣಗಳಿರುತ್ತವೆ. ಒಂದು ಕಾರಣ ಅದರ ನರವ್ಯೂಹ ವ್ಯವಸ್ಥೆಯಲ್ಲಿ ಸಮಸ್ಯೆಯಿರುವುದಾಗಿರಬಹುದು. ಮತ್ತೊಂದು ಕುಟುಂಬದ ಸಮಸ್ಯೆಯಿಂದಾಗಿರಬಹುದು.
ನೀವು ನಿಮ್ಮ ಹೈಪರ್ ಆ್ಯಕ್ಟೀವ್ ಮಗುವನ್ನು ನಿಯಂತ್ರಿಸಲು ಬಯಸುವಿರಾದರೆ ಬೋಲ್ಡ್ ಸ್ಕೈ ನಿಮಗೆ ಕೆಲವು ಸರಳ ವಿಧಾನಗಳನ್ನು ಹೇಳಿಕೊಡುತ್ತದೆ. ಈ ಸಮಸ್ಯೆಯಿಂದ ಹೊರಬಂದ ಹಲವು ಪೋಷಕರ ಪ್ರಕಾರ ಈ ಸಮಸ್ಯೆಗೆ ಇರುವ ಮುಖ್ಯವಾದ ಪರಿಹಾರವೆಂದರೆ ಈ ಮಕ್ಕಳಿಗೆ ಹೆಚ್ಚಿನ ಪ್ರೀತಿ ಮತ್ತು ಗಮನ ನೀಡಬೇಕು.
ಹೈಪರ್ ಆ್ಯಕ್ಟೀವ್ ಮಕ್ಕಳನ್ನು ಹೀಗೆ ನಿಯಂತ್ರಿಸಿ:

ಪ್ರೀತಿ ತೋರಿಸಿ
ನಿಮ್ಮ ಮಗುವಿನ ನಿಯಂತ್ರಿಸಲು ಕಷ್ಟವಾಗುತ್ತಿದ್ದಲ್ಲಿ ಅವರಿಗೆ ಹೆಚ್ಚು ಪ್ರೀತಿ ತೋರಿಸಿ. ಹಾಗೆ ಮಾಡುವುದರಿಂದ ಅವರು ಶಾಂತರಾಗುತ್ತಾರೆ.

ಅಪ್ಪಿಕೊಳ್ಳಿ
ಹೇಗೆ ಈ ಮಗುವನ್ನು ನಿಯಂತ್ರಿಸುವುದು ಎಂದು ಆಶ್ಚರ್ಯವಾಗುತ್ತಿದೆಯೇ? ನಿಮ್ಮ ತೋಳುಗಳನ್ನು ತೆರೆದು ಅವರನ್ನು ಅಪ್ಪಿಕೊಳ್ಳಿ. ಇದು ಅವರ ಮೂಡನ್ನು ಸರಿಪಡಿಸಲು ನೆರವಾಗುತ್ತದೆ.

ಕೇಳಿಸಿಕೊಳ್ಳಿ
ಅವರ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಇದು ಅವರ ಗಮನವನ್ನು ನಿಮ್ಮತ್ತ ಸೆಳೆಯುತ್ತದೆ. ಅವರು ಶಾಂತವಾಗುವವರೆಗೆ ಕಾದು ಆ ನಂತರ ನಿಮ್ಮ ಮಗುವಿನೊಂದಿಗೆ ಮಾತಾಡಿ.

ತಾಳ್ಮೆಯಿಂದಿರಿ
ನೀವು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು. ಅವರು ತಮ್ಮ ಒರಟು ಸ್ವಭಾವದಿಂದ ಹೊರಬರಲು ಸಹಾಯ ಮಾಡಲು ಇರುವುದು ಇದೊಂದೆ ದಾರಿ.

ಅವರಿಗೆ ಸ್ನೇಹಿತರನ್ನು ಹುಡುಕಿಕೊಡಿ
ಇದು ನಿಮ್ಮ ಮಗುವನ್ನು ನಿಯಂತ್ರಿಸಲು ಇರುವ ದಾರಿ! ಅವರಿಗೆ ಒಬ್ಬ ವಿಶೇಷ ಸ್ನೇಹಿತನನ್ನು ಹುಡುಕಿಕೊಡಿ ಇಲ್ಲವೇ ನೀವೆ ಅವರಿಗೆ ಒಳ್ಳೆಯ ಸ್ನೇಹಿತರಾಗಿ.

ಹೊಸದಾಗಿ ಅವರಿಗೆ ಏನನ್ನಾದರೂ ಖರೀದಿಸಿ
ಅವರಿಗೆ ಹೊಸ ವಸ್ತುಗಳನ್ನು ಕೊಡಿಸುವುದರಿಂದ ಅವರನ್ನು ಶಾಂತರಾಗಿಸಬಹುದು. ಹೀಗೆ ಮಾಡುವುದರಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಬಹುದು.

ಒಂದು ಸಾಕುಪ್ರಾಣಿಯನ್ನು ತಂದುಕೊಡಿ
ಅವರಿಗೆ ಒಂದು ನಾಯಿಮರಿ ಅಥವ ಬೆಕ್ಕಿನ ಮರಿಯನ್ನು ತಂದುಕೊಡಿ. ಹೈಪರ್ ಮಕ್ಕಳು ಸಾಮಾನ್ಯವಾಗಿ ಒಂದು ಪ್ರಾಣಿಯನ್ನು ತಮ್ಮ ಸ್ನೇಹಿತರನ್ನಾಗಿಸಿಕೊಂಡ ಮೇಲೆ ಶಾಂತವಾಗಿರುತ್ತಾರೆ.

