Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮಕ್ಕಳನ್ನು ಟ್ಯೂಷನ್ ಗೆ ಕಳಿಸುತ್ತಿದ್ದೀರಾ?
ಮಗುವನ್ನು ಎಲ್ ಕೆ. ಜಿ. ಗೆ ಸೇರಿಸಿದ ತಕ್ಷಣ, ಯೂಷನ್ ಕ್ಲಾಸ್ ಗೆ ಕೂಡ ಸೇರಿಸುವ ಪೋಷಕರನ್ನು ನೋಡಿದ್ದೇನೆ. 10ನೇ ಕ್ಲಾಸ್, ಪಿ.ಯು.ಸಿ ಆದರೆ ಒಂದು ಲೆಕ್ಕ, ಆದರೆ ಪ್ರೈಮರಿಯಿಂದಲೇ ಏಕೆ ಟ್ಯೂಷನ್ ಗೆ ಕಳಿಸುತ್ತಾರೋ ಎನ್ನುವುದೇ ನನಗೆ ಅರ್ಥವಾಗ್ತಾ ಇಲ್ಲ.
ಇದರ ಬಗ್ಗೆ ಮಕ್ಕಳನ್ನು ಟ್ಯೂಷನ್ ಗೆ ಕಳಿಸುವ ಪೋಷಕರ ಹತ್ತಿರ ಕೇಳಿದ್ದೇನೆ ಕೂಡ, ಅದಕ್ಕೆ ಆ ಪೋಷಕರು ಕೊಟ್ಟ ಉತ್ತರ "ಮಕ್ಕಳು ಶಾಲೆ ಬಿಟ್ಟು ಮನೆಗೆ ಬಂದರೆ ಟಿವಿ ನೋಡಿ, ಆಟ ಆಡಿ ಟೈಮ್ ವೇಸ್ಟ್ ಮಾಡುತ್ತಾರೆ, ಓದುವುದೇ ಇಲ್ಲ,ಟ್ಯೂಷನ್ ಗೆ ಕಳಿಸಿದರೆ ಅಲ್ಲೇ ಓದಿಕೊಂಡು ಬರುತ್ತಾರೆ".

ನನಗೆ ಅನಿಸುವುದು ಏನೆಂದರೆ ಅಲ್ಲಾ... ಮಕ್ಕಳು, ಶಾಲೆ, ಟ್ಯೂಷನ್ ಅಂತ ಒದ್ದಾಡುತ್ತಿದ್ದರೆ ಖಂಡಿತವಾಗಿಯೂ ಅವರ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿಯೇ ಬೀರುತ್ತದೆ. 10ನೇ ಕ್ಲಾಸ್, ಪಿ. ಯು. ಸಿ ಆದರೆ ಓಕೆ, ಟ್ಯೂಷನ್ ಕೊಡಿಸಿದರೆ ಒಳ್ಳೆಯದು ಎಂದು ಒಪ್ಪಿಕೊಳ್ಳಬಹುದು, ಆದರೆ ಈಗಷ್ಟೇ ಒಂದನೇ ಕ್ಲಾಸ್ ಗೆ ಹೋಗುತ್ತಿರುವ ಮಗುವನ್ನು ಟ್ಯೂಷನ್ ಕ್ಲಾಸ್ ಗೆ ಹಾಕಿದರೆ ಅದಕ್ಕೆ ಆಡಲು ಟೈಮ್ ಆದರೂ ಎಲ್ಲಿರುತ್ತದೆ, ಅಲ್ಲದೆ ಅಷ್ಟು ಚಿಕ್ಕ ಕ್ಲಾಸ್ ನಲ್ಲಿಯೇ ಟ್ಯೂಷನ್ ಅಗತ್ಯವಾದರೂ ಏನು? ಮಕ್ಕಳು ಟ್ಯೂಷನ್ ಗೆ ಕಳಿಸಿದರೆ ಮಾತ್ರ ಕಲಿಯುವುದು ಅಂದಾದರೆ ಸಾವಿರಾರು ರುಪಾಯಿ ಖರ್ಚು ಮಾಡಿ ಶಾಲೆಗೆ ಕಳಿಸುವ ಅವಶ್ಯಕತೆ ಏನು? ಶಾಲೆಯಲ್ಲಿ ಟೀಚರ್ ಕಲಿಸಿದರೆ ಮಕ್ಕಳು ಕಲಿಯುವುದಿಲ್ಲವೇ?
