ಮಗಳ ಬಗ್ಗೆ ಹೆಮ್ಮೆ ಪಡಲು 6 ಕಾರಣಗಳು

By Super Admin

ಮಗುವಿನ ಆರೈಕೆ, ಅದು ಹುಡುಗನೇ ಆಗಿರಬಹುದು ಅಥವಾ ಹುಡುಗಿಯೇ ಆಗಿರಬಹುದು, ಹೆತ್ತವರ ಮಟ್ಟಿಗಂತೂ ಅದೊಂದು ಜೀವನದ ರೋಮಾಂಚಕವಾದ ಪಯಣ, ಕಾಲಘಟ್ಟವೇ ಸರಿ. ಒಂದು ವೇಳೆ ಹೆಣ್ಣು ಮಗುವಾಗಿದ್ದರಂತೂ ಹೆತ್ತ ತಾಯಿಗೆ ಮತ್ತಷ್ಟು ಅನುಕೂಲ. ಕಾರಣವೇನೆಂದರೆ, ಹೆತ್ತ ತಾಯಿಗೆ ತನ್ನದೇ ಅದ ಯೋಚನಾ ಲಹರಿಯಲ್ಲಿ ಚಿಂತಿಸುವ ಸಂಗಾತಿಯೊಬ್ಬಳು ದೊರೆತಂತಾಗುತ್ತದೆ. ಹೆಣ್ಣು ಮಗುವನ್ನು ಪಡೆದ ತಾಯಿಯು ಸಂತಸದಿಂದ ಹಿಗ್ಗಲು ಈ ಕೆಳಗಿನ ಕೆಲವು ಸಂಗತಿಗಳು ಕಾರಣವಾಗಬಲ್ಲವು.

1. ಹೆಣ್ಣು-ಹೆಣ್ಣುಗಳ ನಡುವಿನ ಸಂವಹನ

ನಿಮಗೊಬ್ಬಳು ಹೆಣ್ಣು ಮಗಳಿದ್ದರೆ ಮಾತನಾಡಲು ದೂರವಾಣಿಯ ಅವಶ್ಯಕತೆ ಇಲ್ಲ. ಓರ್ವ ಹೆಣ್ಣಾಗಿ ನಿಮ್ಮ ಭಾವನೆಗಳನ್ನು ನೀವು ನಿಮ್ಮ ಸ್ವಂತ ಮಗಳೊಂದಿಗೆ ಹಂಚಿಕೊಳ್ಳಬಹುದು. ಕೆಲವೊಮ್ಮೆ, ಪುರುಷರು ಸ್ತ್ರೈಣ (ಸ್ತ್ರೀಯರಿಗೆ ಸಂಬಂಧಿಸಿದ) ಚಟುವಟಿಕೆಗಳು ಹಾಗೂ ಮಾತುಗಳಿಗೆ ಲಕ್ಷ್ಯ ನೀಡುವುದಿಲ್ಲ. ಆದರೆ, ನಿಮಗೆ ಓರ್ವ ಮಗಳಿದ್ದರೆ, ನಿಮ್ಮ ಮಾತುಗಳನ್ನು ಆಲಿಸುವ ಕಿವಿಗಳು ನಿಮ್ಮ ಸನಿಹದಲ್ಲಿಯೇ ಇರುತ್ತವೆ.

2. ಬಿಡುವಿನ ವೇಳೆಯಲ್ಲಿ

ಮಗಳನ್ನು ಪಡೆದಿರುವ ಧನಾತ್ಮಕ ಅಂಶಗಳಲ್ಲಿ ಇದೂ ಕೂಡ ಒಂದು. ನೀವು ನಿಮ್ಮ ಬಿಡುವಿನ ಅವಧಿಯನ್ನು ನಿಮಗೆ ಬೇಕಾದ ಚಟುವಟಿಕೆಗಳಲ್ಲಿ ತೊಡಗುವುದರ ಮೂಲಕ ಕಳೆಯಬಹುದು. ನಿಮಗಿಬ್ಬರಿಗೂ ಇಷ್ಟವಾದ ಹೊಸರುಚಿಗಳನ್ನು ಪ್ರಯತ್ನಿಸಬಹುದು. ಈ ಕಾಲಾವಧಿಯು ನಿಮಗೆ ಉಲ್ಲಾಸವನ್ನು ನೀಡಬಹುದು. ನೀವು ನಿಮ್ಮ ಮಗಳೊಂದಿಗೆ ಮನಸ್ಸಿಗೆ ಮುದ ನೀಡುವ ಪ್ರಣಯಭರಿತ ಹಾಸ್ಯ ಚಲನಚಿತ್ರಗಳನ್ನೂ ಸಹ ವೀಕ್ಷಿಸಬಹುದು.