ಈ ಸಮಸ್ಯೆಯಿಂದ ಹೊರಬಂದವರನ್ನು ಭೇಟಿ ಮಾಡಿ
ಈ ಸಮಸ್ಯೆಯಿಂದ ಹೊರಬಂದ ಪೋಷಕರನ್ನು ಭೇಟಿ ಮಾಡಿ ಅವರ ಸಲಹೆ ಪಡೆದುಕೊಳ್ಳಿ. ಇದರಿಂದ ನಿಮಗೆ ಇಂತಹ ಮಗುವಿನೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ತಿಳಿದುಕೊಳ್ಳಲು ನೆರವಾಗುತ್ತದೆ.

ತಂದೆ ತಾಯಿಗಳಿಬ್ಬರು ಮುಕ್ತವಾಗಿ ಚರ್ಚಿಸಿ
ತಂದೆ ತಾಯಿಗಳಾಗಿ ನೀವಿಬ್ಬರೂ ಪರಸ್ಪರರ ಚರ್ಚೆ ಮಾಡುವುದರ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಪಾಲಿಸುವುದರಿಂದ ನಿಮಗೆ ಅನುಕೂಲವಾಗುತ್ತದೆ.

ಸಮಸ್ಯೆಗಳಿಗೆ ಕಾರಣ ಹುಡುಕಿಕೊಳ್ಳಿ
ನೀವಿಬ್ಬರೂ ಕೂತು ಸಮಸ್ಯೆಗೆ ಕಾರಣವನ್ನು ಗುರುತಿಸಿ. ಅವಶ್ಯಕತೆ ಬಿದ್ದರೆ ನಿಮ್ಮ ಮಗುವನ್ನು ಕಾರಣ ಕೇಳಿ ತಿಳಿದುಕೊಳ್ಳಿ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಇಂತಹ ಮಗುವಿನ ಮುಂದೆ ನೀವೆಂದೂ ವಾದಕ್ಕೆ ಇಳಿಯಬೇಡಿ.

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ
ಕುಟುಂಬಕ್ಕೆ ನೀವು ನೀಡುವ ಸಮಯ ಹೆಚ್ಚು ಮಹತ್ವದ ಪರಿಣಾಮವನ್ನು ಬೀರುತ್ತದೆ. ಹೆಚ್ಚು ಸಮಯವನ್ನು ಕುಟುಂಬಕ್ಕೆ ನೀಡುವುದರ ಮೂಲಕ ಮಗುವಿಗೆ ಹೆಚ್ಚು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿ.

ಚಟುವಟಿಕೆಗಳನ್ನು ಪ್ಲಾನ್ ಮಾಡಿಕೊಳ್ಳಿ
ನಿಮ್ಮ ಮಗುವಿಗಾಗಿ ಚಟುವಟಿಕೆಗಳನ್ನು ಪ್ಲಾನ್ ಮಾಡಿಕೊಳ್ಳಿ. ಇದರಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ನೆರವಾಗುತ್ತದೆ. ಬಿಲ್ಡಿಂಗ್ ಬ್ಲಾಕ್ಸ್ ನಂತಹ ಆಟಗಳು ಇಂತಹ ಮಕ್ಕಳಿಗೆ ಹೇಳಿಮಾಡಿಸಿದ್ದು.

ಅವರಿಗೆ ಹೇಳಿಕೊಡಿ
ಅವರಿಗೆ ಪ್ರೀತಿಸುವುದನ್ನು ಮತ್ತು ತಾಳ್ಮೆಯಿಂದಿರುವುದನ್ನು ಹೇಳಿಕೊಡಿ. ಎಲ್ಲಕ್ಕಿಂತ ಹೆಚ್ಚಾಗಿ ಯಾವಾಗಲೂ ಶಾಂತವಾಗಿ ನಗುತ್ತಾ ಇರುವುದನ್ನು ಹೇಳಿಕೊಡಿ.

ಮನೆಕೆಲಸಗಳಲ್ಲಿ ತೊಡಗಿಸಿ
ಅವರನ್ನು ಮನೆಕೆಲಸಗಳಲ್ಲಿ ತೊಡಗಿಸಿ. ಇದರಿಂದ ಅವರು ಶಾಂತವಾಗಿರಲು ನೆರವಾಗುತ್ತದೆ.

ಅವರ ಭಾವನೆಗಳನ್ನು ಹೊರಹಾಕಲು ದಾರಿಮಾಡಿಕೊಡಿ
ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಮಗುವನ್ನು ನಿಯಂತ್ರಿಸಲೇಬೇಕು. ಅವರ ಈ ವರ್ತನೆಯು ಒಂದಲ್ಲ ಒಂದು ವಿಧದಲ್ಲಿ ಅಭಿವ್ಯಕ್ತಗೊಳ್ಳಲೇ ಬೇಕು. ಅದಕ್ಕೆ ಒಂದು ಒಳ್ಳೆಯ ಮಾರ್ಗವನ್ನು ಶೋಧಿಸಿಕೊಳ್ಳಿ.



Click it and Unblock the Notifications