ಚಿಕ್ಕ ಮಕ್ಕಳನ್ನು ಟ್ಯೂಷನ್ ಗೆ ಕಳಿಸಿದರೆ ಮನೆಯಲ್ಲಿ ಗಲಾಟೆ ಕಡಿಮೆಯಾಗುವುದು ಎಂದು ನೀವು ಯೋಚಿಸಬಹುದು, ಆದರೆ ಮಕ್ಕಳು ಶಾಲೆ, ಟ್ಯೂಷನ್ ಅಂತ ಬ್ಯೂಸಿಯಾಗುವಾಗ ನಿಮ್ಮ ಮತ್ತು ಅವರ ನಡುವಿನ ಸಂವಹನ ಕಮ್ಮಿಯಾಗುವುದು, ಇದು ನಿಮ್ಮ ಗಮನಕ್ಕೆ ಬಂದಿದೆಯೇ? ಅಲ್ಲದೆ ಅವರ ಬಾಲ್ಯವನ್ನು ಕೂಡ ಕಿತ್ತುಕೊಂಡಂತೆ! ಮನುಷ್ಯ ಜೀವನದ ಅತೀ ನೆಮ್ಮದಿಯ, ಸಂತೋಷದ ಘಟ್ಟವೆಂದರೆ ಬಾಲ್ಯ, ನಿಮ್ಮ ಮಕ್ಕಳು ಅದರ ಸವಿಯನ್ನು ಮುಕ್ತವಾಗಿ ಅನುಭವಿಸಲು ಬಿಡಬಹುದು ಅಲ್ವಾ?
ಮಕ್ಕಳು ಬಾಲ್ಯದಲ್ಲಿಯೇ ಮಾನಸಿಕ ಒತ್ತಡದಿಂದ ಬಳಲುವಂತೆ ಮಾಡಬೇಡಿ, ಶಾಲೆಯಿಂದ ಬಂದ ಮೇಲೆ ಸ್ವಲ್ಪ ಸಮಯ ಅವರಿಗೆ ಇಷ್ಟ ಬಂದಂತೆ ಕಳೆಯಲು ಅವಕಾಶ ಕೊಡಿ. ಆಟ ಆಡುವುದು, ವೀಡಿಯೋ ಗೇಂ ಆಡುವುದು ಏನು ಬೇಕಾದರೂ ಮಾಡಲಿ, ಅವರನ್ನು ಡಿಸ್ಟರ್ಬ್ ಮಾಡಬೇಡಿ, ಅವರಿಗೆ ಸಂಜೆ ಮನೆಗೆ ಬಂದ ಮೇಲೆ ಮೊದಲು ಶಾಲೆಯ ಹೋಂ ವರ್ಕ್ ಮುಗಿಸಿ, ಓದಕ್ಕೆ ಇರುವುದು ಓದಿ ನಂತರ ಆಟ ಆಡಲು ಹೇಳಿ. ಈ ರೀತಿ ಮಾಡಿದರೆ ಮಕ್ಕಳು ಮಾನಸಿಕ ಒತ್ತಡದಿಂದ ಫ್ರೀ ಆಗುತ್ತಾರೆ, ಓದಿನಲ್ಲೂ ಹಿಂದೆ ಉಳಿಯುವುದಿಲ್ಲ. ಈ ಮಾತನ್ನು ನೀವೂ ಒಪ್ಪುತ್ತೀರಿ ತಾನೆ?



Click it and Unblock the Notifications
