Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
ಮಕ್ಕಳಿಗೆ ಬರುವ ಅಪಾಯಕಾರಿಯಾದ ಕಾಯಿಲೆಗಳು
ಚಿಕನ್ ಪಾಕ್ಸ್ ನಂತಹ ಕೆಲವೊಂದು ಕಾಯಿಲೆಗಳು ಬಾಲ್ಯಾವಸ್ಥೆಯಲ್ಲಿ ಕಂಡು ಬರುವುದು ಸಹಜ. ಅದರಲ್ಲೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಕಾಯಿಲೆಗಳು ಕಂಡು ಬರುತ್ತದೆ. ಇವು ಬಂದರೆ ಗುಣಮುಖವಾಗಲು ಒಂದು ವಾರಕ್ಕಿಂತ ಹೆಚ್ಚು ಸಮಯ ಬೇಕು. ಈ ಕಾಯಿಲೆಗಳು ಸ್ವಲ್ಪ ಅಪಾಯಕಾರಿಯಾದ ಕಾಯಿಲೆಯಾಗಿದ್ದರೂ ಸೂಕ್ತ ಚಿಕಿತ್ಸೆಯ ಮುಖಾಂತರ ಗುಣ ಪಡಿಸಬಹುದು:

ಚಿಕನ್ ಪಾಕ್ಸ್
ಪ್ರತೀಯೊಬ್ಬರಿಗೆ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಚಿಕನ್ ಪಾಕ್ಸ್ ಬಂದೇ ಬಂದಿರುತ್ತದೆ. ಅದರಲ್ಲೂ ಬಾಲ್ಯದಲ್ಲಿ ಕಂಡು ಬರುವ ಸಾಧ್ಯತೆ ಹೆಚ್ಚು. ಚಿಕನ್ ಪಾಕ್ಸ್ ಬಾಲ್ಯದಲ್ಲಿ ಬರುವುದು ಒಳ್ಳೆಯದು. ಏಕೆಂದರೆ ಇದು ಬಂದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದು ಕಾಣಿಸಿದರೆ 21 ದಿನಗಳವರೆಗೆ ಇರುತ್ತದೆ. ಮಗುವನ್ನು ಹೊರಗಡೆ ಬಿಡಬೇಡಿ. ಮಕ್ಕಳಿಗೆ ತಿನ್ನಲು ತಂಪಾದ ಹಣ್ಣುಗಳನ್ನು ಕೊಡುವುದು ಒಳ್ಳೆಯದು. ಬೇವಿನ ಎಲೆಯಿಂದ ಆರೈಕೆ ಮಾಡುವುದು ಈ ಕಾಯಿಲೆಗೆ ಸೂಕ್ತ.
ದಡಾರದ ಗುಳ್ಳೆಗಳು
ಮೀಸಲ್ಸ್ ( ದಡಾರದ ಗುಳ್ಳೆಗಳು) ಬಂದರೆ ಮಕ್ಕಳ ದೇಹದಲ್ಲಿ ಕೆಂಪು ಗುಳ್ಳೆಗಳು ಕಂಡು ಬರುವುದು. ಇದು ಬಂದರೆ ಗುಣಮುಖವಾಗಲು 7 ದಿನಗಳು ಬೇಕು. ಈ ಸಮಯದಲ್ಲಿ ಮಗುವಿಗೆ ಜ್ವರ, ಶೀತದ ತೊಂದರೆ ಕೂಡ ಕಾಣಿಸಿಕೊಳ್ಳುವುದು.
ಮಂಗನ ಬಾವು
ಈ ಕಾಯಿಲೆಯ ಲಕ್ಷಣ ಗಂಟಲು ಉಬ್ಬಿಕೊಳ್ಳುವುದು. ಇದು ಬಂದರೆ ಜ್ವರ ಕಾಣಿಸಿಕೊಳ್ಳುವುದು, ಏನಾದರೂ ತಿನ್ನಲು, ಕುಡಿಯಲು ಕಷ್ಟವಾಗುವುದು. ಮಂಗನ ಬಾವು ಗುಣಮುಖವಾಗಲು 7-8 ದಿನಗಳು ತೆಗೆದುಕೊಳ್ಳುತ್ತದೆ.
ಕಣ್ಣು ಕೆಂಪಾಗುವುದು
ಇದು ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲೂ ಕಂಡು ಬರುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ. ಕಣ್ಣು ಕೆಂಪಾಗಿ, ನೀರು ಬರುವುದು ಈ ಕಾಯಿಲೆಯ ಲಕ್ಷಣವಾಗಿದೆ.
ಅತೀಯಾದ ಜ್ವರ
ಇದು ತುಂಬಾ ಅಪಾಯಕಾರಿಯಾದ ಕಾಯಿಲೆಯಾಗಿದೆ. ಜ್ವರ ತುಂಬಾ ಅಧಿಕವಾಗಿ ಗಂಟಲು ಕಟ್ಟುವುದು, ಕೆಮ್ಮು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುವುದು. ಇದಕ್ಕೆ ಸೂಕ್ತವಾದ ಚಿಕಿತ್ಸೆಯಿದೆ. ಅದನ್ನು ಕೊಡಿಸಿದರೆ ಯಾವುದೇ ಅಪಾಯವಿಲ್ಲ.



Click it and Unblock the Notifications
