Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಕ್ಕಳಿಗೆ ಕಾಡುವ ಇಸುಬು ಸಮಸ್ಯೆಗೆ ಪರಿಹಾರ
ಇಸುಬು ಅಥವಾ ಎಕ್ಸಿಮಾ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಈ ಅಲರ್ಜಿಯು ಧೂಳಿನ ಕ್ರಿಮಿಗಳು, ಉಣ್ಣೆಯ ಬಟ್ಟೆ, ಕೆಲವು ಆಹಾರಗಳು, ಬ್ಯಾಕ್ಟೀರಿಯಾ ಸೋಂಕು, ಸೋಪುಗಳು ಮೊದಲಾದವುಗಳಿಂದ ಉಂಟಾಗುತ್ತವೆ. ಮಕ್ಕಳು ಈ ಅಲರ್ಜಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ.
ಆದರೆ ಈ ಸಮಸ್ಯೆಯನ್ನು ಹಾಗೆಯೇ ಬಿಟ್ಟರೆ ಉಲ್ಭಣಿಸುತ್ತದೆ. ಆದದಿಂದ ಪಾಲಕರಾದ ನೀವು ಮಕ್ಕಳ ಆರೋಗ್ಯದ ಮೇಲೆ ಸರಿಯಾದ ಗಮನವಹಿಸಿ ಈ ಸಮಸ್ಯೆಗೆ ಸರಿಯಾದ ಉಪಚಾರವನ್ನು ಮಾಡಬೇಕು. ನಿಮ್ಮ ಮಗುವಿನ ಈ ಸಮಸ್ಯೆ ಗುಣಪಡಿಸಲು ಕೆಲವು ಉಪಯುಕ್ತ ಸಲಹೆಗಳು ಇಲ್ಲಿವೆ.

1. ನಿವೇ ಚಿಕಿತ್ಸೆಯನ್ನು ಮಾಡಬೇಡಿ
ನಿಮ್ಮ ಮಗುವಿಗೆ ಇಸುವು ಕಾಡುತ್ತಿದ್ದರೆ, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ವೈದ್ಯರಿಂದಲೇ ಕೊಡಿಸಿ. ನಿಮ್ಮದೇ ಆದ ಔಷಧವನ್ನು ಉಪಯೋಗಿಸುವ ಪ್ರಯತ್ನ ಮಾಡಬೇಡಿ. ಏಕೆಂದರೆ ಇಸುಬಿನಲ್ಲಿ ಹಲವಾರು ವಿಧ ಹಾಗೂ ಪ್ರತಿಯೊಂದಕ್ಕೂ ಬೇರೆ ಬೇರೆ ಚಿಕಿತ್ಸೆಗಳನ್ನು ಪಾಲಿಸಬೇಕಾಗುತ್ತದೆ.
2. ಮಕ್ಕಳ ಸರಿಯಾದ ನಿದ್ರೆ
ಮಕ್ಕಳ ತ್ವಚೆಯಲ್ಲಿ ತುರಿಕೆಯಿಂದಾಗಿ ಸರಿಯಾಗಿ ನಿದ್ದೆಮಾಡುವುದು ಕಷ್ಟವಾಗಬಹುದು. ಮಕ್ಕಳಿಗೆ ಸರಿಯಾಗಿ ನಿದ್ದೆ ಮಾಡಲು ಅಲುಕೂಲವಾಗುವಂತೆ ಅವರಿಗೆ ಉತ್ತಮವಾದ ಹತ್ತಿ ಬಟ್ಟೆಯಿಂದ ಮಾಡಿದ ಹೊದಿಕೆಯನ್ನು ಕೊಡಿ. ಮತ್ತು ಅವರು ಮಲಗುವ ಕೋಣೆಯನ್ನು ತಂಪಾಗಿ, ಸ್ವಚ್ಛವಾಗಿರಿಸಿ. ಮಕ್ಕಳ ತ್ವಚೆಗೆ ಮಲಗುವ ಮೊದಲು ಮಾಯಿಶ್ಚರೈಸರ್ ಹಚ್ಚಿ. ಮಕ್ಕಳು ಇಸುಬಿನಿಂದ ಬಳಲುತ್ತಿರುವಾಗ ಸಾಕುಪ್ರಾಣಿಗಳನ್ನು ಆದಷ್ಟು ಅವರಿಂದ ದೂರವಿಡಿ.
3. ತಿರಿಸುವಿಕೆಯನ್ನು ತಪ್ಪಿಸಿ
ಇಸುಬಿನ ಸಮಸ್ಯೆಯಿದ್ದಾಗ ತ್ವಚೆಯಲ್ಲಿ ಸಹಿಸಲಾಗದ ತುರಿಕೆಕಾಣಿಸಿಕೊಳ್ಳುತ್ತದೆ. ಆದರೆ ಮಕ್ಕಳು ಅವರ ತ್ವಚೆಯನ್ನು ತುರಿಸಿಕೊಳ್ಳದಂತೆ ನೊಡಿಕೊಳ್ಳಿ. ಯಾಕಂದರೆ ತುರಿಸುವುದರಿಂದಾಗಿ ತ್ವಚೆಯಿಂದ ರಕ್ತಸ್ರಾವ ಉಂಟಾಗಬಹುದು. ತುರಿಕೆಯುಂಟಾದಾಗ ಮಕ್ಕಳು ಕೈಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವಂತೆ ಮಾಡಿ. ಹಾಗೂ ಅವರ ಉಗುರುಗಳನ್ನು ಚಿಕ್ಕದಾಗಿಸಿ.