3. ಸಮಾನವಾದ ಆಸಕ್ತಿಗಳನ್ನು ರೂಢಿಸಿಕೊಳ್ಳಬಹುದು

ನಿಮಗೆ ಹೊಲಿಗೆ, ಅಲಂಕಾರ, ಅಥವಾ ಇತರೆ ಯಾವುದಾದರೂ ಸ್ತ್ರೈಣ (ಸ್ತ್ರೀಯರಿಗೆ ಸಂಬಂಧಿಸಿದ) ಕ್ಷೇತ್ರಗಳಲ್ಲಿ ಆಸಕ್ತಿ ಅಥವಾ ಹವ್ಯಾಸಗಳಿದ್ದರೆ, ನಿಮ್ಮ ಮಗಳೂ ಸಹ ಈ ನಿಮ್ಮ ಹವ್ಯಾಸಗಳನ್ನು ಇಷ್ಟಪಡಬಹುದು. ಮಗಳಿದ್ದಲ್ಲಿ, ಕನಿಷ್ಟ ಪಕ್ಷ ನೀವು ಈ ವಿಚಾರಗಳ ಕುರಿತು ಅವಳಲ್ಲಿ ಆಸಕ್ತಿಯನ್ನು ಬೆಳೆಸಲು ನಿಮಗೊಂದು ಅವಕಾಶವಿರುತ್ತದೆ ಹಾಗೂ ತನ್ಮೂಲಕ ನೀವಿಬ್ಬರೂ ಸಹ ಒಟ್ಟಿಗೆ ಆ ಹವ್ಯಾಸಗಳಲ್ಲಿ ತೊಡಗಬಹುದು.

4. ಇಬ್ಬರೂ ಒಟ್ಟಿಗೆ ಶಾಪಿಂಗ್ ಮಾಡಬಹುದು

ಈ ಕಾರಣಕ್ಕಾಗಿ ಮಗಳನ್ನು ಹೊಂದಿರುವುದು ಬಹಳ ಅನುಕೂಲ. ಹೆಚ್ಚಿನ ಪುರುಷರು ಶಾಪಿಂಗ್ ನಿಂದ ದೂರವಿರುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಅವರ ಅಭಿಪ್ರಾಯವೇನೆಂದರೆ ಶಾಪಿಂಗ್ ಎಂಬುದು ಹುಡುಗಿಯರ ಕೆಲಸ. ಒಂದು ವೇಳೆ ನೀವು ಶಾಪಿಂಗ್ ನ ಗೀಳಿನವರಾದರೆ ನೀವು ನಿಶ್ಚಿಂತೆಯಿಂದ ನಿಮ್ಮ ಶಾಪಿಂಗ್ ಕೆಲಸವನ್ನು ನಿಮ್ಮ ಮಗಳಿಗೆ ವರ್ಗಾಯಿಸಬಹುದು. ನಿಮ್ಮ ಮಗಳು ನಿಮಗಿಷ್ಟವಾದ ಬಟ್ಟೆಬರೆ ಇತ್ಯಾದಿಗಳನ್ನು ಖರೀದಿಸಲು ಸದಾ ನಿಮಗೆ ಜೊತೆಯಾಗಿರುತ್ತಾಳೆ ಯಾವುದೇ ಸಮಯದಲ್ಲಿ, ಕಿರಿ ಕಿರಿ ಇಲ್ಲದೇ.

5. ಫ್ಯಾಷನ್ ನ ಕುರಿತು ಚರ್ಚಿಸಿರಿ

ನೀವು ನಿಮ್ಮ ಮಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿರಬಹುದಾದ ಇತ್ತೀಚಿನ, ಆಧುನಿಕ ಫ್ಯಾಷನ್ ನ ಕುರಿತು ಚರ್ಚಿಸಬಹುದು ಹಾಗೂ ಉಡುಪುಗಳ ಮತ್ತು ಫ್ಯಾಷನ್ ನ ವಿಚಾರದಲ್ಲಿ, ಕಾಲಕ್ಕೆ ತಕ್ಕಂತಹ ಉಡುಪುಗಳನ್ನು ಧರಿಸಬಹುದು. ಈ ವಿಷಯದಲ್ಲಿ ತಾಯಂದಿರಿಗೆ ಮಗಳು ಉತ್ತಮ ಸಲಹೆಗಾರಳಾಗಬಲ್ಲಳು. ಅಲ್ಲದೇ ಯಾವ ಉಡುಪು ನಿಮಗೆ ಅತಿ ಸೂಕ್ತ ಹಾಗೂ ಯಾವುದು ನಿಮಗೆ ಸರಿ ಹೊಂದುವುದಿಲ್ಲ ಎಂಬುದರ ಬಗ್ಗೆ ನಿಮ್ಮ ಮಗಳು ನಿಮಗೆ ಪ್ರಾಮಾಣಿಕವಾದ, ಯೋಗ್ಯ ಸಲಹೆಯನ್ನು ನೀಡಬಲ್ಲಳು. ಇದರ ಕುರಿತಾಗಿ ಮಹಿಳೆಯರು ಒಂದು ವೇಳೆ ಅವರ ಪತಿಯoದಿರಲ್ಲಿ ವಿಚಾರಿಸಿದರೆ, ಅವರ ಉತ್ತರವು ಸರ್ವೇಸಾಮಾನ್ಯವಾಗಿ "ನೀನು ಈ ದಿರಿಸಿನಲ್ಲಿ ಅತಿ ಸುಂದರವಾಗಿ ಕಾಣಿಸುತ್ತೀಯೇ" ಎಂದಷ್ಟೇ ಆಗಿರುತ್ತದೆ.

6. ರಾತ್ರಿಯ ವೇಳೆಯಲ್ಲಿ ಹೊರಹೋಗುವ ಬಗ್ಗೆ ಚಿಂತಿಸಬಹುದು

ನಿಮಗೋರ್ವಳು ಮಗಳಿದ್ದರೆ ನೀವು ರಾತ್ರಿಯ ವೇಳೆಯಲ್ಲಿ ಹೊರಹೋಗುವ ಯಾವುದಾದರೂ ಅವಶ್ಯಕತೆಯ ಬಗ್ಗೆ ಯೋಚಿಸಬಹುದು. ನೀವು ನಿಮ್ಮ ಮಗಳೊಂದಿಗೆ ಕೇಶ ವಿನ್ಯಾಸವನ್ನು ಮಾಡಿಕೊಳ್ಳಬಹುದು, ಉಗುರುಗಳಿಗೆ ನೈಲ್ ಪಾಲಿಶ್ ಮಾಡಿಕೊಳ್ಳಬಹುದು, ಹಾಗೂ ಮುಖದ ಪ್ರಸಾಧನವನ್ನೂ ಕೂಡ ಮಾಡಿಕೊಳ್ಳಬಹುದು. ಇಷ್ಟು ಮಾತ್ರವಲ್ಲದೇ ನೀವು ನಿಮಗೊಬ್ಬಳು ಮಗಳಿದ್ದರೆ, ಬಿಡುವು ಮಾಡಿಕೊಂಡು ಅವಳೊಂದಿಗೆ ಸ್ವಲ್ಪ ದಿನಗಳ ಕಾಲ ಮನೆಕೆಲಸಗಳಿಂದ ದೂರವಿದ್ದು ಹಾಯಾಗಿರಬಹುದು.

ಅದ್ದರಿಂದ, ಹೆಚ್ಚಿನ ತಾಯಂದಿರಿಗೆ ಮಗಳೊಬ್ಬಳು ಇದ್ದಾಳೆ ಎಂದಾದರೆ ಅದರರ್ಥ, ಸ್ತ್ರೈಣ (ಸ್ತ್ರೀಯರಿಗೆ ಸಂಬಂಧಿಸಿದ) ಕೆಲಸಗಳನ್ನು

ಒಟ್ಟಿಗೆ ಮಾಡಲು ಸ್ತ್ರೀ ಸಂಗಾತಿಗಾಗಿ ಎಲ್ಲೆಲ್ಲಿಯೋ ಹುಡುಕುವ ಅವಶ್ಯಕತೆ ಇಲ್ಲ.

X
Desktop Bottom Promotion