4. ಬಿಗಿಯಾದ ಬಟ್ಟೆಗಳನ್ನು ತೊಡಿಸಬೇಡಿ
ಮಕ್ಕಳಿಗೆ ಅತ್ಯಂತ ಒತ್ತಾದ ಬಟ್ಟೆಗಳನ್ನು ತೊಡಿಸಬೇಡಿ. ಇವು ತುರಿಕೆಗೆ ಕಾರಣವಾಗಬಹುದು. ಅವರ ತ್ವಚೆಗೆ ಸಡಿಲವಾದ ಬಟ್ಟೆಗಳನ್ನೇ ತೊಡಿಸಿ. ಇಸುಬು ಬಂದಾಗ ಮಕ್ಕಳಿಗೆ ಉಣ್ಣೆ ಬಟ್ಟೆಗಳನ್ನು ಹಾಕುವುದಕ್ಕಿಂದ ಹತ್ತಿ ಬಟ್ಟೆಗಳನ್ನು ತೊಡಿಸುವುದು ಅತ್ಯುತ್ತಮ.
5. ಕಠಿಣ ಶಾಂಪೂ ಅಥವಾ ಸೋಪ್ ಬಳಸಬೇಡಿ
ಕಠಿಣ ಶ್ಯಾಂಪೂಗಳು ತ್ವಚೆಯನ್ನು ಒಣಗಿಸುತ್ತವೆ. ಹೆಚ್ಚು ಸುಗಂಧಯುಕ್ತವಲ್ಲದ ಮೃದು ಸೋಪ್, ಶ್ಯಾಂಪೂಗಳನ್ನೇ ಮಕ್ಕಳಿಗೆ ಬಳಸಿ. ನಿಮ್ಮ ಮಕ್ಕಳ ತ್ವಚೆಗೆ ಹೊಂದುವಂತ ಉತ್ಪನ್ನಗಳನ್ನು ಬಳಸಲು ನಿಮ್ಮ ವೈದ್ಯರಿಂದ ಸಲಹೆ ಪಡೆದುಕೊಳ್ಳಿ. ಮಕ್ಕಳಿಗೆ ಸ್ನಾನವಾದ ಮೇಲೆ ಮೃದು ಲೋಷನ್ ಗಳನ್ನು ಹಚ್ಚಿ.
6. ಅಲರ್ಜಿ ಉಂಟುಮಾಡುವ ವಸ್ತುಗಳಿಂದ ದೂರವಿರಿ
ಸಾಕುಪ್ರಾಣಿಗಳು, ಧೂಳು , ಕಸ ಈ ಅಲರ್ಜಿಯನ್ನು ಉಂಟುಮಾಡಬಹುದು. ಇಸುಬು ಉಂಟಾಗುವ ಲಕ್ಷಣಗಳಿದ್ದರೆ ಮೊದಲು ಈ ವಿಷಯಗಳಿಂದ ದೂರವಿರಿ. ನಿಮ್ಮ ಮಕ್ಕಳು ಹೊರಹೋಗಬೇಕಾದರೆ ಅವರಿಗೆ ಸಂರಕ್ಷಿತ ಬಟ್ಟೆಗಳನ್ನೇ ತೊಡಿಸಿ. ಅವರು ಧೂಳನ್ನು ಮುಟ್ಟಿದಾಗ ಪ್ರತಿಬಾರಿ ಅವರು ಕೈ ತೊಳೆದುಕೊಳ್ಳುವಂತೆ ನೋಡಿಕೊಳ್ಳಿ.
7. ಆರ್ದ್ರಕಗಳನ್ನು ಬಳಸಿ
ನಿಮ್ಮ ಮನೆಯ ಒಣ ಗಾಳಿಯು ಮಕ್ಕಳ ಪರಿಸ್ಥಿತಿಯನ್ನು ಇನ್ನಷ್ಟು ಹಾಳುಮಾಡಬಹುದು. ತೇವಾಂಶ ಹೆಚ್ಚಿಸುವ ಸಲುವಾಗಿ ಆರ್ದ್ರಕಗಳನ್ನು ಬಳಸಿ. ಬ್ಯಾಕ್ಟೀರಿಯಾಗಳಿಂದ ದೂರವುಳಿಯಲು ಆರ್ದ್ರಕಗಳನ್ನು ಬಳಸುವುದು ಮಕ್ಕಳನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಹಾಯಮಾಡುತ್ತದೆ.
ಮೇಲೆ ನೀಡಿದ ಸಲಹೆಗಳನ್ನು ಅನುಸರಿಸಿ ಮತ್ತು ನಿಮ್ಮ ಮಗುವಿನ ಖಂಡಿತವಾಗಿ ಉಪಶಮನವಾಗುವುದನ್ನು ಗಮನಿಸಿ.



Click it and Unblock the Notifications